
ನವದೆಹಲಿ, ಜುಲೈ 6: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಗುಜರಾತ್ನಲ್ಲಿ ಸ್ಪೇಸ್ ಸೆಂಟರ್ (ISRO space centre) ನಿರ್ಮಿಸುತ್ತಿದೆ. ಇದು ಇಸ್ರೋದ ಮೂರನೇ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಬಿಟ್ಟರೆ ಗುಜರಾತ್ನದ್ದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. 10,000 ಕೋಟಿ ರೂ ವೆಚ್ಚದಲ್ಲಿ ಸ್ಪೇಸ್ ಸೆಂಟರ್ ನಿರ್ಮಾಣವಾಗಲಿದೆ.
ವರದಿಗಳ ಪ್ರಕಾರ, ಗುಜರಾತ್ನ ಡಿಯು (Diu) ಮತ್ತು ವೇರಾವಲ್ (Verawal) ನಡುವೆ ಈ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಎಸ್ಎಎಲ್ವಿ ಮತ್ತು ಪಿಎಸ್ಎಲ್ವಿ ರಾಕೆಟ್ಗಳನ್ನು ಉಡಾವಣೆ ಮಾಡುವ ಉದ್ದೇಶ ಇದೆ. ಕಮ್ಯುನಿಕೇಶನ್, ನ್ಯಾವಿಗೇಶನ್ ಮತ್ತು ರಿಮೋಟ್ ಸೆನ್ಸಿಂಗ್ ಸಿಸ್ಟಂಗಳ ಸೆಟಿಲೈಟ್ಗಳನ್ನು ಇಲ್ಲಿಂದಲೇ ನಭಕ್ಕೆ ಹಾರಿಸಲು ಆದ್ಯತೆ ಸಿಗಬಹುದು.
ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು
ಈಕ್ವಟರ್ ರೇಖೆಗೆ ಗುಜರಾತ್ ಸಮೀಪ ಇರುವುದರಿಂದ ಸೆಟಿಲೈಟ್ಗಳನ್ನು ಭೂಕಕ್ಷೆಗೆ ಸೇರಿಸಲು ಇಲ್ಲಿಂದಲೇ ಉಡಾವಣೆ ಮಾಡಲು ಉತ್ತಮ ಸ್ಥಳ ಆಯ್ಕೆ ಆಗಿರುತ್ತದೆ.
ಭಾರತದಲ್ಲಿ ಈಗಾಗಲೇ ಎರಡು ಸ್ಪೇಸ್ ಸೆಂಟರ್ಗಳಿವೆ. ಒಂದು ಆಂದ್ರದಲ್ಲಿ ಇದ್ದರೆ, ಇನ್ನೊಂದು ಕೇರಳದಲ್ಲಿದೆ. ಆಂಧ್ರದ ಶ್ರೀಹರಿಕೋಟಾ ದ್ವೀಪದಲ್ಲಿ ಸತೀಶ್ ಧವನ್ ಸ್ಪೇಸ್ ಸೆಂಟರ್ ಇದೆ. ಇದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ. ಇಸ್ರೋದ ಬಹುತೇಕ ಉಡಾವಣೆಗಳು ಸದ್ಯ ಇಲ್ಲಿಂದಲೇ ಆಗುತ್ತಿರುವುದು.
ಇನ್ನೊಂದು ಬಾಹ್ಯಾಕಾಶ ಕೇಂದ್ರವು ತಿರುವನಂತಪುರಂನ ತುಂಬಾ ಎಂಬಲ್ಲಿದೆ. ವೈಜ್ಞಾನಿಕ ಸಂಶೋಧನೆ ಉದ್ದೇಶಕ್ಕೆ ಬಳಸಲಾಗುವ ರಾಕೆಟ್ಗಳನ್ನು ಇಲ್ಲಿಂದ ಉಡಾವಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: Infosys: ಇನ್ಫೋಸಿಸ್ನಲ್ಲಿ ವಾರಕ್ಕೆ 70 ಗಂಟೆ ಅಲ್ಲ 46 ಗಂಟೆ ಮೀರಿ ಕೆಲಸ ಮಾಡಿದರೆ ಬರುತ್ತೆ ಎಚ್ಆರ್ ವಾರ್ನಿಂಗ್
ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೂ ತೆರೆದಿದೆ. ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಯೋಜನೆಗಳಲ್ಲಿ ನಿರತವಾಗಿವೆ. ಸಂವಹನ, ಮಿಲಿಟರಿ ಇತ್ಯಾದಿ ಉದ್ದೇಶಗಳಿಗೆ ಸೆಟಿಲೈಟ್ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ರಾಕೆಟ್ ನಿರ್ಮಿಸುತ್ತಿರುವ ಖಾಸಗಿ ಕಂಪನಿಗಳು ಹಲವಿವೆ. ಹೀಗಾಗಿ, ಭಾರತಕ್ಕೆ ಹಲವು ಬಾಹ್ಯಾಕಾಶ ಕೇಂದ್ರಗಳ ಅಗತ್ಯತೆ ಇದೆ. ಜಾಗತಿಕವಾಗಿಯೂ ಸೆಟಿಲೈಟ್ಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ