ನೆಟ್ಫ್ಲಿಕ್ಸ್ನಿಂದ ಮೊಬೈಲ್+ ಪ್ಲಾನ್ ಅನ್ನು ರೂ. 299ಕ್ಕೆ ಪರೀಕ್ಷೆ ನಡೆಸುತ್ತಿದೆ. ಕಿರು ತೆರೆಯ ಮೇಲೆ ಕಂಟೆಂಟ್ ನೋಡಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಹೊಸ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ಬಳಕೆದಾರರು ನೆಟ್ಫ್ಲಿಕ್ಸ್ ಸಿನಿಮಾಗಳು ಮತ್ತು ಶೋಗಳನ್ನು ಸ್ಮಾರ್ಟ್ಫೋನ್ನಲ್ಲಿ ಮಾತ್ರ ನೋಡಲು ಅವಕಾಶ ನೀಡುವುದು ಮಾತ್ರ ಅಲ್ಲ. ಜತೆಗೆ ಟ್ಯಾಬ್ಲೆಟ್, ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ಗಳಲ್ಲೂ ವೀಕ್ಷಿಸಬಹುದು. ವರದಿಯ ಪ್ರಕಾರ, ಕೆಲವೇ ಗ್ರಾಹಕರೊಂದಿಗೆ ಈ ಮೊಬೈಲ್ ಯೋಜನೆಯನ್ನು ಪರೀಕ್ಷಾರ್ಥವಾಗಿ ಬಳಸುತ್ತದೆ.
ಸದ್ಯಕ್ಕೆ ನೆಟ್ಫ್ಲಿಕ್ಸ್ನಿಂದ ರೂ. 199ರ ಮೊಬೈಲ್ ಪ್ಲಾನ್ ಇದೆ. ಅದು ಮೊಬೈಲ್ ಸಾಧನಗಳಿಗೆ ಮಾತ್ರ ಕಂಟೆಂಟ್ ಒದಗಿಸುತ್ತದೆ. ಹೊಸ ಮೊಬೈಲ್+ ರೂ. 299ರ ಪ್ಲಾನ್ ಮೂಲಕವಾಗಿ ಬಳಕೆದಾರರು ಹೆಚ್ಚು ಕಂಟೆಂಟ್ ಲೈಬ್ರರಿಯನ್ನು ನೋಡಬಹುದು ಎಂದು ತಿಳಿಸಿದೆ. ಹೊಸ ಪ್ಲಾನ್ನಲ್ಲಿ ಎಚ್ಡಿ ರೆಸಲ್ಯೂಷನ್ (720p) ಕಂಟೆಂಟ್ ಒದಗಿಸಲಾಗುತ್ತದೆ. 199ರ ಪ್ಲಾನ್ ಎಸ್ಡಿ ರೆಸಲ್ಯೂಷನ್ನಲ್ಲಿ ಇರುತ್ತವೆ. ಹೊಸ ಮೊಬೈಲ್+ ಪ್ಲಾನ್ ರೂ. 299ರ ಮೌಲ್ಯದ್ದು ಮ್ಯಾಕ್, ಪಿ.ಸಿ.ಗಳು ಹಾಗೂ ಕ್ರೋಮೋಬುಕ್ಗಳನ್ನು ಸಪೋರ್ಟ್ ಮಾಡುತ್ತದೆ.
ಒಂದು ವೇಳೆ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಲ್ಲಿ ಮಾತ್ರ ಈ ಪ್ಲಾನ್ ಅನ್ನು ಎಲ್ಲ ಕಡೆ ತರಲಾಗುತ್ತದೆ. ಕಳೆದ ವರ್ಷವೇ ಕಂಪೆನಿಯು ರೂ. 345ಕ್ಕೆ ಈ ಪ್ಲಾನ್ ತರಬೇಕು ಎಂದಿತ್ತು. ಆದರೆ ಡಿಸ್ನಿ+ ಹಾಟ್ಸ್ಟಾರ್ನಂಥ ಸ್ಪರ್ಧೆಗಳಿಂದಾಗಿ ಈ ವರ್ಷ ಹೊಸ ನೆಟ್ಫ್ಲಿಕ್ಸ್ ಪ್ಲಾನ್ ಕಡಿಮೆ ದರದೊಂದಿಗೆ ಬಂದಿದೆ.
ಇದನ್ನೂ ಓದಿ: OTT Regulations: ಓಟಿಟಿ ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಪಟ್ಟಿಗೆ ‘ಹಲ್ಲೇ ಇಲ್ಲ’ ಎಂದ ಸುಪ್ರೀಂ ಕೋರ್ಟ್