AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sundar Pichai: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ

Listen to Heart More Than Mind: ಸ್ವ ಸಾಮರ್ಥ್ಯದಿಂದ ವೃತ್ತಿಯಲ್ಲಿ ಬೆಳೆದು ವಿಶ್ವದರ್ಜೆಯ ಕಂಪನಿಯಲ್ಲಿ ಸಿಇಒ ಆಗಿರುವ ಭಾರತೀಯರಲ್ಲಿ ಗೂಗಲ್​ನ ಸುಂದರ್ ಪಿಚೈ ಒಬ್ಬರು. ಒಬ್ಬ ಸಾಮಾನ್ಯ ವ್ಯಕ್ತಿ ಉನ್ನತ ಹಂತಕ್ಕೆ ಏರಲು ಏನು ಬೇಕು? ಬುದ್ಧಿಗಿಂತ ಹೆಚ್ಚಾಗಿ ಮನಸಿನ ಮಾತು ಕೇಳಿ ಎಂದು ಸಲಹೆ ನೀಡುತ್ತಾರೆ ಸುಂದರ್ ಪಿಚೈ. ಈ ಗೂಗಲ್ ಸಿಇಒ ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆ ಅವಕಾಶವನ್ನು ಸೀಮಿತಗೊಳಿಸುತ್ತಾರೆ.

Sundar Pichai: ಜೀವನದಲ್ಲಿ ಸಾಧನೆ ಮಾಡಬೇಕೆ? ಬುದ್ಧಿಯಲ್ಲ, ಮನಸಿನ ಮಾತಿಗೆ ಕಿವಿಗೊಡಿ: ಗೂಗಲ್ ಸಿಇಒ ಸುಂದರ್ ಪಿಚೈ
ಸುಂದರ್ ಪಿಚೈ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2024 | 2:38 PM

Share

ಭಾರತದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿನ ದೊಡ್ಡ ಉದ್ದಿಮೆಗಳು (businesses) ಕೌಟುಂಬಿಕವಾಗಿ ಬಳುವಳಿಯಾಗಿ ಪಡೆದು ಮುಂದುವರಿಯುತ್ತಿರುವಂತಹವು. ಹೆಚ್ಚಿನ ಉದ್ಯಮಿಗಳು ಅದೇ ಹಿನ್ನೆಲೆಯ ಕುಟುಂಬಕ್ಕೆ ಸೇರಿರುವಂತಹವರು. ಆದರೆ, ಜಾಗತಿಕ ಕಂಪನಿಗಳಿಗೆ ಸಿಇಒ ಆಗಿರುವ ಭಾರತೀಯರಲ್ಲಿ ಬಹಳ ಜನರು ದೊಡ್ಡ ಹಿನ್ನೆಲೆ ಹೊಂದಿದವರಲ್ಲ. ತಮ್ಮ ಸ್ವಸಾಮರ್ಥ್ಯದಿಂದ (self made businessmen) ತಳಮಟ್ಟದಿಂದ ಬೆಳೆದು ಬಂದವರೇ ಹೆಚ್ಚು. ಅಂಥವರಲ್ಲಿ ಗೂಗಲ್ ಮತ್ತು ಆಲ್ಫಬೆಟ್​ನ ಸಿಇಒ ಆಗಿರುವ ಸುಂದರ್ ಪಿಚೈ ಕೂಡ ಒಬ್ಬರು. ಚೆನ್ನೈನ ಮಧ್ಯಮವರ್ಗದ ಕುಟುಂಬದ ಹುಡುಗನಾಗಿ ಬೆಳೆದ ಸುಂದರ್ ಪಿಚೈ (Sundar Pichai) ಇವತ್ತು ಇಡೀ ವಿಶ್ವವನ್ನೇ ಆವರಿಸಿರುವ ತಂತ್ರಜ್ಞಾನ ಕಂಪನಿಯ ಮುಖ್ಯಸ್ಥರಾಗಿ ವಿಶ್ವದ ಪ್ರಭಾವಿಗಳಲ್ಲಿ ಒಬ್ಬರೆನಿಸಿದ್ದಾರೆ. ಅವರಿಗೆ ಈ ಎತ್ತರಕ್ಕೆ ಏರಲು ಹೇಗೆ ಸಾಧ್ಯವಾಯಿತು? ಹಾವಾಡಿಗರ ನಾಡು ಎಂದು ವಿದೇಶಿಗರು ಹಂಗಿಸುತ್ತಿದ್ದ ದೇಶದಿಂದ ಹೋಗಿ ಅದೇ ವಿದೇಶಿಗರ ಮುಂದೆ ನಿಂತು ಅವರು ಚುಕ್ಕಾಣಿ ಹಿಡಿಯುವುದು ಎಂದರೆ ಸಾಮಾನ್ಯವಲ್ಲ.

ಸುಂದರ್ ಪಿಚೈ ತಮ್ಮ ಸಾಧನೆಗೆ ನೀಡುವ ಕಾರಣ ಇದು…

ಬುದ್ಧಿಯ ಮಾತು ಬೇಡ, ಮನಸಿನ ಮಾತು ಕೇಳಿ ಎಂಬುದು ಯುವ ಜನರಿಗೆ ಸುಂದರ್ ಪಿಚೈ ಅವರ ಸೊಗಸಾದ ಹಿತನುಡಿ.

‘ನಿಮ್ಮ ಮನಸು ಯಾವುದರಲ್ಲಿ ಖುಷಿ ಪಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳಬೇಕು. ಬುದ್ಧಿಯ ಮಾತು ಕೇಳುವುದಕ್ಕಿಂತ ಮನಸಿನ ಈ ಖುಷಿ ಏನು ಎಂದು ತಿಳಿಯಲು ಯತ್ನಿಸಿ. ಇದೊಂದು ಪ್ರಯಾಣ ಇದ್ದಂತೆ. ಈ ಖುಷಿ ಯಾವುದು ಎಂಬುದನ್ನು ನೀವು ಕಂಡುಕೊಂಡರೆ ಆಗಲೇ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು,’ ಎಂದು ಸುಂದರ್ ಪಿಚೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಡಿಎ ಹೆಚ್ಚಳ ಘೋಷಣೆ; ಸಂಬಳ ಎಷ್ಟು ಹೆಚ್ಚಾಗಬಹುದು, ಇಲ್ಲಿದೆ ಲೆಕ್ಕಾಚಾರ

ಮಕ್ಕಳು ಯಾವ ಕೋರ್ಸ್ ಓದಬೇಕೆಂದು ಸಾಮಾನ್ಯವಾಗಿ ಪೋಷಕರೇ ನಿರ್ಧರಿಸುವುದುಂಟು. ಸಿವಿಲ್ ಎಂಜಿನಿಯರ್ ಆಗಬೇಕೆಂದು ಬಹಳ ಇಚ್ಛೆ ಹೊಂದಿದ್ದ ವಿದ್ಯಾರ್ಥಿಯೊಬ್ಬ ಮನೆಯವರ ಒತ್ತಡಕ್ಕೆ ಒಳಗಾಗಿ ವೈದ್ಯಕೀಯ ಕೋರ್ಸ್​ಗೆ ಸೇರಿದರೆ ಹೇಗಾಗಬಹುದು? ಕೋರ್ಸ್ ಓದಬಹುದು. ಆದರೆ, ವೃತ್ತಿಯಲ್ಲಿ ಇಷ್ಟಪಟ್ಟು ಮುಂದುವರಿಯಲು ಆಗುತ್ತದೆಯೇ? ಜೀವನದಲ್ಲಿ ಕೆಲಸದ ಸಂತೃಪ್ತಿ, ವೃತ್ತಿ ಏಳ್ಗೆ ಸಿಗದೇ ಹೋಗಬಹುದು. ಕೆಲಸದ ಒತ್ತಡದಿಂದ ಬಳಲಬಹುದು ಎಂಬುದು ತಜ್ಞರ ಅನಿಸಿಕೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹಿತನುಡಿ ಕೂಡ ಇದೇ ನಿಟ್ಟಿನಲ್ಲಿ ಇರುವಂಥದ್ದು.

ಮಕ್ಕಳಿಗೆ ಲಕ್ಷ್ಮಣರೇಖೆ ಹಾಕುತ್ತಾರಾ ಪಿಚೈ?

ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುಂದರ್ ಪಿಚೈ ಅವರು ತಮ್ಮ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿರ್ಬಂಧದ ಗೆರೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದರು.

ತಂತ್ರಜ್ಞಾನದ ಅರಿವು ಇವತ್ತು ಎಲ್ಲರಿಗೂ ಇರಬೇಕು. ಆದರೆ, ಅದೇ ನಮ್ಮನ್ನು ಆವರಿಸಬಾರದು. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸ್ವಯಂ ನಿಯಂತ್ರಣ ಇರಬೇಕು ಎಂದು ಹೇಳುವ ಗೂಗಲ್ ಸಿಇಒ, ತಮ್ಮ ಮಕ್ಕಳಿಗೆ ಸೀಮಿತ ಅವಧಿಗೆ ಮಾತ್ರ ಮೊಬೈಲ್, ಟಿವಿ ಬಳಕೆಗೆ ಅವಕಾಶ ಕೊಡುತ್ತಾರಂತೆ.

ಇದನ್ನೂ ಓದಿ: ಎಸ್​ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ

ಸುಂದರ್ ಪಿಚೈ ಏಕಕಾಲದಲ್ಲಿ 20 ಮೊಬೈಲ್ ಬಳಸುತ್ತಾರೆ; ಏಕೆ?

ವೈಯಕ್ತಿಕವಾಗಿ ಮೊಬೈಲ್ ಬಳಕೆಯಿಂದ ದೂರ ಇರಲು ಇಚ್ಛಿಸುವ ಸುಂದರ್ ಪಿಚೈ ಬಳಿ 20 ಮೊಬೈಲ್​ಗಳಿರುತ್ತವೆ. ಏಕಕಾಲದಲ್ಲಿ ಅವರು ಈ ಮೊಬೈಲ್​ಗಳನ್ನು ಬಳಸುತ್ತಾರೆ ಎಂದರೆ ಅಚ್ಚರಿ ಎನಿಸಬಹುದು. ಆದರೆ, ಸಿಇಒ ಹುದ್ದೆಯ ಕಾರಣಕ್ಕೆ ಅವರು ಇಷ್ಟು ಮೊಬೈಲ್​ಗಳನ್ನು ಬಳಸುವುದು ಅನಿವಾರ್ಯ ಎನ್ನಲಾಗಿದೆ. ಎಲ್ಲಾ ಮೊಬೈಲ್​ನಲ್ಲೂ ಅವರು ಗೂಗಲ್​ನ ಆ್ಯಪ್​ಗಳು ಸರಿಯಾಗಿ ಕೆಲಸ ಮಾಡುತ್ತವೆಯಾ ಎಂಬುದನ್ನು ಸಿಇಒ ಆಗಿ ಗಮನಿಸುವ ಜವಾಬ್ದಾರಿ ಅವರಿಗಿರುತ್ತದೆ. ಅದಕ್ಕಾಗಿ ಅವರು ಏಕಕಾಲದಲ್ಲಿ ಅಷ್ಟು ಮೊಬೈಲ್​ಗಳನ್ನು ಬಳಸುತ್ತಾರೆ.

ವೀಕೆಂಡ್​ನಲ್ಲೂ ಅವರು ಮೊಬೈಲ್ ಬಳಕೆಯಿಂದ ಪೂರ್ಣವಾಗಿ ದೂರ ಇರಲು ಆಗುವುದಿಲ್ಲವಂತೆ. ಅದಕ್ಕೆ ಕಾರಣ ಅವರ ಹುದ್ದೆಯ ಜವಾಬ್ದಾರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?