AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ಎಲ್​ಐಸಿ ಐಪಿಒಗೆ ನೀವು ಸಬ್​ಸ್ಕ್ರೈಬ್ ಆಗಬೇಕೋ ಬೇಡವೋ? ರಿಯಾಯಿತಿ, ಗ್ರೇ ಮಾರ್ಕೆಟ್ ಪ್ರೀಮಿಯಂ, ತಜ್ಞರ ಸಲಹೆ ಇಲ್ಲಿದೆ

ಎಲ್​ಐಸಿ ಐಪಿಒಗೆ ನೀವು ಸಬ್​ಸ್ಕ್ರೈಬ್ ಆಗಬೇಕೆ? ಆ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಗ್ರೇ ಮಾರ್ಕೆಟ್ ಪ್ರೀಮಿಯಂ, ರಿಯಾಯಿತಿ, ಮತ್ತಿತರ ಮಾಹಿತಿ ಇಲ್ಲಿದೆ.

LIC IPO: ಎಲ್​ಐಸಿ ಐಪಿಒಗೆ ನೀವು ಸಬ್​ಸ್ಕ್ರೈಬ್ ಆಗಬೇಕೋ ಬೇಡವೋ? ರಿಯಾಯಿತಿ, ಗ್ರೇ ಮಾರ್ಕೆಟ್ ಪ್ರೀಮಿಯಂ, ತಜ್ಞರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 05, 2022 | 2:23 PM

Share

ಎಲ್​ಐಸಿ ಐಪಿಒ (LIC IPO)ದ ಮೊದಲ ದಿನವಾದ ಮೇ 4ನೇ ತಾರೀಕಿನ ಬುಧವಾರದಂದು ನಿರೀಕ್ಷೆ ಮಾಡಿದಂತೆಯೇ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ. ಆರಂಭದ ಮೊದಲ ದಿನ ಐಪಿಒ ಗಾತ್ರದ ಶೇ 67ರಷ್ಟು ಸಬ್​ಸ್ಕ್ರೈಬ್ ಆಗಿದೆ ಎಂದು ಎನ್​ಎಸ್​ಇ ಡೇಟಾ ತಿಳಿಸಿದೆ. ಎಲ್​ಐಸಿ ಐಪಿಒ ಆಫರ್ ಫಾರ್ ಸೇಲ್ ಮೂಲಕವಾಗಿ 22,13,74,920 ಈಕ್ವಿಟಿ ಷೇರುಗಳ ತನಕ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ 21,000 ಕೋಟಿ ರೂಪಾಯಿ ಸಂಗ್ರಹ ಆಗಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ಹಿಂತೆಗೆತ ಗುರಿ ತಲುಪುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಎಲ್​ಐಸಿ ಐಪಿಒ ಸಬ್​ಸ್ಕ್ರಿಪ್ಷನ್ ಐಪಿಒ ಬಿಡ್ ಮೇ 4ರಿಂದ 9ರ ತನಕ ಮುಕ್ತವಾಗಿರುತ್ತದೆ. ಇದರಲ್ಲಿ ಸರ್ಕಾರವು ಶೇ 3.5ರಷ್ಟು ಎಲ್​ಐಸಿಯ ಷೇರಿನ ಪಾಲನ್ನು ಮಾರಾಟ ಮಾಡುತ್ತಿದೆ. ಎಲ್​ಐಸಿ ಐಪಿಒ ಶನಿವಾರದಂದು (ಮೇ 7, 2022) ಬೆಳಗ್ಗೆ 10ರಿಂದ ರಾತ್ರಿ 7ರ ತನಕ ಇರುತ್ತದೆ ಎಂದು ಎನ್​ಎಸ್​ಇಯಿಂದ ಬುಧವಾರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಎಲ್​ಐಸಿ ದರದ ಬ್ಯಾಂಡ್ ಪ್ರತಿ ಷೇರಿಗೆ 902 ರೂಪಾಯಿಯಿಂದ 949 ನಿಗದಿಯಾಗಿದ್ದು, ಕೆಲವು ವರ್ಗಗಳಿಗೆ ರಿಯಾಯಿತಿ ಇದೆ.

ಎಲ್​ಐಸಿ ಸಬ್​ಸ್ಕ್ರಿಪ್ಷನ್ ಸ್ಥಿತಿ ಎನ್​ಎಸ್​ಇ ಡೇಟಾದ ಪ್ರಕಾರ, ಪಾಲಿಸಿದಾರರಿಗೆ ಮೀಸಲಾದ ಭಾಗದಲ್ಲಿ ಮೊದಲ ದಿನ 2,21,37,492 ಷೇರುಗಳಲ್ಲಿ 1.99ರಷ್ಟು ಅಥವಾ 4,40,31,225 ಷೇರುಗಳಿಗೆ ಸಬ್​ಸ್ಕ್ರೈಬ್ ಆಗಿದ್ದಾರೆ. ಉದ್ಯೋಗಿಗಳ ಕೋಟಾದ ಅಡಿಯಲ್ಲಿ 1.17 ಪಟ್ಟು ಸಬ್​ಸ್ಕ್ರೈಬ್ ಆಗಿದ್ದಾರೆ. ಇನ್ನು ರೀಟೇಲ್ ಹೂಡಿಕೆದಾರರಿಗೆ ಮೀಸಲಾದ ಭಾಗದಲ್ಲಿ ಶೇ 60ರಷ್ಟು ಷೇರುಗಳಿಗೆ ಅಪ್ಲೈ ಮಾಡಿದ್ದಾರೆ. ನಾನ್ ರೀಟೇಲ್ ಹೂಡಿಕೆದಾರರು ಒಟ್ಟು ಮೀಸಲಾಗಿದ್ದರಲ್ಲಿ ಶೇ 27ರಷ್ಟು, ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಬಿಡ್ಡರ್ಸ್ ಶೇ 33ರಷ್ಟು ಅಪ್ಲೈ ಮಾಡಿದ್ದಾರೆ. 16,20,78,067 ಷೇರುಗಳ ಪೈಕಿ 10,86,91,770 ಷೇರುಗಳಿಗೆ ಬೇಡಿಕೆ ಬಂದಿದೆ.

ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ ಮೇ 4ನೇ ತಾರೀಕಿನ ಪ್ರಕಾರ, ಪ್ರತಿ ಅನ್​ಲಿಸ್ಟೆಡ್​ ಎಲ್​ಐಸಿ ಈಕ್ವಿಟಿ ಷೇರಿಗೆ 85 ರೂಪಾಯಿ ಪ್ರೀಮಿಯಂ ಇತ್ತು, ಎಂದು ತಜ್ಞರು ಹೇಳಿದ್ದಾರೆ. ಎಲ್​ಐಸಿ ಐಪಿಒ ಜಿಎಂಪಿ ಶೇ 9ರಷ್ಟು ನಿಗದಿಯಾಗಿದೆ. ಅದರ ಅರ್ಥ, ದರದ ಬ್ಯಾಂಡ್​ನ ಮೇಲ್​ಸ್ತರವಾದ 949ಕ್ಕಿಂತ 85 ರೂಪಾಯಿ ಹೆಚ್ಚೆಂದರೆ, (949+85) 1034 ರೂಪಾಯಿ ಆಗುತ್ತದೆ.

ಎಲ್​ಐಸಿ ಪಾಲಿಸಿದಾರರ ಕೋಟಾ ಏನು? ಎಲ್​ಐಸಿ ಪಾಲಿಸಿದಾರರಿಗೆ ಅಂತ ಮೀಸಲಿಟ್ಟು, ಸರ್ಕಾರದಿಂದ ಹೊಸ ಕೋಟಾವನ್ನು ಎಲ್​ಐಸಿ ಐಪಿಒ ಮೂಲಕ ತಂದಿದೆ. ವಿತರಣೆ ಬೆಲೆಯ ಮೇಲೆ ಪಾಲಿಸಿದಾರರಿಗೆ ರಿಯಾಯಿತಿ ಸಿಗುತ್ತದೆ. “ಪಾಲಿಸಿದಾರರು ಸಹ ಈ ಕಂಪೆನಿಯನ್ನು ಮಾಡಿದ್ದಾರೆ. ಅವರೂ ಷೇರುದಾರರಾಗಲು ಆಹ್ವಾನಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಹತ್ತಾರು ಲಕ್ಷ ಭಾರತೀಯರು ಪಾಲ್ಗೊಳ್ಳಲಿ, ಎಲ್ಐಸಿ ತನ್ನ ಮೌಲ್ಯ ತಿಳಿಸಲಿದೆ,” ಎಂದು DIPAM ಕಾರ್ಯದರ್ಶಿ ತುಹೀನ್ ಕಾಂತ್ ಪಾಂಡೆ ಹೇಳಿದ್ದಾರೆ.

ಎಲ್​ಐಸಿ ಐಪಿಒ ಪಾಲಿಸಿದಾರರ ರಿಯಾಯಿತಿ ರೀಟೇಲ್ ಹೂಡಿಕೆದಾರರಿಗೆ ಒಂದು ಷೇರಿಗೆ 45 ರೂಪಾಯಿ, ಅರ್ಹ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂಪಾಯಿ ರಿಯಾಯಿತಿ ಸಿಗುತ್ತದೆ. ಆದರೆ ಈ ರಿಯಾಯಿತಿ ಅರ್ಹ ಪಾಲಿಸಿದಾರರಿಗೆ ಅನ್ವಯಿಸುತ್ತದೆ. ಯಾರು ಫೆಬ್ರವರಿ 28ರೊಳಗೆ ಪ್ಯಾನ್ ಜೋಡಣೆ ಮಾಡಿರುವವರು ಅರ್ಹರು.

ಪಾಲಿಸಿದಾರರು ಅಪ್ಲೈ ಮಾಡುವುದು ಹೇಗೆ? ಎಲ್​ಐಸಿ ಪಾಲಿಸಿದಾರರು ಗರಿಷ್ಠ ಮೊತ್ತ 2 ಲಕ್ಷ ರೂಪಾಯಿ ತನಕ ಬಿಡ್ ಮಾಡಬಹುದು. ಯಾರಿಗೆ ಗುಂಪು ಪಾಲಿಸಿ ಇರುತ್ತದೋ ಅಂಥವರು ಈ ಕೋಟಾದ ಅಡಿಯಲ್ಲಿ ಬಿಡ್ ಮಾಡುವುದಕ್ಕೆ ಅರ್ಹರಲ್ಲ. ಎಲ್​ಐಸಿ ಪಾಲಿಸಿ ಜತೆಗೆ ಪ್ಯಾನ್ ಜೋಡಣೆ ಮಾಡುವುದರ ಹೊರತಾಗಿ ಅರ್ಹ ಹೂಡಿಕೆದಾರರಿಗೆ ಡಿಮ್ಯಾಟ್ ಖಾತೆ ಸಹ ಇರಬೇಕು.

ಈ ಷೇರುಗಳು ಖರೀದಿಸಲೇಬೇಕಾ? ಈಗಿನ ಮೇಲ್​ಸ್ತರದ ದರವಾದ 949 ರೂಪಾಯಿಯಲ್ಲಿ ಬೆಲೆ ಆಕರ್ಷಕವಾಗಿದೆ. ಖಾಸಗಿ ಇನ್ಷೂರೆನ್ಸ್​ ಕಂಪೆನಿಗಳಿಗೆ ಹೋಲಿಸಿದಲ್ಲಿ ಎಲ್​ಐಸಿ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಅಲ್ಪಾವಧಿಯಿಂದ ಮಧ್ಯಮಾವಧಿಗೆ “ಸಬ್​ಸ್ಕ್ರೈಬ್” ರೇಟಿಂಗ್ ನೀಡಲಾಗಿದೆ. ಎಲ್​ಐಸಿ ಐಪಿಒ ಮೇ 17ರಂದು ಲಿಸ್ಟಿಂಗ್ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್​ನಲ್ಲಿ ಎಂಥ ಬೇಡಿಕೆ ಪಡೆದಿದೆ? ಏನಿದು ಗ್ರೇ ಮಾರ್ಕೆಟ್ ಗೊತ್ತಿದೆಯಾ?

Published On - 2:23 pm, Thu, 5 May 22

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!