IT: ಐಟಿ ರಿಟರ್ನ್ಸ್ ಅಸ್ಪಷ್ಟ ಮಾಹಿತಿ: 68,000 ಪ್ರಕರಣಗಳ ಇ-ವೆರಿಫಿಕೇಶನ್ ಚಾಲನೆಯಲ್ಲಿ

Income Tax Department: ಐಟಿ ರಿಟರ್ನ್ಸ್​ನಲ್ಲಿ ಕೆಲ ಆದಾಯದ ವಹಿವಾಟು ಮಾಹಿತಿ ತೋರಿಸಿಲ್ಲ ಎಂದು ಅನುಮಾನ ಬಂದ ಪ್ರಕರಣಗಳನ್ನು ಐಟಿ ಇಲಾಖೆ ಪರಿಶೀಲಿಸುತ್ತಿದೆ. ಇಂಥ 68,000 ಪ್ರಕರಣಗಳ ಇ-ವೆರಿಫೀಕೇಶನ್ ನಡೆಯುತ್ತಿದೆ.

IT: ಐಟಿ ರಿಟರ್ನ್ಸ್ ಅಸ್ಪಷ್ಟ ಮಾಹಿತಿ: 68,000 ಪ್ರಕರಣಗಳ ಇ-ವೆರಿಫಿಕೇಶನ್ ಚಾಲನೆಯಲ್ಲಿ
ಆದಾಯ ತೆರಿಗೆ ಇಲಾಖೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 14, 2023 | 11:28 AM

ನವದೆಹಲಿ: ಕೆಲ ಆದಾಯ ತೋರಿಸಿಲ್ಲ ಎಂದು ಅನುಮಾನ ಕಂಡ ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆ (Income Tax Department) ಪರಿಶೀಲನೆ ನಡೆಸುತ್ತಿದೆ. 2019-20 ರ ಹಣಕಾಸು ವರ್ಷದ ಇಂಥ 68,000 ಪ್ರಕರಣಗಳನ್ನು ಐಟಿ ಇಲಾಖೆ ಇವೆರಿಫಿಕೇಶನ್ ಮಾಡುತ್ತಿದೆ. ಸಿಬಿಡಿಟಿ (Central Board of Direct Taxes) ಈ ಬಗ್ಗೆ ಹೇಳಿಕೆ ನೀಡಿದೆ. ಕೆಂಪೇನ್ ಮೂಲಕ ವೈಯಕ್ತಿಕ ತೆರಿಗೆ ಪಾವತಿದಾರರ ಜೊತೆ ವಹಿವಾಟಿನ ವಿವರಗಳನ್ನು ಹಂಚಿಕೊಳ್ಳಲಾಗಿದೆ ಎಂದು ಸಿಬಿಡಿಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೇಳಿಕೆಯಲ್ಲಿ ಅದು ನೀಡಿರುವ ಮಾಹಿತಿ ಪ್ರಕಾರ, ವೆರಿಫಿಕೇಶನ್​ಗಾಗಿ ಆಯ್ದುಕೊಳ್ಳಲಾದ 68,000 ಪ್ರಕರಣಗಳ ಪೈಕಿ 35 ಸಾವಿರ ಪ್ರಕರಣಗಳಲ್ಲಿ ನಿಯೋಜಿತ ನಿರ್ದೇಶನಾಲಯದಿಂದ ಇವೆರಿಫಿಕೇಶನ್ ಮುಕ್ತಾಯವಾಗಿದೆ. ಇನ್ನುಳಿದ ಪ್ರಕರಣಗಳಲ್ಲಿ ಇಪರಿಶೀಲನೆ ಮುಂದುವರಿಯುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿLoan Rates: BoMನಲ್ಲಿ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.4; ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಬ್ಯಾಂಕುಗಳಿವು…

ಕೇಂದ್ರ ಸರ್ಕಾರ ಇವೆರಿಫಿಕೇಶನ್ ಸ್ಕೀಮ್ ಜಾರಿಗೆ ತಂದಿದ್ದು 2021ರಲ್ಲಿ. ಐಟಿ ರಿಟರ್ಸ್ ಸಲ್ಲಿಸುವಾಗ ಐಟಿಆರ್ ಅರ್ಜಿಯ ಇ ವೆರಿಫಿಕೇಶನ್ ಮಾಡಬೇಕು. ಆದರೆ ಆದಾಯ ತೆರಿಗೆ ಪಾವತಿದಾರ ನಡೆಸಿದ ಪ್ರಮುಖ ವಹಿವಾಟುಗಳು ಮಾಹಿತಿ ಅವರ ಐಟಿ ರಿಟರ್ನ್ಸ್ ವೇಳೆ ಸಲ್ಲಿಕೆಯಾಗದೇ ಇದ್ದಾಗ ಅದು ಇಲಾಖೆಯ ಗಮನಕ್ಕೆ ಬರಬಹುದು. ಅಂಥ ಪ್ರಕರಣಗಳಲ್ಲಿ ಐಟಿ ಇಲಾಖೆ ಪರಿಶೀಲನೆ ನಡೆಸುತ್ತದೆ. ತೆರಿಗೆ ಪಾವತಿದಾರರಿಂದ ಆ ವಹಿವಾಟುಗಳ ಬಗ್ಗೆ ಮಾಹಿತಿ ಪಡೆದು ದಾಖಲೆ ಪಡೆಯಬಹುದು. ತೆರಿಗೆ ಪಾವತಿದಾರ ತನ್ನ ವಿವರಣೆ ಕೊಡುವ ಅವಕಾಶ ಸಿಗುತ್ತದೆ. ಇದರಿಂದ ತೆರಿಗೆ ಪಾವತಿದಾರನ ಮೇಲೆ ಮೊಕದ್ದಮೆ ದಾಖಲಾಗುವುದು ತಪ್ಪುತ್ತದೆ.

ವೆರಿಫಿಕೇಶನ್ ಯಾಕೆ?

ಐಟಿ ರಿಟರ್ನ್ಸ್ ಫೈಲ್ ಮಾಡಿದಾಗ ಐಟಿಆರ್ ಅನ್ನು ವೆರಿಫಿಕೇಶನ್ ಮಾಡಬೇಕಾಗುತ್ತದೆ. ಆನ್​ಲೈನ್ ಮೂಲಕವಾದರೂ ಮಾಡಬಹುದು, ಅಥವಾ ಐಟಿಆರ್​ನ ಪ್ರತಿಗೆ ಸಹಿ ಹಾಕಿ ಅದನ್ನು ಬೆಂಗಳೂರಿನಲ್ಲಿರುವ ಸಿಪಿಸಿ ಕಚೇರಿಗೆ ಪೋಸ್ಟ್ ಮೂಲಕವಾದರೂ ಕಳುಹಿಸಿ ವೆರಿಫಿಕೇಶನ್ ಮಾಡಿಸಬಹುದು. ಆನ್​ಲೈನ್ ಮೂಲಕ ಮಾಡುವುದು ಇವೆರಿಫಿಕೇಶನ್. ಐಟಿ ರಿಟರ್ನ್ಸ್ ಫೈಲ್ ಮಾಡಿದ 120 ದಿನದೊಳಗೆ ವೆರಿಫೀಕೇಶನ್ ಮಾಡಿಸಬೇಕು.

ವೆರಿಫಿಕೇಶನ್ ಬಹಳ ಸರಳ ಹಾಗೂ ಕ್ಷಿಪ್ರವಾಗಿ ಮಾಡಬಲ್ಲ ಕಾರ್ಯ. ಐಟಿಆರ್ ಸಲ್ಲಿಸಿದ ಬಳಿಕ ಐಟಿ ಇ ಫೈಲಿಂಗ್ ಪೋರ್ಟಲ್​ಗೆ ಹೋಗಿ ಅಲ್ಲಿ ಎಡಬದಿಯಲ್ಲಿರುವ ಕ್ವಿಕ್ ಲಿಂಕ್ ವಿಭಾಗದಲ್ಲಿ ಇವೆರಿಫೈ ರಿಟರ್ನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇವೆರಿಫಿಕೇಶನ್ ಮಾಡುವ ಅವಕಾಶ ಸಿಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 14 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ