ಝೀ ಸಂಸ್ಥಾಪಕ ಸುಭಾಷ್​ಚಂದ್ರರ 6.5 ಕೋಟಿ ರೂ ರೀಪೇಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿ ಸಮ್ಮತಿ; ಏನಿದು ಪ್ರಕರಣ?

NCLT approves Subhash Chandra's Rs 6.5 crore debt repayment plan: ಸುಭಾಷ್ ಚಂದ್ರ ಅವರು ತಮ್ಮ ವೈಯಕ್ತಿಕ ದಿವಾಳಿ ಪ್ರಕ್ರಿಯೆಯಲ್ಲಿ ಸಾಲದಾತರಿಗೆ 6.5 ಕೋಟಿ ರೂ ಕೊಡುವುದಾಗಿ ಮುಂದಿಟ್ಟಿರುವ ಪ್ಲಾನ್​ಗೆ ಎನ್​ಸಿಎಲ್​ಟಿ ಅನುಮೋದನೆ ನೀಡಿದೆ. ಆದರೆ, 22,006 ಕೋಟಿ ರೂ ಸಾಲ ನೀಡಬೇಕಿತ್ತು ಎನ್ನುವ ವಾದವನ್ನು ಸುಭಾಷ್ ಚಂದ್ರ ಅವರು ತಳ್ಳಿಹಾಕಿದ್ದಾರೆ. ವಾಸ್ತವದಲ್ಲಿ 22,006 ಕೋಟಿ ರೂ ಮೊತ್ತವು ಅವರು ಸಹಿ ಹಾಕಿದ ಪರ್ಸನಲ್ ಗ್ಯಾರಂಟಿಗಳಾಗಿದ್ದು, ಆ ಋಣವನ್ನು ತೀರಿಸಲಾಗಿದೆ ಎನ್ನಲಾಗಿದೆ.

ಝೀ ಸಂಸ್ಥಾಪಕ ಸುಭಾಷ್​ಚಂದ್ರರ 6.5 ಕೋಟಿ ರೂ ರೀಪೇಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿ ಸಮ್ಮತಿ; ಏನಿದು ಪ್ರಕರಣ?
ಸುಭಾಷ್ ಚಂದ್ರ
Image Credit source: Getty Images and X @subhashchandra

Updated on: Aug 28, 2026 | 8:34 PM

ನವದೆಹಲಿ, ಆಗಸ್ಟ್ 27: ಝೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗೆ (Personal Insolvency Resolution Process) ಸಂಬಂಧಿಸಿದಂತೆ ಅವರ ಮರುಪಾವತಿ ಯೋಜನೆಯನ್ನು (Repayment Plan) ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT)ಅನುಮೋದಿಸಿದೆ. ಕುತೂಹಲ ಎಂದರೆ, ಸಾಲದಾತರು ಸುಭಾಷ್ ಚಂದ್ರರಿಂದ ಒಟ್ಟು ₹22,006.57 ಕೋಟಿ ಬರಬೇಕು ಎಂದು ಕ್ಲೇಮ್ (Claims) ಮಾಡಿದ್ದರೂ, ₹6.5 ಕೋಟಿ ಪಾವತಿಸಲು NCLT ಅನುಮೋದನೆ ನೀಡಿದೆ. ಆದರೆ, ₹22,006 ಕೋಟಿ ರೂಗೆಂದು ಕ್ಲೇಮ್ ಮಾಡಲಾಗುತ್ತಿರುವುದು ತಪ್ಪು. ತಾನು ಆ ಸಾಲ ಮರುಪಾವತಿಗೆ ಈ ಪ್ಲಾನ್ ನೀಡಿರುವುದಲ್ಲ. ತನ್ನ ಮೇಲೆ ಅಷ್ಟು ಸಾಲದ ಹೊರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

₹22,000 ವೈಯಕ್ತಿಕ ಸಾಲವಲ್ಲ, ವೈಯಕ್ತಿಕ ಗ್ಯಾರಂಟಿಗಳು

ಈ ₹22,000 ಕೋಟಿಗೂ ಹೆಚ್ಚಿನ ಮೊತ್ತವು ಸುಭಾಷ್ ಚಂದ್ರ ಅವರು ವೈಯಕ್ತಿಕವಾಗಿ ಪಡೆದ ಸಾಲವಲ್ಲ. ಬದಲಾಗಿ, ‘ಎಸ್ಸೆಲ್ ಗ್ರೂಪ್’ (Essel Group) ಸಂಸ್ಥೆಗಳು ಪಡೆದಿದ್ದ ಸಾಲಗಳಿಗೆ ನೀಡಲಾಗಿದ್ದ ವೈಯಕ್ತಿಕ ಗ್ಯಾರಂಟಿ (Personal Guarantees) ಮೊತ್ತವಾಗಿದೆ. ಈ ಬಗ್ಗೆ ಎಸ್ಸೆಲ್ ಗ್ರೂಪ್ ಮುಖ್ಯಸ್ಥರಾಗಿರುವ ಸುಭಾಷ್ ಚಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಮಾಹಿತಿ ಬಿಂಬಿತವಾಗಿದೆ ಎಂದು ಆರೋಪಿಸಿದ್ದಾರೆ.

ಸಾಲ ಪಡೆದಿದ್ದ ಮೂಲ ಕಂಪನಿಗಳು ಈಗಾಗಲೇ ತಮ್ಮ ಆಸ್ತಿಗಳನ್ನು ಮಾರಿ ಸಾಲದಾತರಿಗೆ (Lenders) ಭಾರಿ ಪ್ರಮಾಣದ ಹಣವನ್ನು ಮರುಪಾವತಿಸಿವೆ. ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?

ಯಾಕೆ ಬಂದಿದೆ ಈ ₹22,000 ರೂ ಕ್ಲೇಮ್?

ಸುಭಾಷ್ ಚಂದ್ರ ಅವರು ಹೇಳಿರುವ ಪ್ರಕಾರ, 2022ರಿಂದಲೇ ಈ ಪ್ರಕ್ರಿಯೆಯು ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಬಾಕಿ ಇತ್ತು. ಆದರೆ, ಆ ಬಹುತೇಕ ಹಣವನ್ನು ನಂತರದಲ್ಲಿ ತೀರಿಸಲಾಗಿದೆ. ಈಗ ಅವರಿಗೆ ಅಷ್ಟು ಸಾಲದ ಹೊರೆ ಇಲ್ಲ. ಅವರು ವೈಯಕ್ತಿಕವಾಗಿ ನೀಡಿದ ಗ್ಯಾರಂಟಿಗಳಲ್ಲಿ ಹೆಚ್ಚಿನ ಸಾಲವನ್ನು ತೀರಿಸಲಾಗಿದೆ.

ಇನ್ನೂ ಸ್ಪಷ್ಟ ಚಿತ್ರಣ ಪ್ರಸ್ತುತಪಡಿಸುವುದಾದರೆ, ಸುಭಾಷ್ ಚಂದ್ರ ಅವರು ಎಸ್ಸೆಲ್ ಗ್ರೂಪ್​ನ ವಿವಿಧ ಕಂಪನಿಗಳು ಪಡೆದಿದ್ದ ಸಾಲದಲ್ಲಿ 2019ರ ಜನವರಿ 24ರಲ್ಲಿ ಬಾಕಿ ಇದ್ದದ್ದು 45,000 ಕೋಟಿ ರೂ. ಅದಾದ ಬಳಿಕ ಈ ಕಂಪನಿಗಳು 43,000 ಕೋಟಿ ರೂ ಸಾಲ ತೀರಿಸಿವೆ ಎನ್ನುವುದು ಸುಭಾಷ್ ಚಂದ್ರ ಅವರ ವಾದ. ಈ ಗ್ರೂಪ್ ಕಂಪನಿಗಳು ಪಡೆದ ಸಾಲಗಳಲ್ಲಿ 22,000 ಕೋಟಿ ರೂಗೆ ಪರ್ಸನಲ್ ಗ್ಯಾರಂಟಿಗಳಿಗೆ ಅವರು ಸಹಿ ಹಾಕಿದ್ದರೇ ಹೊರತು, ಅದು ವೈಯಕ್ತಿಕವಾಗಿ ಅವರು ಪಡೆದ ಸಾಲವಾಗಿರಲಿಲ್ಲ. ಗ್ಯಾರಂಟಿ ಹಾಕಲಾಗಿದ್ದ 22,006 ಕೋಟಿ ರೂ ಪೈಕಿ 21,696 ಕೋಟಿ ರೂ ಸಾಲವನ್ನು ಸೆಟ್ಲ್ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಇರಾನ್​ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್​ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ

ಆಸ್ತಿಗಳ ಮೌಲ್ಯಕ್ಕಿಂತ ಕಡಿಮೆ ಸಾಲ ಎಂದ ನ್ಯಾಯಮಂಡಳಿ

ಸುಭಾಷ್ ಚಂದ್ರ ಅವರ ಬಳಿ ಲಭ್ಯವಿದ್ದ ವೈಯಕ್ತಿಕ ಆಸ್ತಿಯ ಒಟ್ಟು ಮೌಲ್ಯ ಕೆಲವೇ ಕೋಟಿಗಳಷ್ಟಿತ್ತು. ದಿವಾಳಿತನ ಮತ್ತು ಸಾಲಶೋಧನೆ ಸಂಹಿತೆ (IBC) ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯ ಲಭ್ಯವಿರುವ ನಿಜವಾದ ಆಸ್ತಿ ಮೌಲ್ಯಕ್ಕೆ ಅನುಗುಣವಾಗಿ ಮರುಪಾವತಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಸಾಲದಾತರ ಸಮಿತಿ (CoC) ಶೇ. 80.81 ರಷ್ಟು ಮತಗಳೊಂದಿಗೆ ₹6.5 ಕೋಟಿಯ ಮರುಪಾವತಿ ಯೋಜನೆಗೆ ಒಪ್ಪಿಗೆ ನೀಡಿತ್ತು. ಕಾನೂನಿನ ಪ್ರಕಾರ ಸಾಲದಾತರ ವಾಣಿಜ್ಯ ನಿರ್ಧಾರವೇ (Commercial Wisdom) ಅಂತಿಮವಾಗಿದ್ದು, NCLT ಅದನ್ನು ಎತ್ತಿಹಿಡಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Thu, 27 August 26

Loading...
Unable to load recommendations.
Follow Us