Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿ ನಂತರ ಬದುಕಿನ ರಕ್ಷಕ ಮ್ಯೂಚುವಲ್ ಫಂಡ್; ಈಗಿನಿಂದಲೇ ಹೂಡಿಕೆ ಮಾಡಿದರೆ ಜೀವನ ಸುಗಮ

ಹಣಕಾಸು ವಿಷಯಗಳಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ Money9 ಸರಳವಾಗಿ ಉತ್ತರ ನೀಡುತ್ತದೆ. ಹಾಗಾದರೆ ನಿವೃತ್ತಿ ಬದುಕಿನ ನಂತರ ಒಂದು ಸುರಕ್ಷಿತ ಆದಾಯ ಗಳಿಗೆ ಹೇಗೆ? ನಿವೃತ್ತಿ ಬದುಕು ಭದ್ರವಾಗಿರಬೇಕು ಎಂದರೆ ಈಗಿನಿಂದಲೇ ಏನು ಮಾಡಬೇಕು? ಮ್ಯೂಚುವಲ್ ಫಂಡ್‌ಗಳು ನಿವೃತ್ತಿ ಬದುಕಿನಲ್ಲಿ ನಿಮ್ಮ ಸಹಾಯಕ್ಕೆ ನಿಲ್ಲುತ್ತವೆಯೇ?

ನಿವೃತ್ತಿ ನಂತರ ಬದುಕಿನ ರಕ್ಷಕ ಮ್ಯೂಚುವಲ್ ಫಂಡ್; ಈಗಿನಿಂದಲೇ ಹೂಡಿಕೆ ಮಾಡಿದರೆ ಜೀವನ ಸುಗಮ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 08, 2022 | 4:03 PM

ನಿವೃತ್ತಿ ನಂತರ ಬದುಕು ಸುಂದರವಾಗಿರುತ್ತದೆ. ಎಲ್ಲ ಜವಾಬ್ದಾರಿಗಳಿಂದ ನಾವು ಮುಕ್ತರಾಗಿರುತ್ತೇವೆ ಎನ್ನುವ ಭಾವನೆ ಈಗ ಇರಬಹುದು. ಆದರೆ ವಾಸ್ತವ ಬೇರೆಯದೇ ಇದೆ. ಹಾಗಾದರೆ ನಿವೃತ್ತಿ ಬದುಕಿನ ದಿನಗಳನ್ನು ಗಟ್ಟಿಯಾಗಿ ಎದುರಿಸುವುದು ಹೇಗೆ?

ವಯೋಸಹಜ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಆರಂಭಿಸುತ್ತದೆ. ಇದೇ ಕಾರಣಕ್ಕಾಗಿ ವೈದ್ಯಕೀಯ ವೆಚ್ಚಕ್ಕೆಂದೇ ದೊಡ್ಡ ನಿಧಿಯನ್ನು ತೆಗೆದಿರಿಸಿಕೊಳ್ಳಬೇಕಾಗುತ್ತದೆ. 60 ವರ್ಷ ದಾಟಿದ ನಂತರ ಆಸ್ಪತ್ರೆಗೆ ಅಲೆದಾಟ ಇಂದಿನ ಜೀವನಶೈಲಿಯಲ್ಲಿ ತಪ್ಪಿದ್ದಲ್ಲ. ವ್ಯಕ್ತಿ ತಾರುಣ್ಯದಲ್ಲಿದ್ದಾಗಲೇ ಅಥವಾ ಒಂದಷ್ಟು ಸಂಪಾದನೆ ಮಾಡುತ್ತಿರುವಾಗಲೇ ನಿವೃತ್ತಿಯ ನಂತರದ ಜೀವನದ ಬಗ್ಗೆಯೂ ಯೋಚನೆ ಮಾಡಿರಬೇಕಾಗುತ್ತದೆ. ಹೂಡಿಕೆ ಕಡೆ ಹೆಜ್ಜೆ ಇಟ್ಟಿರಬೇಕಾಗುತ್ತದೆ. ಹೂಡಿಕೆಯಲ್ಲಿ ತೊಡಗಿಕೊಳ್ಳಲು ವಿಳಂಬ ಮಾಡಿದಷ್ಟು ಜಾಸ್ತಿ ನಷ್ಟ ಅನುಭವಿಸಬೇಕಾಗುತ್ತದೆ.

ಹಾಗಾದರೆ ಮ್ಯೂಚುವಲ್ ಫಂಡ್ ಹೂಡಿಕೆ ನಿವೃತ್ತಿ ನಂತರದ ಬದುಕಿಗೆ ಭದ್ರತೆ ಒದಗಿಸಬಹುದೆ? ಹೌದು.. ಖಂಡಿತ ಸಾಧ್ಯವಿದೆ. ಸಾಂಪ್ರದಾಯಿಕ ಹೂಡಿಕೆಗಿಂತ ಹೆಚ್ಚಿನ ರಿಟರ್ನ್ಸ್ ನ್ನು ಮ್ಯೂಚುವಲ್ ಫಂಡ್ ಹೂಡಿಕೆ ತಂದುಕೊಡಬಲ್ಲದು.

ಇದನ್ನೂ ಓದಿ
Image
Bank Interest: ಬಡ್ಡಿದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್, ಪಿಎನ್​ಬಿ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್
Image
Tv9 Exclusive: ತೈವಾನ್ ಮೇಲಿನ ದಾಳಿ ಚೀನಾ ಆರ್ಥಿಕತೆಗೆ ಆತ್ಮಹತ್ಯೆಯಂಥ ನಿರ್ಧಾರವಾದೀತು; ನಿಲೇಶ್ ಶಾ
Image
ಧಾರ್ಮಿಕ ಸಂಸ್ಥೆಗಳು ನಿರ್ವಹಿಸುವ ಕಡಿಮೆ ದರದ ವಸತಿ ಗೃಹಗಳಿಗೆ ಜಿಎಸ್​ಟಿ ವಿನಾಯ್ತಿ: ಸಿಬಿಐಸಿ
Image
ರೆರಾ ನಿಮ್ಮ ಕನಸಿನ ಮನೆಯ ಪ್ರಾಜೆಕ್ಟ್ ರದ್ದು ಮಾಡಿದ್ದರೆ ಚಿಂತಿಸಬೇಡಿ, Money9  ಆ್ಯಪ್ ನಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ

ನಿವೃತ್ತಿ ವೇಳೆ ಭದ್ರತೆಗೆ ಎಷ್ಟು ಹಣ ಬೇಕು?

ಈ ವಿಚಾರವನ್ನು ಒಂದು ಉದಾಹರಣೆ ಮೂಲಕ ಅರ್ಥಮಾಡಿಕೊಳ್ಳೋಣ. ರಾಹುಲ್ ಶ್ರೀವಾಸ್ತವ 35 ವರ್ಷದ ಕಾರ್ಪೊರೇಟ್ ಉದ್ಯೋಗಿ ಎಂದು ಭಾವಿಸೋಣ. ಅವರ ವಾರ್ಷಿಕ ಖರ್ಚು ಸುಮಾರು 8 ಲಕ್ಷ ರೂಪಾಯಿಗಳು. ಅವರು 60 ನೇ ವಯಸ್ಸಿಗೆ ನಿವೃತ್ತರಾಗಲು ಬಯಸುತ್ತಾರೆ, ಅಂದರೆ, ಅವರು ಮುಂದಿನ 25 ವರ್ಷಗಳಲ್ಲಿ ನಿವೃತ್ತರಾಗುತ್ತಾರೆ. ಈ ಅವಧಿಯಲ್ಲಿ ಸರಾಸರಿ ಹಣದುಬ್ಬರವು ವಾರ್ಷಿಕ 5.5 ಪರ್ಸೆಂಟ್ ಎಂದು ಲೆಕ್ಕ ಹಾಕೋಣ.

ಹಲವಾರು ಅಧ್ಯಯನಗಳು ಈ ವಿಚಾರದ ಮೇಲೆ ಬೆಳಕು ಚೆಲ್ಲಿದ್ದು ನಿವೃತ್ತಿಯ ಸಮಯದಲ್ಲಿ ರಾಹುಲ್‌ಗೆ ಕನಿಷ್ಠ 7.88 ಕೋಟಿ ರೂ. ನಿಧಿಯ ಅಗತ್ಯವಿರುತ್ತದೆ. 60 ವರ್ಷಕ್ಕೆ ಈ ನಿಧಿ ಸಿಕ್ಕರೆ ಮುಂದಿನ 10-15 ವರ್ಷಗಳ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು. ನಿವೃತ್ತಿ ಬದುಕನ್ನು ಸುರಕ್ಷಿತವಾಗಿ ಕಳೆಯಲು ಏನೆಲ್ಲ ಹಣಕಾಸಿನ ಪ್ಲಾನ್ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು Money9 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. Money9 ಅಪ್ಲಿಕೇಶನ್ ಡೌನ್‌ಲೋಡ್ ಗೆ https://onelink.to/gjbxhu ಕ್ಲಿಕ್ ಮಾಡಿ

ಮನಿ9 ಏನು? ಎತ್ತ? ಹೇಗೆ?

Money9 ನ OTT ಅಪ್ಲಿಕೇಶನ್ ಈಗ Google Play ಸ್ಟೋರ್ ಮತ್ತು iOS ನಲ್ಲಿ ಲಭ್ಯವಿದೆ. ವೈಯಕ್ತಿಕ ಹಣಕಾಸುಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಏಳು ಭಾಷೆಗಳಲ್ಲಿ ನಿಮ್ಮ ಮುಂದೆ ಇರಿಸಲಾಗುತ್ತದೆ. ಹೂಡಿಕೆ, ಉಳಿತಾಯ, ಸುರಕ್ಷತೆ, ಭದ್ರತೆ ಸೇರಿದಂತೆ ಹಣಕಾಸಿನ ವಿಚಾರಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಗುಜರಾತಿ, ಬಾಂಗ್ಲಾ ಮತ್ತು ಮರಾಠಿ ಏಳು ಭಾಷೆಗಳಲ್ಲಿ ನಿಮ್ಮ ಮುಂದಿಡಲಾಗುತ್ತದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಪ್ರಾಪರ್ಟಿ, ತೆರಿಗೆ, ಹೊಸ ಪಾಲಿಸಿಗಳು, ಸೈಬರ್ ಎಚ್ಚರಿಕೆ ಸೇರಿದಂತೆ ಅನೇಕ ಸಂಗತಿಗಳು ನಿಮ್ಮ ಸಹಾಯಕ್ಕೆ ನಿಲ್ಲುತ್ತವೆ. ಇದೆಲ್ಲವನ್ನು ಅರಿಯಲು Money9 ನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Published On - 4:03 pm, Mon, 8 August 22

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ