ಮಹಾಕುಂಭಕ್ಕೆ ವಿದೇಶಗಳಿಂದ ಜನಪ್ರವಾಹ; ಋಷಿಕೇಶ, ವಾರಾಣಸಿ, ಹರಿದ್ವಾರಕ್ಕೂ ಭರ್ಜರಿ ಭಕ್ತರ ದಂಡು

|

Updated on: Jan 24, 2025 | 3:26 PM

Spiritual travel to India: ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ದೇಶವಿದೇಶಗಳಿಂದ ಕೋಟ್ಯಂತರ ಜನರನ್ನು ಆಕರ್ಷಿಸಿದೆ. ನಾಗಾಸಾಧುಗಳು ಮಾತ್ರವಲ್ಲ, ವಿದೇಶಗಳಲ್ಲಿರುವ ಜನರೂ ಕೂಡ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅಟ್ಲಿಸ್ ಎನ್ನುವ ವೀಸಾ ಪ್ರೋಸಸಿಂಗ್ ಕಂಪನಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆದ್ಮಾತ್ಮಿಕ ಪ್ರವಾಸದ ವೀಸಾ ಪಡೆದು ಬರುವವರ ಸಂಖ್ಯೆ ಶೇ. 21ರಷ್ಟು ಹೆಚ್ಚಿದೆ.

ಮಹಾಕುಂಭಕ್ಕೆ ವಿದೇಶಗಳಿಂದ ಜನಪ್ರವಾಹ; ಋಷಿಕೇಶ, ವಾರಾಣಸಿ, ಹರಿದ್ವಾರಕ್ಕೂ ಭರ್ಜರಿ ಭಕ್ತರ ದಂಡು
ನಾಗಾಸಾಧುಗಳು
Follow us on

ನವದೆಹಲಿ, ಜನವರಿ 24: ಭಾರತಕ್ಕೆ ಆದ್ಯಾತ್ಮಿಕ ಉದ್ದೇಶದಿಂದ ಪ್ರವಾಸ ಬರುವವರ ಸಂಖ್ಯೆ ಶೇ. 21.4ರಷ್ಟು ಹೆಚ್ಚಿದೆ. ಈಗ ನಡೆಯುತ್ತಿರುವ ಮಹಾಕುಂಭ ಸೇರಿದಂತೆ ವಿವಿಧ ಆದ್ಮಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಸಾಕಷ್ಟು ಜನರು ಭಾರತಕ್ಕೆ ಹರಿದುಬರುತ್ತಿದ್ದಾರೆ. ಅಮೆರಿಕ, ಬ್ರಿಟನ್ ಇತ್ಯಾದಿ ದೇಶಗಳಿಂದ ಹೆಚ್ಚಿನ ವ್ಯಕ್ತಿಗಳು ಭಾರತಕ್ಕೆ ಧಾರ್ಮಿಕ ಪ್ರವಾಸ ಮಾಡುತ್ತಿದ್ದಾರೆ. ವೀಸಾ ಅರ್ಜಿಗಳ ಪ್ರೋಸಸಿಂಗ್ ಪ್ಲಾಟ್​ಫಾರ್ಮ್ ಆದ ಅಟ್ಲಿಸ್ ಎನ್ನುವ ಸಂಸ್ಥೆ ಕೆಲ ಕುತೂಹಲಕಾರಿ ಅಂಕಿ ಅಂಶಗಳನ್ನು ಬಹಿರಂಗಗೊಳಿಸದೆ.

ಉತ್ತರಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆಯುತ್ತಿರುವ ಮಹಾಕುಂಭವು ಕುಂಭಮೇಳಗಳ ಕುಂಭಮೇಳ ಎನಿಸಿದೆ. ಇದು ಪ್ರತೀ 144 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಂದು ಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 12 ಕುಂಭಮೇಳಗಳಿಗೊಮ್ಮೆ ಮಹಾಕುಂಭ ನಡೆಯುತ್ತದೆ. ಅಷ್ಟರಮಟ್ಟಿಗೆ ಈ ಬಾರಿಯ ಕುಂಭ ಮೇಳ ಮಹತ್ವದ್ದಾಗಿದೆ.

ದೇಶ ವಿದೇಶಗಳಿಂದ ಈ ಬಾರಿಯ ಮಹಾಕುಂಭಕ್ಕೆ ನಾಲ್ಕು ಕೋಟಿಗೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಜನವರಿ 13ರಂದು ಆರಂಭವಾಗಿರುವ ಈ ಮಹಾಕುಂಭವು ಫೆಬ್ರುವರಿ 26ರವರೆಗೂ ಇರಲಿದೆ. ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿನ ಪವಿತ್ರ ಗಂಗಾ ನದಿ ನೀರಲ್ಲಿ ಮಿಂದೆದ್ದರೆ ಜೀವನ ಪಾವನ ಆಗುತ್ತದೆ ಎನ್ನುವ ನಂಬಿಕೆ ಭಾರತೀಯರಲ್ಲಿ ಇದೆ.

ಇದನ್ನೂ ಓದಿ: French Fry: ಆವತ್ತು ಆಮದು , ಇವತ್ತು ರಫ್ತು; ಜಾಗತಿಕ ಫ್ರೆಂಚ್ ಫ್ರೈ ಮಾರುಕಟ್ಟೆಯಲ್ಲಿ ಭಾರತದ ಅಧಿಪತ್ಯ

ಭಾರತದಲ್ಲಿ ಆದ್ಮಾತ್ಮಿಕ ಪ್ರವಾಸಕ್ಕೆಂದು ವೀಸಾಗೆ ಸಲ್ಲಿಸುವ ಅರ್ಜಿಗಳಲ್ಲಿ ಶೇ. 48ರಷ್ಟವು ಮಹಾಕುಂಭದಂತಹ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಉದ್ದೇಶ ಇರುವುದು ಆಟ್ಲಿಸ್​ನ ದತ್ತಾಂಶದಿಂದ ತಿಳಿದುಬರುತ್ತದೆ. ಕುತೂಹಲ ಎಂದರೆ, ಹಿಂದೆಲ್ಲಾ ಭಾರತದಲ್ಲಿ ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದುದು ಹಿರಿಯರೇ ಹೆಚ್ಚಾಗಿದ್ದರು. ಆದರೆ, ಈಗ 40 ವರ್ಷ ಆಸುಪಾಸಿನ ಕಿರಿಯ ವಯಸ್ಸಿನ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂಥ ಕಿರಿಯವರಲ್ಲಿ ಮಹಿಳೆಯರೇ ಹೆಚ್ಚಿರುವುದು ಮತ್ತೊಂದು ಕುತೂಹಲಕಾರಿ ಸಂಗತಿ. ಈ ಮೇಲಿನ ಅಂಕಿ ಅಂಶಗಳು ವಿದೇಶಗಳಿಂದ ಬರುವ ಆದ್ಯಾತ್ಮಿಕ ಪ್ರವಾಸಿಗರ ಕುರಿತಾದದ್ದು.

ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಭಾರತದ ಆದ್ಮಾತ್ಮಿಕ ಸಂಸ್ಕೃತಿಗೆ ಮಾರು ಹೋಗಿದ್ದರು. ಜೀವನದ ಅಂತಿಮ ಸತ್ಯ ಕಂಡುಕೊಳ್ಳಲು ಅವರಿಗೆ ಭಾರತದಲ್ಲಿ ಸಾಧ್ಯವಾಯಿತು. ತನ್ನ ಯೌವ್ವನದಲ್ಲಿ ಅವರು ಮಹಾಕುಂಭವನ್ನು ನೋಡುವ ಇಚ್ಛೆ ವ್ಯಕ್ತಪಡಿಸಿ ಬರೆದಿದ್ದ ಪತ್ರವೊಂದು ಇತ್ತೀಚೆಗೆ ಸಿಕ್ಕು ವೈರಲ್ ಆಗಿದ್ದು ನೆನಪಿರಬಹುದು. ವಿಶ್ವದ ಹಲವು ಗಣ್ಯರು ಭಾರತೀಯ ಆದ್ಮಾತ್ಮಿಕತೆ ಬಗ್ಗೆ ಆಸಕ್ತಿ ಹೊಂದಿರುವುದುಂಟು. ಕಾರ್ಲಸ್ ಸಂಟಾನ, ಜಾರ್ಜ್ ಹ್ಯಾರಿಸನ್, ಏಂಜೆಲಿನಾ ಜೋಲೀ ಇತ್ಯಾದಿ ತಾರೆಗಳ ನಿದರ್ಶನಗಳಿವೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಡಾಟಾಸೆಂಟರ್​ಗಿಂತ ಮೂರು ಪಟ್ಟು ದೊಡ್ಡದು ರಿಲಾಯನ್ಸ್​ನಿಂದ ನಿರ್ಮಾಣ; ಇಲ್ಲಿದೆ ಪಟ್ಟಿ

ಭಾರತಕ್ಕೆ ಬರಲು ಒಟ್ಟಾರೆ ಪ್ರವಾಸ ವೀಸಾ ಅರ್ಜಿಗಳು ಶೇ. 35ರಷ್ಟು ಹೆಚ್ಚಿವೆ. ಮಹಾಕುಂಭಕ್ಕೆ ಮಾತ್ರವಲ್ಲ, ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿರುವ ವಾರಾಣಸಿ, ಋಷಿಕೇಶ ಮತ್ತು ಹರಿದ್ವಾರ ಎನ್ನುವ ಪವಿತ್ರ ಧಾರ್ಮಿಕ ಸ್ಥಳಗಳಿಗೆ ವಿದೇಶಗಳಿಂದ ಹೆಚ್ಚಿನ ಭಕ್ತರು ಮತ್ತು ಆಸಕ್ತರು ಈ ಬಾರಿ ಭೇಟಿ ನೀಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Fri, 24 January 25