Moonlighting: ಒಂದೇ ಬಾರಿಗೆ ಎರಡು ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ, ತನ್ನ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ
ಒಂದೇ ಬಾರಿಗೆ ಎರಡು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ಒಂದೇ ಬಾರಿಗೆ ಎರಡು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ಮೂನ್ಲೈಟಿಂಗ್ ಎನ್ನುತ್ತಾರೆ.
ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡು ವರ್ಷಗಟ್ಟಲೆ ನಿರುದ್ಯೋಗದ ಸಮಸ್ಯೆ ಎದುರಿಸಿದ್ದರು. ಇನ್ನೂ ಕೆಲವು ಕಂಪನಿಗಳಲ್ಲಿ ಸಂಬಳದ ಕಡಿತ ಮಾಡಲಾಗಿತ್ತು. ಆಗ ಕೆಲವು ಉದ್ಯೋಗಿಗಳು ಪಾರ್ಟ್ ಟೈಂ ಉದ್ಯೋಗಕ್ಕಿಳಿದಿದ್ದರು.
ಈ ಕುರಿತು ಇನ್ಫೋಸಿಸ್ ಕಂಪನಿಯು ಕಠಿಣ ನಿರ್ಧಾರ ತೆಗೆದುಕೊಂಡಿದೆ, ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಒಂದೊಮ್ಮೆ ಇಂತಹ ವಿಚಾರ ಬೆಳಕಿಗೆ ಬಂದರೆ ಕೂಡಲೇ ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಮೆರಿಕದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ತಮ್ಮ ನಿಯಮಿತವಾದ ಉದ್ಯೋಗದ ಜತೆಗೆ ಹೆಚ್ಚುವರಿಯಾಗಿ ಎರಡನೇ ಉದ್ಯೋಗವನ್ನು ಆಶ್ರಯಿಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಉದ್ಯೋಗದ ಒಪ್ಪಂದದಲ್ಲಿ ನೌಕರನು ಒಂದೇ ಉದ್ಯೋಗ ಮಾಡಬೇಕು ಎನ್ನುವ ನಿಯಮಿದ್ದರೆ , ಆಗ ನೌಕರ ಇತರೆ ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಒಂದೊಮ್ಮೆ ಆ ನಿಯಮ ಉಲ್ಲಂಘಿಸಿ ಕೆಲಸ ಮಾಡಿದರೆ ಅದನ್ನು ವಂಚನೆ ಎಂದು ಕರೆಯಲಾಗುತ್ತದೆ.
ಮೂನ್ಲೈಟಿಂಗ್ನಿಂದ ಉದ್ಯೋಗಿಯು ಒಂದು ಉದ್ಯೋಗದ ಕಡೆಗೆ ಹೆಚ್ಚಿನ ಗಮನಕೊಡಲು ಸಾಧ್ಯವಾಗುವುದಿಲ್ಲ ಇದು ಮೂಲ ಕಂಪನಿಯ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಪ್ರಸ್ತುತ ವಾದವಾಗಿದೆ.
Published On - 12:26 pm, Tue, 13 September 22