ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಈವರೆಗಿನ (ಸಾರ್ವಕಾಲಿಕ) ಅತ್ಯಧಿಕ ಉಕ್ಕಿನ ಮಾರಾಟವನ್ನು ಪ್ರಸಕ್ತ ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲಿಸಿದೆ ಎಂದು ಕಂಪೆನಿಯು ಮಂಗಳವಾರ ಹೇಳಿದೆ. ಜೆಎಸ್ಪಿಎಲ್ನ ಉಕ್ಕಿನ ಮಾರಾಟ ಪ್ರಮಾಣವು ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕಕ್ಕೆ ಶೇ 32ರಷ್ಟು ಹೆಚ್ಚಳವಾಗಿದ್ದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದಲ್ಲಿ ಶೇ 10ರಷ್ಟು ಜಾಸ್ತಿಯಾಗಿ, 2.13 ಮಿಲಿಯನ್ ಟನ್ಸ್ ಆಗಿದೆ. FY22ರ Q2ನಲ್ಲಿ ಮೊದಲ ಬಾರಿಗೆ ಮೂರು ತಿಂಗಳ ಅವಧಿಯಲ್ಲಿ 20 ಲಕ್ಷ ಟನ್ಗಳ ಉಕ್ಕಿನ ಮಾರಾಟವನ್ನು ದಾಟಿದೆ. ಇನ್ನು ರಫ್ತು ಪ್ರಮಾಣ ಕೂಡ ಮಾರಾಟಕ್ಕೆ ಉತ್ತೇಜನ ನೀಡಿದೆ. ಒಟ್ಟಾರೆ ಮಾರಾಟದಲ್ಲಿ ಶೇ 40ಕ್ಕೂ ಹೆಚ್ಚು FY22ರ Q2ನಲ್ಲಿ ರಫ್ತಾಗಿದೆ (FY22ರ Q1ರಲ್ಲಿ ಶೇ 34 ಮತ್ತು FY21ರ Q2ನಲ್ಲಿ ಶೇ 38ರಷ್ಟು ರಫ್ತು ಪ್ರಮಾಣ ಇತ್ತು).
ಜೆಎಸ್ಪಿಎಲ್ನ ಸಾಮರ್ಥ್ಯ ನಿಂತಿರುವುದು ಅದರ ಬದ್ಧತೆಯುಳ್ಳ ತಂಡದ ಮೇಲೆ. ಎಲ್ಲ ಸವಾಲು, ತೊಂದರೆಗಳನ್ನು ಮೀರಿ ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿದ್ದೇವೆ. ಜೆಎಸ್ಪಿಎಲ್ ಬಳಿ ಈಗ ಉತ್ತಮ ಕಚ್ಚಾ ವಸ್ತುಗಳ ಭದ್ರತೆ ಇದ್ದು, ಇದರಿಂದ ಮಹತ್ತರವಾದ ಮೌಲ್ಯವು ಕಂಪೆನಿಗೆ ಸೇರ್ಪಡೆ ಆಗುತ್ತದೆ. ನಮ್ಮ ಆಸ್ಟ್ರೇಲಿಯನ್ ಕೋಕಿಂಗ್ ಕಲ್ಲಿದ್ದಲು (ಬ್ಲಾಸ್ಟ್ ಫರ್ನೇಸ್ನಲ್ಲಿ ಬಳಸುವಂಥದ್ದು) ಗಣಿಯೊಂದರ ಪೈಕಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಮತ್ತು ಮೊದಲ ರವಾನೆಯನ್ನು ನವೆಂಬರ್ 21ಕ್ಕೆ ನಿರೀಕ್ಷೆ ಮಾಡುತ್ತಿದ್ದೇವೆ, ಎಂದು ಜೆಎಸ್ಪಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ವಿ.ಆರ್.ಶರ್ಮಾ ಹೇಳಿದ್ದು, ಇದರಿಂದ ಕೋಕಿಂಗ್ ಕಲ್ಲಿದ್ದಲು ಅವಲಂಬನೆ ಪ್ರಮುಖವಾಗಿ ಕಡಿಮೆ ಆಗುತ್ತದೆ ಎಂದಿದ್ದಾರೆ.
ಒಡಿಶಾ ಸರ್ಕಾವು ಕಾಸಿಯಾ (ಒಡಿಶಾ) ಕಬ್ಬಿಣದ ಅದಿರು ಗಣಿಗೆ ಜೆಎಸ್ಪಿಎಲ್ ಅನ್ನು ಆದ್ಯತೆಯ ಬಿಡ್ಡರ್ ಆಗಿ ಪರಿಗಣಿಸಿದೆ. ಇದರಿಂದಾಗಿ ಕಚ್ಚಾ ವಸ್ತುಗಳ ಭದ್ರತೆ ಮತ್ತಷ್ಟು ವಿಸ್ತರಣೆ ಆದಂತೆ ಆಗುತ್ತದೆ. FY22ರ Q2ನಲ್ಲಿ ಉಕ್ಕಿನ ಉತ್ಪಾದನೆ 1.93 ಮಿಲಿಯನ್ ಟನ್ಗೆ ಹೆಚ್ಚಳವಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 5ರಷ್ಟು ಬೆಳವಣಿಗೆ ದಾಖಲಿಸಿದೆ. ಮಾರಾಟ ಪ್ರಮಾಣ ಹೆಚ್ಚಾದಷ್ಟೂ ದಾಸ್ತಾನಿನ ಮಟ್ಟವು ಕಡಿಮೆ ಆಗುತ್ತಾ ಬರುತ್ತಿದೆ. ಸತತ ಮೂರನೇ ತಿಂಗಳಾದ ಸೆಪ್ಟೆಂಬರ್ನಲ್ಲೂ ಮಾರಾಟವು ಉತ್ಪಾದನೆಗಿಂತ ಹೆಚ್ಚಾಗಿದೆ. ಈ ವರದಿ ಮಾಡುವ ಹೊತ್ತಿಗೆ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಷೇರಿನ ಬೆಲೆ 419.75 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.
ಇದನ್ನೂ ಓದಿ: Coal India: ಕೋಲ್ ಇಂಡಿಯಾ ಷೇರು ಶೇ 12ರಷ್ಟು ಏರಿಕೆ: ಮಿಡ್ಕ್ಯಾಪ್ನ ಟಾಪ್ 50 ಕಂಪನಿಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಉದ್ಯಮ
Published On - 12:19 pm, Tue, 5 October 21