ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು

LPG price updates on 2026, March 1st: 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ 28 ರೂನಿಂದ 31 ರೂವರೆಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 1,842 ರೂ ದಾಟಿದೆ. 47.5 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆಯೂ ಏರಿಕೆ ಆಗಿದೆ. ಕಳೆದ ಆರು ತಿಂಗಳಲ್ಲಿ ನಾಲ್ಕನೇ ಬಾರಿ ಕಮರ್ಷಿಯಲ್ ಎಲ್​ಪಿಜಿ ಬೆಲೆ ಏರಿದೆ. ಆದರೆ, ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆಯ ಯಥಾಸ್ಥಿತಿ ಸತತ 11ನೇ ತಿಂಗಳೂ ಮುಂದುವರಿದಿದೆ.

ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು
ಎಲ್​ಪಿಜಿ

Updated on: Mar 01, 2026 | 12:55 PM

ನವದೆಹಲಿ, ಮಾರ್ಚ್ 1: ಕಮರ್ಷಿಯಲ್ ಎಲ್​ಪಿಜಿ ದರಗಳು (Commercial LPG prices) ಸತತ ಮೂರನೇ ತಿಂಗಳು ಏರಿಕೆ ಆಗಿವೆ. ಕಳೆದ ಆರು ತಿಂಗಳಲ್ಲಿ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಳ ಆಗಿದೆ. ತಿಂಗಳ ಮೊದಲ ದಿನವಾದ ಮಾರ್ಚ್ 1ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳು 28ರಿಂದ 31ರೂವರೆಗೆ ಏರಿವೆ. ದೆಹಲಿ, ಮುಂಬೈ ಮೊದಲಾದೆಡೆ ಇದರ ಬೆಲೆ 28 ರೂ ಹೆಚ್ಚಿದರೆ, ಕೋಲ್ಕತಾದಲ್ಲಿ 31 ರೂ ಹೆಚ್ಚಿದೆ. 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳೂ ಕೂಡ ಭರ್ಜರಿ ಏರಿವೆ. ಆದರೆ, 14.2 ಕಿಲೋ ಹಾಗೂ 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಥಾಸ್ಥಿತಿ ಮುಂದುವರಿದೆ.

ಬೆಂಗಳೂರಿನಲ್ಲಿ ಎಲ್​ಪಿಜಿ ದರಗಳು (ಮಾರ್ಚ್ 1ಕ್ಕೆ)

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 855.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 318.50 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್: 1,842.50 ರೂ (28.50 ರೂ ಏರಿಕೆ)
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್:

ಇದನ್ನೂ ಓದಿ: Gold Rate Today: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಜನವರಿಯಲ್ಲಿ 110.50 ರೂ, ಫೆಬ್ರುವರಿಯಲ್ಲಿ 49.50 ರೂ ಏರಿತ್ತು. 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಫೆಬ್ರುವರಿಯಲ್ಲಿ 125 ರೂ ನಷ್ಟು ಏರಿ 4,532 ರೂ ಆಗಿತ್ತು. ಮಾರ್ಚ್ ತಿಂಗಳಲ್ಲಿ ಈ ಬೃಹತ್ ಸಿಲಿಂಡರ್ ಬೆಲೆ 4,600 ರೂ ದಾಟಿ ಹೋಗಿದೆ.

2025ರ ಏಪ್ರಿಲ್ 1ರಂದು 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗಿತ್ತು. ಅದಾದ ಬಳಿಕ ಮತ್ತೆಂದೂ ಇದರ ಬೆಲೆ ಏರಿಕೆ ಆಗಿಲ್ಲ. ಇನ್ನೊಂದೆಡೆ, ಈ ಹಣಕಾಸು ವರ್ಷದಲ್ಲಿ ಮೊದಲ ಆರು ತಿಂಗಳು ಸತತವಾಗಿ ಇಳಿಕೆ ಕಂಡಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಳ ಕಂಡಿವೆ.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಈಗ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಎಲ್​ಪಿಜಿ ಸೇರಿದಂತೆ ಪೆಟ್ರೋಲಿಯಂ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us