OnePlus 10R 5G: 150W SuperVOOC ಚಾರ್ಜರ್​ನ ಒನ್​ಪ್ಲಸ್‌ 10R ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ

Amazon Offer: ಒನ್​ಪ್ಲಸ್‌ 10R ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಈ ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು ಈ ಮೂರೂ ವೇರಿಯೆಂಟ್​ನಲ್ಲಿ 3,000 ರೂ. ಇಳಿಕೆ ಮಾಡಲಾಗಿದೆ. ಒನ್‌ಪ್ಲಸ್‌ 10R ಸ್ಮಾರ್ಟ್​ಫೋನ್​ನ 8GB RAM + 128GB ವೇರಿಯಂಟ್‌ 31,999 ರೂ. ಗೆ ಸೇಲ್ ಆಗುತ್ತಿದೆ. ಅಂತೆಯೆ 12GB RAM + 256GB ವೇರಿಯಂಟ್‌ 35,999 ರೂ. ಹಾಗೂ 12GB RAM + 256GB ವೇರಿಯಂಟ್‌ 36,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.

OnePlus 10R 5G: 150W SuperVOOC ಚಾರ್ಜರ್​ನ ಒನ್​ಪ್ಲಸ್‌ 10R ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ
OnePlus 10R
Edited By:

Updated on: Oct 08, 2026 | 12:57 PM

ಮುಖ್ಯಾಂಶಗಳು

  • ಒನ್​ಪ್ಲಸ್ 10R 5G ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ.
  • ಇದು 150W SuperVOOC ವೇಗದ ಚಾರ್ಜಿಂಗ್ ಹೊಂದಿದೆ.
  • ಮೂರೂ ವೇರಿಯೆಂಟ್​ನಲ್ಲಿ 3,000 ರೂ. ಇಳಿಕೆ ಮಾಡಲಾಗಿದೆ.

ಒನ್​ಪ್ಲಸ್ ಕಂಪನಿ ತನ್ನ ಒನ್​ಪ್ಲಸ್ 10ಆರ್ 5ಜಿ (OnePlus 10R 5G) ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಬರೋಬ್ಬರಿ 150W SuperVOOC ವೇಗದ ಚಾರ್ಜಿಂಗ್ ಜೊತೆಗೆ 80W SuperVOOC ಚಾರ್ಜಿಂಗ್‌ ಆವೃತ್ತಿಯಲ್ಲಿ ಬಿಡುಗಡೆ ಆದ ಈ ಫೋನ್​ಗೆ ಈಗಲೂ ಬೇಡಿಕೆಯಿದ್ದು ಸೇಲ್ ಕಾಣುತ್ತಿದೆ. ಈ ಫೋನ್ ಭಾರತದಲ್ಲಿ ಕಳೆದ ವರ್ಷ ಅನಾವರಣಗೊಂಡಿತ್ತು. ಇದೀಗ ಈ ಫೋನ್ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಈ ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು ಈ ಮೂರೂ ವೇರಿಯೆಂಟ್​ನಲ್ಲಿ 3,000 ರೂ. ಇಳಿಕೆ ಮಾಡಲಾಗಿದೆ. ಹಾಗಾದರೆ ಒನ್‌ಪ್ಲಸ್‌ 10R ಈಗ ಎಷ್ಟು ದರಕ್ಕೆ ಮಾರಾಟ ಆಗುತ್ತಿದೆ?. ಇದರ ಫೀಚರ್ಸ್ ಏನೇನಿದೆ? ಎಂಬುದನ್ನು ನೋಡೋಣ.

ಒನ್‌ಪ್ಲಸ್‌ 10R ಸ್ಮಾರ್ಟ್​ಫೋನ್​ನ 8GB RAM + 128GB ವೇರಿಯಂಟ್‌ 31,999 ರೂ. ಗೆ ಸೇಲ್ ಆಗುತ್ತಿದೆ. ಅಂತೆಯೆ 12GB RAM + 256GB ವೇರಿಯಂಟ್‌ 35,999 ರೂ. ಹಾಗೂ 12GB RAM + 256GB ವೇರಿಯಂಟ್‌ 36,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.

 

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ ನೀಡಲಾಗಿದ್ದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್‌ 20% ಸುಧಾರಿತ GPU ಕಾರ್ಯಕ್ಷಮತೆ, 25% ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದರಲ್ಲಿ ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆ ಸೇರಿಸಲಾಗಿದೆ.

 

Published On - 12:43 pm, Sun, 2 April 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us