AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ರೀಟೇಲ್ ಹೂಡಿಕೆದಾರರಿಂದ ಎಲ್​ಐಸಿ ಐಪಿಒಗೆ ಭಾರೀ ಬೇಡಿಕೆ; ಮತ್ತೊಂದು ಹೊಸ ದಾಖಲೆ

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್​ನ ಐಪಿಒಗೆ ಚಿಲ್ಲರೆ ಹೂಡಿಕೆದಾರರಿಂದ ದಾಖಲೆ ಪ್ರಮಾಣದಲ್ಲಿ ಬಿಡ್ಡಿಂಗ್ ಮಾಡಲಾಗಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ.

LIC IPO: ರೀಟೇಲ್ ಹೂಡಿಕೆದಾರರಿಂದ ಎಲ್​ಐಸಿ ಐಪಿಒಗೆ ಭಾರೀ ಬೇಡಿಕೆ; ಮತ್ತೊಂದು ಹೊಸ ದಾಖಲೆ
ಸಾಂದರರ್ಭಿಕ ಚಿತ್ರ
TV9 Web
| Edited By: |

Updated on: May 09, 2022 | 2:34 PM

Share

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಐಪಿಒಗೆ ಉದ್ಯೋಗಿಗಳು, ಪಾಲಿಸಿದಾರರು ಮತ್ತು ಚಿಲ್ಲರೆ ಹೂಡಿಕೆದಾರರಿಂದ ಭಾರೀ ಬೇಡಿಕೆ ಬರುತ್ತಿದೆ. ಈ ಐಪಿಒಗೆ ಮೇ 8ನೇ ತಾರೀಕಿನ ತನಕದ ಬಿಡ್ಡಿಂಗ್‌, ಅಂದರೆ ಐದನೇ ದಿನದವರೆಗೆ 1.78 ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿದ್ದಾರೆ. ದೇಶದ ಅತಿದೊಡ್ಡ ಐಪಿಒದ 16.02 ಕೋಟಿ ಷೇರುಗಳ ಆಫರ್​ಗೆ 29.07 ಕೋಟಿ ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ರೀಟೇಲ್ ಹೂಡಿಕೆದಾರರಿಗೆ ಕಾಯ್ದಿರಿಸಿದ ಭಾಗವು ಮೂರನೇ ದಿನದಲ್ಲಿ ಸಂಪೂರ್ಣವಾಗಿ ಸಬ್​ಸ್ಕ್ರೈಬ್ ಆಗಿದೆ ಮತ್ತು ಐದನೇ ದಿನದ ಅಂತ್ಯದ ವೇಳೆಗೆ 1.59 ಪಟ್ಟು ಬೇಡಿಕೆ ಬಂದಿದೆ. ಈ ಇಶ್ಯೂಗಾಗಿ ರೀಟೇಲ್ ವೈಯಕ್ತಿಕ ಹೂಡಿಕೆದಾರರಿಂದ 10.9 ಕೋಟಿ ಬಿಡ್‌ಗಳನ್ನು ಸ್ವೀಕರಿಸಿದ್ದು, ಈ ವರ್ಗಕ್ಕೆ 6.9 ಕೋಟಿ ಷೇರುಗಳ ಮಾತ್ರ ಮೀಸಲಿಡಲಾಗಿದೆ. 2008ರಲ್ಲಿ ರಿಲಯನ್ಸ್ ಪವರ್‌ನ ಆರಂಭಿಕ ಷೇರು ಮಾರಾಟವು 4.8 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿತ್ತು ಎಂಬುದನ್ನು ಈ ಸನ್ನಿವೇಶದಲ್ಲಿ ಸ್ಮರಿಸಬಹುದು. ಹದಿನಾಲ್ಕು ವರ್ಷಗಳ ನಂತರ, ರೀಟೇಲ್ ಈಕ್ವಿಟಿ ಹೂಡಿಕೆದಾರರಿಂದ ಸುಮಾರು 6 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿದ ಎಲ್​ಐಸಿಯು ಈ ದಾಖಲೆಯನ್ನು ಮುರಿದಿದೆ.

ಎಲ್​ಐಸಿ ಐಪಿಒ ಮೇ 4ರಂದು ಸಬ್​ಸ್ಕ್ರಿಪ್ಷನ್​ಗೆ ಆರಂಭವಾಯಿತು. ಮತ್ತು ಮೇ 9ರಂದು ಮುಕ್ತಾಯಗೊಳ್ಳಲಿದೆ. ವಿತರಣೆಯ ಬಿಡ್ಡಿಂಗ್ ಶನಿವಾರ ಮತ್ತು ಭಾನುವಾರವೂ ತೆರೆದಿತ್ತು. ಐಪಿಒ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಶೇ 50ರಷ್ಟು ಕೋಟಾವನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (QIB), ಶೇ 35ರಷ್ಟನ್ನು ಸಾಂಸ್ಥಿಕ ಹೂಡಿಕೆದಾರರಿಗೆ (NII) ಮತ್ತು ಉಳಿದ ಶೇ 15ರಷ್ಟನ್ನು ರೀಟೇಲ್ ವೈಯಕ್ತಿಕ ಹೂಡಿಕೆದಾರರಿಗೆ (RII) ಕಾಯ್ದಿರಿಸಲಾಗಿದೆ. ಪಾಲಿಸಿದಾರರಿಗೆ ಶೇ 10ರಷ್ಟನ್ನು ನೀಡಲಾಗುತ್ತದೆ. ಐಪಿಒದ ದರ ಬ್ಯಾಂಡ್ ಅನ್ನು ಪ್ರತಿ ಇಕ್ವಿಟಿ ಷೇರಿಗೆ ರೂ. 902ರಿಂದ ರೂ. 949ಕ್ಕೆ ನಿಗದಿಪಡಿಸಲಾಗಿದೆ. ಎಲ್ಐಸಿ ಪಾಲಿಸಿದಾರರು ಪ್ರತಿ ಈಕ್ವಿಟಿ ಷೇರಿಗೆ 60 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ, ಆದರೆ ರೀಟೇಲ್ ಹೂಡಿಕೆದಾರರು ಮತ್ತು ಅರ್ಹ ಉದ್ಯೋಗಿಗಳು ಪ್ರತಿ ಈಕ್ವಿಟಿ ಷೇರಿಗೆ 45 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ.

ಈ ಐಪಿಒ ಮೂಲಕ ಭಾರತ ಸರ್ಕಾರವು ಹೊಂದಿರುವ ಸುಮಾರು 22.13 ಕೋಟಿ ಈಕ್ವಿಟಿ ಷೇರುಗಳ ಮಾರಾಟ ಮಾಡಲಾಗುತ್ತಿದೆ. ಅದು ಶೇ 100ರಷ್ಟು ಎಲ್​ಐಸಿಯ ಮಾಲೀಕತ್ವವನ್ನು ಹೊಂದಿದೆ. ಆದರೆ ಅದರಲ್ಲಿ ಶೇ 3.5ರಷ್ಟನ್ನು ಮಾತ್ರ ಮಾರಾಟ ಮಾಡುತ್ತದೆ. ಆ ಮೂಲಕ ಸರ್ಕಾರವು 21,000 ಕೋಟಿ ರೂ. ಸಂಗ್ರಹಿಸುತ್ತದೆ. ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳ ಕಾರಣದಿಂದಾಗಿ ಎಲ್​ಐಸಿ ಐಪಿಒ ಗಾತ್ರವನ್ನು ಶೇ 5ರಿಂದ ಶೇ 3.5ಕ್ಕೆ ಇಳಿಸಿತು. ಹಾಗೆ ಕಡಿಮೆಯಾಗಿ ಐಪಿಒ ಗಾತ್ರವು ಸುಮಾರು 20,557 ಕೋಟಿ ರೂಪಾಯಿಗಳಿದ್ದರೂ ಎಲ್​ಐಸಿ ಐಪಿಒ ದೇಶದ ಅತಿದೊಡ್ಡ ಐಪಿಒ ಆಗಿದೆ. ಎಲ್​ಐಸಿ ಪ್ರತಿ ಷೇರಿಗೆ 949 ರೂಪಾಯಿಯಂತೆ 5.92 ಲಕ್ಷ ಷೇರುಗಳನ್ನು ಹಂಚಿಕೆ ಮಾಡುವ ಮೂಲಕ ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಇಂದಿನಿಂದ ಆರಂಭ: ನಿಮಗೆ ತಿಳಿದಿರಲೇ ಬೇಕು ಈ ಸಂಗತಿಗಳು

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್