AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಿಎಫ್‌ಎಸ್‌ಐ ವಲಯ: ಬೆಳವಣಿಗೆ ಉತ್ತೇಜಿಸುವ ಅಂಶಗಳು

Sorbh Gupta writes on India's BFSI boom: ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಾ, 2028ರ ವೇಳೆಗೆ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಸಿದ್ಧವಾಗಿದೆ. ಇದಕ್ಕೆ ಬಿಎಫ್‌ಎಸ್‌ಐ ವಲಯವು ಪ್ರಮುಖ ಆಧಾರವಾಗಿದೆ. ನಿಯಂತ್ರಕ ಸುಧಾರಣೆಗಳು, ಡಿಜಿಟಲೀಕರಣ, ಮತ್ತು ಹಣಕಾಸು ಸೇರ್ಪಡೆ ಈ ವಲಯವನ್ನು ಬಲಪಡಿಸಿವೆ. ಹೂಡಿಕೆದಾರರಿಗೆ ಇದು ವಿಶಿಷ್ಟ ಅವಕಾಶಗಳನ್ನು ಸೃಷ್ಟಿಸಿದೆ, ಭಾರತದ ಆರ್ಥಿಕ ಪರಿವರ್ತನೆಗೆ BFSI ಪ್ರಮುಖ ಪಾತ್ರ ವಹಿಸುತ್ತಿದೆ. ಬಜಾಬ್ ಫಿನ್​ಸರ್ವ್​ನ ಈಕ್ವಿಟಿ ಮುಖ್ಯಸ್ಥರಾದ ಸೌರಭ್ ಗುಪ್ತಾ ಅವರು ಬಿಎಫ್​ಎಸ್​ಐ ಕ್ಷೇತ್ರದ ಬಗ್ಗೆ ಬರೆದ ಲೇಖನ ಇಲ್ಲಿದೆ...

ಭಾರತದ ಬಿಎಫ್‌ಎಸ್‌ಐ ವಲಯ: ಬೆಳವಣಿಗೆ ಉತ್ತೇಜಿಸುವ ಅಂಶಗಳು
ಸೌರಭ್ ಗುಪ್ತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 20, 2025 | 7:19 PM

Share

ಆರ್ಥಿಕವಾಗಿ ಬೆಳವಣಿಗೆಯಲ್ಲಿ ದಾಪುಗಾಲು ಹಾಕುತ್ತಿರುವ ಭಾರತ ಅಧಿಕ ಸವಾಲುಗಳನ್ನು ಎದುರಿಸುತ್ತಿರುವ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಜಾಗತಿಕ ಮಾರುಕಟ್ಟೆಗಳ ಎಚ್ಚರಿಕೆ ಹೆಜ್ಜೆಗಳ ನಡುವೆ, ಭಾರತೀಯ ಆರ್ಥಿಕತೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಅನುಭೋಗ ಹೆಚ್ಚಾದಂತೆ ಉತ್ಪಾದನೆ ತ್ವರಿತಗೊಳ್ಳುತ್ತಿದೆ. ಹಣಕಾಸು ವ್ಯವಸ್ಥೆಯು ಬಲಗೊಳ್ಳುತ್ತಿದೆ. 2028 ರ ವೇಳೆಗೆ ಆರ್ಥಿಕವಾಗಿ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಲು ಭಾರತ ಶ್ರಮಿಸುತ್ತಿರುವಾಗ, ಪ್ರಬಲ ಮತ್ತು ಉತ್ತಮ ಅಭಿವೃದ್ಧಿ ಹೊಂದಿದ ಹಣಕಾಸು ಇಕೋಸಿಸ್ಟಂ (financial ecosystem) ಕಲ್ಪಿಸುವುದು ಅತ್ಯಗತ್ಯ.

ಈ ಎಲ್ಲ ಬೆಳವಣಿಗೆಗಳ ನಡುವೆ ಸಾಂಪ್ರದಾಯಿಕ ಬ್ಯಾಂಕಿಂಗ್, ಸಾಲ, ವಿಮೆ, ಎನ್​ಬಿಎಫ್​ಸಿಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳಿರುವ ಬಿಎಫ್‌ಎಸ್‌ಐ ವಲಯವು (BFSI – ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವಿಸಸ್, ಇನ್ಷೂರೆನ್ಸ್ ಸೆಕ್ಟರ್) ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಈ ವಲಯವು ಭಾರತದ ಆರ್ಥಿಕ ಆವೇಗದ ಬಹು ಆಯಾಮದ ಎಂಜಿನ್ ಆಗಿ ವಿಕಸನಗೊಳ್ಳುತ್ತಲೇ ಇದೆ. ಈ ವಲಯವು ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಹಣಕಾಸು ಸೌಲಭ್ಯ ಕಲ್ಪಿಸುವುದು, ಮನೆ ನಿರ್ಮಾಣ ಮತ್ತು ವ್ಯವಹಾರಗಳಿಗೆ ಅನುವು ಮಾಡಿಕೊಡುವ ಮೂಲಕ ಪ್ರಗತಿಗೆ ಬೆಂಬಲ ಮತ್ತು ಆದ್ಯತೆ ನೀಡುತ್ತಿದೆ.

ಈ ಸ್ತಂಭಗಳು ಭಾರತದ ಬೆಳವಣಿಗೆಯ ಕೇಂದ್ರಬಿಂದುವಾಗಿವೆ. ಪ್ರಗತಿ ಮತ್ತು ಹೆಚ್ಚಿದ ಜಾಗೃತಿಯ ಹೊರತಾಗಿಯೂ, ಭಾರತವು ವಿಮೆ ಮತ್ತು ದೀರ್ಘಾವಧಿಯ ಉಳಿತಾಯದಲ್ಲಿ ಹಿಂದುಳಿದಿದೆ. ಈ ಕ್ಷೇತ್ರದಲ್ಲಿ ಬೆಳವಣಿಗೆಯ ಅವಕಾಶ ಇರುವುದನ್ನು ಇದು ತೋರಿಸುತ್ತದೆ.

ಕಳೆದ ದಶಕದಲ್ಲಿ, ಬಿಎಫ್‌ಎಸ್‌ಐ ವಲಯವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ರೆಗ್ಯುಲೇಟರಿ ರಿಫಾರ್ಮ್​ಗಳು ಆಡಳಿತವನ್ನು ಬಲಪಡಿಸಿವೆ. ಬ್ಯಾಂಕುಗಳು ಹೆಲ್ತಿ ಬ್ಯಾಲೆನ್ಸ್ ಶೀಟ್‌ಗಳನ್ನು ಹೊಂದಿವೆ. ಅನುತ್ಪಾದಕ ಆಸ್ತಿ (ಎನ್​ಪಿಎ) ಬಹಳ ಕಡಿಮೆ ಇದೆ. ಎನ್‌ಬಿಎಫ್‌ಸಿಗಳು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ್ದು, ಸಾಲದ ಅಗತ್ಯಗಳನ್ನು ಪೂರೈಸುತ್ತವೆ. ಇದರಿಂದಾಗಿ ಚಿಕ್ಕ ಹೂಡಿಕೆದಾರರಿಗೂ ಉತ್ತೇಜನ ದೊರಕುತ್ತಿದೆ. ಯುಪಿಐ ಅಳವಡಿಕೆಯಿಂದ ಅಪ್ಲಿಕೇಶನ್ ಆಧಾರಿತ ಹೂಡಿಕೆಯವರೆಗೆ ಡಿಜಿಟಲೀಕರಣ ಮತ್ತು ಫಿನ್‌ಟೆಕ್ ಇನ್ನೋವೇಶನ್​ಗಳು ನಗರ, ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆ ತಲುಪುವಂತೆ ಮಾಡಿವೆ. ಸಣ್ಣ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಔಪಚಾರಿಕ ಹಣಕಾಸು ವ್ಯವಸ್ಥೆಗಳ ನೆರವು ಪಡೆಯುತ್ತಿದ್ದಾರೆ.

ಈ ಮೆಗಾಟ್ರೆಂಡ್‌ಗಳು ಭಾರತದ ಆರ್ಥಿಕತೆಯಲ್ಲಿ ಬಿಎಫ್‌ಎಸ್‌ಐ ಪಾತ್ರವನ್ನು ಎತ್ತಿತೋರಿಸಿವೆ. ಸಾಲ ನೀಡುವಿಕೆಯಿಂದಾಗಿ ಕನ್ಸಂಪ್ಷನ್ ಮತ್ತು ಬ್ಯುಸಿನೆಸ್ ಬೆಳವಣಿಗೆಗೆ ಶಕ್ತಿ ನೀಡುತ್ತಿದೆ. ವಿಮಾ ಸೌಲಭ್ಯವು ಕುಟುಂಬಗಳು ಮತ್ತು ಉದ್ಯಮಗಳಿಗೆ ರಕ್ಷಣೆಯಾಗಿದೆ. ಮ್ಯೂಚುಯಲ್ ಫಂಡ್‌ಗಳು ಮತ್ತು ಇತರ ಹೂಡಿಕೆ ಮಾರ್ಗಗಳ ಮೂಲಕ ಉಳಿತಾಯ ಕ್ರೋಢೀಕರಣವು ಭವಿಷ್ಯಕ್ಕಾಗಿ ಬಂಡವಾಳವನ್ನು ರೂಪಿಸುತ್ತಿದೆ. ಈ ಎಲ್ಲ ಕಾರ್ಯಗಳು ಒಟ್ಟಾಗಿ ಬಿಎಫ್‌ಎಸ್‌ಐ ಅನ್ನು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಕೇಂದ್ರ ಸ್ತಂಭವಾಗಿಸಿದೆ. ನಿರ್ದಿಷ್ಟವಾಗಿ ಗ್ರಾಮೀಣ ಮಾರುಕಟ್ಟೆಗಳು ಭವಿಷ್ಯದ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಅದರಲ್ಲೂ ವಿಶೇಷವಾಗಿ ವಿಮೆ ಮತ್ತು ದೀರ್ಘಕಾಲೀನ ಉಳಿತಾಯದಲ್ಲಿ ಬೇಡಿಕೆ ಹೆಚ್ಚಿಸಬಹುದು.

ಎನ್​ಬಿಎಫ್​ಸಿಗಳು ಹಾಗೂ ಸ್ವಸಹಾಯ ಗುಂಪುಗಳು ಸೇರಿದಂತೆ ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯ ಔಪಚಾರಿಕೀಕರಣವು ಬಿಎಫ್‌ಎಸ್‌ಐ ವಲಯದ ಅಡಿಪಾಯವನ್ನು ಬಲಪಡಿಸಿದೆ. ಹಣಕಾಸು, ಲಭ್ಯತೆ, ಹೂಡಿಕೆ ಮತ್ತು ಹೊಂದಿಕೊಳ್ಳುವಿಕೆ ಎಂಬ ಪ್ರಮುಖ ಮೂಲಭೂತ ಅಂಶಗಳು ಕಳೆದ ದಶಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಮಾರ್ಗದರ್ಶಿಯಾಗಿವೆ.

ಹೂಡಿಕೆದಾರರು ಚಿನ್ನ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕ ಸುರಕ್ಷಿತ ತಾಣಗಳಿಂದ ದೂರ ಸರಿಯುತ್ತಿದ್ದಾರೆ ಮತ್ತು ಮ್ಯೂಚುವಲ್ ಫಂಡ್‌ಗಳು ಮತ್ತು ಬಂಡವಾಳ ಮಾರುಕಟ್ಟೆಗಳ ಮೂಲಕ ಭಾರತದ ಬೆಳವಣಿಗೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಪ್ರಾರಂಭಿಸಿದ್ದಾರೆ. ದೇಶವು ವಿಕಸಿತ ಭಾರತದ ಕಡೆಗೆ ಮುಂದುವರೆದಂತೆ, ಮುಂದಿನ ದಶಕದಲ್ಲಿ ಆರ್ಥಿಕತೆಯು ಪ್ರತಿ 12 ರಿಂದ 18 ತಿಂಗಳಿಗೊಮ್ಮೆ ತನ್ನ ನಾಮಿನಲ್ ಜಿಡಿಪಿಗೆ ಸರಿಸುಮಾರು  1 ಟ್ರಿಲಿಯನ್ ಅಮೆರಿಕನ್ ಡಾಲರ್ ಸೇರಿಸುವ ನಿರೀಕ್ಷೆಯಿದೆ. 9% ಸಿಎಜಿಆರ್ ಬೆಳವಣಿಗೆ ನಿರೀಕ್ಷೆ ಇದೆ. ಈ ಬೆಳವಣಿಗೆಯು ಹೆಚ್ಚುತ್ತಿರುವ ಖರೀದಿ, ಬಳಕೆ ಮತ್ತು ಆಟೋಮೊಬೈಲ್‌ಗಳು ಮತ್ತು ಮೋಟಾರ್ ವಿಮೆಯಂತಹ ಕೈಗಾರಿಕೆಗಳಲ್ಲಿನ ಬಲವಾದ ವಲಯ ಆವೇಗದಿಂದ ಮತ್ತಷ್ಟು ಬೆಂಬಲಿತವಾಗಿದೆ – ಇವು ಬಿಎಫ್​ಎಸ್​ಐ ವಲಯದ ದೃಷ್ಟಿಕೋನವನ್ನು ಒಟ್ಟಾಗಿ ಬಲಪಡಿಸುವ ಅಂಶಗಳಾಗಿವೆ. ಕಳೆದ ಆರು ತಿಂಗಳುಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಹಣಕಾಸು ವ್ಯವಹಾರಗಳ ಸರಳೀಕರಣವು ಸಾಲ ಸೌಲಭ್ಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಬಡ್ಡಿ ದರಗಳಲ್ಲಿ ಸುಧಾರಣೆಯಾಗಿದೆ. ಇದರಿಂದ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳಿಗೆ ಲಾಭ ಹೆಚ್ಚಿಸಿದೆ. ಬಿಎಫ್​ಎಸ್​ಐ ವಲಯದಲ್ಲಿನ ಮೌಲ್ಯಮಾಪನಗಳು ಕಳೆದ 14 ವರ್ಷಗಳಲ್ಲಿ ಚೇತರಿಕೆ ಕಂಡಿವೆ. ಇದು ಅನುಕೂಲಕರ ಅವಕಾಶಗಳನ್ನು ಸೃಷ್ಟಿಸುತ್ತದೆ. ಟ್ರೆಂಡ್​ಗಳು ದಟ್ಟವಾಗುತ್ತಿರುವಾಗ ಮತ್ತು ಹಣಗಳಿಕೆಯ ಸಾಮರ್ಥ್ಯವು ಸ್ಪಷ್ಟವಾಗುತ್ತಿರುವಾಗ, ಬಿಎಫ್​ಎಸ್​ಐ ವಲಯವು ಪಕ್ವವಾಗುತ್ತಿದೆ.

ಬಿಎಫ್‌ಎಸ್‌ಐ ಕ್ಷೇತ್ರವು ಹೂಡಿಕೆದಾರರಿಗೆ ಮಾತ್ರ ಚೇತೋಹಾರಿಯಾಗಿರದೇ ಜನಸಂಖ್ಯಾ ಪ್ರತಿಕೂಲತೆ, ಹೆಚ್ಚುತ್ತಿರುವ ಆರ್ಥಿಕ ಸಾಕ್ಷರತೆ ಮತ್ತು ವಿಕಸನಗೊಳ್ಳುತ್ತಿರುವ ಗ್ರಾಹಕರ ನಡವಳಿಕೆಯಿಂದ ನಡೆಸಲ್ಪಡುವ ರಚನಾತ್ಮಕತೆಗೆ ಅನುಕೂಲವಾಗಿದೆ. ಈ ವಲಯವು ಉಳಿತಾಯವನ್ನು ಹೆಚ್ಚಿಸುತ್ತದೆ, ಸಾಲವನ್ನು ವಿಸ್ತರಿಸುತ್ತದೆ, ಸಂಪತ್ತನ್ನು ರಕ್ಷಿಸುತ್ತದೆ ಮತ್ತು ವ್ಯಾಪಾರ ಬೆಳವಣಿಗೆಯನ್ನು ಬೆಂಬಲಿಸುತ್ತದೆ, ಭಾರತದ ಆರ್ಥಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ನಗರ ಕೇಂದ್ರಗಳಿಂದ ಹಿಡಿದು ಗ್ರಾಮೀಣ ಹೃದಯಭಾಗಗಳವರೆಗೆ, ಡಿಜಿಟಲೀಕರಣ, ರೆಗ್ಯುಲೇಟರಿ ಸುಧಾರಣೆಗಳು ಮತ್ತು ರೀಟೇಲ್ ಸೆಕ್ಟರ್ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು, ಇದರಿಂದಾಗಿ ಬಿಎಫ್​ಎಸ್​ಐ ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ.

ಬಿಎಫ್‌ಎಸ್‌ಐ ವಲಯವು ಭಾರತದ ಆರ್ಥಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ರಚನಾತ್ಮಕ ಸುಧಾರಣೆಗಳು, ಹೆಚ್ಚುತ್ತಿರುವ ಒಳಹರಿವು ಮತ್ತು ಅನುಕೂಲಕರ ಮೌಲ್ಯಮಾಪನಗಳೊಂದಿಗೆ, ಇದು ಹೂಡಿಕೆದಾರರಿಗೆ ದೇಶದ ಬೆಳವಣಿಗೆಯ ಓಟದಲ್ಲಿ ಭಾಗವಹಿಸಲು ಒಂದು ವಿಶೇಷ ಅವಕಾಶ ನೀಡುತ್ತದೆ.

ಲೇಖಕರು- ಸೌರಭ್ ಗುಪ್ತಾ (Sorbh Gupta), ಈಕ್ವಿಟಿ ಮುಖ್ಯಸ್ಥರು, ಬಜಾಜ್ ಫಿನ್​ಸರ್ವ್ ಎಎಂಸಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ