Direct Sales: ಡೈರೆಕ್ಟ್ ಸೇಲ್ಸ್​ನಲ್ಲಿ ಕರ್ನಾಟಕವೇ ಮುಂದು; ನೇರ ಮಾರಾಟದಿಂದ ಬದಕುಕಟ್ಟಿಕೊಂಡ 78,000 ಕನ್ನಡಿಗರು

Karnataka Shines In Direct Sales Market: 2021-22ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ನೇರ ಮಾರಾಟದಿಂದ 19,030 ಕೋಟಿಯಷ್ಟು ವ್ಯವಹಾರವಾಗಿದೆ. ಇದರಲ್ಲಿ ಕರ್ನಾಟಕದಲ್ಲೇ 1,128 ಕೋಟಿ ರೂನಷ್ಟು ಬ್ಯುಸಿನೆಸ್ ಆಗಿದೆ.

Direct Sales: ಡೈರೆಕ್ಟ್ ಸೇಲ್ಸ್​ನಲ್ಲಿ ಕರ್ನಾಟಕವೇ ಮುಂದು; ನೇರ ಮಾರಾಟದಿಂದ ಬದಕುಕಟ್ಟಿಕೊಂಡ 78,000 ಕನ್ನಡಿಗರು
ಡೈರೆಕ್ಟ್ ಸೆಲ್ಲಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2023 | 12:05 PM

ಬೆಂಗಳೂರು, ಜುಲೈ 19: ಭಾರತದಲ್ಲಿ ನೇರ ಮಾರಾಟದ ಮಾರುಕಟ್ಟೆ ಇನ್ನೂ ಗಟ್ಟಿ ಮುಟ್ಟಾಗಿದೆ. 2021-22ರಲ್ಲಿ ಭಾರತದಲ್ಲಿ ನೇರ ಮಾರಾಟದಲ್ಲಿ ಆದ ವಹಿವಾಟು 19,030 ಕೋಟಿ ರೂ ಎಂದು ಇಂಡಿಯನ್ ಡೈರೆಕ್ಟ್ ಸೆಲ್ಲಿಂಗ್ ಅಸೋಷಿಯೇಶನ್ (IDSA- Indian Direct Selling Association) ನಡೆಸಿದ ವಾರ್ಷಿಕ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ. 2021-22ರ ಹಣಕಾಸು ವರ್ಷದಲ್ಲಿ ರಾಷ್ಟ್ರವ್ಯಾಪಿ 19,030 ರೂನಷ್ಟು ಡೈರೆಕ್ಸ್ ಸೇಲ್ಸ್ ಆಗಿದ್ದರೆ, ಕರ್ನಾಟಕದ ಪಾಲು ಶೇ. 5.9ರಷ್ಟಿದೆ. ಆ ವರ್ಷ ಕರ್ನಾಟಕದಲ್ಲಿ ಡೈರೆಕ್ಟ್ ಸೇಲ್ಸ್​ನಿಂದ 1,128 ಕೋಟಿ ರೂ ಮೌಲ್ಯದ ವಸ್ತುಗಳ ಮಾರಾಟವಾಗಿರುವುದು ತಿಳಿದುಬಂದಿದೆ. ದಕ್ಷಿಣ ಭಾರತ ಪ್ರದೇಶಗಳಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಡೈರೆಕ್ಟ್ ಸೇಲ್ಸ್ ಆಗಿರುವುದು.

ಭಾರತೀಯ ನೇರ ಮಾರಾಟ ಸಂಘಟನೆ (ಐಡಿಎಸ್​ಎ) ಬಿಡುಗಡೆ ಮಾಡಿದ ಸರ್ವೆ ರಿಪೋರ್ಟ್ ಪ್ರಕಾರ 2020-21ರ ವರ್ಷದಲ್ಲಿ ಕರ್ನಾಟಕದಲ್ಲಿ ಡೈರೆಕ್ಟ್ ಸೇಲ್ಸ್​ನಿಂದ 1,034 ಕೋಟಿ ಬ್ಯುಸಿನೆಸ್ ಅಗಿತ್ತು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲೂ ಕುಂದದ ಈ ಉದ್ಯಮ 2021-22ರಲ್ಲಿ 94 ಕೋಟಿ ರೂನಷ್ಟು ಹೆಚ್ಚು ಬ್ಯುಸಿನೆಸ್ ವೃದ್ಧಿಸಿದೆ. ಡೈರೆಕ್ಟ್ ಸೇಲ್ಸ್ ಉದ್ದಿಮೆಯಿಂದ ಸರ್ಕಾರದ ಬೊಕ್ಕಸಕ್ಕೆ ಆ ಒಂದು ವರ್ಷದಲ್ಲಿ 170 ಕೋಟಿ ರೂ ಮೊತ್ತದಷ್ಟು ತೆರಿಗೆ ಜಮೆಯಾಗಿದೆ.

ಇದನ್ನೂ ಓದಿLIC Kanyadan Scheme: ಎಲ್​ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್

ಕರ್ನಾಟಕದಲ್ಲಿ ಡೈರೆಕ್ಟ್ ಸೇಲ್ಸ್ ಮಾರ್ಕೆಟ್ ಉತ್ತಮ ಸ್ಥಿತಿಯಲ್ಲಿದೆ. 78,000 ಮಂದಿ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 34,000 ಮಂದಿ ಮಹಿಳೆಯರೇ ಇದ್ದಾರೆ. ಇಡೀ ಭಾರತದಲ್ಲಿ ನೇರ ಮಾರುಕಟ್ಟೆ ಉದ್ದಿಮೆಯಲ್ಲಿ 84 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಈ ಉದ್ಯಮ ಶೇ. 13ರ ವಾರ್ಷಿಕ ದರದಲ್ಲಿ ವೃದ್ಧಿಸಿದೆ ಎಂದು ಐಡಿಎಸ್​ಎ ಛೇರ್ಮನ್ ರಜತ್ ಬ್ಯಾನರ್ಜಿ ಹೇಳಿದ್ದಾರೆ.

ಏನಿದು ಡೈರೆಕ್ಟ್ ಸೆಲ್ಲಿಂಗ್?

ಅಂಗಡಿ ಮುಂಗಟ್ಟು, ಮಳಿಗೆ ಇತ್ಯಾದಿ ಮೂಲಕ ಗ್ರಾಹಕರಿಗೆ ವಸ್ತುಗಳನ್ನು ಮಾರುವುದು ಸಾಂಪ್ರದಾಯಿಕ ಮಾರಾಟ ಪದ್ಧತಿ. ಆದರೆ, ಗ್ರಾಹಕರನ್ನು ಮುಖತಃ ಭೇಟಿಯಾಗಿ ಅವರಿಗೆ ವಸ್ತುಗಳನ್ನು ಮಾರುವುದು ಡೈರೆಕ್ಟ್ ಸೆಲ್ಲಿಂಗ್. ಇನ್ಷೂರೆನ್ಸ್ ಏಜೆಂಟ್​ಗಳು, ಮನೆ ಮನೆಗೆ ಮಾರಲು ಬರುವ ಸೇಲ್ಸ್​ಮೆನ್ ಮೊದಲಾದವರದ್ದು ಡೈರೆಕ್ಟ್ ಸೆಲ್ಲಿಂಗ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ