LIC IPO: ಎಲ್​ಐಸಿ ಐಪಿಒಗೆ ಮೇ 9ರ ಅಂತಿಮ ದಿನಕ್ಕೆ ಒಟ್ಟು 2.95 ಪಟ್ಟು ಬೇಡಿಕೆ

| Updated By: Srinivas Mata

Updated on: May 09, 2022 | 8:36 PM

ಎಲ್​ಐಸಿ ಐಪಿಒ ಅಂತಿಮ ದಿನವಾದ ಮೇ 9ನೇ ತಾರೀಕಿನ ಕೊನೆಗೆ 2.95 ಪಟ್ಟು ಸಬ್​ಸ್ಕ್ರೈಬ್ ಆಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿ ಇದೆ.

LIC IPO: ಎಲ್​ಐಸಿ ಐಪಿಒಗೆ ಮೇ 9ರ ಅಂತಿಮ ದಿನಕ್ಕೆ ಒಟ್ಟು 2.95 ಪಟ್ಟು ಬೇಡಿಕೆ
ಸಾಂದರ್ಭಿಕ ಚಿತ್ರ
Follow us on

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಐಪಿಒ- ಭಾರತದ ಅತಿದೊಡ್ಡ ಆರಂಭಿಕ ಷೇರು ಮಾರಾಟವು ಸೋಮವಾರ ಬಿಡ್ಡಿಂಗ್‌ನ ಅಂತಿಮ ದಿನದಂದು 2.95 ಪಟ್ಟು ಸಬ್​ಸ್ಕ್ರೈಬ್ ಆಗಿದೆ. ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ. ಆಫರ್​ನ ಕೊನೆಯ ದಿನವಾದ ಸೋಮವಾರದಂದು ಹೂಡಿಕೆದಾರರು ಭಾರತದ ಅತಿದೊಡ್ಡ ಐಪಿಒದಲ್ಲಿ 2.95 ಪಟ್ಟು ಷೇರುಗಳನ್ನು ಮಾರಾಟಕ್ಕೆ ಆರ್ಡರ್ ಮಾಡಿದ್ದಾರೆ. ಒಟ್ಟು ಇಶ್ಯೂದಲ್ಲಿ ಸುಮಾರು ಶೇ 35ರಷ್ಟು ರೀಟೇಲ್ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ ಮತ್ತು 1.99 ಪಟ್ಟು ಬೇಡಿಕೆ ಬಂದಿದೆ ಎಂದು ಮುಂಬೈನಲ್ಲಿ ವಿನಿಮಯ ಕೇಂದ್ರ ಡೇಟಾ ತೋರಿಸಿದೆ.

ಎಲ್‌ಐಸಿ ವಿಮಾ ಪಾಲಿಸಿದಾರರಿಂದ ಬೇಡಿಕೆಯು ಅವರಿಗಾಗಿ ಮೀಸಲಿಟ್ಟ ಷೇರುಗಳಿಗಿಂತ 6.12 ಪಟ್ಟು ಹೆಚ್ಚು ಬಂದಿದ್ದು, ಉದ್ಯೋಗಿಗಳಿಗೆ ಲಭ್ಯವಿರುವ ಷೇರುಗಳ ಸಂಖ್ಯೆಗಿಂತ ಸುಮಾರು 4.4 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಕೆ ಆಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಭಾರತದ ಅತಿದೊಡ್ಡ ಷೇರು ಮಾರಾಟದಿಂದ ದೂರ ಉಳಿದಿದ್ದು, ಕರೆನ್ಸಿ ಅಪಾಯಗಳು ಮತ್ತು ಜಾಗತಿಕ ಮಾರುಕಟ್ಟೆಯ ಹಿನ್ನೆಲೆಯಲ್ಲಿ ಇದು ತುಂಬಾ ದುಬಾರಿಯಾಗಿದೆ.

ಐಪಿಒ ಆ್ಯಂಕರ್ ಭಾಗವು ನಾರ್ವೆ ಮತ್ತು ಸಿಂಗಾಪೂರದಿಂದ ಸವರನ್ ಫಂಡ್​ಗಳನ್ನು ಪಡೆದರೆ, ಹೆಚ್ಚಿನ ಷೇರುಗಳು ದೇಶೀಯ ಮ್ಯೂಚುವಲ್ ಫಂಡ್‌ಗಳಿಗೆ ಹೋದವು.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಎಲ್​ಐಸಿ ಆ್ಯಂಕರ್ ಬುಕ್​ನಲ್ಲಿ ಭಾಗವಹಿಸುತ್ತಿಲ್ಲ 28 ಮ್ಯೂಚುಯಲ್ ಫಂಡ್​ಗಳು: ಇಲ್ಲಿದೆ ಪಟ್ಟಿ