ವೃದ್ಧರಿಗೆ ಬಿಜೆಪಿಯಿಂದ ಉಚಿತ ಆರೋಗ್ಯ ವಿಮೆ ಭರವಸೆ; ಏನಿದು ಆಯುಷ್ಮಾನ್ ಭಾರತ್ ಸ್ಕೀಮ್?

Ayushman Bharat scheme details: ಆಡಳಿತಾರೂಢ ಬಿಜೆಪಿ ಪಕ್ಷ ಈ ಬಾರಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಹಲವು ಭರವಸೆಗಳಲ್ಲಿ 70 ವರ್ಷದ ವೃದ್ಧರನ್ನು ಆಯುಷ್ಮಾನ್ ಭಾರತ್ ಸ್ಕೀಮ್ ವ್ಯಾಪ್ತಿಗೆ ತರುವುದು ಒಂದು. 2018ರಲ್ಲಿ ಕೇಂದ್ರ ಆರಂಭಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸದ್ಯಕ್ಕೆ ಎಸ್ಸಿ ಎಸ್ಟಿ ಸಮುದಾಯ ಮತ್ತು ಬಡವರಿಗೆ ಮಾತ್ರ ಉಚಿತ ಆರೋಗ್ಯ ವಿಮೆ ಇದೆ. ಒಂದು ಕುಟುಂಬದಲ್ಲಿ ಎಷ್ಟೇ ಜನರಿದ್ದರೂ ವರ್ಷಕ್ಕೆ ಒಟ್ಟು 5 ಲಕ್ಷ ರೂವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಫರ್ಟಿಲಿಟಿ, ಏಡ್ಸ್ ಇತ್ಯಾದಿ ಕೆಲ ರೋಗ ಹೊರತುಪಡಿಸಿ ಬಹುತೇಕ ಎಲ್ಲಾ ಕಾಯಿಲೆಗಳಿಗೂ ವಿಮಾ ಕವರೇಜ್ ಇರುತ್ತದೆ.

ವೃದ್ಧರಿಗೆ ಬಿಜೆಪಿಯಿಂದ ಉಚಿತ ಆರೋಗ್ಯ ವಿಮೆ ಭರವಸೆ; ಏನಿದು ಆಯುಷ್ಮಾನ್ ಭಾರತ್ ಸ್ಕೀಮ್?
ಆಯುಷ್ಮಾನ್ ಭಾರತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2024 | 12:47 PM

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಎಪ್ಪತ್ತು ವರ್ಷ ವಯಸ್ಸು ದಾಟಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದಾಗಿ ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ (BJP election manifesto) ಭರವಸೆ ನೀಡಿದೆ. ಆಯುಷ್ಮಾನ್ ಭಾರತ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಕೀಮ್​ಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಇದು ಬಡವರು ಮತ್ತು ಎಸ್​ಸಿ ಎಸ್​ಟಿ ಜನರಿಗೆ ಲಭ್ಯ ಇರುವ ಸ್ಕೀಮ್ ಆಗಿದೆ. ಈಗ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ 70 ವರ್ಷ ವಯಸ್ಸಿನ ಎಲ್ಲಾ ಜನರಿಗೂ ಯೋಜನೆಯ (Ayushman Bharat scheme) ಲಾಭ ನೀಡಲಾಗುತ್ತದೆ ಎಂದು ಭರವಸೆ ನೀಡಿದೆ.

ಏನಿದು ಆಯುಷ್ಮಾನ್ ಭಾರತ್ ಯೋಜನೆ?

2018ರ ಸೆಪ್ಟಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅರಂಭಿಸಿದ ಯೋಜನೆ ಇದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೆ ಐದು ಲಕ್ಷ ರೂವರಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸಲಿವೆ. ಅಂದರೆ, ಕೇಂದ್ರ ಸರ್ಕಾರ ಶೇ. 60ರಷ್ಟು ವೆಚ್ಚ ಭರಿಸಿದರೆ, ರಾಜ್ಯ ಸರ್ಕಾರಗಳು ಶೇ. 40ರಷ್ಟು ಚಿಕಿತ್ಸಾ ವೆಚ್ಚ ನೋಡಿಕೊಳ್ಳುತ್ತವೆ.

ಇದನ್ನೂ ಓದಿ: ವೃದ್ಧರಿಗೆ ಉಚಿತ ಚಿಕಿತ್ಸೆ, ಬಡವರಿಗೆ ಉಚಿತ ಪಡಿತರ, ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳಿವು

ಒಂದು ಕುಟುಂಬದಲ್ಲಿ ಫಲಾನುಭವಿಗಳಿಗೆ ಮಿರಿ ಇರುವುದಿಲ್ಲ. ಎಷ್ಟು ಜನರಿದ್ದರೂ, ಯಾವುದೇ ವಯಸ್ಸಿನವರಿದ್ದರೂ ಅವರೆಲ್ಲರಿಗೂ ಕವರೇಜ್ ಇರುತ್ತದೆ. ಆದರೆ ಕುಟುಂಬ ಸದಸ್ಯರು ಇಬ್ಬರಿರಲಿ ಅಥವಾ ಹತ್ತು ಇರಲಿ, ಕವರೇಜ್ ಮಿತಿ ವರ್ಷಕ್ಕೆ 5 ಲಕ್ಷ ರೂ ಮಾತ್ರವೇ ಇರುತ್ತದೆ.

ಬಹಳಷ್ಟು ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಮೊದಲೇ ರೋಗಗಳಿದ್ದಲ್ಲಿ ಅಂಥವರಿಗೆ ಇನ್ಷೂರೆನ್ಸ್ ಕೊಡುವುದಿಲ್ಲ. ಆಯುಷ್ಮಾನ್ ಭಾರತ್​ನಲ್ಲಿ ಇವರಿಗೆ ಕವರೇಜ್ ಇರುತ್ತದೆ.

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಬಹುದು. ಕ್ಯಾನ್ಸರ್ ರೋಗ, ಕಿಡ್ನಿ, ಹೃದಯ ರೋಗ, ಸುಟ್ಟಗಾಯ ಇತ್ಯಾದಿ ರೋಗಗಳಿಗೆ ಚಿಕಿತ್ಸಾ ಕವರೇಜ್ ಇರುತ್ತದೆ.

ಇದನ್ನೂ ಓದಿ: ಅಶ್ನೀರ್ ಗ್ರೋವರ್​ರಿಂದ ಹೊಸ ಸ್ಟಾರ್ಟಪ್; ಆಸ್ಪತ್ರೆ ಚಿಕಿತ್ಸೆಗೆ ಸಾಲ ಕೊಡುವ ಝೀರೋ ಪೇ; ಹೇಗೆ ಪಡೆಯುವುದು ಈ ಪ್ರೀ ಅಪ್ರೂವ್ಡ್ ಲೋನ್?

ಈ ರೋಗಗಳಿಗೆ ಆಯುಷ್ಮಾನ್ ಭಾರತ್​ನಲ್ಲಿ ಕವರೇಜ್ ಇರುವುದಿಲ್ಲ

  • ಒಪಿಡಿ ಚಿಕಿತ್ಸೆ (ಔಟ್​ಪೇಶೆಂಟ್ ಡಿಪಾರ್ಟ್ಮೆಂಟ್)
  • ಐವಿಎಫ್ ಇತ್ಯಾದಿ ಫರ್ಟಿಲಿಟಿ ಟ್ರೀಟ್ಮೆಂಟ್
  • ಕಾಸ್ಮೆಟಿಕ್ ಸರ್ಜರಿ
  • ದಂತ್ಯ ಚಿಕಿತ್ಸೆ
  • ಎಚ್​ಐವಿ ಚಿಕಿತ್ಸೆ
  • ಡ್ರಗ್ ಮತ್ತು ಮದ್ಯ ವ್ಯಸನಿಗಳ ಚಿಕಿತ್ಸೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ