AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಪ್ಟೋಕರೆನ್ಸಿ ಪ್ಲಾಟ್​ಫಾರ್ಮ್​ನ ಒಂದು ಬಗ್​ ಸಮಸ್ಯೆಯಿಂದ 670 ಕೋಟಿ ರೂ.ಗೆ ಮುಳುಗು ನೀರು; ಇದು ಒಂದು ತಪ್ಪಿನ ಕಥೆ

ಒಂದು ಬಗ್​ನಿಂದ ತಪ್ಪಾಗಿ 90 ಮಿಲಿಯನ್ ಯುಎಸ್​ಡಿ ಕ್ರಿಪ್ಟೋಕರೆನ್ಸಿ ಪ್ಲಾಟ್​ಫಾರ್ಮ್​ನಿಂದ ಬಳಕೆದಾರರಿಗೆ ಹೋಗಿದೆ. ಅದನ್ನು ಈಗ ಹಿಂತಿರುಗಿಸುವಂತೆ ಕಾಂಪೌಂಡ್​ ಪ್ಲಾಟ್​ಫಾರ್ಮ್ ಅಂಗಲಾಚುವಂತೆ ಆಗಿದೆ.

ಕ್ರಿಪ್ಟೋಕರೆನ್ಸಿ ಪ್ಲಾಟ್​ಫಾರ್ಮ್​ನ ಒಂದು ಬಗ್​ ಸಮಸ್ಯೆಯಿಂದ 670 ಕೋಟಿ ರೂ.ಗೆ ಮುಳುಗು ನೀರು; ಇದು ಒಂದು ತಪ್ಪಿನ ಕಥೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 05, 2021 | 5:42 PM

Share

ಇದು “ಒಂದು ತಪ್ಪಿನ” ಕಥೆ. ಆದರೆ ಅದರ ಪರಿಣಾಮ ಏನು ಅಂತ ಕೇಳಿದರೆ ಮೈ ಝುಂ ಅನ್ನಿಸದಿದ್ದರೆ ಕೇಳಿ! ಕಾಂಪೌಂಡ್ ಹೆಸರಿನಲ್ಲಿ ವಿಕೇಂದ್ರೀಕೃತವಾದ ಹಣಕಾಸು ಪ್ಲಾಟ್​​ಫಾರ್ಮ್​ ಇದೆ. ಇದರ ಅಪ್​ಗ್ರೇಡ್​ ಆದ ಮೇಲೆ ಅಚಾತುರ್ಯದಿಂದ 9 ಕೋಟಿ ಅಮೆರಿಕನ್​ ಡಾಲರ್​ ಮೌಲ್ಯದ ಕ್ರಿಪ್ಟೋಕರೆನ್ಸಿ ಬಳಕೆದಾರರಿಗೆ ಹೊರಟುಹೋಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 670.51 ಕೋಟಿ ಆಗುತ್ತದೆ. ಇದೀಗ ಕಂಪೆನಿಯ ಸಿಇಒ ಆ ಬಳಕೆದಾರರನ್ನು ಬೇಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಪ್ಲಾಟ್​ಫಾರ್ಮ್​ಗೆ ನೀವಾಗಿಯೇ ಕ್ರಿಪ್ಟೋ ಹಿಂತಿರುಗಿಸಿ ಅಂತ ಅಂಗಲಾಚುತ್ತಿದ್ದಾರೆ. ಕಾಂಪೌಂಡ್​ನ ಪ್ರೊಟೊಕಾಲ್​ ತಪ್ಪಿನಿಂದ ನಿಮಗೇನಾದರೂ ತಪ್ಪಾದ ಮೊತ್ತದ ಕ್ರಿಪ್ಟೋಕರೆನ್ಸಿ COMP, ದೊಡ್ಡ ಮಟ್ಟದಲ್ಲಿ ಬಂದಿದ್ದಲ್ಲಿ ದಯವಿಟ್ಟು ಹಿಂತಿರುಗಿಸಿ ಎಂದು ಕಾಂಪೌಂಡ್​ ಲ್ಯಾಬ್ಸ್ ಸ್ಥಾಪಕ ರಾಬರ್ಟ್​ ಲೆಷ್ನರ್ ಕಳೆದ ವಾರ ಟ್ವೀಟ್ ಮಾಡಿದ್ದಾರೆ. ಶೇ 10ರಷ್ಟನ್ನು ನೀವು ಇಟ್ಟುಕೊಳ್ಳಿ. ಇದನ್ನು ಆದಾಯ ಎಂದು ಐಆರ್​ಎಸ್ ಪರಿಗಣಿಸುತ್ತದೆ ಮತ್ತು ನಿಮ್ಮಲ್ಲಿ ಬಹುತೇಕರನ್ನು ಪತ್ತೆ ಹಚ್ಚಲಾಗಿದೆ ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

ಕಳೆದ ಬುಧವಾರದಂದು ಕಾಂಪೌಂಡ್​ನಿಂದ ಮೇಲ್ದರ್ಜೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಯಿತು. ಆದರೆ ಅನುಷ್ಠಾನದ ನಂತರ, ಏನೋ ಗಂಭೀರವಾದ ಸಮಸ್ಯೆ ಆಗಿದೆ ಅಂತ ಗೊತ್ತಾಯಿತು. ಹೊಸ ಕಂಟ್ರೋಲರ್ ಕಾಂಟ್ರಾಕ್ಟ್​ನಲ್ಲಿ ಬಗ್​ ಇದೆ. ಕೆಲವು ಬಳಕೆದಾರರಿಗೆ ಪುಕ್ಕಟೆಯಾಗಿ ಹೆಚ್ಚು COMP ಸಿಗುವಂತಾಗಿದೆ ಎಂದು ಲೆಷ್ನರ್ ಟ್ವೀಟ್​ನಲ್ಲಿ ವಿವರಿಸಿದ್ದಾರೆ. ಆಡಳಿತಾತ್ಮಕ ಹತೋಟಿ ಅಥವಾ ಸಮುದಾಯ ಟೂಲ್ ಅಂತ ಡಿಸೇಬಲ್ ಮಾಡುವುದಕ್ಕೆ COMP ವಿತರಣೆಗೆ ಯಾವುದೂ ಇಲ್ಲ. ಯಾವುದೇ ಬದಲಾವಣೆಯನ್ನು ಪ್ರೊಟೊಕಾಲ್​ಗೆ ಮಾಡಬೇಕಿದ್ದರೂ 7 ದಿನದ ಆಡಳಿತಾತ್ಮಕ ಪ್ರಕ್ರಿಯೆಯನ್ನು ಉತ್ಪಾದನೆ ದಾರಿಗಾಗಿಯೇ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಒಂದು ವಾರ ಏನೂ ಸರಿಪಡಿಸಲು ಆಗಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಲೆಷ್ನರ್ ಮಾತನಾಡಿ, ಪರಿಣಾಮವು 2,80,000 COMP ಟೋಕನ್​ಗೆ ಸೀಮಿತವಾಗಿದೆ. ಕಳೆದ ಶುಕ್ರವಾರಕ್ಕೆ ಇದರ ಮೌಲ್ಯ 8.93 ಕೋಟಿ ಅಮೆರಿಕನ್ ಡಾಲರ್ ಇತ್ತು. ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆ ಸುರಕ್ಷಿತವೋ ಅಲ್ಲವೋ ಎಂಬ ಪ್ರಶ್ನೆ ಇಲ್ಲಿಲ್ಲ. ಬದಲಾವಣೆಗಳನ್ನು ಪರಿಚಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವ ಕಾಲ ಇದು. ಸಮುದಾಯದ ಪ್ರೊಟೋಕಾಲ್​ ಸುಧಾರಿಸಬೇಕಾದ ಸಮಯ ಇದು ಎಂದು ಹೇಳಿದ್ದಾರೆ. ಕಾಂಪೌಂಡ್​ನ ಹಲವಾರು ಬಳಕೆದಾರರು ತಮಗೆ ಟೋಕನ್ ಬಂದಿರುವುದಾಗಿ ಹೇಳಿದ್ದಾರೆ. ಟ್ವಿಟ್ಟರ್​ನಲ್ಲಿ ಎಚ್ಚರಿಕೆ ನೀಡಿರುವ ಲೆಷ್ನರ್, ಒಂದು ವೇಳೆ ಕ್ರಿಪ್ಟೋಕರೆನ್ಸಿ ಹಿಂತಿರುಗಿಸದಿದ್ದಲ್ಲಿ ಇಂಟರ್ನಲ್ ರೆವೆನ್ಯೂ ಸರ್ವೀಸ್​ಗೆ ಅವರ ಗುರುತುಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಆದರೆ ಬೆದರಿಕೆ ಒಡ್ಡಿದ್ದಕ್ಕೆ ಆ ನಂತರ ಕ್ಷಮೆಯನ್ನು ಕೇಳಿದ್ದಾರೆ.

ಇದನ್ನೂ ಓದಿ: Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ