
ಬೆಂಗಳೂರು, ಆಗಸ್ಟ್ 25: ಭಾರತದ ಪ್ರಮುಖ ಐಟಿ ಸಂಸ್ಥೆಯಾದ ಇನ್ಫೋಸಿಸ್ (Infosys) 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ (Q1 FY27 – ಏಪ್ರಿಲ್‌ನಿಂದ ಜೂನ್) ಅರ್ಹ ಉದ್ಯೋಗಿಗಳಿಗೆ ಸರಾಸರಿ 70% ವೇರಿಯೇಬಲ್ ಬೋನಸ್ ನೀಡಿದೆ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಬೋನಸ್ 65% ರಿಂದ 80% ರಷ್ಟು ಹಂಚಿಕೆಯಾಗಿದೆ ಎಂದು ಎಕನಾಮಿಕ್ ಟೈಕ್ಸ್ ಪತ್ರಿಕೆ ವರದಿ ಮಾಡಿದೆ.
‘Commendable’ (ಉತ್ತಮ) ರೇಟಿಂಗ್ ಪಡೆದ ಉದ್ಯೋಗಿಗಳಿಗೆ ಸರಿಸುಮಾರು 80% ಬೋನಸ್ ಸಿಕ್ಕಿದೆ. ‘Met Expectations’ (ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿದ) ಉದ್ಯೋಗಿಗಳಿಗೆ ಸರಿಸುಮಾರು 65% ಸಿಕ್ಕಿದೆ.
ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಬೋನಸ್ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ. ಅಂದರೆ 2026ರ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ಗೂ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಬೋನಸ್ ಎಂದು 70% ನೀಡಿತ್ತು. ಆದರೆ, ಹಿಂದಿನ ವರ್ಷದ ಏಪ್ರಿಲ್‌ನಿಂದ ಜೂನ್ವರೆಗಿನ ಕ್ವಾರ್ಟರ್ಗೆ ಹೋಲಿಸಿದರೆ ಈ ಬಾರಿ 10% ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಬೋನಸ್ 80% ನೀಡಲಾಗಿತ್ತು.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?
ಕಡಿಮೆ ಬೋನಸ್‌ಗೆ ಕಾರಣ: ಜಾಗತಿಕ ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಸೇವೆಗಳ ಬೇಡಿಕೆ ಕಡಿಮೆಯಾಗಿರುವುದು ಮತ್ತು ಕ್ಲೈಂಟ್‌ಗಳ ವೆಚ್ಚ ಕಡಿತದಿಂದಾಗಿ ಕಂಪನಿಯ ಲಾಭದ ಮೇಲಿನ ಒತ್ತಡವೇ ಇದಕ್ಕೆ ಮುಖ್ಯ ಕಾರಣ.
ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಇರುವ ಸಂಬಳದ ಒಂದು ನಿಯಮ. ಇಲ್ಲಿ ಪ್ರತೀ ತಿಂಗಳು ಉದ್ಯೋಗಿಯ ಸಂಬಳದಿಂದ ನಿರ್ದಿಷ್ಟ ಬೋನಸ್ ಹಣವನ್ನು ಮುರಿದುಕೊಳ್ಳಲಾಗುತ್ತದೆ. ಆ ವರ್ಷದಲ್ಲಿ ಉದ್ಯೋಗಿಯ ಕೆಲಸದ ಕ್ಷಮತೆ ಎಷ್ಟು ಎನ್ನುವುದರ ಆಧಾರದ ಮೇಲೆ, ಮುರಿದುಕೊಂಡ ಆ ಬೋನಸ್ ಹಣವನ್ನು ಮರಳಿಸಲಾಗುತ್ತದೆ. 70% ಬೋನಸ್ ಎಂದರೆ, ಒಂದು ಲಕ್ಷ ಹಣ ಮುರಿದುಕೊಂಡಿದ್ದರೆ 70,000 ರೂ ಸಿಗುತ್ತದೆ. ‘Met Expectations’ ಎಂಬುದು ಬೋನಸ್ನ ಕನಿಷ್ಠ ಹಂತ. ಈ ರೇಟಿಂಗ್ ಸಿಗದ ಉದ್ಯೋಗಿಗಳಿಗೆ ಒಂದು ರುಪಾಯಿ ಬೋನಸ್ ಕೂಡ ಸಿಗೋದಿಲ್ಲ.
ಉದ್ಯೋಗಿಗಳಿಗೆ ವಾರ್ಷಿಕ ವೇತನ ಏರಿಕೆಯನ್ನು (Salary Hike) ಎರಡು ಹಂತಗಳಲ್ಲಿ ಜಾರಿಗೆ ತರಲು ಇನ್ಫೋಸಿಸ್ ಯೋಜಿಸಿದೆ. ಮೊದಲ ಹಂತದ ವೇತನ ಏರಿಕೆಯು ಅಕ್ಟೋಬರ್ನಲ್ಲಿ ಹಾಗೂ ಹಿರಿಯ ಅಧಿಕಾರಿಗಳಿಗೆ ಜನವರಿಯಲ್ಲಿ ಅನ್ವಯವಾಗಲಿದೆ.
ಇದನ್ನೂ ಓದಿ: ಚೀನಾದ ಡೀಪ್ಸೀಕ್ ಎಐ ಮಾಡಲ್ ಬಳಸಿ ಸೈಬರ್ ದಾಳಿಗಳನ್ನು ನಡೆಸುತ್ತಿರುವ ಹ್ಯಾಕರ್ಗಳು: ಆತಂಕ ಮೂಡಿಸಿದ ವರದಿಗಳು
ವರದಿಯೊಂದರ ಪ್ರಕಾರ, ಈ ಬಾರಿ ಇನ್ಫೋಸಿಸ್ ಉದ್ಯೋಗಿಗಳಿಗೆ 5-8% ಸಂಬಳ ಏರಿಕೆ ಸಿಗಬಹುದು ಎನ್ನಲಾಗಿದೆ. ಈ ಐಟಿ ದಿಗ್ಗಜ ಸಂಸ್ಥೆಯು ಮೊದಲ ತ್ರೈಮಾಸಿಕದಲ್ಲಿ ಗಳಿಸಿದ ನಿವ್ವಳ ಲಾಭ 12.2% ಹೆಚ್ಚಳ ಆಗಿದೆ. ಹೀಗಾಗಿ, ಉತ್ತಮ ವೇತನ ಏರಿಕೆಯ ನಿರೀಕ್ಷೆಯಲ್ಲಿ ಉದ್ಯೋಗಿಗಳು ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Tue, 25 August 26