AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrencies: ಬಹುತೇಕ ಕ್ರಿಪ್ಟೋಕರೆನ್ಸಿಗಳಿಗೆ ಉಳಿಗಾಲ ಇಲ್ಲ ಎಂದ ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

ಈಗಿರುವ 6000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಭವಿಷ್ಯದಲ್ಲಿ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

Cryptocurrencies: ಬಹುತೇಕ ಕ್ರಿಪ್ಟೋಕರೆನ್ಸಿಗಳಿಗೆ ಉಳಿಗಾಲ ಇಲ್ಲ ಎಂದ ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್
ಆರ್​ಬಿಐ ಮಾಜಿ ಗವರ್ನರ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Nov 24, 2021 | 12:58 PM

ಇವತ್ತಿಗೆ 6000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳಿದ್ದು, ಆ ಪೈಕಿ ಬಹುತೇಕ ಇಲ್ಲದಂತಾಗುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಒಂದು ಅಥವಾ ಎರಡು ಅಥವಾ ಕೆಲವಷ್ಟೇ ಉಳಿಯುತ್ತವೆ ಎಂದು ಅವರು ಹೇಳಿದ್ದಾರೆ. ರಾಜನ್ ಮಾತನಾಡಿ, ಒಂದು ವೇಳೆ ಮೌಲ್ಯ ಅಂತಿದ್ದಲ್ಲಿ ಬೆಲೆ ಏರಿಕೆ ಆಗಿರಬಹುದು ಎಂದಷ್ಟೇ. ಆದರೆ ಅದು ನೀರಿನ ಮೇಲೆ ಗುಳ್ಳೆಯಂತೆ ಎಂದು ಸಿಎನ್​ಬಿಸಿ-ಟಿವಿ18ಗೆ ಹೇಳಿದ್ದಾರೆ. ಬಹಳಷ್ಟು ಕ್ರಿಪ್ಟೋಗಳಿಗೆ ಬೆಲೆ ಇರುವುದಕ್ಕೆ ಕಾರಣ ಏನೆಂದರೆ, ಅವುಗಳನ್ನು ಕೊಳ್ಳುವ ಸಾಮರ್ಥ್ಯ ಇರುವ ದೊಡ್ಡ ಮೂರ್ಖರು ಇದ್ದಾರೆ ಅಂತಷ್ಟೇ ಎಂದಿದ್ದಾರೆ. ನೆದರ್​ಲೆಂಡ್ಸ್​ನಲ್ಲಿ 17ನೇ ಶತಮಾನದಲ್ಲಿ ನಡೆದ ಟುಲಿಪ್ ಮೇನಿಯಾಗೆ ಕ್ರಿಪ್ಟೋಕರೆನ್ಸಿಯನ್ನು ಹೋಲಿಸಿರುವ ರಾಜನ್, ಅನಿಯಂತ್ರಿತ ಚಿಟ್​ಫಂಡ್​ನಂತೆಯೇ ಇದರಲ್ಲೂ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದು ಜನರಿಂದ ದುಡ್ಡು ತಗೊಂಡು, ಸ್ಫೋಟಗೊಳ್ಳುತ್ತದೆ. ಯಾರ್ಯಾರ ಬಳಿ ಕ್ರಿಪ್ಟೋ ಆಸ್ತಿ ಇರುತ್ತದೋ ಅಂಥವರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದಿದ್ದಾರೆ.

ಕ್ರಿಪ್ಟೋಕರೆನ್ಸಿಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂದಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ರಾಜನ್, ಅವುಗಳಲ್ಲಿ ಬಹಳಷ್ಟಕ್ಕೆ ಶಾಶ್ವತವಾದ ಮೌಲ್ಯ ಇಲ್ಲ. ಕೆಲವು ಪಾವತಿಗೆ, ಅದರಲ್ಲೂ ಗಡಿಯಾಚೆಗಿನ ಪಾವತಿಗೆ ಬಳಕೆಯಂತೆ ಉಳಿಯಬಹುದು ಎಂದು ಅವರು ಹೇಳಿದ್ದಾರೆ. “ಅಮೆರಿಕದಲ್ಲಿ ಕ್ರಿಪ್ಟೋ 2.5 ಲಕ್ಷ ಕೋಟಿ ಡಾಲರ್​ ಸಮಸ್ಯೆ. ಅದನ್ನು ನಿಯಂತ್ರಿಸಲು ಯಾರೂ ಬಯಸುವುದಿಲ್ಲ,” ಎಂದು ಹೇಳಿದ್ದಾರೆ. ಭಾರತದ ಬಗ್ಗೆ ಮಾತನಾಡುತ್ತಾ, ಬ್ಲಾಕ್​ಚೈನ್ ತಂತ್ರಜ್ಞಾನ ಬೆಳೆಯುವುದಕ್ಕೆ ಅವಕಾಶ ನೀಡಬೇಕು. ಬ್ಲಾಕ್​ಚೈನ್ ಮಾದರಿಯಲ್ಲಿ, ಅದರಲ್ಲೂ ಗಡಿಯಾಚೆಗಿನ ವ್ಯವಹಾರಕ್ಕೆ ಇದು ಬಹಳ ಅಗ್ಗ ಎಂದಿದ್ದಾರೆ.

ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಅಧಿವೇಶನವು ನವೆಂಬರ್ 29ರಿಂದ ಶುರುವಾಗುತ್ತದೆ. ಕೆಲವು ಕ್ರಿಪ್ಟೋಕರೆನ್ಸಿಗಳ ವಹಿವಾಟು ನಿರ್ಬಂಧ ಮತ್ತು ಆರ್​ಬಿಐನಿಂದ ವಿತರಿಸುವ ಡಿಜಿಟಲ್ ಕರೆನ್ಸಿ ನಿಯಂತ್ರಣಕ್ಕೆ ಚೌಕಟ್ಟು ರೂಪಿಸಲು ಮಸೂದೆ ಮಂಡಿಸಲಾಗುವುದು ಎಂಬ ನಿರೀಕ್ಷೆ ಇದೆ. ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021 ಇದನ್ನು ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿದೆ. ಕೇಂದ್ರ ಬ್ಯಾಂಕ್​ನಿಂದ ಅಧಿಕೃತ ಡಿಜಿಟಲ್ ಕರೆನ್ಸಿ ವಿತರಿಸುವುದಕ್ಕೆ ಸಹ ಅನುಮತಿ ಕೋರಲಾಗುವುದು. “ಇದರ ಜತೆಗೆ ಭಾರತದಲ್ಲಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಅನುಮತಿ ಕೇಳಲಿದೆ. ಆದರೆ ಕ್ರಿಪ್ಟೋಕರೆನ್ಸಿಯ ತಂತ್ರಜ್ಞಾನ ಮತ್ತು ಬಳಕೆಯನ್ನು ಉ್ತತೇಜಿಸಲಾಗುವುದು,” ಲೋಕಸಭೆ ವೆಬ್​ಸೈಟ್​ನಲ್ಲಿ ಮಸೂದೆ ಬಗ್ಗೆ ಮಾಹಿತಿ ಇದೆ.

ಇದನ್ನೂ ಓದಿ: Sydney Dialogue: ಕ್ರಿಪ್ಟೋಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ; ದುರ್ಬಳಕೆ ತಡೆಯಲು ಒಗ್ಗಟ್ಟಾಗುವಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಕರೆ

Published On - 12:57 pm, Wed, 24 November 21

ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್