AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ Oben Rorr Evo ಎಲೆಕ್ಟ್ರಿಕ್ ಬೈಕ್ ಸೂಪರ್ ಹಿಟ್; ಬೆಲೆ 1.25 ಲಕ್ಷ, 180 ಕಿಮೀ ರೇಂಜ್; ಬಿಸಿ ದೋಸೆಯಂತೆ ವಾಹನಗಳ ಮಾರಾಟ

Oben Electric's Oben Rorr Evo bike starts deliveries in Bengaluru: ಬೆಂಗಳೂರಿನ ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟಪ್ ಆದ 'ಓಬೆನ್ ಎಲೆಕ್ಟ್ರಿಕ್' (Oben Electric) ತನ್ನ ಜನಪ್ರಿಯ 'ಓಬೆನ್ ರೋರ್ ಇವೊ' (Oben Rorr EZ/Evo) ಎಲೆಕ್ಟ್ರಿಕ್ ಬೈಕ್‌ನ ವಿತರಣೆಯನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭಿಸಿದೆ. ಆರಂಭಗೊಂಡು ಕೇವಲ 15 ದಿನಗಳಲ್ಲೇ 25,000ಕ್ಕೂ ಅಧಿಕ ಬುಕಿಂಗ್ ಪಡೆದಿದೆ.

ಬೆಂಗಳೂರಿನ Oben Rorr Evo ಎಲೆಕ್ಟ್ರಿಕ್ ಬೈಕ್ ಸೂಪರ್ ಹಿಟ್; ಬೆಲೆ 1.25 ಲಕ್ಷ, 180 ಕಿಮೀ ರೇಂಜ್; ಬಿಸಿ ದೋಸೆಯಂತೆ ವಾಹನಗಳ ಮಾರಾಟ
ಓಬೆನ್ ರೋರ್ ಇವೊImage Credit source: Oben Electric website
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 09, 2026 | 11:25 PM

Share

ಬೆಂಗಳೂರು, ಜುಲೈ 9: ಸಿಲಿಕಾನ್ ಸಿಟಿ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಬೆನ್ ಎಲೆಕ್ಟ್ರಿಕ್, ತನ್ನ ಇತ್ತೀಚಿನ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾಡಲ್ ಆದ ‘ಓಬೆನ್ ರೋರ್ ಇವೊ’ (Oben Rorr Evo) ವಿತರಣೆಯನ್ನು (Deliveries) ತನ್ನ ತವರು ನಗರಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಈ ಬೈಕ್ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿದ್ದು, ದೇಶಾದ್ಯಂತ ಈಗಾಗಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ದಾಖಲಿಸಿದೆ.

‘ಓಬೆನ್ ರೋರ್ ಇವೊ’ ಬೈಕ್‌ನ ಪ್ರಮುಖ ಫೀಚರ್ಸ್

ಬಲಿಷ್ಠ ಬ್ಯಾಟರಿ ತಂತ್ರಜ್ಞಾನ: ಈ ಬೈಕ್‌ನಲ್ಲಿ ಸುರಕ್ಷಿತ ಮತ್ತು ದೀರ್ಘಕಾಲ ಬಾಳಿಕೆ ಬರುವ LFP (Lithium Iron Phosphate) ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಭಾರತದ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿದೆ.

  • ಉತ್ತಮ ರೇಂಜ್ (Range): ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಬೈಕ್ ಸುಮಾರು 175 ಕಿಲೋಮೀಟರ್ (IDC ರೇಂಜ್) ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ನಿತ್ಯದ ನಗರ ಸಂಚಾರಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
  • ವೇಗದ ಪಿಕಪ್: ಕೇವಲ 3.3 ಸೆಕೆಂಡುಗಳಲ್ಲಿ ಈ ಬೈಕ್ 0 ಯಿಂದ 40 ಕಿಮೀ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಮತ್ತು ಇದರ ಗರಿಷ್ಠ ವೇಗ ಗಂಟೆಗೆ 100 ಕಿಮೀ ಆಗಿದೆ.
  • ಫಾಸ್ಟ್ ಚಾರ್ಜಿಂಗ್: ಕೇವಲ 45 ನಿಮಿಷಗಳಲ್ಲಿ ಬೈಕ್‌ನ ಬ್ಯಾಟರಿಯನ್ನು ಶೇ. 80 ರಷ್ಟು ಚಾರ್ಜ್ ಮಾಡಬಹುದಾದ ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಬೆಂಬಲಿಸುತ್ತದೆ.
  • ಕಳ್ಳತನ ನಿರೋಧ: ಕಳ್ಳತನ ಅಸಾಧ್ಯವಾಗುವ ರೀತಿಯಲ್ಲಿ ಅಡ್ವಾನ್ಸ್ಡ್ ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್ ವ್ಯವಸ್ಥೆ ಈ ವಾಹನದಲ್ಲಿದೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಭರ್ಜರಿ ನೇಮಕಾತಿ; ಮೊದಲ ತ್ರೈಮಾಸಿಕದಲ್ಲಿ 9,200 ಉದ್ಯೋಗಿಗಳ ಸೇರ್ಪಡೆ; ಕಂಪನಿಯ ಆದಾಯವೂ ನಿರೀಕ್ಷೆಗಿಂತ ಹೆಚ್ಚು

ಬೆಂಗಳೂರಿನಿಂದಲೇ ಓಬೆನ್ ಎಲೆಕ್ಟ್ರಿಕ್ ಬೈಕ್ ವಿತರಣೆ ಆರಂಭ

ಕಂಪನಿಯು ತನ್ನ ಮೊದಲ ಹಂತದ ವಿತರಣೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ (HSR Layout) ನಲ್ಲಿರುವ ತನ್ನ ಪ್ರಮುಖ ಶೋರೂಮ್ ಮೂಲಕ ಆರಂಭಿಸಿದೆ. ಮುಂಬರುವ ವಾರಗಳಲ್ಲಿ ಮುಂಬೈ, ಪುಣೆ, ದೆಹಲಿ ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಿಗೂ ಈ ವಿತರಣೆಯನ್ನು ವಿಸ್ತರಿಸಲು ಕಂಪನಿ ಯೋಜಿಸಿದೆ. ಶೋರೂಮುಗಳ ಸಂಖ್ಯೆ 150 ದಾಟಿಸುವ ಗುರಿ ಹೊಂದಿದೆ.

ಓಬೆನ್ ಇವಿ ಬೈಕ್ ಬೆಲೆ 1.25 ಲಕ್ಷ ರೂ

ಓಬೆನ್ ರೋರ್ ಇವೊ ಎಲೆಕ್ಟ್ರಿಕ್ ಬೈಕ್​ನ ಎಕ್ಸ್ ಶೋರೂಮ್ ಬೆಲೆ 1,25,000 ರೂ ಇದೆ. ಇದಕ್ಕೆ ಇನ್ಷೂರೆನ್ಸ್, ರೋಡ್ ಟ್ಯಾಕ್ಸ್ ಇತ್ಯಾದಿ ಶುಲ್ಕ ಸೇರಿಸಿದರೆ 1.30 ಲಕ್ಷ ರೂ ದಾಟುತ್ತದೆ.

ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ

ಗ್ರಾಹಕರ ನಂಬಿಕೆ ನಮ್ಮ ಮೇಲಿದೆ: ಓಬೆನ್ ಎಲೆಕ್ಟ್ರಿಕ್ ಸಹ-ಸಂಸ್ಥಾಪಕಿ

“25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ನಮ್ಮ ಬೈಕ್‌ನ ವಿನ್ಯಾಸ ಮತ್ತು ತಂತ್ರಜ್ಞಾನದ ಮೇಲಿರುವ ಗ್ರಾಹಕರ ನಂಬಿಕೆಯನ್ನು ತೋರಿಸುತ್ತದೆ. ಬೆಂಗಳೂರಿನಿಂದ ಆರಂಭವಾಗಿರುವ ಈ ಪಯಣವನ್ನು ಶೀಘ್ರದಲ್ಲೇ ದೇಶದಾದ್ಯಂತ ವಿಸ್ತರಿಸಲಿದ್ದೇವೆ” ಎಂದು ಓಬೆನ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕಿ ಹಾಗೂ ಸಿಇಒ ಮಧುಮಿತಾ ಅಗರವಾಲ್ ತಿಳಿಸಿದ್ದಾರೆ.

ಐಐಟಿ ಮತ್ತು ಐಐಎಂನಲ್ಲಿ ಓದಿದ್ದ ದಿನಕರ್ ಅಗ್ರವಾಲ್ ಮತ್ತು ಮಧುಮಿತಾ ಅಗ್ರವಾಲ್ ಅವರು ಈ ಕಂಪನಿಯ ಸಂಸ್ಥಾಪಕರು. ದಿನಕರ್ ಅವರು ಸಿಒಒ ಆದರೆ, ಮಧುಮಿತಾ ಸಿಇಒ ಆಗಿದ್ದಾರೆ.

ಓಬೆನ್ ಎಲೆಕ್ಟ್ರಿಕ್- ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು ಮತ್ತು ಉತ್ತರಗಳು (FAQs)

ಪ್ರಶ್ನೆ: ಓಬೆನ್ ಎಲೆಕ್ಟ್ರಿಕ್ ಕಂಪನಿ ಯಾವ ದೇಶದ್ದು?

ಉತ್ತರ: ಓಬೆನ್ ಎಲೆಕ್ಟ್ರಿಕ್ ಕಂಪನಿ ಭಾರತದ್ದು. ಅದೂ ಬೆಂಗಳೂರಿನಲ್ಲೇ ಹುಟ್ಟಿರುವುದು. ಮಧುಮಿತಾ ಅಗರ್ವಾಲ್ ಮತ್ತು ದಿನಕರ್ ಅಗರ್ವಾಲ್ ಇದರ ಸಂಸ್ಥಾಪಕರು.

ಪ್ರಶ್ನೆ: ಓಬೆನ್ ಎಲೆಕ್ಟ್ರಿಕ್ ಯಾವ್ಯಾವ ಉತ್ಪನ್ನಗಳನ್ನು ಹೊಂದಿದೆ?

ಉತ್ತರ: ಓಬೆನ್ ಎಲೆಕ್ಟ್ರಿಕ್ ಸಂಸ್ಥೆ ಎಲೆಕ್ಟ್ರಿಕ್ ಬೈಕ್​ಗಳನ್ನು ತಯಾರಿಸುತ್ತದೆ. Rorr Evo ಮತ್ತು Rorr EZ Sigma ಎಂಬ 2 ಮಾಡಲ್​ಗಳು ಸದ್ಯಕ್ಕಿವೆ. Rorr Evo ವಿತರಣೆ ಆರಂಭವಾಗಿದೆ.

ಪ್ರಶ್ನೆ: ಓಬೆನ್ ರೋರ್ ಇವೋ ಬೈಕ್ ಬೆಲೆ ಎಷ್ಟು?

ಉತ್ತರ: ಓಬೆನ್ ಎಲೆಕ್ಟ್ರಿಕ್ ರೋರ್ ಇವೋ ಬೈಕ್​ನ ಎಕ್ಸ್ ಶೋರೂಮ್ ಬೆಲೆ 1,25,000 ರೂ ಇದೆ. ಇದರ ಬ್ಯಾಟರಿ ರೇಂಜ್ 180 ಕಿಮೀ ಇದೆ.

Published On - 10:34 pm, Thu, 9 July 26

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು