Deepavali Bank Holidays 2024: ದೀಪಾವಳಿಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ; ನವೆಂಬರ್​ನಲ್ಲಿ ರಜಾ ದಿನಗಳ ಪಟ್ಟಿ

Bank holidays on November 2024: ಈ ಬಾರಿ ದೀಪಾವಳಿ ಹಬ್ಬಕ್ಕೆ ಸಾಲುಸಾಲು ರಜೆ ಇದೆ. ಬ್ಯಾಂಕುಗಳಿಗೆ ಸತತ 4 ದಿನ ರಜೆ ಇದೆ. ಅಕ್ಟೋಬರ್ 31, ಗುರುವಾರದಿಂದ ಆರಂಭವಾಗಿ ನವೆಂಬರ್ 3, ಭಾನುವಾರದವರೆಗೂ ಬ್ಯಾಂಕುಗಳು ಬಾಗಿಲು ಮುಚ್ಚಿರುತ್ತವೆ. ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಒಟ್ಟಾರೆ 13 ದಿನ ರಜೆ ಇದ್ದರೆ, ಕರ್ನಾಟಕದಲ್ಲಿ 9 ದಿನ ಇದೆ.

Deepavali Bank Holidays 2024: ದೀಪಾವಳಿಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ; ನವೆಂಬರ್​ನಲ್ಲಿ ರಜಾ ದಿನಗಳ ಪಟ್ಟಿ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Oct 23, 2024 | 5:47 PM

ನವದೆಹಲಿ, ಅಕ್ಟೋಬರ್ 23: ಭಾರತದಲ್ಲಿ ಅತಿ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ದೀಪಾವಳಿ ಪ್ರಮುಖವಾದುದು. ಈ ಹಬ್ಬದ ಸಂದರ್ಭದಲ್ಲಿ ಬ್ಯಾಂಕುಗಳು ಸತತ ನಾಲ್ಕು ದಿನ ಬಂದ್ ಆಗಿರುತ್ತವೆ. ಇದರಲ್ಲಿ ಭಾನುವಾರವೂ ಒಂದು ಒಳಗೊಂಡಿದೆ. ಅಕ್ಟೋಬರ್ 31ರಂದು ಆರಂಭವಾಗಿ ನವೆಂಬರ್ 3ರವರೆಗೂ ಸತತ ರಜೆಗಳಿವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ 15 ರಜೆಗಳಿದ್ದವು. ಮುಂಬರುವ ನವೆಂಬರ್ ತಿಂಗಳಲ್ಲಿ ರಜಾ ದಿನಗಳ ಸಂಖ್ಯೆ 13 ಇದೆ. ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕುಗಳಿಗೆ ರಜೆ ಇದೆ. ಈ ಪಟ್ಟಿಯಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳು ಸೇರಿವೆ.

ದೀಪಾವಳಿ ಹಬ್ಬ ಸಂದರ್ಭದಲ್ಲಿ ಬ್ಯಾಂಕ್ ರಜಾದಿನಗಳು

  1. ಅಕ್ಟೋಬರ್ 31, ಗುರುವಾರ: ಕಾಳಿ ಪೂಜೆ, ನರಕ ಚತುರ್ದಶಿ
  2. ನವೆಂಬರ್ 1, ಶುಕ್ರವಾರ: ದೀಪಾವಳಿ ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ
  3. ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ಗೋವರ್ಧನ ಪೂಜೆ, ವಿಕ್ರಮ್ ಸಂವತ್ ಹೊಸ ವರ್ಷದ ಆರಂಭ
  4. ನವೆಂಬರ್ 3, ಭಾನುವಾರ

2024ರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ನವೆಂಬರ್ 1, ಶುಕ್ರವಾರ: ದೀಪಾವಳಿ
  • ನವೆಂಬರ್ 2, ಶನಿವಾರ: ಬಲಿಪಾಡ್ಯಮಿ
  • ನವೆಂಬರ್ 3: ಭಾನುವಾರದ ರಜೆ
  • ನವೆಂಬರ್ 7, ಗುರುವಾರ: ಛಾತ್ ಪೂಜೆ (ಬಿಹಾರದಲ್ಲಿ ರಜೆ)
  • ನವೆಂಬರ್ 8, ಶುಕ್ರವಾರ: ವಾಂಗಲ ಹಬ್ಬ (ಮೇಘಾಲಯದಲ್ಲಿ ರಜೆ
  • ನವೆಂಬರ್ 9: ಎರಡನೇ ಶನಿವಾರ
  • ನವೆಂಬರ್ 10: ಭಾನುವಾರದ ರಜೆ
  • ನವೆಂಬರ್ 15, ಶುಕ್ರವಾರ: ಗುರುನಾನಕ್ ಜಯಂತಿ, ಕಾರ್ತೀಕ ಪೂರ್ಣಿಮಾ (ಹಲವು ರಾಜ್ಯಗಳಲ್ಲಿ ರಜೆ)
  • ನವೆಂಬರ್ 17: ಭಾನುವಾರದ ರಜೆ
  • ನವೆಂಬರ್ 18, ಸೋಮವಾರ: ಕನಕದಾಸ ಜಯಂತಿ (ಕರ್ನಾಟಕದಲ್ಲಿ ರಜೆ)
  • ನವೆಂಬರ್ 22, ಶುಕ್ರವಾರ: ಲಬಾಬ್ ಡೂಚೆನ್ (ಸಿಕ್ಕಿಮ್​ನಲ್ಲಿ ರಜೆ)
  • ನವೆಂಬರ್ 23: ನಾಲ್ಕನೇ ಶನಿವಾರ
  • ನವೆಂಬರ್ 24: ಭಾನುವಾರದ ರಜೆ

ಇದನ್ನೂ ಓದಿ: ಈ ಒಂದು ಡೀಲ್​ಗಾಗಿ ಕನ್ನಡದ ಕಲರ್ಸ್ ಸೂಪರ್ ಸೇರಿ ಏಳು ಚಾನಲ್​ಗಳನ್ನು ಮಾರಬೇಕಿರುವ ಅಂಬಾನಿ

2024ರ ನವೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

  • ನವೆಂಬರ್ 1, ಶುಕ್ರವಾರ: ದೀಪಾವಳಿ
  • ನವೆಂಬರ್ 2, ಶನಿವಾರ: ಬಲಿಪಾಡ್ಯಮಿ
  • ನವೆಂಬರ್ 3: ಭಾನುವಾರದ ರಜೆ
  • ನವೆಂಬರ್ 9: ಎರಡನೇ ಶನಿವಾರ
  • ನವೆಂಬರ್ 10: ಭಾನುವಾರದ ರಜೆ
  • ನವೆಂಬರ್ 17: ಭಾನುವಾರದ ರಜೆ
  • ನವೆಂಬರ್ 18, ಸೋಮವಾರ: ಕನಕದಾಸ ಜಯಂತಿ
  • ನವೆಂಬರ್ 23: ನಾಲ್ಕನೇ ಶನಿವಾರ
  • ನವೆಂಬರ್ 24: ಭಾನುವಾರದ ರಜೆ

ನವೆಂಬರ್ 1ರಂದು ಷೇರು ಮಾರುಕಟ್ಟೆಗೂ ರಜೆ ಇರುತ್ತದೆ. ಆದರೆ ಅಂದು ಸಂಜೆ ಆರರಿಂದ ಏಳರವರೆಗೆ ಒಂದು ಗಂಟೆ ಅವಧಿ ಮುಹೂರ್ತ ವ್ಯಾಪಾರ ನಡೆಯುತ್ತದೆ. ಅದು ಬಿಟ್ಟರೆ ಉಳಿದಂತೆ ಷೇರು ವ್ಯವಹಾರಗಳು ಅಂದು ಬೆಳಗ್ಗೆಯಿಂದ ಇರುವುದಿಲ್ಲ.

ಇದನ್ನೂ ಓದಿ: 2024-26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7ರಿಂದ 8; ಡಲಾಯ್ಟ್, ಐಎಂಎಫ್, ಆರ್​ಬಿಐ ಅಂದಾಜು

ಇನ್ನು, ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ತೊಂದರೆ ಇರುವುದಿಲ್ಲ. ಆನ್​ಲೈನ್​ನಲ್ಲಿ ಬ್ಯಾಂಕಿಂಗ್ ಲಭ್ಯ ಇರುತ್ತದೆ. ಎಟಿಎಂ ತೆರೆದಿರುತ್ತವೆ. ಯುಪಿಐ ಪಾವತಿಯೂ ಇದ್ದೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Wed, 23 October 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ