ಫ್ಲಿಪ್​ಕಾರ್ಟ್​ನಲ್ಲಿ ಐಫೋನ್15 ಸೇಲ್; 50,000 ರೂ ಡಿಸ್ಕೌಂಟ್ ಪಡೆಯುವ ಅವಕಾಶ

|

Updated on: Apr 14, 2024 | 2:24 PM

Flipkart mega saving days sales: ಫ್ಲಿಪ್​ಕಾರ್ಟ್ನ ಮೆಗಾ ಸೇವಿಂಗ್ ಡೇಸ್ ಸೇಲ್ಸ್ ಆಫರ್ ಎಪ್ರಿಲ್ 15ರವರೆಗೂ ಇದೆ. ಇದರಲ್ಲಿ ಬಹಳಷ್ಟು ಫೋನ್, ಗೃಹೋಪಯೋಗಿ ಉಪಕರಣಗಳಿಗೆ ಭರ್ಜರಿ ಡಿಸ್ಕೌಂಟ್ ಮತ್ತು ಎಕ್ಸ್​ಚೇಂಜ್ ಆಫರ್ ಇದೆ. ಐಫೋನ್15 ಮೂಲ ಬೆಲೆ 80,000 ರೂ ಸಮೀಪ ಇದೆ. ಇದು 65,900 ರೂಗೆ ಡಿಸ್ಕೌಂಟ್ ಬೆಲೆಯಲ್ಲಿ ಸಿಗುತ್ತಿದೆ. ಫ್ಲಿಪ್​ಕಾರ್ಟ್ ಸೇವಿಂಗ್ ಡೇಸ್​ನ ಎಕ್ಸ್​ಚೇಂಜ್ ಆಫರ್ ಅನ್ನು ಪರಿಗಣಿಸಿದರೆ ಐಫೋನ್15 ಮೇಲೆ 50,000 ರೂವರೆಗೆ ಡಿಸ್ಕೌಂಟ್ ಪಡೆಯಲು ಅವಕಾಶ ಇದೆ.

ಫ್ಲಿಪ್​ಕಾರ್ಟ್​ನಲ್ಲಿ ಐಫೋನ್15 ಸೇಲ್; 50,000 ರೂ ಡಿಸ್ಕೌಂಟ್ ಪಡೆಯುವ ಅವಕಾಶ
ಫ್ಲಿಪ್​ಕಾರ್ಟ್ ಮೆಗಾ ಸೇವಿಂಗ್ ಡೇಸ್ ಸೇಲ್ಸ್
Follow us on

ನವದೆಹಲಿ, ಏಪ್ರಿಲ್ 14: ಅಮೇಜಾನ್​ನಂತೆ ಫ್ಲಿಪ್​ಕಾರ್ಟ್​ನಲ್ಲೂ ವರ್ಷದ ವಿವಿಧ ಸಂದರ್ಭದಲ್ಲಿ ಸೇಲ್ಸ್ ಆಫರ್​ಗಳು (Flipkart Mega Saving Days sales) ನಡೆಯುತ್ತಿರುತ್ತವೆ. ಈಗ ಫ್ಲಿಪ್​ಕಾರ್ಟ್ ಮೆಗಾ ಸೇವಿಂಗ್ ಡೇಸ್ ಆಫರ್ ಇದೆ. ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​ಗಳನ್ನು ನೀಡಲಾಗುತ್ತಿದೆ. ಆಕರ್ಷಕ ಎಕ್ಸ್​ಚೇಂಜ್ ಆಫರ್​ಗಳೂ ಇವೆ. ಈ ಮೆಗಾ ಸೇವಿಂಗ್ ಡೇಸ್ ಮಾರಾಟ ಏಪ್ರಿಲ್ 15ರವರೆಗೂ ಇದೆ. ಸೋಮವಾರದವರೆಗೆ ಈ ಆಫರ್ ಇದೆ. ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳು, ಗ್ಯಾಜೆಟ್, ಗೃಹೋಪಯೋಗಿ ಉಪಕರಣಗಳ ಮೇಲೆ ಡಿಸ್ಕೌಂಟ್, ಎಕ್ಸ್​ಚೇಂಜ್ ಆಫರ್ ಇದೆ. ಇದರಲ್ಲಿ ಐಫೋನ್15 ಮಾರಾಟ ಸಾಕಷ್ಟು ಜನರನ್ನು ಸೆಳೆದಿದೆ.

ಐಫೋನ್15ನಲ್ಲಿ ಐವತ್ತು ಸಾವಿರ ರೂ ಡಿಸ್ಕೌಂಟ್ ಪಡೆಯುವುದು ಹೇಗೆ?

ಐಫೋನ್15 ಈಗ ಸಾಕಷ್ಟು ಜನಾಕರ್ಷಣೆ ಪಡೆದಿದೆ. 79,900 ರೂ ಬೆಲೆಯ ಈ ಐಫೋನ್15 ಮೇಲೆ 13,000 ರೂ ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ, 65,999 ರೂಗೆ ಐಫೋನ್15 ಸಿಗುತ್ತದೆ. ಇದರ ಜೊತೆಗೆ ಎಕ್ಸ್​ಜೇಂಜ್ ಆಫರ್ ಕೂಡ ಇದೆ.

ಇದನ್ನೂ ಓದಿ: ಎನ್​ಪಿಎಸ್ ಮತ್ತು ಪಿಪಿಎಫ್ ಸ್ಕೀಮ್​ನಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲವಾ? ಇಲ್ಲಿದೆ ಒಂದು ಹೋಲಿಕೆ

ನಿಮ್ಮ ಹಳೆಯ ಮಾಡಲ್ ಐಫೋನ್ ಅನ್ನು ಎಕ್ಸ್​ಚೇಂಜ್ ಮಾಡಿದರೆ 50,000 ರೂವರೆಗೆ ಡಿಸ್ಕೌಂಟ್ ಸಿಗುತ್ತದೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್​ಗೆ ಗರಿಷ್ಠ ಎಕ್ಸ್​​ಚೇಂಜ್ ವ್ಯಾಲ್ಯೂ ಇದೆ. ಈ ಉತ್ಕೃಷ್ಟ ಮಾಡಲ್​ನ ಐಫೋನ್ ಅನ್ನು ಮರಳಿಸಿದರೆ 50,000 ರೂ ಸಿಗುತ್ತದೆ.

ಐಫೋನ್13 ಮಾಡಲ್​ಗಳು 26,000 ರೂ ಎಕ್ಸ್​ಚೇಂಜ್ ವ್ಯಾಲ್ಯೂ ಹೊಂದಿವೆ. ಅದಕ್ಕಿಂತ ಕಡಿಮೆ ಆವೃತ್ತಿಯ ಐಫೋನ್​ಗಳು ಇನ್ನೂ ಕಡಿಮೆ ಬೆಲೆ ಪಡೆದಿವೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್ ನಿಮ್ಮಲ್ಲಿದ್ದು ಅದನ್ನು ಎಕ್ಸ್​ಚೇಂಜ್ ಮಾಡಿದರೆ ನೀವು ಐಫೋನ್ ಅನ್ನು 16,000 ರೂಗೆ ಪಡೆಯಲು ಸಾಧ್ಯವಾಗಬಹುದು.

ಆದರೆ ತಜ್ಞರ ಪ್ರಕಾರ ಐಫೋನ್14 ಪ್ರೋ ಮ್ಯಾಕ್ಸ್ ಒಳ್ಳೆಯ ಫೀಚರ್ಸ್ ಇರುವ ಹೈ ಎಂಡ್ ಫೋನ್ ಆಗಿದೆ. ಐಫೋನ್ 13 ಹಾಗು ಅದಕ್ಕಿಂತ ಕಡಿಮೆ ಆವೃತ್ತಿಯ ಫೋನ್ ಇದ್ದರೆ ಅದನ್ನು ಮರಳಿಸಿ ಐಫೋನ್15 ಪಡೆಯುವುದು ಸಾರ್ಥಕ ಎನಿಸಬಹುದು.

ಇದನ್ನೂ ಓದಿ: Google Photos: ಗೂಗಲ್ ಫೋಟೋಗಳ ಬಳಕೆದಾರರಿಗೆ ಸಿಹಿ ಸುದ್ದಿ, ಉಚಿತವಾಗಿ ಬರಲಿದೆ AI-ಚಾಲಿತ ಎಡಿಟಿಂಗ್ ಟೂಲ್

ಐಫೋನ್15 ವಿಶೇಷತೆಗಳೇನು?

ಇದರ ಎ16 ಬಯೋನಿಕ್ ಚಿಪ್ ನಿಮ್ಮ ಫೋನ್​ನ ಪ್ರೋಸಸಿಂಗ್ ಕಾರ್ಯವನ್ನು ಬಹಳ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಮಾಡಲು ನೆರವಾಗುತ್ತದೆ. ಐಫೋನ್ ಮೊಬೈಲ್ ಕ್ಯಾಮರಾ ಫೀಚರ್​ಗೂ ಹೆಸರುವಾಸಿ. ಐಫೋನ್15ನಲ್ಲಿ ಕ್ಯಾಮರಾ ಟೆಕ್ನಾಲಜಿ ಇನ್ನೂ ಅಪ್​ಗ್ರೇಡ್ ಆಗಿದೆ. ಕಡಿಮೆ ಬೆಳಕು ಇರುವ ಜಾಗದಲ್ಲೂ ಅದ್ಭುತ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ