AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು

IRCTC Opens Booking For Train Ticket: ನವೆಂಬರ್ ಎರಡನೇ ವಾರದಲ್ಲಿರುವ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕೆನ್ನುವವರಿಗೆ ಈಗಲೇ ರೈಲು ಟಿಕೆಟ್ ಬುಕಿಂಗ್ ಕಾರ್ಯ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಬುಕಿಂಗ್ ಮುಗಿದುಹೋಗುವ ಸಾಧ್ಯತೆ ಇದೆ.

Deepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು
ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 13, 2023 | 2:35 PM

Share

ನವದೆಹಲಿ: ನವೆಂಬರ್​ನಲ್ಲಿರುವ ದೀಪಾವಳಿ ಹಬ್ಬದ ಪ್ರಯುಕ್ತ ಐಆರ್​ಸಿಟಿಸಿ (IRCTC) ಈಗಿನಿಂದಲೆ ರೈಲು ಟಿಕೆಟ್ ಬುಕಿಂಗ್ (Train Ticket Booking) ಸ್ವೀಕರಿಸಲು ಅರಂಭಿಸಿದೆ. ಜುಲೈ 12, ಬುಧವಾರದಿಂದಲೇ ಟ್ರೈನ್ ಟಿಕೆಟ್ ಬುಕಿಂಗ್ ಕಾರ್ಯ ನಡೆಯುತ್ತಿದೆ. ಐಆರ್​ಸಿಟಿಸಿ ಪೋರ್ಟಲ್​ನಲ್ಲಿ ಟಿಕೆಟ್ ಬುಕ್ ಮಾಡಬಹುದು. ರೈಲ್ವೆ ಕೌಂಟರ್​ಗಳಲ್ಲೂ ಮಾಮೂಲಿಯಂತೆ ಟಿಕೆಟ್ ಬುಕಿಂಗ್ ನಡೆಯುತ್ತದೆ.

ಪ್ರತೀ ವರ್ಷವೂ ದೀಪಾವಳಿ ಹಬ್ಬಕ್ಕೆ 4 ತಿಂಗಳು ಮುಂಚೆಯೇ ಟಿಕೆಟ್ ಬುಕಿಂಗ್ ನಡೆಯುತ್ತದೆ. ಈ ಬಾರಿ ದೀಪಾವಳಿ ಹಬ್ಬ ನವೆಂಬರ್ 10ರಿಂದ 14ರವರೆಗೂ ಇದೆ. ಯಾವುದೇ ದಿನಕ್ಕೆ ಟಿಕೆಟ್ ಬುಕ್ ಮಾಡಲು 120 ದಿನ ಮುಂಚಿನಿಂದ ಬುಕಿಂಗ್ ಅವಕಾಶ ಇರುತ್ತದೆ. ನವೆಂಬರ್ 12ಕ್ಕೆ ನೀವು ಪ್ರಯಾಣಿಸಬೇಕಾದರೆ ಜುಲೈ 14ರಿಂದ ಟಿಕೆಟ್ ಬುಕಿಂಗ್ ಅವಕಾಶ ಇರುತ್ತದೆ.

ಇದನ್ನೂ ಓದಿOnline Gaming: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

ನವೆಂಬರ್ ಎರಡನೇ ಮತ್ತು ಮೂರನೇ ವಾರ ಎಲ್ಲಾ ರೈಲುಗಳು ಭರ್ತಿಯಾಗಿ ಹೋಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರಿಗೆ ಹೋಗಬೇಕೆನ್ನುವವರು ಈಗಲೇ ತ್ವರಿತವಾಗಿ ಟಿಕೆಟ್ ಬುಕಿಂಗ್ ಮಾಡುವುದು ಉತ್ತಮ. ಭಾರತೀಯ ರೈಲ್ವೆಸ್ ಎಲ್ಲಾ ಹಬ್ಬಗಳಲ್ಲಿಯಂತೆ ದೀಪಾವಳಿಯಲ್ಲೂ ವಿಶೇಷ ರೈಲುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವ ಮಾರ್ಗಗಳಲ್ಲಿ ಸಹಜವಾಗಿ ಹೆಚ್ಚು ಟ್ರೈನುಗಳನ್ನು ಬಿಡಲಾಗುತ್ತದೆ. ಆದರೆ, ಈ ಬಾರಿ ಹೆಚ್ಚುವರಿ ವಿಶೇಷ ರೈಲುಗಳನ್ನು ಎಷ್ಟು ಸಂಖ್ಯೆಯಲ್ಲಿ ಓಡಿಸಲಾಗುವುದು ಎಂಬ ಮಾಹಿತಿಯನ್ನು ರೈಲ್ವೆ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ.

ಆನ್​ಲೈನ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ ಕ್ರಮಗಳು

ಪೇಟಿಎಂ ಸೇರಿದಂತೆ ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು. ಆದರೆ ಎಲ್ಲವೂ ಐಅರ್​ಸಿಟಿಸಿ ಪ್ಲಾಟ್​ಫಾರ್ಮ್​ಗೆ ಜೋಡಿತವಾಗಿರುತ್ತವೆ. ಐಆರ್​ಸಿಟಿಸಿ ವೆಬ್​ಸೈಟ್​ನಿಂದಲೇ ನೇರವಾಗಿ ನೀವು ಟ್ರೈನ್ ಟಿಕೆಟ್ ಬುಕ್ ಮಾಡಬಹುದು.

ಇದನ್ನೂ ಓದಿCheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ

ಐಆರ್​ಸಿಟಿಸಿ ವೆಬ್​ಸೈಟ್​ನ ಲಿಂಕ್ ಇಲ್ಲಿದೆ: www.irctc.co.in

ಇಲ್ಲಿ ಲಾಗಿನ್ ಆದ ಬಳಿಕ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರ ಹೆಸರು ಇತ್ಯಾದಿ ವಿವರ ತುಂಬಿಸಬೇಕು. ಹಣ ಪಾವತಿಸಿದ ಬಳಿಕ ಟಿಕೆಟ್ ಬುಕಿಂಗ್ ಸ್ವೀಕೃತಿ ಸಿಗುತ್ತದೆ.

ನೀವು ರೈಲು ಪ್ರಯಾಣ ಮಾಡುವಾಗ ಇಟಿಕೆಟ್ ಇಟ್ಟುಕೊಂಡಿರಬೇಕು. ಹಾಗೆಯೇ, ಆಧಾರ್ ಕಾರ್ಡ್​ನ ಗುರುತಿನ ಚೀಟಿಯ ಪ್ರತಿ ನಿಮ್ಮ ಬಳಿ ಇರಲಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ