LIC Jeevan Shanti Policy: ಈ ಇನ್ಷೂರೆನ್ಸ್ ಪ್ಲಾನ್ ಮೂಲಕ ಜೀವನ ಪೂರ್ತಿ ಪೆನ್ಷನ್ ಪಡೆಯಿರಿ

| Updated By: Srinivas Mata

Updated on: Sep 11, 2021 | 4:43 PM

ಜೀವನಪೂರ್ತಿ ಪೆನ್ಷನ್ ಪಡೆಯುವುದಕ್ಕೆ ಎಲ್​ಐಸಿಯಿಂದ ಇರುವ ಯೋಜನೆ ಇದು. ಇದರ ಹೆಸರು ಎಲ್​ಐಸಿ ಜೀವನ್ ಶಾಂತಿ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

LIC Jeevan Shanti Policy: ಈ ಇನ್ಷೂರೆನ್ಸ್ ಪ್ಲಾನ್ ಮೂಲಕ ಜೀವನ ಪೂರ್ತಿ ಪೆನ್ಷನ್ ಪಡೆಯಿರಿ
ಸಾಂದರ್ಭಿಕ ಚಿತ್ರ
Follow us on

ಜೀವ ವಿಮಾ ನಿಗಮ (Life Insurance Corporation)ದಿಂದ ಎಂಡೋಮೆಂಟ್​ನಿಂದ ULIP (ಯೂನಿಟ್ ಲಿಂಕ್ಡ್​ ಪ್ಲಾನ್​) ತನಕ ನಾನಾ ಹೂಡಿಕೆ ಯೋಜನೆಗಳನ್ನು ಆಫರ್ ಮಾಡುತ್ತದೆ. ಎಲ್​ಐಸಿಯ ಜೀವನ್ ಶಾಂತಿ ಪಾಲಿಸಿಯು ಅಂಥದ್ದರಲ್ಲಿ ಒಂದು. ಈ ಜೀವ ವಿಮೆ ಪಾಲಿಸಿಯಲ್ಲಿ ಹೂಡಿಕೆದಾರರಿಗೆ ಎಂದು ಅನುಕೂಲ ದೊರೆಯುತ್ತದೆ ಅಂದರೆ, ಒಂದಿಷ್ಟು ಹಣವನ್ನು ಒಗ್ಗೂಡಿಸಿ, ಜೀವನಪೂರ್ತಿ ಪಿಂಚಣಿ (ಪೆನ್ಷನ್) ಸಿಗುವಂಥ ಯೋಜನೆ ಇದು. ಎಲ್​ಐಸಿಯ ಅಧಿಕೃತ ವೆಬ್​ಸೈಟ್​- licindia.in ಪ್ರಕಾರ, ಎಲ್​ಐಸಿಯ ಈ ಯೋಜನೆಯಲ್ಲಿ ಒಂದು ಇಡಿಗಂಟು ಇಟ್ಟು, ಜೀವನಪೂರ್ತಿ ಆದಾಯ ಮಾಡಿಕೊಳ್ಳಬಹುದು.

ಎಲ್​ಐಸಿ ಜೀವನ್​ ಶಾಂತಿ ಪಾಲಿಸಿಯು ಹೂಡಿಕೆದಾರರಿಗೆ ಎರಡು ಆಯ್ಕೆಯನ್ನು ನೀಡುತ್ತದೆ- ಇಮಿಡಿಯೆಟ್ ಪ್ಲಾನ್ ಮತ್ತು ಡೆಫರ್ಡ್ ಆನ್ಯುಯಿಟಿ ಆಪ್ಷನ್. ಹೂಡಿಕೆದಾರರು ತಮ್ಮ ವಯಸ್ಸಿನ ಆಧಾರದಲ್ಲಿ ಇವೆರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಹೂಡಿಕೆದಾರರು ನಿವೃತ್ತರಾದವರಾದಲ್ಲಿ ಅಥವಾ ಇನ್ನೇನು ನಿವೃತ್ತರಾಗಬೇಕಾಗಿದ್ದಲ್ಲಿ ಇಮಿಡಿಯೆಟ್ ಪ್ಲಾನ್ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆ ಪಾಲಿಸಿ ಪಡೆದುಕೊಂಡ ಮರು ತಿಂಗಳಿಂದಲೇ ಪೆನ್ಷನ್ ಬರುವುದಕ್ಕೆ ಆರಂಭವಾಗುತ್ತದೆ. ಅದೇ ಡೆಫರ್ಡ್ ಆನ್ಯುಯಿಟಿ ಆಪ್ಷನ್​ನಲ್ಲಿ ಹೂಡಿಕೆದಾರರರು 60ನೇ ವರ್ಷದಲ್ಲಿ ಆನ್ಯುಯಿಟಿ ಖರೀದಿಸಬಹುದು. ಆ ಅವಧಿಯ ತನಕ, ಹೂಡಿಕೆದಾರರ ಹಣವು ಇತರ ಎಲ್​ಐಸಿ ಎಂಡೋಮೆಂಟ್ ಪ್ಲಾನ್​ನಂತೆ ಬೆಳೆಯುತ್ತದೆ.

ಎಲ್​ಐಸಿ ಜೀವನ್ ಶಾಂತಿ ಪ್ಲಾನ್​ನಲ್ಲಿ ಡೆಫರ್ಡ್ ಆನ್ಯುಯಿಟಿ ಪ್ಲಾನ್ ಆಯ್ಕೆ ಮಾಡಿಕೊಂಡರೆ ಒಬ್ಬರ ಹಣ ಎಷ್ಟು ಬೆಳೆಯುತ್ತದೆ ಎಂದು ಕೇಳಿದರೆ, ಯಾವುದೇ ಎಲ್​ಐಸಿ ಇನ್ಷೂರೆನ್ಸ್ ಕಮ್ ಇನ್ವೆಸ್ಟ್​ಮೆಂಟ್ ಪ್ಲಾನ್​ನಲ್ಲಿ ವಾರ್ಷಿಕ ಶೇ 6ರ ದರದಲ್ಲಿ ಬೆಳವಣಿಗೆ ಸಾಧಿಸುತ್ತದೆ. ಅದು ULIP ಅಲ್ಲದಿದ್ದಲ್ಲಿ ಇಷ್ಟು ಪ್ರಮಾಣದ ರಿಟರ್ನ್ಸ್ ನಿರೀಕ್ಷೆ ಮಾಡಬಹುದು. ಎಲ್​ಐಸಿಯ ಜೀವನ್ ಶಾಂತಿ ಪಾಲಿಸಿಯಲ್ಲೂ ಡೆಫರ್ಡ್ ಆನ್ಯುಯಿಟಿ ಆಯ್ಕೆ ಮಾಡಿಕೊಂಡರೆ ಹಾಕಿದ ಹಣವು ವಾರ್ಷಿಕವಾಗಿ ಶೇ 6ರ ದರದಲ್ಲಿ ಬೆಳೆಯಬಹುದು.

ಸಾಮಾನ್ಯವಾಗಿ ಇದರಲ್ಲಿ ಶೇ 6ರ ವಾರ್ಷಿಕ ರಿಟರ್ನ್ ಅನ್ನು ಆನ್ಯುಯಿಟಿ ಮೇಲೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಇಮಿಡಿಯೆಟ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡಲ್ಲಿ ಮೊತ್ತವು ನಿಗದಿ ಆಗಿಬಿಡುತ್ತದೆ ಮತ್ತು ಮರು ತಿಂಗಳಿಂದಲೇ ಪೆನ್ಷನ್ ಬರುವುದಕ್ಕೆ ಆರಂಭವಾಗುತ್ತದೆ. ಡೆಫರ್ಡ್ ಆನ್ಯುಯಿಟಿ ಪ್ಲಾನ್​ನಲ್ಲಿ ಸಮಯ ಕಳೆಯುತ್ತಾ ಹೋದಂತೆ ಹಣವು ವಾರ್ಷಿಕ ಶೇ 6ರ ದರದಲ್ಲಿ ಬೆಳೆಯುತ್ತದೆ. ಆದ್ದರಿಂದ ಆನ್ಯುಯಿಟಿ ಖರೀದಿಗೆ ಹೆಚ್ಚು ಹಣ ಇರುತ್ತದೆ ಮತ್ತು ಹೆಚ್ಚು ಪೆನ್ಷನ್ ಬರುತ್ತದೆ. ಇದರ ಹೊರತಾಗಿ ಹೂಡಿಕೆ ರಿಟರ್ನ್ ದರದ ಹಂತವು ಸಹ ಬದಲಾಗಬಹುದು. ಹೂಡಿಕೆ ಸಮಯ ಮತ್ತು ಆನ್ಯುಯಿಟಿ ಖರೀದಿ ಸಮಯವನ್ನು ಆಧರಿಸಿ ಈ ಬದಲಾವಣೆ ಆಗುತ್ತದೆ.

ಯಾರು ಈಗಾಗಲೇ ನಿವೃತ್ತರಾಗಿದ್ದಾರೋ ಅಥವಾ ನಿವೃತ್ತಿ ಅಂಚಿನಲ್ಲಿ ಇದ್ದಾರೋ ಮತ್ತು ಹೆಚ್ಚಿನ ಅಪಾಯ ಬೇಡ ಅಂದುಕೊಳ್ಳುತ್ತಾರೋ ಅಂಥವರಿಗೆ ಈ ಎಲ್​ಐಸಿ ಜೀವನ್ ಶಾಂತಿ ಯೋಜನೆ ಸರಿಹೊಂದುತ್ತದೆ. ಈ ಪಾಲಿಸಿಯನ್ನು ಎಲ್​ಐಸಿ ಆಫ್ ಇಂಡಿಯಾದಿಂದ ಆಫ್​ಲೈನ್​ ಮತ್ತು ಆನ್​ಲೈನ್​ ಎರಡರ ಮೂಲಕವೂ ಖರೀದಿಸಬಹುದು. ಎಲ್​ಐಸಿಯ ಅಧಿಕೃತ ವೆಬ್​ಸೈಟ್​ ಆದ licindia.in. ಮೂಲಕವೂ ಖರೀದಿಸಬಹುದು. ಆಫ್​ಲೈನ್​ನಲ್ಲಿ ಖರೀದಿಸ ಬಯಸುವವರು ನೋಂದಾಯಿತ ಎಲ್​ಐಸಿ ಏಜೆಂಟ್ ಮೂಲಕ ಅಥವಾ ಹತ್ತಿರದ ಎಲ್​ಐಸಿ ಶಾಖೆಗೆ ಭೇಟಿ ನೀಡಿ, ಖರೀದಿಸಬಹುದು.

ಇದನ್ನೂ ಓದಿ: LIC Aadhar Shila Plan: ಎಲ್​ಐಸಿ ಆಧಾರ್ ಶಿಲಾ ಯೋಜನೆಗೆ ದಿನಕ್ಕೆ ರೂ. 29ರಂತೆ ಉಳಿಸಿ, 4 ಲಕ್ಷ ರೂ. ಪಡೆಯಿರಿ

LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

(LIC Jeevan Shanti Policy Must Know Details By Investors For Life Long Pension)