Money9 Summit: 2047ರೊಳಗೆ ಮಹಾರಾಷ್ಟ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಮಹಾರಾಷ್ಟ್ರ ಸಿಎಂ ಫಡ್ನವಿಸ್

Maharashtra CM Devendra Fadnavis video message for Money9 Financial Freedom Summit 2026: ಮನಿ9 ಫೈನಾನ್ಶಿಯಲ್ ಫ್ರೀಡಂ ಶೃಂಗಸಭೆ 2026 ರಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ಎತ್ತಿ ತೋರಿಸಿದರು. 2047 ರ ವೇಳೆಗೆ ಮಹಾರಾಷ್ಟ್ರ $5 ಟ್ರಿಲಿಯನ್ ಆರ್ಥಿಕತೆಯಾಗುವತ್ತ ಸಾಗುತ್ತಿದೆ ಮತ್ತು ಮಹಾರಾಷ್ಟ್ರಕ್ಕಾಗಿ ಮೂರು ಹಂತದ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.

Money9 Summit: 2047ರೊಳಗೆ ಮಹಾರಾಷ್ಟ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಮಹಾರಾಷ್ಟ್ರ ಸಿಎಂ ಫಡ್ನವಿಸ್
ದೇವೇಂದ್ರ ಫಡಣವಿಸ್

Updated on: Mar 12, 2026 | 10:50 PM

Money9 Financial Freedom Summit 2026: Money9 ನ ನಾಲ್ಕನೇ ಆವೃತ್ತಿಯ ಹಣಕಾಸು ಸ್ವಾತಂತ್ರ್ಯ ಶೃಂಗಸಭೆ (ಫೈನಾನ್ಷಿಯಲ್ ಫ್ರೀಡಂ ಸಮಿಟ್ 2026) ಪ್ರಾರಂಭವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಈ ಶೃಂಗಸಭೆಯಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡರು. TV9 ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ (Barun Das) ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ವೀಡಿಯೊ ಸಂದೇಶದ ಮೂಲಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಹಾರಾಷ್ಟ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದ ಫಡಣವಿಸ್

ಮಹಾರಾಷ್ಟ್ರ ಇಂದು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಮಹಾ ಸಿಎಂ ಫಡ್ನವೀಸ್ ಹೇಳಿದರು. ಮಹಾರಾಷ್ಟ್ರದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಇಂದು, ಭಾರತೀಯ ರಾಜ್ಯಗಳಲ್ಲೇ ಮಹಾರಾಷ್ಟ್ರ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಮಹಾರಾಷ್ಟ್ರವನ್ನು ಒಂದು ದೇಶವಾಗಿ ಪರಿಗಣಿಸಿ ನೋಡಿದರೂ, ವಿಶ್ವದ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದೆನಿಸಬಲ್ಲುದು ಎಂದು ದೇವೇಂದ್ರ ಫಡ್ಣವಿಸ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಎಲ್ಲಾ ಕ್ಷೇತ್ರಗಳಲ್ಲಿ ಮಹಾರಾಷ್ಟ್ರದ್ದು ಮೊದಲ ಸ್ಥಾನ

ವಿದೇಶಿ ಹೂಡಿಕೆಯಾಗಿರಲಿ, ಅತಿ ಹೆಚ್ಚು ಮೂಲಸೌಕರ್ಯ ಯೋಜನೆಗಳಿರಲಿ, ಉದ್ಯೋಗ ಸೃಷ್ಟಿಯಾಗಿರಲಿ ಅಥವಾ ಹೆಚ್ಚಿನ ಸ್ಟಾರ್ಟಪ್‌ಗಳಿರಲಿ, ಮಹಾರಾಷ್ಟ್ರವು ಎಲ್ಲಾ ವಲಯಗಳಲ್ಲಿಯೂ ಪ್ರಥಮ ಸ್ಥಾನದಲ್ಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳು ತಿಳಿಸಿದರು. ಒಂದು ಕಾಲದಲ್ಲಿ ಮುಂಬೈ ಮತ್ತು ಪುಣೆಗೆ ಸೀಮಿತವಾಗಿದ್ದ ಅಭಿವೃದ್ಧಿಯು ಈಗ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹೊಸ ಹೂಡಿಕೆ ಅವಕಾಶಗಳು ತೆರೆಯುತ್ತಿವೆ. ಅದು ಗಡ್ಚಿರೋಲಿಯಾಗಲಿ ಅಥವಾ ನಂದುರ್ಬಾರ್, ಜಲಗಾಂವ್ ಅಥವಾ ನಾಂದೇಡ್ ಆಗಿರಲಿ, ಹಿಂದೆ ಹೂಡಿಕೆಯ ಕೊರತೆಯಿದ್ದ ಪ್ರತಿಯೊಂದು ಜಿಲ್ಲೆಯೂ ಈಗ ಹೂಡಿಕೆಯಲ್ಲಿ ಪೈಪೋಟಿ ನಡೆಸುತ್ತಿವೆ ಎಂದರು.

ಮೂರು ಹಂತಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿಗೆ ಪರಿಕಲ್ಪನೆ

ಒಂದು ದೊಡ್ಡ ಸಾಹಸಗಾಥೆಯೇ ನಡೆಯುತ್ತಿದೆ. 2047 ರ ವೇಳೆಗೆ $5 ಟ್ರಿಲಿಯನ್ ಆರ್ಥಿಕತೆಯ ಕನಸಿನೊಂದಿಗೆ ನಾವು ಮುಂದುವರಿಯಲು ಪ್ರಾರಂಭಿಸಿದ್ದೇವೆ. ಇದನ್ನು ನನಸು ಮಾಡುವುದು ಅಸಾಧ್ಯವೇನಲ್ಲ ಎಂದ ದೇವೇಂದ್ರ ಫಡಣವಿಸ್ ಅವರು, ಅಭಿವೃದ್ಧಿ ಹೊಂದಿದ ಮಹಾರಾಷ್ಟ್ರಕ್ಕಾಗಿ ಮೂರು ಹಂತದ ದೃಷ್ಟಿಕೋನವನ್ನು ರೂಪಿಸಿರುವ ಸಂಗತಿಯನ್ನು ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 12 March 26

Follow Us