ಜಿಯೋ vs ಏರ್ಟೆಲ್ ಏರ್​ಫೈಬರ್: ಇಂಟರ್ನೆಟ್ ಸ್ಪೀಡ್, ಡಾಟಾ, ಚಾನಲ್, ಒಟಿಟಿಗಳೆಷ್ಟು? ಬೆಲೆ ಎಷ್ಟು?

Jio vs Airtel Airfiber comparision: ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಏರ್​ಫೈಬರ್ ಅಥವಾ ವೈರ್​ಲೆಸ್ ಬ್ರಾಡ್​ಬ್ಯಾಂಡ್ ಸರ್ವಿಸ್ ನೀಡುತ್ತಿವೆ. ಉತ್ತಮ ವೇಗದ ಇಂಟರ್ನೆಟ್, ಒಟಿಟಿ ಸಬ್​ಸ್ಕ್ರಿಪ್ಷನ್, ವೈಫೈ, ಟಿವಿ ಚಾನಲ್​ಗಳ ಸರ್ವಿಸ್ ಅನ್ನು ಎರಡೂ ನೀಡುತ್ತವೆ. ಏರ್​ಟೆಲ್​ಗೆ ಹೋಲಿಸಿದರೆ ಜಿಯೋದ ಏರ್​ಫೈಬರ್ ದರಗಳು ತುಸು ಕಡಿಮೆ. ಆದರೆ, ಡಾಟಾ ಮಿತಿ ಮುಗಿದಾಗ ಏರ್ಟೆಲ್ ಇಂಟರ್ನೆಟ್ ಸ್ಪೀಡ್ ತೀರಾ ನಿಧಾನಗೊಳ್ಳುವುದಿಲ್ಲ.

ಜಿಯೋ vs ಏರ್ಟೆಲ್ ಏರ್​ಫೈಬರ್: ಇಂಟರ್ನೆಟ್ ಸ್ಪೀಡ್, ಡಾಟಾ, ಚಾನಲ್, ಒಟಿಟಿಗಳೆಷ್ಟು? ಬೆಲೆ ಎಷ್ಟು?
ಜಿಯೋ ಮತ್ತು ಏರ್ಟೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2024 | 4:28 PM

ಬ್ರಾಡ್​ಬ್ಯಾಂಡ್ ಕನೆಕ್ಷನ್ ಬಹಳ ಜನಪ್ರಿಯವಾಗಿರುವ ಒಂದು ಆಯ್ಕೆ. ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಬಹಳ ವೇಗದ ಇಂಟರ್ನೆಟ್ ಸಿಗುತ್ತದೆ. ಆದರೆ, ಕೇಬಲ್ ಕನೆಕ್ಟ್ ಮಾಡುವ ಅವಶ್ಯಕತೆ ಇಲ್ಲದೆ, ಬ್ರಾಡ್​ಬ್ಯಾಂಡ್ ಸ್ಪೀಡ್​ನಷ್ಟು ಇಂಟರ್ನೆಟ್ ಒದಗಿಸುವ ವ್ಯವಸ್ಥೆಯೇ ಏರ್​ಫೈಬರ್. ಇದು ವೈರ್​ಲೆಸ್ ಬ್ರಾಡ್​ಬ್ಯಾಂಡ್ ಹೌದು. ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಾಯನ್ಸ್ ಜಿಯೋ ಮತ್ತು ಏರ್ಟೆಲ್ ಈಗ ಏರ್​ಫೈಬರ್ ಸರ್ವಿಸ್ ಒದಗಿಸುತ್ತಿವೆ. ಬ್ರಾಡ್​ಬ್ಯಾಂಡ್​ನಂತೆ ಹೈ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಜೊತೆಗೆ ವೈಫೈ ಸೌಲಭ್ಯ, ಟಿವಿ ಚಾನಲ್, ಒಟಿಟಿ ಸಬ್​ಸ್ಕ್ರಿಪ್ಷನ್ ಇವೇ ಮುಂತಾದ ಆಲ್ ಇನ್ ಒನ್ ರೀತಿಯ ಸರ್ವಿಸ್ ಅನ್ನು ಏರ್​ಫೈಬರ್​ನಿಂದ ಪಡೆಯಬಹುದು.

ಏರ್​ಫೈಬರ್​ಗಳು ಸಮೀಪದ ಟವರ್​ಗಳಿಂದ ಸಿಗ್ನಲ್ ಪಡೆದು ಆ ಮೂಲಕ ಇಂಟರ್ನೆಟ್ ಕನೆಕ್ಟ್ ಮಾಡುತ್ತವೆ. ಹೀಗಾಗಿ, ಫೈಬರ್ ಕೇಬಲ್ ಅವಶ್ಯಕತೆ ಇರುವುದಿಲ್ಲ. ನಿರ್ದಿಷ್ಟ ವ್ಯಾಪ್ತಿಯಲ್ಲಿ ಟವರ್ ಇರುವುದು ಅಗತ್ಯ. ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಹೆಚ್ಚೆಚ್ಚು ಸ್ಥಳಗಳಲ್ಲಿ ಟವರ್​ಗಳನ್ನು ಸ್ಥಾಪಿಸುತ್ತಿವೆ. ಸದ್ಯಕ್ಕೆ ಎಲ್ಲಾ ಪ್ರದೇಶಗಳಲ್ಲೂ ವ್ಯಾಪಕವಾಗಿ ಟವರ್​ಗಳಿಲ್ಲ. ಈ ಕಾರಣಕ್ಕೆ ಕೆಲ ಪ್ರದೇಶಗಳಲ್ಲಿ ಏರ್​ಫೈಬರ್ ಸರ್ವಿಸ್ ಸಿಕ್ಕದೇ ಹೋಗಬಹುದು.

ಇದನ್ನೂ ಓದಿ: ರೆಡ್ಡಿ ಸರ್ಕಾರದಲ್ಲಿ ಆಂಧ್ರ ಸಾವಾಸ ಬೇಡವೆಂದು ಹೋಗಿದ್ದ ಲುಲು ಗ್ರೂಪ್ ಮತ್ತೆ ವಾಪಸ್

ಜಿಯೋ ಏರ್​ಫೈಬರ್ ಪ್ಲಾನ್​ಗಳು

  • 599 ರೂ: ಇಂಟರ್ನೆಟ್ ಸ್ಪೀಡ್ 30 ಎಂಬಿಪಿಎಸ್
  • 899 ರೂ: 100 ಎಂಬಿಪಿಎಸ್
  • 1,199 ರೂ: 100 ಎಂಬಿಪಿಎಸ್

ಈ ಮೇಲಿನ ಮೂರೂ ಪ್ಲಾನ್​ಗಳು ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುತ್ತವೆ. ಒಂದು ಸಾವಿರ ಡಾಟಾ ಒದಗಿಸುತ್ತವೆ. ಡಾಟಾ ಮಿತಿ ದಾಟಿದಾಗ ಇಂಟರ್ನೆಟ್ ಸ್ಪೀಡ್ 64 ಕೆಬಿಪಿಎಸ್​ಗೆ ಇಳಿಯುತ್ತದೆ. 1,199 ರೂ ಪ್ಲಾನ್​ನಲ್ಲಿ ಅಧಿಕ ಒಟಿಟಿ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

ಏರ್ಟೆಲ್ ಎಕ್ಸ್​ಟ್ರೀಮ್ ಏರ್​ಫೈಬರ್ ಪ್ಲಾನ್

  • 699 ರೂ: 40 ಎಂಬಿಪಿಎಸ್ ಇಂಟರ್ನೆಟ್
  • 799 ರೂ: 100 ಎಂಬಿಪಿಎಸ್ ಇಂಟರ್ನೆಟ್
  • 899 ರೂ: 100 ಎಂಬಿಪಿಎಸ್

ಇಲ್ಲೂ ಕೂಡ ಪ್ರತಿಯೊಂದು ಪ್ಲಾನ್ 30 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಒಂದು ಸಾವಿರ ಜಿಬಿಯಷ್ಟು ಡಾಟಾ ಸಿಗುತ್ತದೆ. ವೈಫೈ ಸೌಲಭ್ಯ, ಚಾನಲ್​ಗಳು ಮತ್ತು ಒಟಿಟಿ ಸಬ್​ಸ್ಕ್ರಿಪ್ಷನ್ ಸಿಗುತ್ತದೆ. ಜಿಯೋಗೆ ಹೋಲಿಸಿದರೆ ಏರ್ಟೆಲ್​ನಿಂದ ಒಟಿಟಿ ಸಬ್​ಸ್ಕ್ರಿಪ್ಷನ್ ಮತ್ತು ಚಾನಲ್​ಗಳ ಪ್ರಮಾಣ ಕಡಿಮೆ. ಆದರೆ, ಒಂದು ಸಾವಿರ ಡಾಟಾದ ಮಿತಿ ದಾಟಿದಾಗ ಇಂಟರ್ನೆಟ್ ಸ್ಪೀಡು 2 ಎಂಬಿಪಿಎಸ್​ಗೆ ಇಳಿಯುತ್ತದೆ. ಜಿಯೋದ 64 ಕೆಬಿಪಿಎಸ್​ಗೆ ಹೋಲಿಸಿದರೆ ಏರ್ಟೆಲ್​ನ ಇಂಟರ್ನೆಟ್ ಸ್ಪೀಡು ಬಹಳ ಉತ್ತಮ.

ಇದನ್ನೂ ಓದಿ: ಸೆಬಿ ಸೂಚನೆ ಬಳಿಕ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ ಬಿಎಸ್​ಇ, ಎನ್​ಎಸ್​ಇ; ಹೊಸ ದರಗಳ ವಿವರ ಇಲ್ಲಿದೆ

ಜಿಯೋದಿಂದ 1 ಜಿಬಿಪಿಎಸ್​ವರೆಗೂ ಇಂಟರ್ನೆಟ್ ಸ್ಪೀಡ್

ರಿಲಾಯನ್ಸ್ ಜಿಯೋ ಏರ್​ಫೈಬರ್​ನಲ್ಲಿ ಇನ್ನೂ ಹೈ ಎಂಡ್ ಸರ್ವಿಸ್ ಇದೆ. 1,499 ರೂ ಪ್ಲಾನ್​ನಲ್ಲಿ 300 ಎಂಬಿಪಿಎಸ್​ವರೆಗೂ ಇಂಟರ್ನೆಟ್ ಸ್ಪೀಡ್ ಇದೆ. 2,499 ರೂ ಪ್ಲಾನ್​ನಲ್ಲಿ ಇಂಟರ್ನೆಟ್ ಸ್ಪೀಡ್ 500 ಎಂಬಿಪಿಎಸ್ ಇದೆ. 3,999 ರೂ ಪ್ಲಾನ್​ನಲ್ಲಿ ಗರಿಷ್ಠ ಒಂದು ಜಿಬಿಪಿಎಸ್​ವರೆಗೂ ಇಂಟರ್ನೆಟ್ ಸ್ಪೀಡ್ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ