Paytm FAStag: ಫಾಸ್​ಟ್ಯಾಗ್ ನೀಡುವ ಅಧಿಕೃತ ಬ್ಯಾಂಕುಗಳ ಪಟ್ಟಿಯಿಂದ ಪೇಟಿಎಂ ಹೊರಕ್ಕೆ; ಇಲ್ಲಿದೆ ಪಟ್ಟಿ

Authorised banks to give FASTag: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಫಾಸ್​ಟ್ಯಾಗ್ ವಿತರಣೆಗೆ ಮಾನ್ಯತೆ ಹೊಂದಿರುವ 32 ಬ್ಯಾಂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಎನ್​ಎಚ್​ಎಐ ರಿಲೀಸ್ ಮಾಡಿರುವ ಈ ಪಟ್ಟಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇಲ್ಲ. ಏರ್​ಟೆಲ್ ಬ್ಯಾಂಕ್ ಈ ಪಟ್ಟಿಯಲ್ಲಿ ಇದೆ. ಎರಡು ಕೋಟಿ ಜನರು ಪೇಟಿಎಂ ಫಾಸ್​ಟ್ಯಾಗ್ ಹೊಂದಿದ್ದು ಫೆ. 29ರೊಳಗೆ ಹೊಸ ಆರ್​ಎಫ್​ಐಡಿ ಸ್ಟಿಕರ್​ಗಳನ್ನು ಅಳವಡಿಸಬೇಕಾಗುತ್ತದೆ.

Paytm FAStag: ಫಾಸ್​ಟ್ಯಾಗ್ ನೀಡುವ ಅಧಿಕೃತ ಬ್ಯಾಂಕುಗಳ ಪಟ್ಟಿಯಿಂದ ಪೇಟಿಎಂ ಹೊರಕ್ಕೆ; ಇಲ್ಲಿದೆ ಪಟ್ಟಿ
ಫಾಸ್​ಟ್ಯಾಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2024 | 3:25 PM

ನವದೆಹಲಿ, ಫೆಬ್ರುವರಿ 16: ನಿರೀಕ್ಷೆಯಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಫಾಸ್​ಟ್ಯಾಗ್ (FASTag) ನೀಡುವ ಮಾನ್ಯತೆ ಕಳೆದುಕೊಂಡಿದೆ. ಇದರೊಂದಿಗೆ ಇನ್ಮುಂದೆ ಪೇಟಿಎಂ ಮೂಲಕ ಹೊಸ ಫಾಸ್​ಟ್ಯಾಗ್ ಖರೀದಿಸಲು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಐ ಹೊಸ ಫಾಸ್​ಟ್ಯಾಗ್ ವಿತರಿಸಲು ಮಾನ್ಯತೆ ಪಡೆದಿರುವ ಬ್ಯಾಂಕುಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಪೇಟಿಎಂ ಹೆಸರನ್ನು ಕೈಬಿಡಲಾಗಿದೆ. ಈ ಪಟ್ಟಿಯಲ್ಲಿ ಏರ್​ಟೇಲ್ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ 32 ಬ್ಯಾಂಕುಗಳ ಪಟ್ಟಿ ಇದೆ. ಇದರಲ್ಲಿ ಕರ್ಣಾಟಕ ಬ್ಯಾಂಕ್, ಎಸ್​ಬಿಐ ಇತ್ಯಾದಿ ಪ್ರಮುಖ ಬ್ಯಾಂಕುಗಳೆಲ್ಲವೂ ಇವೆ.

ವರದಿ ಪ್ರಕಾರ, ಪೇಟಿಎಂ ಫಾಸ್​ಟ್ಯಾಗ್ ಅನ್ನು ಹೊಂದಿರುವವರು ಅದನ್ನು ಮರಳಿಸಿ ಬೇರೆ ಬ್ಯಾಂಕುಗಳಿಂದ ಫಾಸ್​ಟ್ಯಾಗ್ ಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಈಗಾಗಲೇ ಪೇಟಿಎಂ ಫಾಸ್​ಟ್ಯಾಗ್ ಹೊಂದಿರುವವರು, ಅದರಲ್ಲಿ ಬ್ಯಾಲನ್ಸ್ ಹೊಂದಿದ್ದರೆ ಫೆಬ್ರುವರಿ 29ರವರೆಗೂ ಅದನ್ನು ಬಳಸಬಹುದು. ಅದಾದ ಬಳಿಕ ಅದರ ಬಳಕೆ ಸಾಧ್ಯವಾಗುವುದಿಲ್ಲ.

ದೇಶಾದ್ಯಂತ ಸುಮಾರು ಎರಡು ಕೋಟಿ ವಾಹನಗಳಿಗೆ ಪೇಟಿಎಂನ ಫಾಸ್​ಟ್ಯಾಗ್ ಇದೆ. ಈಗ ಇಷ್ಟೂ ಜನರು ಹೊಸ ಆರ್​ಎಫ್​​ಐಡಿ ಸ್ಟಿಕರ್​ಗಳನ್ನು ಪಡೆದು ಅಳವಡಿಸಿಕೊಳ್ಳಬೇಕಾಗುತ್ತದೆ. ಬೇರೆ ಮಾನ್ಯ ಬ್ಯಾಂಕುಗಳಿಂದ ಫಾಸ್​ಟ್ಯಾಗ್ ಪಡೆಯಬೇಕಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಫಾಸ್​ಟ್ಯಾಗ್ ಪಡೆಯುವಂತೆ ಪೇಟಿಎಂ ತನ್ನ ಗ್ರಾಹಕರಿಗೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ

ಫಾಸ್​ಟ್ಯಾಗ್ ವಿತರಿಸಲು ಮಾನ್ಯತೆ ಪಡೆದ 32 ಬ್ಯಾಂಕುಗಳ ಪಟ್ಟಿ

  1. ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್
  2. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್
  3. ಅಲಾಹಾಬಾದ್ ಬ್ಯಾಂಕ್
  4. ಎಕ್ಸಿಸ್ ಬ್ಯಾಂಕ್
  5. ಕೆನರಾ ಬ್ಯಾಂಕ್
  6. ಬ್ಯಾಂಕ್ ಆಫ್ ಬರೋಡ
  7. ಬ್ಯಾಂಕ್ ಆಫ್ ಮಹಾರಾಷ್ಟ್ರ
  8. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  9. ಸಿಟಿ ಯೂನಿಯನ್ ಬ್ಯಾಂಕ್
  10. ಕಾಸ್ಮಸ್ ಬ್ಯಾಂಕ್
  11. ಈಕ್ವಿಟಿಯಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
  12. ಫೆಡರಲ್ ಬ್ಯಾಂಕ್
  13. ಫಿನೋ ಪೇಮೆಂಟ್ಸ್ ಬ್ಯಾಂಕ್
  14. ಎಚ್​ಡಿಎಫ್​ಸಿ ಬ್ಯಾಂಕ್
  15. ಐಡಿಎಫ್​ಸಿ ಬ್ಯಾಂಕ್
  16. ಐಸಿಐಸಿಐ ಬ್ಯಾಂಕ್
  17. ಐಡಿಬಿಐ ಬ್ಯಾಂಕ್
  18. ಇಂಡಿಯನ್ ಬ್ಯಾಂಕ್
  19. ಇಂಡಸ್​ಇಂಡ್ ಬ್ಯಾಂಕ್
  20. ಜೆ ಅಂಡ್ ಕೆ ಬ್ಯಾಂಕ್
  21. ಕರೂರ್ ವೈಶ್ಯ ಬ್ಯಾಂಕ್
  22. ಕೋಟಕ್ ಮಹೀಂದ್ರ ಬ್ಯಾಂಕ್
  23. ಕರ್ಣಾಟಕ ಬ್ಯಾಂಕ್
  24. ನಾಗಪುರ್ ನಾಗರಿಕ್ ಸಹಕಾರಿ ಬ್ಯಾಂಕ್
  25. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  26. ಪಂಜಾಬ್ ನ್ಯಾಷನಲ್ ಬ್ಯಾಂಕ್
  27. ಸಾರಸ್ವತ್ ಬ್ಯಾಂಕ್
  28. ಸೌತ್ ಇಂಡಿಯನ್ ಬ್ಯಾಂಕ್
  29. ತ್ರಿಶೂರ್ ಡಿಸ್ಟ್ರಿಕ್ಟ್ ಕೋ ಆಪರೇಟಿವ್ ಬ್ಯಾಂಕ್
  30. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  31. ಯುಕೋ ಬ್ಯಾಂಕ್
  32. ಯೆಸ್ ಬ್ಯಾಂಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ