Infosys: ಇನ್ಫೋಸಿಸ್ನಲ್ಲಿ ವಾರಕ್ಕೆ 70 ಗಂಟೆ ಅಲ್ಲ 46 ಗಂಟೆ ಮೀರಿ ಕೆಲಸ ಮಾಡಿದರೆ ಬರುತ್ತೆ ಎಚ್ಆರ್ ವಾರ್ನಿಂಗ್
Infosys employees have 9:15 hours a day rules for remote work: ಇನ್ಫೋಸಿಸ್ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬೇಕಾದರೆ ದಿನಕ್ಕೆ 9:15 ಗಂಟೆಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ. ಹಾಗೇನಾದರೂ ಹೆಚ್ಚು ಅವಧಿ ಕೆಲಸ ಮಾಡಿದರೆ ಎಚ್ಆರ್ ಡಿಪಾರ್ಟ್ಮೆಂಟ್ನ ಆಟೊಮೇಟೆಡ್ ಸಿಸ್ಟಂನಿಂದ ಅಲರ್ಟ್ ಮೆಸೇಜ್ ಬರುತ್ತದಂತೆ. ಕೆಲ ತಿಂಗಳ ಹಿಂದೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಇವತ್ತಿನ ಯುವಕರು ವಾರಕ್ಕೆ 70 ಗಂಟೆಗಿಂತ ಹೆಚ್ಚು ಅವಧಿ ಕೆಲಸ ಮಾಡಬೇಕೆಂದಿದ್ದರು.

ಬೆಂಗಳೂರು, ಜುಲೈ 6: ಕೆಲ ತಿಂಗಳ ಹಿಂದೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಇಂದಿನ ಯುವಕರು ವಾರಕ್ಕೆ 70 ಗಂಟೆಗಿಂತ ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ಹೇಳಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸ ಕೊಟ್ಟಿದೆ. ಕೆಲವರು ಅವರ ಅನಿಸಿಕೆಯನ್ನು ಸಮರ್ಥಿಸಿದರೆ, ಇನ್ನೂ ಕೆಲವರು ಇದು ಶೋಷಣೆ ಪ್ರವೃತ್ತಿ ಎಂದು ವಿರೋಧಿಸಿದ್ದುಂಟು. ಇದೇ ವೇಳೆ, ಅವರೇ ಕಟ್ಟಿ ಬೆಳೆಸಿದ ಇನ್ಫೋಸಿಸ್ ಸಂಸ್ಥೆಯ ಎಚ್.ಆರ್. ನೀತಿ (Infosys HR policy) ಇದಕ್ಕೆ ತದ್ವಿರುದ್ಧವಾಗಿದೆ. ಆ ನೀತಿ ಪ್ರಕಾರ, ಇನ್ಫೋಸಿಸ್ ಉದ್ಯೋಗಿಗಳು ವಾರಕ್ಕೆ ಮಾಡುವ ಕೆಲಸ 70 ಗಂಟೆ ಇರಲಿ, 50 ಗಂಟೆ ಕೂಡ ಇರಬಾರದು. ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಎಚ್ಆರ್ ಕಡೆಯಿಂದ ವಾರ್ನಿಂಗ್ ಮೆಸೇಜ್ ಕೂಡ ಬರುತ್ತಿದೆಯಂತೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಬಂದಿದೆ. ಅದರ ಪ್ರಕಾರ, ದಿನಕ್ಕೆ 9 ಗಂಟೆ 15 ನಿಮಿಷ ಕೆಲಸದ ಅವಧಿ. ವಾರದಲ್ಲಿ ಐದು ದಿನ ಕೆಲಸ. ಇದು ಅಲ್ಲಿಯ ಮಾನವ ಸಂಪನ್ಮೂಲ ವಿಭಾಗ ವರ್ಕ್ ಫ್ರಂ ಹೋಂ ಮಾಡುತ್ತಿರುವವರಿಗೆ ನಿಗದಿ ಮಾಡಿರುವ ಸ್ಟ್ಯಾಂಡರ್ಡ್ ವರ್ಕ್ ಟೈಮ್. ಈ ಬಗ್ಗೆ ಉದ್ಯೋಗಿಯೊಬ್ಬರು ನೀಡಿದ ಮಾಹಿತಿಯನ್ನಾಧರಿಸಿ ಪತ್ರಿಕೆಯಲ್ಲಿ ವರದಿ ಬರೆಯಲಾಗಿದೆ. ಅದರ ಪ್ರಕಾರ ಉದ್ಯೋಗಿಗಳು ಒಂದು ದಿನದಲ್ಲಿ 9 ಗಂಟೆ 15 ನಿಮಿಷಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಿದರೆ ಆಟೊಮೇಟೆಡ್ ಮಾನಿಟರಿಂಗ್ ಸಿಸ್ಟಂನಿಂದ ಅಲರ್ಟ್ ಮೆಸೇಜ್ ಬರುತ್ತದೆಯಂತೆ.
ಇದನ್ನೂ ಓದಿ: ಎನ್ಆರ್ಐಗಳು ತಮ್ಮ ದೇಶದ ಮೊಬೈಲ್ ನಂಬರ್ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್ಸಿ ಫಸ್ಟ್ ಬ್ಯಾಂಕ್ನಿಂದ ಸೌಲಭ್ಯ
‘ನಾವು ದಿನಕ್ಕೆ 9:15 ಗಂಟೆಯಂತೆ ವಾರದಲ್ಲಿ ಐದು ದಿನ ಕೆಲಸ ಮಾಡಬೇಕು. ಮನೆಯಿಂದ ಕೆಲಸ ಮಾಡುವಾಗ ಈ ಅವಧಿ ಮೀರಿದರೆ ಮಾನಿಟರಿಂಗ್ ಸಿಸ್ಟಂನಿಂದ ಅಲರ್ಟ್ ಮೆಸೇಜ್ ಬರುತ್ತದೆ’ ಎಂದು ಇನ್ಫೋಸಿಸ್ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಮನೆಯಿಂದ ಕೆಲಸ ಮಾಡುತ್ತಿದ್ದರೆ ತಿಂಗಳಿಗೆ ಎಷ್ಟು ಅವಧಿ ಅವರು ಕೆಲಸ ಮಾಡುತ್ತಾರೆ ಎಂಬುದನ್ನು ಮಾನವ ಸಂಪನ್ಮೂಲ ವಿಭಾಗವು ಟ್ರ್ಯಾಕ್ ಮಾಡುತ್ತದೆ. ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವ ಉದ್ಯೋಗಿಗಳಿಗೆ ನೋಟಿಫಿಕೇಶನ್ ಹೋಗುತ್ತದಂತೆ.
ಹಾಗಂತ, ಓವರ್ಟೈಮ್ ಕೆಲಸ ಮಾಡಿದರೆ ಉದ್ಯೋಗಿಗಳಿಗೆ ಶಿಕ್ಷೆ ನೀಡಲಾಗುವುದಿಲ್ಲ, ಅಥವಾ ಸಂಬಳದಲ್ಲಿ ಕಡಿತ ಮಾಡಲಾಗುವುದಿಲ್ಲ. ಬದಲಾಗಿ ಇದು ಉದ್ಯೋಗಿಯ ಆರೋಗ್ಯದ ಕಾಳಜಿ ದೃಷ್ಟಿಯಿಂದ ಎಚ್ಆರ್ ವಿಭಾಗದವರು ನೀಡುವ ಬುದ್ಧಿಮಾತು.
ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್ಬಿಐ ಹೊಸ ನಿಯಮ
‘ನಿಮ್ಮ ಬದ್ಧತೆಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ, ಜೀವನ ಮತ್ತು ಕೆಲಸದಲ್ಲಿ ಉತ್ತಮ ಸಮತೋಲನ ಇರುವುದು ಉತ್ತಮ. ಇದು ನಿಮ್ಮ ಆರೋಗ್ಯ ದೃಷ್ಟಿಯಿಂದ ಹಾಗೂ ವೃತ್ತಿಪರ ಬದುಕಿನ ದೃಷ್ಟಿಯಿಂದಲೂ ಸರಿ ಎಂಬುದು ನಮ್ಮ ಭಾವನೆ’ ಎಂದು ಎಚ್ಆರ್ ಇಮೇಲ್ನಲ್ಲಿ ತಿಳಿಸಲಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ