AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ ಈ ವಿಶ್ವದ ಮುಂದಿನ ಫ್ಯಾಕ್ಟರಿ’; ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಚರ್ಚಿಸಲಿದ್ದಾರೆ ಉದ್ಯಮ ಪರಿಣಿತರು

News9 Global Summit 2024: ನವೆಂಬರ್ 21ರಿಂದ 23ರವರೆಗೆ ಜರ್ಮನಿಯ ಸ್ಟುಟ್​ಗಾಟ್​ನಲ್ಲಿ ನಡೆಯಲಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬಗ್ಗೆ ಸೆಷನ್ಸ್ ಇರಲಿವೆ. ‘ಈ ವಿಶ್ವದ ಮುಂದಿನ ಫ್ಯಾಕ್ಟರಿ’ ಎನ್ನುವ ಒಂದು ಸೆಷನ್​ನಲ್ಲಿ ಭಾರತ ಮತ್ತು ಜರ್ಮನಿಯ ಕೆಲ ಪ್ರಮುಖ ಉದ್ಯಮ ವಲಯದ ವ್ಯಕ್ತಿಗಳು ಮಾತನಾಡಲಿದ್ದಾರೆ.

‘ಭಾರತ ಈ ವಿಶ್ವದ ಮುಂದಿನ ಫ್ಯಾಕ್ಟರಿ’; ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಚರ್ಚಿಸಲಿದ್ದಾರೆ ಉದ್ಯಮ ಪರಿಣಿತರು
ನ್ಯೂಸ್9 ಗ್ಲೋಬಲ್ ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk|

Updated on:Nov 20, 2024 | 6:20 PM

Share

ನವದೆಹಲಿ, ನವೆಂಬರ್ 20: ಟಿವಿ9 ನೆಟ್ವರ್ಕ್ ವತಿಯಿಂದ ಆಯೋಜಿಸಲಾಗಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಮಾಧ್ಯಮ ಇತಿಹಾಸದಲ್ಲೇ ಹೊಸ ದಾಖಲೆ ಮಾಡಿದೆ. ಜರ್ಮನಿಯ ಸ್ಟುಟ್​ಗಾಟ್ ನಗರದಲ್ಲಿ (Stuttgart) ನವೆಂಬರ್ 21ರಿಂದ 23ರವರೆಗೂ ನಡೆಯಲಿರುವ ಈ ಕಾರ್ಯಕ್ರಮವನ್ನು ನ್ಯೂಸ್9 ಜೊತೆ ವಿಎಫ್​ಬಿ ಸ್ಟುಟ್​ಗಾಟ್ ಫುಟ್ಬಾಲ್ ಕ್ಲಬ್ ಜಂಟಿಯಾಗಿ ಆಯೋಜಿಸಿದೆ. ಅಲ್ಲಿನ ಸ್ಥಳೀಯ ರಾಜ್ಯ ಸರ್ಕಾರ ಕೂಡ ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತ ಮತ್ತು ಜರ್ಮನಿ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಲಿದೆ. ಹಲವು ಚರ್ಚೆ, ಉಪನ್ಯಾಸ ಇತ್ಯಾದಿ ಸಾಕಷ್ಟು ಸರಣಿ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ಮೂರು ದಿನಗಳಲ್ಲಿ ಚರ್ಚೆಯಾಗಲಿರುವ ಗಹನ ವಿಚಾರಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಬೆಳವಣಿಗೆಯೂ ಸೇರಿದೆ. ‘ಈ ವಿಶ್ವದ ಮುಂದಿನ ಫ್ಯಾಕ್ಟರಿ’ ಎನ್ನುವ ವಿಷಯದ ಮೇಲೆ ಒಂದು ಸೆಷನ್ ಇರಲಿದೆ.

ಕಳೆದ ಏಳೆಂಟು ವರ್ಷಗಳಿಂದ ಭಾರತ ಸರ್ಕಾರ ತಯಾರಿಕಾ ಕ್ಷೇತ್ರದ ಮೇಲೆ ಗಮನ ನೆಟ್ಟಿದೆ. ಅದರಲ್ಲೂ ಮುಖ್ಯವಾಗಿ ಹತ್ತಕ್ಕೂ ಹೆಚ್ಚು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗಳ ಮೇಲೆ ಹೆಚ್ಚಿನ ಗಮನ ಕೊಡುತ್ತಿದೆ. ಪರಿಣಾಮವಾಗಿ, ಇವತ್ತು ಭಾರತದ ರಫ್ತು ಕ್ರಮೇಣವಾಗಿ ಹೆಚ್ಚುತ್ತಿದೆ. ಇದೇ ಹಂತದಲ್ಲಿ ಜರ್ಮನಿಯ ಹೊಸ ತಂತ್ರಜ್ಞಾನ ಆವಿಷ್ಕಾರ ಸಾಮರ್ಥ್ಯವು ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಇನ್ನಷ್ಟು ಬಲಗೊಳಿಸುವ ಸಾಧ್ಯತೆ ಇದೆ. ಹೀಗಾಗಿ, ಜರ್ಮನಿ ಜೊತೆ ಭಾರತದ ವ್ಯಾವಹಾರಿಕ ಬಾಂಧವ್ಯ ಇನ್ನಷ್ಟು ಬಲಗೊಳ್ಳುವುದು ಬಹಳ ಮುಖ್ಯ ಎನಿಸುತ್ತದೆ.

‘ದಿ ನೆಕ್ಸ್ಟ್ ಫ್ಯಾಕ್ಟರಿ ಆಫ್ ದಿ ವರ್ಲ್ಡ್’ ಅಥವಾ ‘ವಿಶ್ವದ ಮುಂದಿನ ಕಾರ್ಖಾನೆ’ ಹೆಸರಿನಲ್ಲಿ ನಡೆಯುವ ಸೆಷನ್​ನಲ್ಲಿ ಭಾರತದ ಪ್ರಬಲ ತಯಾರಕಾ ವ್ಯವಸ್ಥೆಯು ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯೊಂದಿಗೆ ಹೇಗೆ ಮಿಳಿತಗೊಳ್ಳಬಹುದು, ಈ ಸಪ್ಲೈ ಚೈನ್​ಗೆ ಸೇರಲು ಇರುವ ಸವಾಲುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತಜ್ಞರು ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಇಂಧನ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವ ಅಗತ್ಯ: ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಈ ವಿಚಾರ ಚರ್ಚೆ

ಭಾರತದ ಔದ್ಯಮಿಕ ಸಂಘಟನೆಯಾದ ಅಸೋಚಾಮ್ (ASSOCHAM) ಅಧ್ಯಕ್ಷ ಸಂಜಯ್ ನಾಯರ್, ಜರ್ಮನಿಯ ಮರ್ಸಿಡಿಸ್ ಬೆಂಜ್ ಗ್ರೂಪ್ ಎಜಿ ಜಾರ್ಗ್ ಬುರ್ಜರ್, ಇಂಡೋ ಜರ್ಮನ್ ಚೇಂಬರ್ ಆಫ್ ಕಾಮರ್ಸ್​ನ ಡೈರೆಕ್ಟರ್ ಜನರಲ್ ಸ್ಟೀಫನ್ ಹಲುಸಾ, ಭಾರತ್ ಫೋರ್ಜ್ ಸಂಸ್ಥೆಯ ಮುಖ್ಯಸ್ಥ ಬಾಬಾ ಕಲ್ಯಾಣಿ, ಮಾರುತಿ ಸುಜುಕಿಯ ಹಿರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಾರ್ಥೋ ಬ್ಯಾನರ್ಜಿ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Wed, 20 November 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ