ರಾಧಾ ಕೃಷ್ಣರ ದೈವಿಕ ಪ್ರೇಮದಿಂದ ಪ್ರೇರಿತ: ಭೀಮದಿಂದ ರಾಸ ಲೀಲಾ ಗೋಲ್ಡ್ ಕಲೆಕ್ಷನ್ ಬಿಡುಗಡೆ

ಒಂದು ಶತಮಾನದಿಂದ ಆಭರಣ ತಯಾರಿಕೆಯಲ್ಲಿ ಭೀಮ ಪ್ರಸಿದ್ಧಿ ಪಡೆದಿದ್ದು, ಸಾಂಸ್ಕೃತಿಕ ಪ್ರತೀಕ ಹಾಗೂ ಕಾರ್ಯಾತ್ಮಕ ವಿನ್ಯಾಸಗಳಿಂದ ಸಂಯೋಜಿಸಿರುವ ವಿಷಯಾಧಾರಿತ ಆಭರಣಗಳ ಕಲೆಕ್ಷನ್‌ಗಳನ್ನು ಅಭಿವೃದ್ಧಿಪಡಿಸಿದ್ದು. ರಾಸ ಲೀಲಾ ಆಭರಣ ಕಲೆಕ್ಷನ್‌ ಕೂಡ ಇದಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ರಾಧಾ ಕೃಷ್ಣರ ದೈವಿಕ ಪ್ರೇಮದಿಂದ ಪ್ರೇರಿತ: ಭೀಮದಿಂದ ರಾಸ ಲೀಲಾ ಗೋಲ್ಡ್ ಕಲೆಕ್ಷನ್ ಬಿಡುಗಡೆ
ರಾಸ ಲೀಲಾ ಗೋಲ್ಡ್ ಕಲೆಕ್ಷನ್ ಬಿಡುಗಡೆ
Updated By: Digi Tech Desk

Updated on: Sep 09, 2025 | 5:02 PM

ಭಾರತದ ಪ್ರತಿಷ್ಠಿತ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಭೀಮ (Bheema) ರಾಸ ಲೀಲಾ ಎಂಬ ಆಭರಣ ಕಲೆಕ್ಷನ್  (Rasa Leela Gold collection) ಬಿಡುಗಡೆ ಮಾಡಿದೆ. ಈ ಸಂಗ್ರಹವು ಚಿನ್ನ, ವಜ್ರ ಹಾಗೂ ಅಮೂಲ್ಯ ರತ್ನಗಳಿಂದ ತಯಾರಿಸಲಾದ ಆಭರಣಗಳನ್ನೊಳಗೊಂಡಿದ್ದು , ರಾಧಾಕೃಷ್ಣರಿಂದ ಪ್ರೇರಿತ ವಿನ್ಯಾಸಗಳನ್ನು ಹೊಂದಿದೆ.

ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಷ್ಣು ಶರಣ್ ಭಟ್ ರವರು ಈ ಹೊಸ ಕಲೆಕ್ಷನ್ ಬಗ್ಗೆ ಮಾತನಾಡಿ, ರಾಧಾಕೃಷ್ಣರ ದೈವಿಕ ಪ್ರೀತಿಯ ನಮನವಾಗಿ ನಾವು ರಾಸ ಲೀಲಾ ಸಂಗ್ರಹವನ್ನು ಪರಿಚಯಿಸುತ್ತಿದ್ದೇವೆ. ದೇವರ ಕೃಪೆಯಿಂದ ಪ್ರತಿಯೊಂದು ವಿನ್ಯಾಸದಲ್ಲೂ ಅವರ ಆತ್ಮವನ್ನು ನಾವು ಒಗ್ಗೂಡಿಸಿದ್ದೇವೆ. ಭೀಮದ ಶತಮಾನದ ಕರಕುಶಲತೆಯ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ ಎಂದಿದ್ದಾರೆ.

ರಾಸ ಲೀಲಾ ಆಭರಣ ಕಲೆಕ್ಷನ್‌ನ ವಿಶೇಷತೆಯೇನು?

ರಾಸ ಲೀಲಾ ಕಲೆಕ್ಷನ್ ರಾಧಾಕೃಷ್ಣರಿಂದ ನಿಧಿವನದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನೊಳಗೊಂಡ ರಾಸ ಲೀಲಾ ಕಥೆಯಿಂದ ಪ್ರೇರಣೆಯನ್ನು ಪಡೆದಿದೆ. ಪ್ರತಿಯೊಂದು ಆಭರಣವು ಈ ಪರಂಪರೆಯ ಅಂಶಗಳಾದ ಸಂಗೀತ, ಚಲನ ವಲನ ಹಾಗೂ ಭಾವಭಂಗಿಗಳನ್ನು ಪ್ರತಿಬಿಂಬಿಸುತ್ತದೆ. ಈ ವಿನ್ಯಾಸಗಳ ಮೂಲಕ ರಾಧಾಕೃಷ್ಣರ ಸಂಬಂಧವನ್ನು ತೋರಿಸುವುದರ ಜೊತೆಗೆ ಸಾಮರಸ್ಯ ಹಾಗು ದೈವಿಕ ಪ್ರೀತಿಯ ಬಗ್ಗೆ ಹೇಳುತ್ತದೆ. ಭೀಮ ಚಿನ್ನ, ವಜ್ರ ಮತ್ತು ವಿವಿಧ ರತ್ನಗಳನ್ನೊಳಗೊಂಡ ಈ ಸಂಗ್ರಹವನ್ನು ರೂಪಿಸಿ ನಿಖರವಾದ ಕಲೆಗಾರಿಕೆಯನ್ನು ತೋರಿಸಿಕೊಟ್ಟಿದೆ.

ಇದನ್ನೂ ಓದಿ
ಗೋಲ್ಡ್ ಇಟಿಎಫ್​ಗಳ ಮೇಲೆ ಹೇಗೆ ಹೂಡಿಕೆ?
Gold Rates 08 September: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ
13 ತಿಂಗಳಲ್ಲಿ ಶೇಕಡಾ 50ರಷ್ಟು ಹೆಚ್ಚಾಯಿತು ಚಿನ್ನದ ದರ
Gold Rates 05 September: ಚಿನ್ನದ ಬೆಲೆ ಮತ್ತೆ ಏರಿಕೆ

ಇದನ್ನೂ ಓದಿ:ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

ಈ ಕಲಾ ಪರಂಪರೆಯ ನಕ್ಷೆಯ ರೂಪ ಮತ್ತು ಸುಂದರ ಕುಸುರಿಗಳಿಂದ ಮಾಡಿದ ಆಭರಣಗಳನ್ನು ಸಾಂಸ್ಕೃತಿಕ ಹಾಗೂ ಭಕ್ತಿ ಭಾವದ ಪ್ರತೀಕವಾಗಿ ರೂಪಿಸಲಾಗಿದೆ. ರಾಸ ಲೀಲಾ ಸಂಗ್ರಹದಲ್ಲಿನ ಆಭರಣಗಳನ್ನು ಎಲ್ಲಾ ಸಂಧರ್ಭಗಳಲ್ಲಿಯೂ ಧರಿಸುವಂತೆ ರೂಪುಗೊಳಿಸಲಾಗಿದೆ ಮತ್ತು ಪಾರಂಪರಿಕ ಸೊಗಡಿದ್ದರು ಹೊಸ ತಲೆಮಾರಿನ ಅಭಿರುಚಿಯ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಇದು ವೈಯಕ್ತಿಕ ಬಳಕೆ ಹಾಗೂ ಯಾವುದೇ ಸಮಾರಂಭಗಳಿಗೂ ಸಹ ಸೂಕ್ತವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Tue, 9 September 25