My Home Group: ಸರಬರಾಜು ಸೇವೆ ತ್ವರಿತಗೊಳಿಸಲು 250 ಭಾರೀ ವಾಹನಗಳನ್ನು ಖರೀದಿಸಿದ ಮೈ ಹೋಂ ಇಂಡಸ್ಟ್ರೀಸ್
ತೆಲಂಗಾಣದ ಸೂರ್ಯಪೇಟ್ನಲ್ಲಿರುವ ಮೈ ಇಂಡಸ್ಟ್ರೀಸ್ ತನ್ನ ಹೊಸ ಫ್ಯಾಕ್ಟರಿಯ ಉತ್ಪನ್ನಗಳ ಸರಬರಾಜಿಗೆ 250 ದೊಡ್ಡ ಟ್ರಕ್ಗಳನ್ನು ಖರೀದಿಸಿದೆ. ಇದರಲ್ಲಿ 30ರಿಂದ 41 ಎಂಟಿ ತೂಕ ಸಾಮರ್ಥ್ಯದ ವಾಹನಗಳು ಸೇರಿವೆ. ಗ್ರಾಹಕರಿಗೆ ತ್ವರಿತ ಸರಬರಾಜು ಸೇವೆ ನೀಡಲು ಈ ವಾಹನಗಳು ಸಹಾಯವಾಗಲಿವೆ. ಮೈ ಹೋಂ ಗ್ರೂಪ್ ಸಂಸ್ಥೆ ವಿವಿಧ ವಲಯಗಳಲ್ಲಿ ವ್ಯವಹಾರ ಹೊಂದಿದ್ದು, ದೇಶದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದೆನಿಸಿದೆ.

ಹೈದರಾಬಾದ್, ಫೆಬ್ರುವರಿ 9: ಮೈ ಹೋಂ ಇಂಡಸ್ಟ್ರೀಸ್ ಸಂಸ್ಥೆ ತನ್ನ ಉತ್ಪನ್ನಗಳ ಸರಬರಾಜು ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಬಲಗೊಳಿಸಲು ಭಾರೀ ಸಾಮರ್ಥ್ಯದ ವಾಹನಗಳನ್ನು ಖರೀದಿಸಿದೆ. ಒಟ್ಟು 250 ಹೆವಿ ವೆಹಿಕಲ್ಗಳನ್ನು ಸೂರ್ಯಪೇಟ್ನಲ್ಲಿರುವ ಅದರ ಫ್ಯಾಕ್ಟರಿಗೆ ಜೋಡಿಸಿಕೊಂಡಿದೆ. ಇದರಲ್ಲಿ 30 ಎಂಟಿ ಸಾಮರ್ಥ್ಯದ 100 ಟ್ರಕ್ಗಳು, 35 ಎಂಟಿ ಸಾಮರ್ಥ್ಯದ 100 ಟ್ರಕ್ಗಳು, ಹಾಗೂ 41 ಎಂಟಿ ಸಾಮರ್ಥ್ಯದ 50 ಟ್ರೇಲರ್ಗಳನ್ನು ತರಿಸಿದೆ.
ಈ ವಾಹನಗಳ ನಿಯೋಜನೆಯಿಂದ ಸಂಸ್ಥೆಯ ವ್ಯಾವಹಾರಿಕ ಕಾರ್ಯಾಚರಣೆ ಮತ್ತಷ್ಟು ಸಮರ್ಪಕವಾಗಲಿದೆ. ಗ್ರಾಹಕರಿಗೆ ಹೆಚ್ಚು ತ್ವರಿತ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಮೈ ಹೋಂ ಗ್ರೂಪ್ ಹೇಳಿಕೆ ನೀಡಿದೆ. ದೇಶದ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಲಾಜಿಸ್ಟಿಕ್ಸ್ ಕೂಡ ಪ್ರಮುಖ ಭಾಗವಾಗಿರುವುದರಿಂದ, ಇದರಲ್ಲಿ ಮೈ ಹೋಂ ಇಂಡಸ್ಟ್ರೀಸ್ನ ಈ ಉಪಕ್ರಮದ ಕೊಡುಗೆಯೂ ಸೇರುತ್ತದೆ ಎಂದು ಸಂಸ್ಥೆ ಹೇಳಿದೆ.
ಹೈದರಾಬಾದ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಮೈ ಹೋಂ ಗ್ರೂಪ್ ಬಹಳ ವಿಸ್ತೃತ ಬಿಸಿನೆಸ್ಗಳನ್ನು ಹೊಂದಿದೆ. ಸಿಮೆಂಟ್, ರಿಯಲ್ ಎಸ್ಟೇಟ್, ಕನ್ಸ್ಟ್ರಕ್ಷನ್, ವಿದ್ಯುತ್, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅದರ ವ್ಯವಹಾರಗಳಿವೆ. ಮೂರು ದಶಕಗಳಿಂದ ನಿರ್ಮಿತವಾದ ಈ ಗ್ರೂಪ್ನ ಬಿಸಿನೆಸ್ಗಳಿಂದ 10,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ: ಮೈಸೂರಿನಲ್ಲಿ ಇನ್ಫೋಸಿಸ್ನಿಂದ ನೂರಾರು ಉದ್ಯೋಗಿಗಳ ಲೇ ಆಫ್; ಎರಡು ವರ್ಷ ಸತಾಯಿಸಿ ನೇಮಕಗೊಂಡಿದ್ದ ಫ್ರೆಷರ್ಸ್ಗೆ ಶಾಕ್
ಡಾ. ರಾಮೇಶ್ವರ್ ರಾವ್ ಜುಪಲ್ಲಿ ಅವರಿಂದ ಸ್ಥಾಪಿತವಾದ ಮೈ ಹೋಂ ಗ್ರೂಪ್ನಲ್ಲಿ ಮೈ ಹೋಂ ಇಂಡಸ್ಟ್ರೀಸ್ ಕೂಡ ಸೇರಿದೆ. ಮಹಾ ಸಿಮೆಂಟ್ನ ಹೊಸ ಫ್ಯಾಕ್ಟರಿ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೆಲ್ಲಚೆರುವಿನ ಶ್ರೀನಗರದಲ್ಲಿ ಇದೆ. ಇಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಎರಡು ಎಂಟಿಪಿಎಗೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ