
ಷೇರುಗಳ ನಿಯಮಿತ ವಹಿವಾಟುಗಳೇ ಬೇರೆ, ಹೂಡಿಕೆಯೇ ಬೇರೆ. ಹಲವರು ಎರಡನ್ನೂ ಒಂದೇ ತಕ್ಕಡಿಯಲ್ಲಿ ನೋಡುತ್ತಾರೆ. ಇದು ತಪ್ಪು, ಮಾತ್ರವಲ್ಲ, ಟ್ಯಾಕ್ಸ್ ವಿಚಾರದಲ್ಲಿ ಹಿನ್ನಡೆಯೂ ಆಗಬಹುದು. ಅನೇಕ ಹೂಡಿಕೆದಾರರ ಪೋರ್ಟ್ಫೋಲಿಯೋದಲ್ಲಿ ಅಲ್ಪಾವಧಿ ಹೂಡಿಕೆ (short term investment) ಮತ್ತು ದೀರ್ಘಾವಧಿ ಹೂಡಿಕೆಯ (long term investment) ಷೇರುಗಳು ಬೆರೆತು ಹೋಗಿರುತ್ತವೆ. ಹೂಡಿಕೆದಾರರು ಕೂಡ ಯಾವ ಷೇರನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಮಾರಬೇಕು ಎಂದು ಗೊಂದಲ ಪಡುವುದುಂಟು. ಭಾರತದ ಅಗ್ರಮಾನ್ಯ ಬ್ರೋಕರ್ ಸಂಸ್ಥೆಯಾದ ಝೀರೋಧದ ಸಿಇಒ ನಿತಿನ್ ಕಾಮತ್ (Nithin Kamath) ಅವರು ಈ ಗೊಂದಲಕ್ಕೆ ಒಂದು ಸರಳ ಪರಿಹಾರ ಸೂಚಿಸಿದ್ದಾರೆ.
ಹೂಡಿಕೆದಾರರು ಟ್ರೇಡಿಂಗ್ಗೆ ಒಂದು, ದೀರ್ಘಾವಧಿ ಹೂಡಿಕೆಗೆ ಒಂದು, ಹೀಗೆ ಎರಡು ಪ್ರತ್ಯೇಕ ಡೀಮ್ಯಾಟ್ ಅಕೌಂಟ್ ಹೊಂದುವುದು ಉತ್ತಮ ಎಂದು ಕಾಮತ್ ಸಲಹೆ ನೀಡಿದ್ದಾರೆ. ದೀರ್ಘಾವಧಿ ಹೂಡಿಕೆಗೆ ಸೆಕೆಂಡರಿ ಡೀಮ್ಯಾಟ್ ಅಕೌಂಟ್ ರಚಿಸಬೇಕು ಎಂಬುದು ಅವರ ಸಲಹೆ. ಹೀಗೆ ಮಾಡಿದರೆ, ತೆರಿಗೆ ಉಳಿತಾಯ ಕೂಡ ಸಾಧ್ಯವಂತೆ. ನಿತಿನ್ ಕಾಮತ್ ಝೀರೋಧ ಸ್ಥಾಪಿಸುವ ಮೊದಲು ಈ ಅಂಶವನ್ನು ಪಾಲಿಸುತ್ತಿದ್ದರಂತೆ.
‘ನಾನು ಸಕ್ರಿಯವಾಗಿ ಟ್ರೇಡಿಂಗ್ ಮಾಡುತ್ತಿದ್ದಾಗ ಆಫ್ಲೈನ್ ಡೀಮ್ಯಾಟ್ ಅಕೌಂಟ್ ಹೊಂದಿದ್ದೆ. ಇದರಲ್ಲಿ ನನ್ನ ಎಲ್ಲಾ ಹೂಡಿಕೆಗಳಿದ್ದವು. ನನ್ನ ಟ್ರೇಡ್ಗಳಿಗೆ ಒಂದು ಆನ್ಲೈನ್ ಅಕೌಂಟ್ ಮಾಡಿದ್ದೆ. ಹೂಡಿಕೆಗಳನ್ನು ಟ್ರೇಡ್ ಮಾಡುವ ಸಂದರ್ಭವನ್ನು ಇದು ನಿಗ್ರಹಿಸುತ್ತದೆ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದ್ದಾರೆ.
When I was trading actively (before Zerodha), I had an offline demat account where I held all my investments and an online account for all my trades. This was a way to avoid the temptation of “trading” my investments 😬
If I had to sell any of my investments, there was effort…
— Nithin Kamath (@Nithin0dha) September 10, 2025
ಇದನ್ನೂ ಓದಿ: Janaushadhi centres: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನೌಷಧಿ ಕೇಂದ್ರಗಳಿಗೆ ನಿಯಮ ಸಡಿಲ
ಹೂಡಿಕೆಗೆಂದು ಖರೀದಿಸಲಾಗುವ ಷೇರುಗಳನ್ನು ಪ್ರತ್ಯೇಕ ಡೀಮ್ಯಾಟ್ ಅಕೌಂಟ್ನಲ್ಲಿ ಇರಿಸುವುದು ಉತ್ತಮ. ಇವು ದೀರ್ಘಾವಧಿ ಇದ್ದರೆ ಉತ್ತಮ ರಿಟರ್ನ್ಸ್ ಕೊಡುವ ಸಾಧ್ಯತೆ ಹೆಚ್ಚು. ಕೆಲ ದಿನಗಳಿಗೋ, ಅಥವಾ ವಾರಗಳಿಗೋ ಇರಿಸಿಕೊಂಡು ಲಾಭಕ್ಕೆ ಮಾರುವ ಉದ್ದೇಶ ಇದ್ದರೆ ಅವನ್ನು ಪ್ರತ್ಯೇಕ ಡೀಮ್ಯಾಟ್ ಅಕೌಂಟ್ನಲ್ಲಿ ಇಡಬೇಕು. ಇದರಿಂದ ಟ್ಯಾಕ್ಸ್ ಕೂಡ ಉಳಿಸಲು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Fri, 12 September 25