Multibagger Stock: ಈ ಸ್ಟಾಕ್​ನಲ್ಲಿ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ 3 ತಿಂಗಳಲ್ಲಿ ಆಗಿದೆ ರೂ. 2.50 ಕೋಟಿ

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಮಾಡಿದ 1 ಲಕ್ಷ ರೂಪಾಯಿ ಮೊತ್ತ ಮೂರು ತಿಂಗಳ ಅವಧಿಯಲ್ಲಿ2.50 ಕೋಟಿ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಹಾಗೂ ಅದರ ವ್ಯವಹಾರ ಏನು ಎಂಬ ಮಾಹಿತಿ ಇಲ್ಲಿದೆ.

Multibagger Stock: ಈ ಸ್ಟಾಕ್​ನಲ್ಲಿ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ 3 ತಿಂಗಳಲ್ಲಿ ಆಗಿದೆ ರೂ. 2.50 ಕೋಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 22, 2022 | 11:42 AM

ಪೆನ್ನಿ ಸ್ಟಾಕ್​ಗಳು ಎಂದು ಕರೆಸಿಕೊಳ್ಳುವ ಷೇರುಗಳು ಬಹಳ ಅಪಾಯಕಾರಿ. ಅಷ್ಟೇ ಅಲ್ಲ, ಇವುಗಳ ಬೆಲೆ ಭಾರೀ ಏರಿಳಿತದಿಂದ ಕೂಡಿರುತ್ತದೆ. ಖರೀದಿ ಮಾಡು, ಮಾರು ಹಾಗೂ ಲಾಭ ಗಳಿಸು ಎಂಬ ತತ್ವದ ಅಡಿಯಲ್ಲಿ ಬಹಳ ಬೇಗ ಬೇಗ ಷೇರುಗಳಲ್ಲಿ ವಹಿವಾಟು ನಡೆಸುವವರಿಗೆ ಇದು ಸೂಕ್ತ ಆಗಬಹುದು. ಅಂದಹಾಗೆ ಪೆನ್ನಿ ಸ್ಟಾಕ್​ಗಳು ಅಂದರೆ ಬಹಳ ಕಡಿಮೆ ಮೊತ್ತದಲ್ಲಿ ವಹಿವಾಟು ನಡೆಸುವಂಥವು. ವಾಲ್ಯೂಮ್​ ಕೂಡ ಕಡಿಮೆ ಇರುತ್ತದೆ. ಎಷ್ಟೋ ಸಲ ಖರೀದಿದಾರರು ಸಹ ಸಿಗದಿರಬಹುದು. ಆ ಕಾರಣಕ್ಕೆ ಲಿಕ್ವಿಡಿಟಿ ಕಷ್ಟ. ಆದರೆ ದಿಢೀರ್ ದೊಡ್ಡ ಲಾಭ ಗಳಿಸಿಕೊಡುವ ಸಾಧ್ಯತೆ ಇರುತ್ತದೆ. ಇಂಥ ಕಂಪೆನಿಗಳ ಉದ್ಯಮ ಮಾಡೆಲ್, ಲಾಭದ ಸುಸ್ಥಿರತೆ ಇತ್ಯಾದಿ ಗಮನಿಸಬೇಕು. ಈ ಲೇಖನದಲ್ಲಿ ಅಂಥದ್ದೊಂದು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ (Multibagger Penny Stock) ಉದಾಹರಣೆಯಾಗಿ ನೀಡಲಾಗುತ್ತಿದೆ. ಅದರ ಹೆಸರು ಎಸ್​ಇಎಲ್​ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ (SEL Manufacturing Company). ಇದರ ಷೇರಿನ ಬೆಲೆ ಅಕ್ಟೋಬರ್ 27, 2021ರಂದು ಒಂದಕ್ಕೆ ರೂ. 0.35 (35 ಪೈಸೆ) ಇತ್ತು. ಅಲ್ಲಿಂದ ಜನವರಿ 21, 2022ರ ಹೊತ್ತಿಗೆ ರೂ. 87.45 ತಲುಪುವ ಮೂಲಕ ಕೇವಲ ಮೂರೇ ತಿಂಗಳಲ್ಲಿ ಶೇ 24,900ರಷ್ಟು ಬೆಲೆ ಏರಿಕೆ ಆಗಿದೆ.

ಎಸ್​ಇಎಲ್​ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ ಬೆಲೆ ಇತಿಹಾಸ ಕಳೆದ ಒಂದು ವಾರದಲ್ಲಿ ಈ ಸ್ಟಾಕ್ ಎಲ್ಲ ಐದು ಸೆಷನ್​ನಲ್ಲಿ ಶೇ 5ರ ಅಪ್ಪರ್​ ಸರ್ಕ್ಯೂಟ್ ಮುಟ್ಟಿದ್ದು, ಶೇ 21.50ರಷ್ಟು ರಿಟರ್ನ್ಸ್​ ಅನ್ನು ಷೇರುದಾರರಿಗೆ ನೀಡಿದೆ. ಈ ವರ್ಷ ರೂ. 44.40ರಿಂದ 87.45 ರೂಪಾಯಿಗೆ ಏರಿದ್ದು, ಶೇ 97ರಷ್ಟು ರಿಟರ್ನ್ಸ್ ನೀಡಿದೆ. ಅಂದಹಾಗೆ ಇದು 2022ರಲ್ಲೂ ಮಲ್ಟಿಬ್ಯಾಗರ್ ಸ್ಟಾಕ್ ಆಗುವ ಸಾಧ್ಯತೆ ಇದೆ. 2021ರಲ್ಲೂ ಇದು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿಕೊಂಡಿತ್ತು. ರೂ. 30.20ರಿಂದ 87.45 ರೂಪಾಯಿಗೆ ಏರಿತ್ತು. ಈ ಅವಧಿಯಲ್ಲಿ ಶೇ 190ರಷ್ಟು ಬೆಲೆ ಹೆಚ್ಚಳವಾಗಿತ್ತು. ಕಳೆದ ಎರಡು ತಿಂಗಳಲ್ಲಿ ಎಸ್​ಇಎಲ್​ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ ರೂ. 27.45ರಿಂದ ರೂ. 87.45ಕ್ಕೆ ತಲುಪಿದ್ದು, ಶೇ 220ರಷ್ಟು ಮೇಲೇರಿದೆ. ಆದರೆ ಕಳೆದ ಮೂರು ತಿಂಗಳಲ್ಲಿ 35 ಪೈಸೆಯಿಂದ 87.45 ರೂಪಾಯಿಗೆ ಏರಿದ್ದು, ಆ ಮೂಲಕ 250 ಪಟ್ಟು ಹೆಚ್ಚಳವಾಗಿದೆ.

ಹೂಡಿಕೆ ಮೇಲೆ ಪರಿಣಾಮ ಎಸ್​ಇಎಲ್​ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯ ಬೆಲೆ ಇತಿಹಾಸವನ್ನು ಗಮನಿಸುವುದಾದರೆ, ಹೂಡಿಕೆದಾರರು ರೂ. 1 ಲಕ್ಷ ರೂಪಾಯಿಯನ್ನು ವಾರದ ಹಿಂದೆ ಹೂಡಿಕೆ ಮಾಡಿದ್ದಲ್ಲಿ ಇಂದಿಗೆ 1.21 ಲಕ್ಷ ಆಗಿರುತ್ತಿತ್ತು. ಇನ್ನು ಈ ವರ್ಷದ ಶುರುವಿನಿಂದ ಇಲ್ಲಿಯ ತನಕ 1.97 ಲಕ್ಷ ತಲುಪಿರುತ್ತಿತ್ತು. ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ 3.20 ಲಕ್ಷ ಆಗಿರುತ್ತಿತ್ತು. ಅದೇ ರೀತಿ ಮೂರು ತಿಂಗಳ ಹಿಂದೆ 35 ಪೈಸೆಗೆ ಒಂದರಂತೆ ಷೇರು ಖರೀದಿಸಿ, 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 2.50 ಕೋಟಿ ರೂಪಾಯಿ ಆಗಿರುತ್ತಿತ್ತು. ಅಂದರೆ, ಮೂರು ತಿಂಗಳಲ್ಲಿ 1 ಲಕ್ಷ ರೂಪಾಯಿ ಹೂಡಿ ಖರೀದಿಸಿದ ಷೇರಿನ ಮೌಲ್ಯ 2.50 ಕೋಟಿ ರೂಪಾಯಿ ತಲುಪಿರುತ್ತಿತ್ತು.

ಎಸ್​ಇಎಲ್​ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ ಬಗ್ಗೆ ಎಸ್​ಇಎಲ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ ಷೇರುಗಳ ಶೇ 75ರಷ್ಟು ಮಾಲೀಕತ್ವ ಹೊಂದಿರುವ ಜವಳಿ ಗುಂಪಾದ Arr Ess ಲೀಡಿಂಗ್ ಎಡ್ಜ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕರು ಇತ್ತೀಚೆಗೆ ಭಾರತೀಯ ವಿನಿಮಯ ಕೇಂದ್ರಗಳಿಗೆ SBICAP ಟ್ರಸ್ಟಿ ಕಂಪೆನಿ ಲಿಮಿಟೆಡ್ ಪರವಾಗಿ SEL ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ ಷೇರುಗಳನ್ನು ಅಡಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವಿನಿಮಯ ಕೇಂದ್ರದೊಂದಿಗಿನ ಸಂವಹನದಲ್ಲಿ ಕಂಪೆನಿಯ ಪ್ರವರ್ತಕರು, “ನಾವು, ಆರ್​ಎಸ್ ಲೀಡಿಂಗ್ ಎಡ್ಜ್ ಪ್ರೈವೇಟ್ ಲಿಮಿಟೆಡ್, SEL ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ (“ಟಾರ್ಗೆಟ್ ಕಂಪನಿ”)ನ ಪ್ರವರ್ತಕರು. ಟಾರ್ಗೆಟ್ ಕಂಪನಿಯ ಪರವಾಗಿ SBICAP ಟ್ರಸ್ಟಿ ಕಂಪೆನಿ ಲಿಮಿಟೆಡ್​ಗೆ 89,46,369 ಈಕ್ವಿಟಿ ಷೇರುಗಳನ್ನು ಅಡಮಾನ ಮಾಡಿದ್ದೇವೆ ಎಂದು ನಿಮಗೆ ತಿಳಿಸಲು ಬಯಸುತ್ತೇವೆ (ಶೇ 27),” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು