AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MAGA=VB; 1+1=11; ಟ್ರಂಪ್-ಮೋದಿ ಭೇಟಿಯ ಹೈಲೈಟ್ಸ್; ಅಮೆರಿಕದ ಟ್ಯಾರಿಫ್​ಗಳಿಂದ ಭಾರತಕ್ಕೇನೂ ಹಿನ್ನಡೆ ಇಲ್ಲವಾ?

Donald Trump and Narendra Modi meeting: ಟ್ಯಾರಿಪ್ ಆಟಾಟೋಪಗಳ ಮಧ್ಯೆ ಡೊನಾಲ್ಡ್ ಟ್ರಂಪ್ ಅವರನ್ನು ಭಾರತದ ಪ್ರಧಾನಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳ ನಡುವೆ ವ್ಯಾಪಾರ, ಮಿಲಿಟರಿ, ನಾಗರಿಕ ಕ್ಷೇತ್ರಗಳಲ್ಲಿ ಸಹಕಾರ ಸಂಬಂಧಗಳನ್ನು ಬಲಪಡಿಸಲು ಇಬ್ಬರೂ ದೃಢ ಹೆಜ್ಜೆ ಇಟ್ಟಿದ್ದಾರೆ. ಭಾರತಕ್ಕೆ ಟ್ಯಾರಿಫ್ ನೀತಿಯಲ್ಲಿ ವಿನಾಯಿತಿ ನೀಡುವುದಿಲ್ಲ ಎನ್ನುವ ಸಂದೇಶವನ್ನೂ ಟ್ರಂಪ್ ಈ ಸಂದರ್ಭದಲ್ಲಿ ಖಚಿತಪಡಿಸಿದ್ದಾರೆ.

MAGA=VB; 1+1=11; ಟ್ರಂಪ್-ಮೋದಿ ಭೇಟಿಯ ಹೈಲೈಟ್ಸ್; ಅಮೆರಿಕದ ಟ್ಯಾರಿಫ್​ಗಳಿಂದ ಭಾರತಕ್ಕೇನೂ ಹಿನ್ನಡೆ ಇಲ್ಲವಾ?
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2025 | 11:16 AM

Share

ವಾಷಿಂಗ್ಟನ್, ಫೆಬ್ರುವರಿ 14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನರೇಂದ್ರ ಮೋದಿ ಇಂದು ಶುಕ್ರವಾರ ಶ್ವೇತಭವನದಲ್ಲಿ ಭೇಟಿಯಾಗಿದ್ದಾರೆ. ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಇಬ್ಬರೂ ಮಾತುಕತೆ ನಡೆಸಿದ್ದಾರೆ. ಸಾಕಷ್ಟು ಫಲಪ್ರದವೂ ಆಗಿದೆ. ಎರಡು ದೇಶಗಳ ಮಧ್ಯೆ ಕೆಲ ಮಹತ್ವದ ಒಪ್ಪಂದಗಳು ಆಗಿವೆ. ಎರಡೂ ಕಡೆಯಿಂದ ಕೊಡು ಕೊಳ್ಳುವಿಕೆಗಳು ಆಗಿವೆ. ಎಲ್ಲದರ ಮಧ್ಯೆ ಈ ಇಬ್ಬರು ಮುಖಂಡರ ವೈಯಕ್ತಿಕ ಸ್ನೇಹ ತುಸು ಹೆಚ್ಚೇ ಎದ್ದುಕಂಡಿದ್ದು ವಿಶೇಷ. ಮೋದಿ ಅವರನ್ನು ತನಗಿಂತಲೂ ಕಠಿಣವಾದ ಸಂಧಾನಕಾರ ಎಂದು ಟ್ರಂಪ್ ಮೆಚ್ಚಿಕೊಂಡಿದ್ದಾರೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ತಯಾವುರ್ ರಾಣಾ ಅವರನ್ನು ಹಸ್ತಾಂತರಿಸಲು ಅಮೆರಿಕ ನಿರ್ಧರಿಸಿದೆ. ಇದು ಟ್ರಂಪ್ ಮೋದಿಗೆ ಕೊಟ್ಟಿರುವ ಸ್ಪೆಷಲ್ ಗಿಫ್ಟ್ ಎನಿಸಬಹುದು.

ಭಾರತಕ್ಕೆ ಟ್ಯಾರಿಫ್ ವಿನಾಯಿತಿ ಕೊಡುತ್ತಾರಾ ಟ್ರಂಪ್..?

ಡೊನಾಲ್ಡ್ ಟ್ರಂಪ್ ಅವರ ಮುಳ್ಳಿಗೆ ಮುಳ್ಳಿ ಎನ್ನುವ ನೀತಿ ಅನುಸಾರ ಟ್ಯಾರಿಫ್ (ಆಮದು ಸುಂಕ) ನೀತಿ ಅನುಸರಿಸಲು ನಿರ್ಧರಿಸಿದ್ದಾರೆ. ಯಾವ ದೇಶ ಎಷ್ಟು ಟ್ಯಾರಿಫ್ ವಿಧಿಸುತ್ತದೋ ಅಷ್ಟೇ ಟ್ಯಾರಿಫ್ ಆ ದೇಶಕ್ಕೂ ಹಾಕುತ್ತೇವೆ ಎನ್ನುವುದು ಇದರ ಮುಖ್ಯಾಂಶ. ಚೀನಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಟ್ರಂಪ್ ಈ ಟ್ಯಾರಿಫ್ ನೀತಿ ಪ್ರಕಟಿಸಿದ್ದಾರೆ. ಭಾರತದಂತಹ ಕೆಲ ದೇಶಗಳಿಗೆ ವಿನಾಯಿತಿ ಕೊಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನೇ ಇದ್ದರೂ ಮೋದಿ ಭೇಟಿಗೆ ಮುನ್ನವೇ ಅಮೆರಿಕವು ಹೊಸ ಟ್ಯಾರಿಫ್ ನೀತಿಗೆ ಸಹಿ ಹಾಕಿತು.

ಮೋದಿ ಜೊತೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗಲೂ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಟ್ಯಾರಿಫ್ ನೀತಿಯನ್ನು ಖಚಿತಪಡಿಸಿದ್ದಾರೆ. ಭಾರತವೂ ಒಳಗೊಂಡಂತೆ ಎಲ್ಲಾ ದೇಶಗಳಿಗೂ ಪ್ರತಿಸುಂಕ (reciprocal tax) ಹಾಕುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ ವಿಚಾರವನ್ನು ಮೋದಿಗೆ ಬಿಟ್ಟಿದ್ದೀವಿ, ಅವರೇ ನೋಡಿಕೊಳ್ತಾರೆ ಎಂದ ಟ್ರಂಪ್

ಈ ಮಧ್ಯೆ ಟ್ಯಾರಿಫ್ ವಿಚಾರದಲ್ಲಿ ಟ್ರಂಪ್ ಅವರು ಚೀನಾ ಬಗ್ಗೆ ಮಾತನಾಡಿದ್ದು ಕುತೂಹಲ ಮೂಡಿಸಿದೆ. ‘ಭಾರತದ ಜೊತೆ ವ್ಯಾಪಾರ ಕಷ್ಟಕರವಾಗಿಬಿಟ್ಟರೆ ಚೀನಾ ಜೊತೆ ನೀವು ಹೇಗೆ ಸೆಣಸುತ್ತೀರಿ’ ಎಂದು ಟ್ರಂಪ್ ಕೇಳಿದ್ದಾರೆ. ಅಂದರೆ, ಆಮದು ಸುಂಕ ವಿಚಾರದಲ್ಲಿ ಭಾರತದ ಜೊತೆ ಕಠಿಣವಾಗಿಲ್ಲದೇ ಹೋದರೆ ಚೀನಾ ವಿರುದ್ಧವೂ ಕಠಿಣ ನಿಲುವು ತಳೆಯಲು ಸಾಧ್ಯವಾಗದೇ ಹೋಗಬಹುದು ಎಂಬುದು ಅವರ ಆಲೋಚನೆ ಇದ್ದಂತಿದೆ.

ಅಮೆರಿಕದ ಟ್ಯಾರಿಫ್ ನೀತಿಯಿಂದ ಭಾರತಕ್ಕೆ ಹಿನ್ನಡೆಯಾ?

ಭಾರತ ಮತ್ತು ಅಮೆರಿಕ ನಡುವೆ ಒಂದು ವರ್ಷದಲ್ಲಿ 190 ಬಿಲಿಯನ್ ಡಾಲರ್ ಮೊತ್ತದಷ್ಟು ವ್ಯಾಪಾರ ನಡೆಯುತ್ತದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವುದು 120 ಬಿಲಿಯನ್ ಡಾಲರ್​ನಷ್ಟು. ಇನ್ನು 70 ಬಿಲಿಯನ್ ಡಾಲರ್ ಮೊತ್ತದಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಎರಡು ದೇಶಗಳ ನಡುವಿನ ವ್ಯಾಪಾರ ಅಂತರ 50 ಬಿಲಿಯನ್ ಡಾಲರ್​ನಷ್ಟಿದ್ದು, ಅದು ಭಾರತದ ಪರವಾಗಿದೆ. ಅಂದರೆ, ಭಾರತವು ಆಮದಿಗಿಂತ ರಫ್ತನ್ನು ಹೆಚ್ಚು ಮಾಡುತ್ತಿದೆ. ಟ್ಯಾರಿಫ್ ನೀತಿಯಿಂದ ಭಾರತದ ಮೇಲೆ ಸಹಜವಾಗಿ ಬಾಧೆ ತರಬಹುದು.

ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ಉದ್ಯಮಗಳ ಮೇಲೆ ಹೆಚ್ಚಿನ ಹಿನ್ನಡೆ ತರದು ಎನ್ನುತ್ತಾರೆ ಕೆಲ ತಜ್ಞರು. ಅಮೆರಿಕಕ್ಕೆ ಭಾರತದಿಂದ ಆಗುತ್ತಿರುವ ರಫ್ತಿನಲ್ಲಿ ಹೆಚ್ಚಿನಂಶ ಐಟಿ ಮತ್ತು ಫಾರ್ಮಾ ಸೆಕ್ಟರ್​ಗಳದ್ದಾಗಿದೆ. ಐಟಿ ಸರ್ವಿಸ್ ಮೇಲೆ ಅಮೆರಿಕ ಎಷ್ಟು ಆಮದು ಸುಂಕ ಹಾಕುತ್ತದೆ ಎಂಬುದು ಗೊತ್ತಿಲ್ಲ. ಹಾಕಿದರೂ ಕೂಡ ಇದು ಐಟಿ ಸೆಕ್ಟರ್ ಮೇಲೆ ದೊಡ್ಡ ಪರಿಣಾಮವೇನೂ ಮಾಡದು ಎನ್ನುತ್ತಾರೆ ವೆಲ್ತ್​ಮಿಲ್ ಸೆಕ್ಯೂರಿಟೀಸ್ ಸಂಸ್ಥೆಯ ಕ್ರಾಂತಿ ಬಾತಿನಿ.

ಈಗ ವರ್ಷಕ್ಕೆ 190 ಬಿಲಿಯನ್ ಡಾಲರ್ ಇರುವ ದ್ವಿಪಕ್ಷೀಯ ವ್ಯಾಪಾರದ ಗಾತ್ರವನ್ನು 500 ಬಿಲಿಯನ್ ಡಾಲರ್​ಗೆ ಏರಿಸಬೇಕು ಎನ್ನುವ ಗುರಿಯನ್ನು ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ನಿಶ್ಚಯಿಸಿದ್ದಾರೆ. ಅಮೆರಿಕದ ತೈಲ ಮತ್ತು ನೈಸರ್ಗಿಕ ಅನಿಲದ ಸರಬರಾಜು ಹೆಚ್ಚಿಸುವುದು, ಮತ್ತು ನ್ಯೂಕ್ಲಿಯಾರ್ ಶಕ್ತಿಯ ತಂತ್ರಜ್ಞಾನವನ್ನು ಭಾರತಕ್ಕೆ ನೀಡುವುದು ಇವು ಸದ್ಯ ಅಮೆರಿಕದಿಂದ ಭಾರತಕ್ಕೆ ರಫ್ತು ಹೆಚ್ಚಿಸಲು ಮಾಡಲಾಗುತ್ತಿರುವ ಯೋಜನೆ.

ಇದನ್ನೂ ಓದಿ: ಭಾರತ – ಅಮೆರಿಕ ವ್ಯಾಪಾರ 5 ವರ್ಷಗಳಲ್ಲಿ ದ್ವಿಗುಣ: ಟ್ರಂಪ್, ಮೋದಿ ಸಭೆಯ ಬಳಿಕ ಘೋಷಣೆ

MAGA=VB ಮತ್ತು 1+1=11

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಭೇಟಿಯಲ್ಲಿ ಸಹಜವಾಗಿ ಒಂದಷ್ಟು ವಿಶೇಷ ಅಂಕಿ ವ್ಯಾಖ್ಯಾನಗಳು ಹೊರಹೊಮ್ಮಿದವು. ನರೇಂದ್ರ ಮೋದಿ ಅವರು ಟ್ರಂಪ್ ಅವರ ಮಗ (MAGA) ಘೋಷವಾಕ್ಯ ಪ್ರಸ್ತಾಪಿಸಿದರು. MAGA ಎಂದರೆ ಮೇಕ್ ಅಮೆರಿಕ ಗ್ರೇಟ್ ಎಗೇನ್ ಎಂದು. ಮೋದಿ ಇದನ್ನು ಪ್ರಸ್ತಾಪಿಸಿ, ಭಾರತದ ವಿಕಸಿತ್ ಭಾರತ್ ಯೋಜನೆಯನ್ನು (ವಿಬಿ) MAGA ಗೆ ಹೋಲಿಸಿ, MIGA ಎಂದು ಕರೆದರು.

ಟ್ರಂಪ್ ಅವರು ಮಾತನಾಡುವಾಗ 1+1 ಸಮೀಕರಣ ಪ್ರಸ್ತಾಪ ಮಾಡಿದರು. ಭಾರತ ಮತ್ತು ಅಮೆರಿಕ ವಿಚಾರದಲ್ಲಿ 1+1=2 ಆಗೋದಿಲ್ಲ. ಅಮೆರಿಕ ಅತಿ ಹಳೆಯ ಪ್ರಜಾತಂತ್ರ ದೇಶ. ಭಾರತ ಅತಿದೊಡ್ಡ ಪ್ರಜಾತಂತ್ರ ದೇಶ. ಹೀಗಾಗಿ, ಭಾರತ ಮತ್ತು ಅಮೆರಿಕ ಸೇರಿಸಿದರೆ ಅದು 1+1=2 ಅಲ್ಲ, 1+2=11 ಅಗುತ್ತದೆ ಎಂದು ಹೇಳಿದರು.

ಇನ್ನಷ್ಟು ಬಿಸಿನೆಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!