ನವದೆಹಲಿ, ಡಿಸೆಂಬರ್ 14: ಹಣಕಾಸು, ಆರ್ಥಿಕತೆ ಬಗ್ಗೆ ಟಿವಿಗಳಲ್ಲಿ ಚರ್ಚೆ ನಡೆಯುವಾಗ ಬಹಳ ಮಂದಿಗೆ ಬೋರ್ ಎನಿಸುವುದು ಸಹಜ. ಆಸಕ್ತರಿಗೆ ಮಾತ್ರ ಇರುವ ವಿಚಾರ. ಕೆಲವೊಮ್ಮೆ ಇಂಥ ಗಂಭೀರ ಚರ್ಚೆಯ ಮಧ್ಯೆಯೋ ಪ್ರಾಸಂಗಿಕವಾಗಿ ಮೋಜಿನ ಸಂವಾದಗಳು (fun incidents) ನಡೆಯುವುದುಂಟು. ಅಂಥದ್ದೊಂದು ಘಟನೆ ಝೀ ಬಿಸಿನೆಸ್ನಲ್ಲಿ ನಡೆದ ಲೈವ್ ಶೋನಲ್ಲಿ ನಡೆದಿದೆ. ಹೂಡಿಕೆದಾರನೊಬ್ಬ (investor) ಲೈವ್ ಆಗಿ ಮಾತನಾಡುತ್ತಾ, ರಾಹುಲ್ ಹೆಸರನ್ನು ಪ್ರಸ್ತಾಪಿಸಿದ್ದು ಆ ಸಂವಾದದಲ್ಲಿ ಭಾಗಿಯಾಗಿದ್ದವರೆಲ್ಲಾ ಕೆಲ ಕ್ಷಣ ನಗೆಬುಗ್ಗೆ ಕಾಣುವಂತಾಯಿತು. ಶೋನಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ಈ ಘಟನೆ ಬಗ್ಗೆ ಕೆಲವಿಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.
ಝೀಬಿಸಿನೆಸ್ ವಾಹಿನಿಯಲ್ಲಿ ಒಲೆಕ್ಟ್ರಾ ಗ್ರೀನ್ಟೆಕ್ ಷೇರಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಸಾರ್ವಜನಿಕರ ಕರೆ ತೆಗೆದುಕೊಳ್ಳಲಾಗಿದೆ. ಸಂದೀಪ್ ಎಂಬುವವರ ಕರೆ ಅದಾಗಿತ್ತು. ಹಿಂದಿಯಲ್ಲಿ ಮಾತನಾಡಿದ ಆತನ ತಾನು ಒಲೆಕ್ಟ್ರಾ ಗ್ರೀನ್ಟೆಕ್ ಷೇರನ್ನು 1,260 ರುಪಾಯಿಗೆ ಖರೀದಿಸಿದೆ ಎಂದಿದ್ದಾರೆ. ಅದಕ್ಕೆ ನಿರೂಪಕರು, ಎಷ್ಟು ದಿನ ಕಾಲ ಆ ಷೇರನ್ನು ಇಟ್ಟುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚು ವೇಗ: ಶೇ. 6.3ರಿಂದ ಶೇ. 6.7ಕ್ಕೆ ನಿರೀಕ್ಷೆ ಹೆಚ್ಚಿಸಿದ ಎಡಿಬಿ
ಇದಕ್ಕೆ ಸಂದೀಪ್ ನೀಡಿದ ಉತ್ತರ ಹೀಗಿತ್ತು: ‘ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೂ’ ಎಂಬುದು ಅವರ ಉತ್ತರ. ಇದರಿಂದ ನಿರೂಪಕ, ಅತಿಥಿ ಎಲ್ಲರಿಗೂ ನಗು ತಡೆಯಲಾಗಲಿಲ್ಲ.
ಈ ತುಣುಕನ್ನು ಎಕ್ಸ್ ಬಳಕೆದಾರರೊಬ್ಬರು ತಮ್ಮ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 150ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
Hilarious 😂 pic.twitter.com/5PqCWiihiF
— Finance Memes (@Qid_Memez) December 13, 2023
ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೂ ಇಟ್ಟುಕೊಳ್ಳುತ್ತಾರೆ ಎಂದರೆ ಅವರು ಆ ಷೇರನ್ನು ಪರ್ಮನೆಂಟ್ ಆಗಿ ಇಟ್ಟುಕೊಳ್ಳುತ್ತಾರೆ ಎಂದಾಗುತ್ತದೆ ಎಂದು ಕೆಲವರು ಕಾಮೆಂಟಿಸಿದ್ದಾರೆ.
ಇದನ್ನೂ ಓದಿ: Sensex Record: ಅಮೆರಿಕ ಬಡ್ಡಿದರ ಇಳಿಕೆಗೆ ಸುಳಿವು; ಗರಿಗೆದರಿದ ಭಾರತದ ಷೇರುಮಾರುಕಟ್ಟೆ
ಇವರು ಬಹಳ ದೀರ್ಘಾವಧಿ ಹೂಡಿಕೆದಾರ ಎನಿಸುತ್ತದೆ. ರಾಹುಲ್ ಗಾಂಧಿ ಸದ್ಯಕ್ಕೆ ಪ್ರಧಾನಿ ಆಗೋದಿಲ್ಲ, ಇವರು ಷೇರು ಮಾರೋದಿಲ್ಲ ಎಂದು ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.
ಹಲವು ಜನರು ಇದನ್ನೇ ಮೀಮ್ ಮಾಡಿ ಪೋಸ್ಟ್ ಹಾಕಿದ್ದಾರೆ. ಇನ್ನೂ ಕೆಲವರು ಇದನ್ನು ಗಂಭೀರವಾಗಿಯೂ ವಿಶ್ಲೇಷಿಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಆದರೆ ಹಣಕಾಸು ದುರ್ದಿನ ಬರುತ್ತದೆ ಎಂಬುದು ಆ ಹೂಡಿಕೆದಾರನ ಭಯವಾಗಿದೆ ಎಂದು ಹೇಳಿದವರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ