ಪದೇ ಪದೇ ಸಾಲದ ಶೂಲಕ್ಕೆ ಅರ್ಜೆಂಟೀನಾ; 4ನೇ ಸ್ಥಾನದಲ್ಲಿ ಪಾಕಿಸ್ತಾನ; ಭಾರತದ ಕಥೆ ಏನು?

IMF debt worldwide: ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ವಿಶ್ವದ ನೂರು ದೇಶಗಳಿಗೆ ನೀಡಿರುವ ಸಾಲದಲ್ಲಿ ಬಾಕಿ ಉಳಿದಿರುವುದು 111 ಬಿಲಿಯನ್ ಡಾಲರ್. ಅರ್ಜೆಂಟೀನಾ ದೇಶವೊಂದೇ ಬರೋಬ್ಬರಿ 32 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಐಎಂಎಫ್ ಸಾಲದಲ್ಲಿ ಹತ್ತು ದೇಶಗಳ ಪಾಲೇ ಶೇ. 69ರಷ್ಟಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಭಾರತ 1993ರ ಬಳಿಕ ಒಮ್ಮೆಯೂ ಐಎಂಎಫ್​ನಿಂದ ಸಾಲ ಪಡೆದಿಲ್ಲ.

ಪದೇ ಪದೇ ಸಾಲದ ಶೂಲಕ್ಕೆ ಅರ್ಜೆಂಟೀನಾ; 4ನೇ ಸ್ಥಾನದಲ್ಲಿ ಪಾಕಿಸ್ತಾನ; ಭಾರತದ ಕಥೆ ಏನು?
ಐಎಂಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2024 | 6:58 PM

ನವದೆಹಲಿ, ಮೇ 16: ಪಾಕಿಸ್ತಾನ ಹೊಂದಿರುವ ಸಾಲವು ಅದರ ಜಿಡಿಪಿಯ ಶೇ. 80ರಷ್ಟಿದೆ ಎಂದು ಹೇಳಲಾಗುತ್ತಿದೆ. ಐಎಂಎಫ್​ವೊಂದರಲ್ಲೇ (IMF) ಅದು 7 ಬಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ. ಐಎಂಎಫ್ ಸೂಚನೆ ಮೇರೆಗೆ ಪಾಕಿಸ್ತಾನ ತನ್ನ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ (privatisation) ಮಾಡಲು ಹೊರಟಿದೆ. ಇಷ್ಟೊಂದು ಸಾಲದ ಶೂಲಕ್ಕೆ ಸಿಲುಕಿರುವುದು ಪಾಕಿಸ್ತಾನವೊಂದೇ ದೇಶವಲ್ಲ. ಅರ್ಜೆಂಟೀನಾ ಐಎಂಎಫ್ ಸಾಲಕ್ಕೆ ಕುಖ್ಯಾತಿ ಪಡೆದಿದೆ. ದಕ್ಷಿಣ ಅಮೆರಿಕದ ಸಂಪನ್ಮೂಲಭರಿತ ದೇಶವೆನಿಸಿರುವ ಮತ್ತು ಫುಟ್ಬಾಲ್ ದೇಶವೆನಿಸಿರುವ ಅರ್ಜೆಂಟೀನಾ ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಹೊಂದಿದೆ. ಬರೋಬ್ಬರಿ 32 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ಅದು ಐಎಂಎಫ್​ಗೆ ಕೊಡಬೇಕಿದೆ. ಇದು ಅರ್ಜೆಂಟೀನಾ ಜಿಡಿಪಿಯ ಶೇ. 5ಕ್ಕಿಂತಲೂ ಹೆಚ್ಚಿನ ಮೊತ್ತವಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಾದ ಐಎಂಎಫ್ ಜಾಗತಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ಹಣಕಾಸು ನೆರವನ್ನು ನೀಡುತ್ತದೆ. ಆದಾಯ ಕಡಿಮೆ ಇರುವ ಮತ್ತು ಸಾಲ ವಾಪಸಾಗಿ ಖಾತ್ರಿ ಇರುವ ದೇಶಗಳಿಗೆ ಐಎಂಎಫ್ ಯಾವುದೇ ಬಡ್ಡಿ ವಿಧಿಸುವುದಿಲ್ಲ. ಇನ್ನುಳಿದಂತೆ ಅದು ಶೇ. 4ರಿಂದ 8ರವರೆಗೆ ವಾರ್ಷಿಕ ಬಡ್ಡಿ ವಿಧಿಸಬಹುದು. ವಿಶ್ವದ ಇನ್ನೂರಕ್ಕೂ ಹೆಚ್ಚು ದೇಶಗಳ ಪೈಕಿ 100 ದೇಶಗಳು ಐಎಂಎಫ್​ನಲ್ಲಿ ಸಾಲ ಹೊಂದಿವೆ. ಒಟ್ಟಾರೆ 111 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ವಿವಿಧ ದೇಶಗಳಿಗೆ ಐಎಂಎಫ್ ನೀಡಿದೆ.

ಇದನ್ನೂ ಓದಿ: ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ 4ನೇ ಸ್ಥಾನದಲ್ಲಿದೆ. ಅರ್ಜೆಂಟೀನಾ ಅತಿಹೆಚ್ಚು ಸಾಲಗಾರ

ಅರ್ಜೆಂಟೀನಾದಿಂದ ಹಿಡಿದು ಐವರಿ ಕೋಸ್ಟ್​ವರೆಗೆ 10 ದೇಶಗಳು ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿವೆ. ಐಎಂಎಫ್ ವಿತರಿಸಿರುವ ಸಾಲದಲ್ಲಿ ಶೇ. 69ರಷ್ಟು ಸಾಲ ಈ ಹತ್ತು ದೇಶಗಳ ಪಾಲು ಇದೆ.

ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿದ ದೇಶಗಳು:

  1. ಅರ್ಜೆಂಟೀನಾ: 32 ಬಿಲಿಯನ್ ಡಾಲರ್
  2. ಈಜಿಪ್ಟ್: 11 ಬಿಲಿಯನ್ ಡಾಲರ್
  3. ಉಕ್ರೇನ್: 9 ಬಿಲಿಯನ್ ಡಾಲರ್
  4. ಪಾಕಿಸ್ತಾನ: 7 ಬಿಲಿಯನ್ ಡಾಲರ್
  5. ಈಕ್ವಡಾರ್: 6 ಬಿಲಿಯನ್ ಡಾಲರ್
  6. ಕೊಲಂಬಿಯಾ: 3 ಬಿಲಿಯನ್ ಡಾಲರ್
  7. ಅಂಗೋಲ: 3 ಬಿಲಿಯನ್ ಡಾಲರ್
  8. ಕೀನ್ಯಾ: 3 ಬಿಲಿಯನ್ ಡಾಲರ್
  9. ಘಾನಾ: 2 ಬಿಲಿಯನ್ ಡಾಲರ್
  10. ಐವರಿ ಕೋಸ್ಟ್: 2 ಬಿಲಿಯನ್ ಡಾಲರ್

ಅರ್ಜೆಂಟೀನಾದ ಸಾಲದ ದುರ್ಗತಿಗೆ ದೊಡ್ಡ ಇತಿಹಾಸವೇ ಇದೆ. 19ನೇ ಶತಮಾನದ ಕೊನೆಯ ಭಾಗದಿಂದಲೂ ಅರ್ಜೆಂಟೀನಾ ಸಾಲದ ಶೂಲಕ್ಕೆ ಸಿಲುಕುತ್ತಲೇ ಬಂದಿದೆ. ಅದರ ರಾಜಧಾನಿ ನಗರಿ ಬ್ಯೂನಸ್ ಏರೆಸ್ ಅನ್ನು ಅಭಿವೃದ್ಧಿಪಡಿಸಲೆಂದು ಸಾಲ ಮಾಡಿರುವುದರಿಂದ ಹಿಡಿದು ಬೇರೆ ಬೇರೆ ಕಾರಣಕ್ಕೆ ಅದು ಸಾಲದ ಹೊರೆಯನ್ನು ಮೈ ಮೇಲೆ ಎಳೆದುಕೊಂಡಿದೆ. ಕಳೆದ ಆರು ದಶಕದಲ್ಲಿ ಅರ್ಜೆಂಟೀನಾಗೆ ಐಎಂಎಫ್ ಬರೋಬ್ಬರಿ 20 ಬಾರಿ ಸಾಲ ಕೊಟ್ಟು ಅದರ ಹಣಕಾಸು ಬಿಕ್ಕಟ್ಟು ಶಮನಕ್ಕೆ ಯತ್ನಿಸಿದೆ. ದಕ್ಷಿಣ ಅಮೆರಿಕದ ಈ ದೇಶದ ಆರ್ಥಿಕ ಬಿಕ್ಕಟ್ಟು ಇನ್ನೂ ಕೂಡ ಶಮನವಾಗಿಲ್ಲ.

ಇದನ್ನೂ ಓದಿ: ಭಾರತದ ರಫ್ತು ಮತ್ತು ಆಮದು ಎರಡೂ ಏರಿಕೆ; ಟ್ರೇಡ್ ಡೆಫಿಸಿಟ್ ಹೆಚ್ಚಳಕ್ಕೆ ಕಾರಣವಾದ ಚಿನ್ನ

ಭಾರತ ಐಎಂಎಫ್​ನಲ್ಲಿ ಎಷ್ಟು ಹೊಂದಿದೆ ಸಾಲ?

ಭಾರತ ತೊಂಬತ್ತರ ದಶಕದಲ್ಲಿ ಜಾಗತೀಕರಣ ಮತ್ತು ಉದಾರೀಕರಣ ನೀತಿ ಜಾರಿಗೆ ತರುವ ಮುನ್ನ ಐಎಂಎಫ್, ವರ್ಲ್ಡ್ ಬ್ಯಾಂಕ್ ಮೊದಲಾದೆಡೆ ಸಾಲಕ್ಕಾಗಿ ಕೈಚಾಚಬೇಕಿತ್ತು. ಒಂದು ಹಂತದಲ್ಲಿ ಚಿನ್ನವನ್ನು ಒತ್ತೆ ಇಟ್ಟು ಸಾಲ ಪಡೆಯಲಾಗಿತ್ತು. ಆದರೆ, 1993ರ ಬಳಿಕ ಭಾರತ ಒಮ್ಮೆಯೂ ಐಎಂಎಫ್​ನಿಂದ ಸಾಲ ಪಡೆದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್