Maha Cement: ನಿರ್ಮಾಣ ಕ್ಷೇತ್ರದಲ್ಲಿ ಮಹಾರಾಜನಾದ ಮಹಾ ಸಿಮೆಂಟ್..!
ತನ್ನ ಗ್ರಾಹಕರ ಅನುಕೂಲಕ್ಕಾಗಿ ಮಹಾ ಸಿಮೆಂಟ್ ಕಂಪನಿಯು 250 ಸಿಮೆಂಟ್ ಬಲ್ಕ್ ಟ್ಯಾಂಕರ್‌ಗಳನ್ನು ಖರೀದಿಸಿದ್ದು, ಕಂಪನಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಿಜಯವರ್ಧನ್ ರಾವ್ ಅವರು ಟ್ಯಾಂಕರ್‌ಗಳಿಗೆ ಪೂಜೆ ಸಲ್ಲಿಸಿ ಗ್ರಾಹಕರ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಹೀಗಾಗಿ ಇನ್ಮುಂದೆ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಹಾಗೂ ಸ್ಥಳಕ್ಕೆ ಸಿಮೆಂಟ್ ಪೂರೈಕೆ ಮಾಡಲು ಯಾವುದೇ ಸಮಸ್ಯೆ ಉದ್ಭವಿಸುವ ಮಾತೇ ಇಲ್ಲ.

ಮಹಾ ಸಿಮೆಂಟ್ ಹೆಚ್ಚಿನ ಶಕ್ತಿ, ಉತ್ತಮ ಗುಣಮಟ್ಟದ ಸಿಮೆಂಟ್ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದು OPC 53ದರ್ಜೆಯ ಮಹಾ ಸಿಮೆಂಟ್. ಆಧುನಿಕ ನಿರ್ಮಾಣ ಪದ್ಧತಿಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಗೊಳಿಸಲಾಗಿದೆ. ಎತ್ತರದ ಕಟ್ಟಡಗಳು, ಸೇತುವೆಗಳು, ಫ್ಲೈಓವರ್‌ಗಳು, ಕಾಂಕ್ರೀಟ್ ಅನ್ವಯಿಕೆಗಳು, ಸಾಗರದಡಿ ಕಾಂಕ್ರೀಟ್ ನಿರ್ಮಾಣ.. ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚೆಚ್ಚು ಬಳಕೆಯಾಗ್ತಿರುವುದೇ ಮಹಾ ಸಿಮೆಂಟ್. ಹೆಚ್ಚಿನ ಶಕ್ತಿ, ಹೆಚ್ಚಿನ ಕಾರ್ಯಕ್ಷಮತೆಯ ಕಾಂಕ್ರೀಟ್ ವಿನ್ಯಾಸಗೊಳಿಸಲು ಮಹಾ ಸಿಮೆಂಟ್ ಅತ್ಯಂತ ಸೂಕ್ತ ಎಂದು ನಿರ್ಮಾಣ ಕ್ಷೇತ್ರದ ದಿಗ್ಗಜರೇ ಒಪ್ಪಿಕೊಂಡಿದ್ದಾರೆ.
ಮೈ ಹೋಮ್ ಇಂಡಸ್ಟ್ರೀಸ್ ಗ್ರಾಹಕರಿಗೆ ಮತ್ತೊಂದು ಸದವಕಾಶ
ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮೆಳ್ಳಚೆರುವು ಮಂಡಲದಲ್ಲಿ ನಿನ್ನೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯಾಕಂದ್ರೆ ಗ್ರಾಹಕರ ಅನುಕೂಲಕ್ಕಾಗಿ ಮೈಹೋಮ್ ಸಿಮೆಂಟ್ ಕಂಪನಿ 250 ಸಿಮೆಂಟ್ ಬಲ್ಕ್ ಟ್ಯಾಂಕರ್‌ಗಳನ್ನ ಖರೀದಿಸಿದೆ. ನಿನ್ನೆ ಎಲ್ಲ ಸಿಮೆಂಟ್ ಬಲ್ಕ್ ಟ್ಯಾಂಕರ್‌ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೇವಾ ಮಟ್ಟ ಉತ್ತಮಗೊಳಿಸಲು ಮತ್ತು ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಾನ ಮತ್ತಷ್ಟು ಬಲಪಡಿಸಲು 30 MT ಸಾಮರ್ಥ್ಯದ 14 ವೀಲ್‌ಗಳ 100 ಟ್ರಕ್, ಬೃಹತ್ 35 MT ಸಾಮರ್ಥ್ಯದ 16 ಚಕ್ರಗಳ 100 ಟ್ರಕ್ ಹಾಗೂ 41 MT ಸಾಮರ್ಥ್ಯದ 50 ಟ್ರೇಲರ್‌ಗಳಿಗೆ ಹಸಿರು ನಿಶಾನೆ ತೋರಿಸಲಾಯ್ತು.
ಇದನ್ನೂ ಓದಿ: My Home Group: ಸರಬರಾಜು ಸೇವೆ ತ್ವರಿತಗೊಳಿಸಲು 250 ಭಾರೀ ವಾಹನಗಳನ್ನು ಖರೀದಿಸಿದ ಮೈ ಹೋಂ ಇಂಡಸ್ಟ್ರೀಸ್
ಮೈಹೋಮ್ ಸಿಮೆಂಟ್ ಕಂಪನಿಯ ಹಿರಿಯ ಮಾರ್ಕೆಟಿಂಗ್ ಮುಖ್ಯಸ್ಥ ವಿಜಯವರ್ಧನ್ ರಾವ್, ಈ ಬೃಹತ್ ಟ್ಯಾಂಕರ್‌ಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮೈಹೋಮ್ ಇಂಡಸ್ಟ್ರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ದೇಶದ ನಿರ್ಮಾಣ ಕ್ಷೇತ್ರಕ್ಕೆ ಸಿಮೆಂಟ್ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ಸಿಮೆಂಟ್ ಪೂರೈಸಲು ಮಹಾ ಸಿಮೆಂಟ್ ಸೇವೆ ವಿಸ್ತರಿಸಲು ಸಾರಿಗೆ ವ್ಯವಸ್ಥೆ ಬಲಪಡಿಸುತ್ತಿದೆ ಎಂದು ವಿಜಯವರ್ಧನ್ ರಾವ್ ಹೇಳಿದರು.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನೀರಾವರಿ ಯೋಜನೆಗಳು, ರಸ್ತೆಗಳ ನಿರ್ಮಾಣ, ರೇಡಿಯಲ್ ರಸ್ತೆಗಳು ಮತ್ತು ಮೆಟ್ರೋದಂತಹ ಬೃಹತ್ ಯೋಜನೆಗಳು ಬರಲಿವೆ. ಕಂಪನಿಯು ಅಗತ್ಯವಿರುವ ಸಿಮೆಂಟ್ ಉತ್ಪಾದನೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ 20 ಮಿಲಿಯನ್ ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆ ತಲುಪುತ್ತೇವೆ ಅಂತಿದ್ದಾರೆ ವಿಜಯವರ್ಧನ್ ರಾವ್. ಸಿಮೆಂಟ್ ತಯಾರಿಕಾ ಕ್ಷೇತ್ರದಲ್ಲಿ ರಾಜನಾಗಿ ಹೊರಹೊಮ್ಮುತ್ತಿರುವ ಮಹಾ ಸಿಮೆಂಟ್ ಗ್ರಾಹಕ ಸೇವೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮಹಾ ಸಿಮೆಂಟ್ ಉತ್ತಮ ಸೇವೆಗಳ ಜತೆಗೆ ತನ್ನ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಲು ಹೊಸ ಯೋಜನೆಗಳೊಂದಿಗೆ ಬಂದಿದೆ.
ಮೈ ಹೋಮ್ ಇಂಡಸ್ಟ್ರೀಸ್ ಗ್ರಾಹಕರಿಗೆ ವಿಶೇಷವಾಗಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಮತ್ತು ಸಕಾಲದಲ್ಲಿ ಸಿಮೆಂಟ್ ಬೃಹತ್ ಪ್ರಮಾಣದಲ್ಲಿ ಪೂರೈಸಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮಹಾ ಸಿಮೆಂಟ್ ಮೈಹೋಮ್ ಇಂಡಸ್ಟ್ರೀಸ್, ಹಲವು ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ.
24 ಗಂಟೆ ಸಿಮೆಂಟ್ ಗುಣಮಟ್ಟ ಪರೀಕ್ಷಿಸುವ ಜರ್ಮನ್ ಟೆಕ್ನಾಲಜಿ
ಮೈಹೋಮ್ ಸಿಮೆಂಟ್ ಇಂಡಸ್ಟ್ರೀಸ್ ದೇಶದ ಕೆಲವೇ ಕೆಲವು ಕಂಪನಿಗಳು ಹೊಂದಿರುವ ತಂತ್ರಜ್ಞಾನವನ್ನ ಹೊಂದಿದೆ. ಸಿಮೆಂಟ್ ತಯಾರಿಕೆ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗಲ್ಲ. ಇಲ್ಲಿ ಪ್ರತಿ ಹಂತದಲ್ಲೂ ಜರ್ಮನ್ ತಂತ್ರಜ್ಞಾನದ ರೋಬೊಟ್‌ಗಳಿಂದ ಸಿಮೆಂಟ್ ತಯಾರಿಕಾ ಗುಣಮಟ್ಟವನ್ನ ಮೇಲುಸ್ತುವಾರಿ ಮಾಡಲಾಗುತ್ತೆ. ಮಹಾ ಸಿಮೆಂಟ್ ತೆಲುಗು ರಾಜ್ಯಗಳಲ್ಲಿ ಹೆಸರುವಾಸಿಯಾಗಿದೆ. ಮೈ ಹೋಮ್ ಗ್ರೂಪ್ ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ ಮತ್ತು ಸಿಮೆಂಟ್, ರಿಯಲ್ ಎಸ್ಟೇಟ್, ನಿರ್ಮಾಣ, ವಿದ್ಯುತ್, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತನ್ನದೇಯಾದ ಚಾಪು ಮೂಡಿಸಿದೆ.
3 ದಶಕದ ಸಾಟಿ ಇರದ ಸೇವೆ.. ಗ್ರಾಹಕರ ವಿಶ್ವಾಸ ಗಳಿಸಲು ಯಶಸ್ವಿ
ಮೈಹೋಮ್ ಗ್ರುಪ್ 3 ದಶಕಗಳಿಗೂ ಹೆಚ್ಚು ಕಾಲ ಅಮೂಲ್ಯ ಸೇವೆ ನೀಡಿ ಜನರ ವಿಶ್ವಾಸ ಗಳಿಸಿದೆ. ದೇಶದಲ್ಲಿ ಲಾಜಿಸ್ಟಿಕ್ಸ್ ವಲಯವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಮೈಹೋಮ್ ಇಂಡಸ್ಟ್ರೀಸ್ ನಡೆ ಮೂಲಸೌಕರ್ಯಗಳ ವಿನ್ಯಾಸದಲ್ಲಿ ನಿರ್ಣಾಯಕವಾಗುತ್ತೆ. ಉತ್ಪನ್ನಗಳು ಮತ್ತು ಸೇವೆಗಳಲ್ಲಿನ ಕಟ್ಟುನಿಟ್ಟಾದ ಗುಣಮಟ್ಟಕ್ಕೆ ಪ್ರಾಧಾನ್ಯತೆ ಕೊಡುವ ಕಂಪನಿಯು, ಕಾರ್ಪೊರೇಟ್ ಆಡಳಿತ ಮತ್ತು ವ್ಯಾಪಾರ ನೀತಿಗಳ ಅತ್ಯುನ್ನತ ಗುಣಮಟ್ಟ ದೃಢೀಕರಿಸುತ್ತೆ. ಲೋಕೋಪಕಾರಿ ಡಾ. ರಾಮೇಶ್ವರ ರಾವ್ ಜುಪಲ್ಲಿ ಸ್ಥಾಪಿಸಿದ ಕಂಪನಿಯು ಪಾರದರ್ಶಕತೆ, ಮೌಲ್ಯಗಳು ಮತ್ತು ನೈತಿಕ ಸಂಸ್ಕೃತಿಗಾಗಿ ಹೆಚ್ಚು ಗೌರವಿಸಲಾಗುತ್ತದೆ. ಮೈಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜೆ.ರಂಜಿತ್ ರಾವ್ ನೇತೃತ್ವದಲ್ಲಿ ಇದು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮೈ ಹೋಮ್ ಇಂಡಸ್ಟ್ರೀಸ್ ಗ್ರೂಪ್‌ನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಸಾವಿರ ಮಂದಿ ಉದ್ಯೋಗಾವಕಾಶ ಪಡೆದಿದ್ದು, ಮೈ ಹೋಮ್ ಗ್ರೂಪ್ ರಾಷ್ಟ್ರ ಮಟ್ಟದಲ್ಲಿ ವಿವಿಧ ಪ್ರದೇಶಗಳಲ್ಲಿ ಗ್ರಾಹಕರನ್ನು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




