NSDC ಮತ್ತು HCL ಟೆಕ್ ತಂಡವು ಉದ್ಯೋಗ ಮಾರುಕಟ್ಟೆಯಲ್ಲಿ ಪದವಿಗಿಂತ ಕೌಶಲ್ಯಗಳಿಗೆ ಆದ್ಯತೆ ನೀಡಲು ಕೈಜೋಡಿಸಿವೆ

ಈ ಒಪ್ಪಂದವನ್ನು ಎನ್.ಎಸ್.ಡಿ.ಸಿ.ಯ ಸಿಇಒ ವೇದ್ ಮಣಿ ತಿವಾರಿ ಮತ್ತು ಎಚ್.ಸಿ.ಎಲ್. ಟೆಕ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ. ವಿಜಯ್ ಕುಮಾರ್ ಈ ಒಪ್ಪಂದವನ್ನು ವಿನಿಮಯ ಮಾಡಿಕೊಂಡರು. ಈ ಸಹಯೋಗವು ಇತ್ತೀಚಿನ ಜಿ20 ಡಿಜಿಟಲ್ ಇಕಾನಮಿ ವರ್ಕಿಂಗ್ ಗ್ರೂಪ್ ಸಭೆಯ ನಂತರದಲ್ಲಿ ಬಂದಿದ್ದು ಅದು ಡಿಜಿಟಲ್ ಸ್ಕಿಲ್ಲಿಂಗ್, ಡಿಜಿಟಲ್ ಇಕಾನಮಿ ಮತ್ತು ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ಎಂಬ ಮೂರು ಚರ್ಚೆಯ ವಿಷಯಗಳಲ್ಲಿ ಪರಸ್ಪರ ಅನುಮೋದನೆ ಸಾಧಿಸಿದೆ.

NSDC ಮತ್ತು HCL ಟೆಕ್ ತಂಡವು ಉದ್ಯೋಗ ಮಾರುಕಟ್ಟೆಯಲ್ಲಿ ಪದವಿಗಿಂತ ಕೌಶಲ್ಯಗಳಿಗೆ ಆದ್ಯತೆ ನೀಡಲು ಕೈಜೋಡಿಸಿವೆ
NSDC ಮತ್ತು HCL ಟೆಕ್ ತಂಡ
Follow us
TV9 Web
| Updated By: ನಯನಾ ಎಸ್​ಪಿ

Updated on: Nov 04, 2023 | 10:47 AM

ಭಾರತೀಯ ಯುವಜನರನ್ನು ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಸನ್ನದ್ಧವಾಗಿಸುವ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್(NSDC), HCL.techನೊಂದಿಗೆ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಲಯಗಳಲ್ಲಿ ಕೌಶಲ್ಯಗಳ ಅಂತರ ತುಂಬಲು ಸಹಯೋಗ ಹೊಂದಿದೆ.ಈ ಸಹಯೋಗದ ಭಾಗವಾಗಿ ಎರಡೂ ಸಂಸ್ಥೆಗಳು ವೈವಿಧ್ಯಮಯ ಹಿನ್ನೆಲೆಗಳ ಕಲಿಕಾರ್ಥಿಗಳಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲು ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳು ಮತ್ತು ವಾಣಿಜ್ಯ ಅವಕಾಶಗಳನ್ನು ಆವಿಷ್ಕರಿಸಲು ಒಟ್ಟಿಗೆ ಶ್ರಮಿಸಲಿವೆ.

ಈ ಒಪ್ಪಂದವನ್ನು ಎನ್.ಎಸ್.ಡಿ.ಸಿ.ಯ ಸಿಇಒ ವೇದ್ ಮಣಿ ತಿವಾರಿ ಮತ್ತು ಎಚ್.ಸಿ.ಎಲ್. ಟೆಕ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ. ವಿಜಯ್ ಕುಮಾರ್ ಈ ಒಪ್ಪಂದವನ್ನು ವಿನಿಮಯ ಮಾಡಿಕೊಂಡರು. ಈ ಸಹಯೋಗವು ಇತ್ತೀಚಿನ ಜಿ20 ಡಿಜಿಟಲ್ ಇಕಾನಮಿ ವರ್ಕಿಂಗ್ ಗ್ರೂಪ್(DEWG) ಸಭೆಯ ನಂತರದಲ್ಲಿ ಬಂದಿದ್ದು ಅದು ಡಿಜಿಟಲ್ ಸ್ಕಿಲ್ಲಿಂಗ್, ಡಿಜಿಟಲ್ ಇಕಾನಮಿ ಮತ್ತು ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ಎಂಬ ಮೂರು ಚರ್ಚೆಯ ವಿಷಯಗಳಲ್ಲಿ ಪರಸ್ಪರ ಅನುಮೋದನೆ ಸಾಧಿಸಿದೆ.

ಈ ಕಾರ್ಯತಂತ್ರೀಯ ಸಹಯೋಗವು ಎನ್.ಎಸ್.ಡಿ.ಸಿ ಮತ್ತು ಎಚ್.ಸಿ.ಎಲ್. ಟೆಕ್ ಗಳಿಗೆ ತಂತ್ರಜ್ಞಾನ ಮತ್ತು ತಂತ್ರಜ್ಞಾನೇತರ ಕೋರ್ಸ್ ಗಳಲ್ಲಿ(ಬಿ2ಬಿ ಮತ್ತು ಬಿ2ಸಿ)ಗಳಲ್ಲಿ ಜಂಟಿಯಾಗಿ ಮೌಲ್ಯಮಾಪನದ ವ್ಯಾಪ್ತಿಯನ್ನು ಮತ್ತು ಡಿಜಿಟಲ್ ಕಲಿಕೆಯನ್ನು ಪರಿವರ್ತಿಸಲಿದೆ. ಪ್ರತಿಭೆಯನ್ನು ಅನುಕೂಲತೆ ಮತ್ತು ವ್ಯಾಪ್ತಿ ವಿಸ್ತರಿಸಲು ಹೊಸ ಉತ್ಪನ್ನಗಳು ಮತ್ತು ಕಾರ್ಯಕ್ರಮಗಳ ಸೃಷ್ಟಿಗೆ ಸಹಯೋಗಕ್ಕೂ ಸಾಕಷ್ಟು ಅವಕಾಶವಿದೆ. ಹೆಚ್ಚುವರಿಯಾಗಿ ಪ್ರತಿ ಭಾರತೀಯನಿಗೂ ಗುಣಮಟ್ಟದ ತರಬೇತಿ ಲಭ್ಯವಾಗುವಂತೆ ಮಾಡಲು ಜಂಟಿಯಾಗಿ ಉದ್ಯಮಕ್ಕೆ ಪ್ರಸ್ತುತವಿರುವ ಸಂಪನ್ಮೂಲಗಳು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಲಿಕೆಯ ಪರಿಣಾಮ ಹೆಚ್ಚಿಸಲೂ ಆದ್ಯತೆ ನೀಡಲಾಗುತ್ತದೆ. ಈ ಸಹಯೋಗದ ಅಡಿಯಲ್ಲಿ ಮೌಲ್ಯಮಾಪನಕ್ಕೆ ಹೊಸ ಆಯಾಮ ಸೇರಿಸುವ ಡಿಜಿಟಲ್ ಕಲಿಕೆಯಲ್ಲಿ ಹೊಸ ಮಾನದಂಡಗಳನ್ನು ರೂಪಿಸುವುದು ಕಲಿಕೆಗೆ ಪ್ರವೇಶ ಪಡೆಯುವ ಮತ್ತು ತಂತ್ರಜ್ಞಾನದ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳ ಆಸಕ್ತಿಯನ್ನು ತೋರುತ್ತದೆ.

ಈ ಉಪಕ್ರಮವನ್ನು ಪ್ರಶಂಸಿಸಿದ ಎನ್.ಎಸ್.ಡಿ.ಸಿ.ಯ ಸಿಇಒ ವೇದ್ ಮಣಿ ತಿವಾರಿ, “ಎನ್.ಎಸ್.ಡಿ.ಸಿ. ಮತ್ತು ಎಚ್.ಸಿ.ಎಲ್. ಟೆಕ್ ಉದ್ಯೋಗ ಮಾರುಕಟ್ಟೆಗಳಲ್ಲಿ ವಿಶ್ವಾಸ ಹೆಚ್ಚಿಸುವ ಬದ್ಧತೆಯಿಂದ ಈ ಸಹಯೋಗಕ್ಕೆ ಪ್ರವೇಶಿಸಿವೆ. ಎರಡೂ ಸಂಸ್ಥೆಗಳು ಜಂಟಿಯಾಗಿ ಅಸೆಸ್ ಮೆಂಟ್ ಪ್ಲಾಟ್ ಫಾರಂ ಅಭಿವೃದ್ಧಿಪಡಿಸಿದ್ದು ಅಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಬೇಡಿಕೆಯಲ್ಲಿರುವ ಕೌಶಲ್ಯಗಳಿಗೆ ಸ್ವತಃ ಮೌಲ್ಯಮಾಪನ ಮಾಡಿಕೊಂಡು ಪ್ರಮಾಣಪತ್ರ ಪಡೆಯಬಹುದು. ಇದು ಅರ್ಹತೆ ಆಧರಿತ ನೇಮಕದಿಂದ ಕೌಶಲ್ಯ ಆಧರಿತ ಬೇಡಿಕೆಯತ್ತ ಮುನ್ನಡೆಯಲು ಗಮನಾರ್ಹ ಹೆಜ್ಜೆಯಾಗಿದೆ. ಎರಡೂ ಪಕ್ಷಗಳು ಚಲನಶೀಲ ಉದ್ಯೋಗದ ಮಾರುಕಟ್ಟೆಗೆ ರಿಸ್ಕಿಲ್ಲಿಂಗ್, ಅಪ್ ಸ್ಕಿಲ್ಲಿಂಗ್ ಆನ್ಲೈನ್ ಕೋರ್ಸ್ ಗಳನ್ನು ಒದಗಿಸಲು ಸಹಯೋಗ ಕೂಡಾ ಹೊಂದಿದ್ದೇವೆ” ಎಂದರು.

ಮೌಲ್ಯಮಾಪನದ ಮಾರುಕಟ್ಟೆಯು 2027ರ ವೇಳೆಗೆ 10 ಬಿಲಿಯನ್ ಡಾಲರ್ ಗೆ ವೃದ್ಧಿಸುವ ನಿರೀಕ್ಷೆ ಇದೆ. ಉತ್ತರ ಅಮೆರಿಕಾ 2021ರಲ್ಲಿ ಅತ್ಯಂತ ಹೆಚ್ಚಿನ ಆದಾಯ(ಶೇ.40) ಹೊಂದಿದೆ. ಯೂರೋಪ್ ಅಂತಾರಾಷ್ಟ್ರೀಯ ಉದ್ಯೋಗಾರ್ಹತೆ ಮತ್ತು ಉದ್ಯೋಗದ ಪ್ರಮಾಣದಲ್ಲಿ ಗಮನಾರ್ಹ ಪಾತ್ರ ವಹಿಸಿದೆ, ಆದ್ದರಿಂದ ಅಸೆಸ್ ಮೆಂಟ್ ಸರ್ವೀಸಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲಿಗೆ ಕೊಡುಗೆ ನೀಡಿದೆ. ಎಪಿಎಸಿ ಮಾರುಕಟ್ಟೆಯು ಈ ಮುನ್ನೋಟದ ಅವಧಿಯಲ್ಲಿ ಅತ್ಯಂತ ವೇಗದ ಆದಾಯದ ಪ್ರಗತಿ ನಿರೀಕ್ಷಿಸಿದೆ.

ಈ ಒಪ್ಪಂದದ ಭಾಗವಾಗಿ ಎನ್.ಎಸ್.ಡಿ.ಸಿ ಮತ್ತು ಎಚ್.ಸಿ.ಎಲ್. ಟೆಕ್ ಜಂಟಿಯಾಗಿ ಪರಸ್ಪರರ ತಾಂತ್ರಿಕ ಮತ್ತು ಡೊಮೈನ್ ಪರಿಣಿತಿಯನ್ನು ಅಸೆಸ್ ಮೆಂಟ್ ಪ್ಲಾಟ್ ಫಾರಂ, ಅಸೆಸ್ ಮೆಂಟ್ ಮತ್ತು ಹೈರಿಂಗ್ ಟೆಸ್ಟ್(ತಂತ್ರಜ್ಞಾನ ಮತ್ತು ತಂತ್ರಜ್ಞಾನೇತರ), ಸ್ಮಾರ್ಟ್ ಲ್ಯಾಬ್ಸ್ ಮತ್ತು ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಲಹಾ ಸೇವೆಗಳಲ್ಲಿ ಅನುಷ್ಠಾನಗೊಳಿಸಲಿವೆ.

ಹೆಚ್ಚುವರಿಯಾಗಿ ಎರಡೂ ಪಕ್ಷಗಳು ಜಂಟಿಯಾಗಿ ಮೌಲ್ಯಮಾಪನಗಳನ್ನು ಡಿಜಿಟಲೀಕರಣ ಮತ್ತು ಡಿಜಿಟೈಸ್ ಮಾಡಲು ಸಹಯೋಗ ಹೊಂದಲಿದ್ದು ವಿಸ್ತಾರವಾದ ಕೌಶಲ್ಯ ನೀಡಿಕೆ ಅಲ್ಲದೆ ಶೈಕ್ಷಣಿಕ ಇಕೊಸಿಸ್ಟಂ ಮತ್ತು ಸಲಹಾ ಸೇವೆಗಳು ಹಾಗೂ ತಂತ್ರಜ್ಞಾನ ಪರಿಹಾರಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿವೆ.

ಈ ಸಂದರ್ಭ ಕುರಿತು ಎಚ್.ಸಿ.ಎಲ್. ಟೆಕ್ ಕಾರ್ಪೊರೇಟ್ ಉಪಾಧ್ಯಕ್ಷೆ ಮತ್ತು ಗ್ಲೋಬಲ್ ಹೆಡ್ ಶ್ರೀಮತಿ ಶಿವಶಂಕರ್, “ಎನ್.ಎಸ್.ಡಿ.ಸಿ.ಯೊಂದಿಗೆ ಭಾರತಕ್ಕೆ ಮತ್ತು ಉಳಿದ ವಿಶ್ವಕ್ಕೆ ಭವಿಷ್ಯ ಸನ್ನದ್ಧ ಪ್ರತಿಭಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೈ ಜೋಡಿಸುವುದಕ್ಕೆ ನಾವು ಬಹಳ ಸಂತೋಷ ಹೊಂದಿದ್ದೇವೆ. ಎಚ್.ಸಿ.ಎಲ್. ಟೆಕ್ ನ ಪೂರ್ವಸಿದ್ಧವಾದ ಕೆರೀರ್ ಶೇಪರ್ ಲರ್ನಿಂಗ್ ಮತ್ತು ಅಸೆಸ್ ಮೆಂಟ್ ಪ್ಲಾಟ್ ಫಾರಂಗಳು ಮತ್ತು ಪ್ರತಿಭೆ ಮತ್ತು ದೇಶ ನಿರ್ಮಾಣದಲ್ಲಿ ಎನ್.ಎಸ್.ಡಿ.ಸಿ ಅನುಭವವು ಹೇಗೆ ತಂತ್ರಜ್ಞಾನವನ್ನು ಕೌಶಲ್ಯಕ್ಕೆ ಜಾಣ್ಮೆಯಿಂದ ಬಳಸಬಹುದು ಎನ್ನುವುದರ ಕುರಿತು ಗಮನಾರ್ಹ ಪರಿಣಾಮ ಬೀರಲಿದೆ” ಎಂದರು.

ತನ್ನ ಎಡ್ ಟೆಕ್ ಬಿಸಿನೆಸ್ ಅಡಿಯಲ್ಲಿ ಎಚ್.ಸಿ.ಎಲ್.ಟೆಕ್ ತನ್ನ ವಿಸ್ತಾರ ಅನುಭವದಿಂದ ಸರ್ಕಾರಗಳು, ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ತಂತ್ರಜ್ಞಾನ ರೂಪಿಸಿಕೊಳ್ಳಲು ಮತ್ತು ತನ್ನ ಕೆರೀರ್ ಶೇಪರ್ ಕಲಿಕೆ ಮತ್ತು ಮೌಲ್ಯಮಾಪನದ ಪ್ಲಾಟ್ ಫಾರಂಗಳ ಮೂಲಕ ಪ್ರತಿಭಾ ಕೌಶಲ್ಯ ಅಕಾಡೆಮಿಗಳನ್ನು ಪ್ರಾರಂಭಿಸಲು ನೆರವಾಗಲಿದೆ.

ಎನ್.ಎಸ್.ಡಿ.ಸಿ.ಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಭಾರತೀಯ ಯುವಜನರಿಗೆ ತಂತ್ರಜ್ಞಾನವನ್ನು ಕೌಶಲ್ಯಾಭಿವೃದ್ಧಿಗೆ ಅಳವಡಿಸುವ ಮೂಲಕ ಡಿಜಿಟಲ್ ಕೌಶಲ್ಯಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಆನ್ಲೈನ್ ಕಲಿಕಾ ಪ್ಲಾಟ್ ಫಾರಂಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಪರಿಚಯಿಸಿದ್ದು ತರಬೇತಿಯ ವಸ್ತುಗಳು ಬದಲಾಗುತ್ತಿರುವ ಉದ್ಯಮದ ಪ್ರವೃತ್ತಿಗಳಿಗೆ ಅನುಗುಣವಾಗಿ ಹೆಚ್ಚು ಲಭ್ಯ ಮತ್ತು ಅಳವಡಿಸಿಕೊಳ್ಳುವಂತೆ ಮಾಡುತ್ತಿದೆ.

ಇದನ್ನೂ ಓದಿ: ಗ್ಯಾಂಗ್ಲಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 2023 ರ ಭರವಸೆಯ ಮತ್ತು ನವೀನ ತಂತ್ರಜ್ಞಾನ ಕಂಪನಿ ಪ್ರಶಸ್ತಿಯನ್ನು ಗೆದ್ದಿದೆ

ಎನ್.ಎಸ್.ಡಿ.ಸಿ.ಯ ಡಿಜಿಟಲ್ ಕಲಿಕಾ ಉಪಕ್ರಮಗಳು ಭಾರತ ಮತ್ತು ಜಾಗತಿಕ ಪಾಲುದಾರರೊಂದಿಗೆ ಸಹಯೋಗ ಹೊಂದಿದ್ದು 1.4 ಲಕ್ಷ ನಿಮಿಷಗಳಿಗೂ ಹೆಚ್ಚು ಬಹು ಭಾಷಾ ಡಿಜಿಟಲ್ ಕಂಟೆಂಟ್ ಅನ್ನು ಹಲವಾರು ವಲಯಗಳಲ್ಲಿ ಲಭ್ಯವಾಗುವಂತೆ ಮಾಡಲಿದೆ. ಈ ಅಪಾರ ಸಂಪನ್ಮೂಲವು ಕಲಿಕಾರ್ಥಿಗಳಿಗೆ ಇಂದಿನ ತೀವ್ರವಾಗಿ ಪರಿವರ್ತನೆಯಾಗುತ್ತಿರುವ ವಿಶ್ವದಲ್ಲಿ ಅಗತ್ಯವಾದ ಡಿಜಿಟಲ್ ಕೌಶಲ್ಯಗಳೊಂದಿಗೆ ಸನ್ನದ್ಧವಾಗಿಸುತ್ತವೆ. ಅಲ್ಲದೆ ಉದ್ಯಮದ ನಾಯಕರೊಂದಿಗೆ ಎನ್.ಎಸ್.ಡಿ.ಸಿ.ಯ ಪಾಲುದಾರಿಕೆಯು ಉದ್ಯಮಕ್ಕೆ ನಿರ್ದಿಷ್ಟವಾದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಉದ್ಯಮದ ಅಗತ್ಯಗಳಿಗೆ ತಕ್ಕಂತೆ ತರಬೇತಿಯನ್ನು ರೂಪಿಸುತ್ತವೆ ಮತ್ತು ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದಲ್ಲದೆ ತರಬೇತಿಯ ಗುಣಮಟ್ಟ ಸುಧಾರಿಸುತ್ತದೆ. ಈ ಸಹಯೋಗವು ಡಿಜಿಟಲ್ ಯುಗದಲ್ಲಿ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರ ತುಂಬುವ ಮೂಲಕ ಭಾರತದ ಡಿಜಿಟಲ್ ಕೌಶಲ್ಯಗಳ ಕ್ರಾಂತಿಯನ್ನು ಉತ್ತೇಜಿಸುತ್ತದೆ.

ಇತ್ತೀಚೆಗೆ ಪ್ರಾರಂಭವಾದ ಸ್ಕಿಲ್ ಇಂಡಿಯಾ ಡಿಜಿಟಲ್(ಎಸ್.ಐ.ಡಿ.) ಅಂತಹ ಒಂದು ಪ್ಲಾಟ್ ಪಾರಂ ಆಗಿದ್ದು ಭಾರತವನ್ನು ವೃದ್ಧಿಸುತ್ತಿರುವ ಡಿಜಿಟಲ್ ಅರ್ಥವ್ಯವಸ್ಥೆಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಉಪಕ್ರಮವು ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ಸ್(ಡಿಪಿಐ)ನಲ್ಲಿ ಜಾಗತಿಕ ಒಮ್ಮತದ ಸಂದರ್ಭಕ್ಕೆ ಹೊಂದಿಕೊಂಡಿದೆ. ಈ ಪ್ಲಾಟ್ ಫಾರಂ ಯುವ ತಲೆಮಾರನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾರತವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿಸುವ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳಿಗೆ ಸಿದ್ಧಗೊಳಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ