AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​ಗೆ ದಿನಗಣನೆ; ನಿರ್ಮಲಾ ಸೀತಾರಾಮನ್​ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?

Union Budget and Halwa ceremony: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲಿ ಇಂದು (ಜ. 24) ಸಂಜೆ 5ಕ್ಕೆ ಸಂಸತ್ತಿನ ನಾರ್ತ್ ಬ್ಲಾಕ್​ನಲ್ಲಿ ಹಲ್ವಾ ಕಾರ್ಯಕ್ರಮ ನಡೆಯಿತು. ಬಜೆಟ್ ಸಿದ್ಧತೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಹಿ ತಿಂದು ಸಂಭ್ರಮಿಸಿದರು. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗಲಿದ್ದು, ಅಲ್ಲಿಯವರೆಗೆ ಈ ಸಿಬ್ಬಂದಿಗೆ ಲಾಕಿನ್ ಅವಧಿ ಇರುತ್ತದೆ. ಬಾಹ್ಯ ಸಂಪರ್ಕದಿಂದ ಸಂಪೂರ್ಣ ಕಡಿದುಕೊಳ್ಳುತ್ತಾರೆ.

ಬಜೆಟ್​ಗೆ ದಿನಗಣನೆ; ನಿರ್ಮಲಾ ಸೀತಾರಾಮನ್​ರಿಂದ ಹಲ್ವಾ ಕಾರ್ಯಕ್ರಮ; ಏನಿದರ ವಿಶೇಷತೆ?
ಹಲ್ವಾ ಕಾರ್ಯಕ್ರಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 24, 2025 | 7:36 PM

Share

ನವದೆಹಲಿ, ಜನವರಿ 24: ಕೇಂದ್ರ ಬಜೆಟ್ ಮಂಡನೆ ದಿನ ಸಮೀಪಿಸುತ್ತಿದ್ದು, ಇಂದು ಶುಕ್ರವಾರ ಸಂಜೆಯ ಬಳಿಕ ಹಲ್ವಾ ಕಾರ್ಯಕ್ರಮ ನಡೆಯುತ್ತಿದೆ. ಬಜೆಟ್ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಈ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ತಂಡದ ಸದಸ್ಯರಿಗೆ ಸಿಹಿ ತಿನಿಸುತ್ತಾರೆ. ಪ್ರತೀ ಬಜೆಟ್​ನಲ್ಲೂ ಕೆಲ ದಿನಗಳ ಮೊದಲು ಈ ರೀತಿ ಹಲ್ವಾ ಕಾರ್ಯಕ್ರಮ ನಡೆಯುವುದು ರೂಢಿಯಲ್ಲಿದೆ.

ಹಲ್ವಾ ಕಾರ್ಯಕ್ರಮದ ಮಹತ್ವ ಏನು?

ಬಜೆಟ್ ಸಿದ್ಧಪಡಿಸುವ ಕೆಲಸ ಸಾಧಾರಣ ಇರುವುದಿಲ್ಲ. ಐದಾರು ತಿಂಗಳಿಂದ ನಿರಂತರವಾಗಿ ನಡೆಯುವ ಪ್ರಕ್ರಿಯೆ. ವಿವಿಧ ಇಲಾಖೆಗಳು, ವಿವಿಧ ಸಚಿವಾಲಯಗಳು, ವಿವಿಧ ಉದ್ಯಮಗಳು, ವಿವಿಧ ರಾಜ್ಯಗಳು ಹೀಗೆ ಬಹಳಷ್ಟು ಜನರನ್ನು ಸಂಪರ್ಕಿಸಿ, ಚರ್ಚಿಸಿ, ಸಮಾಲೋಚಿಸಿ ಆ ಬಳಿಕ ಬಜೆಟ್ ಸಿದ್ಧಪಡಿಸಲಾಗುತ್ತದೆ. ಹೀಗೆ ಹಲವು ದಿನಗಳಿಂದ ಬಜೆಟ್ ಸಿದ್ಧತೆಗೆ ಶ್ರಮ ವಹಿಸಿದ ಸಿಬ್ಬಂದಿಗೆ ಕೇಂದ್ರ ಹಣಕಾಸು ಸಚಿವೆ ಸಿಹಿ ತಿನಿಸಿ ಧನ್ಯವಾದ ಹೇಳುವ ಕಾರ್ಯವೇ ಹಲ್ವಾ ಕಾರ್ಯಕ್ರಮ.

ಇದನ್ನೂ ಓದಿ: ಬಜೆಟ್ 2025: ಕೃಷಿ ವಲಯಕ್ಕೆ ಶೇ. 15ರಷ್ಟು ಹೆಚ್ಚು ಫಂಡಿಂಗ್ ಸಾಧ್ಯತೆ; ವಿವಿಧ ಕಾರ್ಯಗಳಿಗೆ ಹೆಚ್ಚು ಹಣ

ಮಹತ್ವದ ಸಂಗತಿ ಎಂದರೆ, ಬಜೆಟ್ ಸಿದ್ಧತೆಯಲ್ಲಿ ತೊಡಗಿರುವ ಅಧಿಕಾರಿಗಳು ಇತ್ಯಾದಿ ಸಿಬ್ಬಂದಿಯು, ಹಲ್ವ ಕಾರ್ಯಕ್ರಮದಲ ಬಳಿಕ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ. ಬಜೆಟ್ ಮಂಡನೆ ಆಗುವವರೆಗೂ ಅವರು ಅಕ್ಷರಶಃ ಲಾಕ್ ಆಗಿರುತ್ತಾರೆ. ಸಂಸತ್ತಿನ ನಾರ್ತ್ ಬ್ಲಾಕ್​​ನಲ್ಲಿ ಇರುವ ಅವರು ಮೊಬೈಲ್ ಫೋನ್​ಗಳನ್ನೂ ಬಳಸುವಂತಿಲ್ಲ. ಬಾಹ್ಯ ಪ್ರಪಂಚಕ್ಕೆ ಅವರಿಗೆ ಯಾವುದೇ ಸಂವಹನ ಮಾರ್ಗ ಇರುವುದಿಲ್ಲ. ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡನೆ ಆಗುವ ಮುನ್ನ ಬಜೆಟ್​ನ ಯಾವುದೇ ಮಾಹಿತಿ ಸೋರಿಕೆ ಆಗಬಾರದು ಎನ್ನುವ ಉದ್ದೇಶದಿಂದ ಹೀಗೆ ಲಾಕಿನ್ ಪೀರಿಯಡ್ ಇರುತ್ತದೆ.

ಬಜೆಟ್ ದಿನವೂ ಕೂಡ ಸಂಸತ್ತಿನಲ್ಲಿ ಬಜೆಟ್ ಓದುವಾಗಲಷ್ಟೇ ಸಂಸದರಿಗೆ ಬಜೆಟ್ ಪ್ರತಿ ನೀಡಲಾಗಿರುತ್ತದೆ. ಬಜೆಟ್ ಮಂಡನೆ ಮುಗಿಯುವ ಹಂತದಲ್ಲಿರುವಾಗ ಆನ್​ಲೈನ್​ನಲ್ಲಿ ಬಜೆಟ್​ನ ಇ-ಪ್ರತಿಯನ್ನು ಅಪ್​ಲೋಡ್ ಮಾಡಲಾಗುತ್ತದೆ. ಆ ಮಟ್ಟಿಗೆ ಒಂದಷ್ಟು ಗೌಪ್ಯತೆಯನ್ನು ಬಜೆಟ್ ವಿಚಾರದಲ್ಲಿ ಕಾಯ್ದುಕೊಳ್ಳಲಾಗುತ್ತದೆ.

ಇದನ್ನೂ ಓದಿ: French Fry: ಆವತ್ತು ಆಮದು , ಇವತ್ತು ರಫ್ತು; ಜಾಗತಿಕ ಫ್ರೆಂಚ್ ಫ್ರೈ ಮಾರುಕಟ್ಟೆಯಲ್ಲಿ ಭಾರತದ ಅಧಿಪತ್ಯ

ಹಲ್ವಾ ಕಾರ್ಯಕ್ರಮದ ಬಳಿಕ ಬಜೆಟ್ ಪ್ರತಿಗಳ ಮುದ್ರಣ ಕೆಲಸ ನಡೆಯುತ್ತದೆ. ಹಣಕಾಸು ಸಚಿವೆ ಪರಾಮರ್ಶಿಸಿದ ಬಜೆಟ್ ಪ್ರತಿಯನ್ನು ಪ್ರಧಾನಿಗಳ ಅನುಮೋದನೆಗೆ ಕಳುಹಿಸಲಾಗುತ್ತದೆ. ಅದಾದ ಬಳಿಕವಷ್ಟೇ ಮುದ್ರಣ ನಡೆಯುತ್ತದೆ. ಗುಪ್ತಚರ ಅಧಿಕಾರಿಗಳು ಬಜೆಟ್ ಮುದ್ರಿಸುತ್ತಿರುವ ಸ್ಥಳಕ್ಕೆ ಗೌಪ್ಯವಾಗಿ ಹೋಗಿ ಪರಿಶೀಲನೆ ನಡೆಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ