
ನವದೆಹಲಿ, ಆಗಸ್ಟ್ 19: ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್‌ನ (Lalithaa Jewellery Mart) ಐಪಿಒ (IPO) ಬಿಡ್ಡಿಂಗ್‌ನ ಮೂರನೇ ಹಾಗೂ ಅಂತಿಮ ದಿನದಂದು ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮೂರನೇ ದಿನದ ಬಿಡ್ಡಿಂಗ್ ಅಂತ್ಯದ ವೇಳೆಗೆ ಐಪಿಒ ಒಟ್ಟಾರೆಯಾಗಿ ಬಂಪರ್ ಸಬ್‌ಸ್ಕ್ರಿಪ್ಷನ್ (ಚಂದಾದಾರಿಕೆ) ಪಡೆದುಕೊಂಡಿದೆ. 1,700 ಕೋಟಿ ರೂ ಮೊತ್ತದ ಈ ಐಪಿಒಗೆ ಹೂಡಿಕೆದಾರರಿಂದ 62.97 ಪಟ್ಟು ಹೆಚ್ಚು ಸಬ್ಸ್ಕ್ರಿಪ್ಷನ್ಸ್ ಬಂದಿದೆ. ಅಂದರೆ, 1,700 ಕೋಟಿ ರೂ ಮೊತ್ತಕ್ಕೆ 79,400 ಕೋಟಿ ರೂ ಮೌಲ್ಯದ ಬಿಡ್ಡಿಂಗ್ ನಡೆದಿದೆ.
QIB ವರ್ಗದಲ್ಲಿ ಭಾರಿ ಬೇಡಿಕೆ: ಅರ್ಹ ಸಾಂಸ್ಥಿಕ ಹೂಡಿಕೆದಾರರ (Qualified Institutional Buyers – QIB) ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಬಂದಿದ್ದು, ಈ ವಿಭಾಗದ ಶೇರುಗಳು ಭಾರೀ ಪ್ರಮಾಣದಲ್ಲಿ (153 ಪಟ್ಟು ಹೆಚ್ಚು) ಸಬ್‌ಸ್ಕ್ರೈಬ್ ಆಗಿವೆ.
ಸಾಂಸ್ಥಿಕೇತರ ಹೂಡಿಕೆದಾರರು (NII/HNI) ಮತ್ತು ಚಿಲ್ಲರೆ ಹೂಡಿಕೆದಾರರ (Retail Investors) ವಿಭಾಗಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ
ಹೂಡಿಕೆ ಉದ್ದೇಶ: ಲಲಿತಾ ಜ್ಯುವೆಲರಿ ಮಾರ್ಟ್ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ, ಅದು ಹೊಸ ಶೋರೂಮ್‌ಗಳ ಸ್ಥಾಪನೆ ಮತ್ತು ಸಾರ್ವತ್ರಿಕ ಕಾರ್ಪೊರೇಟ್ ಅಗತ್ಯಗಳಿಗಾಗಿ ಈ ಹಣವನ್ನು ಬಳಸಲಿದೆ.
ಇದನ್ನೂ ಓದಿ: ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ
ಹಂಚಿಕೆ ಮತ್ತು ಲಿಸ್ಟಿಂಗ್: ಶೇರು ಹಂಚಿಕೆ ಪ್ರಕ್ರಿಯೆ (Allotment) ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, BSE ಹಾಗೂ NSE ಶೇರು ಮಾರುಕಟ್ಟೆಗಳಲ್ಲಿ 2026ರ ಆಗಸ್ಟ್ 24 ರಂದು ಲಿಸ್ಟ್ ಆಗುವ ನಿರೀಕ್ಷೆಯಿದೆ. ಇದರ ಸದ್ಯದ ಜಿಎಂಪಿ ಪಾಸಿಟಿವ್ ಆಗಿದ್ದು ಶೇ. 20ರಷ್ಟಿರುವ ಅಂದಾಜಿದೆ. ಅಂದರೆ, ಇದರ ವಿತರಣೆ ಬೆಲೆಯಾದ 201 ರೂಗಿಂತ ಶೇ. 20ರಷ್ಟು ಹೆಚ್ಚಿನ ಮಟ್ಟದಲ್ಲಿ ಇದು ಲಿಸ್ಟ್ ಆಗಬಹುದು. ಅಂದಾಜು 220 ರೂ ಆಸುಪಾಸಿನ ದರದಲ್ಲಿ ಲಿಸ್ಟ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Wed, 19 August 26