Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ

| Updated By: shruti hegde

Updated on: Nov 24, 2021 | 8:14 AM

ಯಾವುದರಲ್ಲಿ ಇಷ್ಟು ರಿಟರ್ನ್ಸ್​ ಬರಬಹುದೋ ಗೊತ್ತಿಲ್ಲ. ಹಾಗಂತ ಇದರಲ್ಲಿ ಅಪಾಯ ಇಲ್ಲವೆಂದಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ ಈ ಸ್ಕಾಕ್​ನಲ್ಲಿ ಮಾಡಿದ 1 ಲಕ್ಷ ಹೂಡಿಕೆ 31 ಲಕ್ಷ ರೂಪಾಯಿ ಆಗಿರುತ್ತಿತ್ತು.

Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ
ಪ್ರಾತಿನಿಧಿಕ ಚಿತ್ರ
Follow us on

ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಷೇರುಗಳು ಶೇಕಡಾ 100ಕ್ಕಿಂತ ಹೆಚ್ಚು ಲಾಭವನ್ನು ನೀಡಿವೆ. 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್‌ನಿಂದ ಸ್ಮಾಲ್-ಕ್ಯಾಪ್​ವರೆಗಿನ ಷೇರುಗಳನ್ನು ಮಾತ್ರ ಒಳಗೊಂಡಿಲ್ಲ, ಇದು ಪೆನ್ನಿ ಸ್ಟಾಕ್‌ಗಳನ್ನು ಸಹ ಒಳಗೊಂಡಿದೆ. JITF ಇನ್​ಫ್ರಾಲಾಜಿಸ್ಟಿಕ್ಸ್ ಷೇರುಗಳು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳಲ್ಲಿ ಒಂದಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಶೇ 100ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ. ವಾಸ್ತವವಾಗಿ, JITF ಇನ್​ಫ್ರಾಲಾಜಿಸ್ಟಿಕ್ಸ್ ಷೇರಿನ ಬೆಲೆಯು ಪ್ರತಿ ಷೇರಿಗೆ ರೂ. 6.05ರಿಂದ ರೂ. 188ಕ್ಕೆ ಏರಿದೆ. ಕಳೆದ ಒಂದು ವರ್ಷದಲ್ಲಿ ಅದರ ಷೇರುದಾರರಿಗೆ ಶೇ 3000ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರು ಬೆಲೆ ಇತಿಹಾಸದ ಪ್ರಕಾರ, JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರುಗಳು ಕಳೆದ ಒಂದು ತಿಂಗಳಿನಿಂದ ಪ್ರಾಫಿಟ್-ಬುಕಿಂಗ್ ಒತ್ತಡದಲ್ಲಿದೆ. ಇದು ಪ್ರತಿ ಷೇರಿಗೆ ರೂ.261.50ರಿಂದ ರೂ.187.95ಕ್ಕೆ ಇಳಿದಿದೆ, ಈ ಅವಧಿಯಲ್ಲಿ ಸುಮಾರು ಶೇ 28ರಷ್ಟು ನಷ್ಟವನ್ನು ಕಂಡಿದೆ. ಕಳೆದ 6 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಪ್ರತಿ ಷೇರಿಗೆ ರೂ. 11.85ರಿಂದ ರೂ. 187.95ಕ್ಕೆ ಏರಿದೆ, ಈ ಅವಧಿಯಲ್ಲಿ ಸುಮಾರು ಶೇ 1500ರಷ್ಟು ಏರಿಕೆಯಾಗಿದೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ಈ ಷೇರು 12.80 ರೂಪಾಯಿಯಿಂದ 187.95 ರೂಪಾಯಿ ಮಟ್ಟಕ್ಕೆ ಏರಿದೆ. 2021ರಲ್ಲಿ ಶೇ 1370ರಷ್ಟು ಜಿಗಿತವನ್ನು ದಾಖಲಿಸಿದೆ. ಅದೇ ರೀತಿ, ಕಳೆದ ಒಂದು ವರ್ಷದಲ್ಲಿ ಈ ಷೇರು ರೂ. 6.05ರಿಂದ (22 ನವೆಂಬರ್ 2020 ರಂದು NSE ನಲ್ಲಿ ಬೆಲೆ) ರೂ. 187.95 (NSE ನಲ್ಲಿ 22 ನವೆಂಬರ್ 2021 ರಂದು ಮುಕ್ತಾಯದ ಬೆಲೆ) ಜಿಗಿದಿದೆ. ಈ ಅವಧಿಯಲ್ಲಿ ಶೇ 3000ದಷ್ಟು ಏರಿಕೆಯನ್ನು ನೀಡಿದೆ.

ಹೂಡಿಕೆ ಮೇಲೆ ಪರಿಣಾಮ
JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರು ಬೆಲೆ ಇತಿಹಾಸ ನೋಡುವುದಾದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಷೇರಿನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು 72,000 ರೂಪಾಯಿ ಆಗಿರುತ್ತಿತ್ತು. ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, 16 ಲಕ್ಷ ಆಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 2021ರ ಆರಂಭದಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರುಗಳನ್ನು 12.80 ರಂತೆ ಖರೀದಿಸಿದ್ದರೆ ಅದರ 1 ಲಕ್ಷ ಇಂದು 14.7 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ ಹೂಡಿಕೆದಾರರು ಒಂದು ವರ್ಷದ ಹಿಂದೆ 1 ಲಕ್ಷ ಹೂಡಿಕೆ ಮಾಡಿ, ತಲಾ 6.05ರಂತೆ ಒಂದು ಷೇರನ್ನು ಖರೀದಿಸಿ ಮತ್ತು ಇಲ್ಲಿಯವರೆಗೆ ಇರಿಸಿಕೊಂಡಿದ್ದರೆ ಆ 1 ಲಕ್ಷ ಇಂದು ರೂ. 31 ಲಕ್ಷ ಆಗಿರುತ್ತಿತ್ತು.

ಇದನ್ನೂ ಓದಿ: 20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?