AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Opening Bell: 58 ಸಾವಿರ ಪಾಯಿಂಟ್ಸ್ ಗಡಿ ದಾಟಿದ ಸೆನ್ಸೆಕ್ಸ್, ದಾಖಲೆ ಬರೆದ ಟಾಟಾ ಸಮೂಹದ ಕಂಪೆನಿಗಳು

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ ಆರಂಭದ ವಹಿವಾಟಿನಲ್ಲಿ 58000 ಪಾಯಿಂಟ್ಸ್ ದಾಟಿದೆ. ಟಾಟಾ ಸಮೂಹದ ಕಂಪೆನಿಗಳ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ಆಗಿದೆ.

Opening Bell: 58 ಸಾವಿರ ಪಾಯಿಂಟ್ಸ್ ಗಡಿ ದಾಟಿದ ಸೆನ್ಸೆಕ್ಸ್, ದಾಖಲೆ ಬರೆದ ಟಾಟಾ ಸಮೂಹದ ಕಂಪೆನಿಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 03, 2021 | 11:45 AM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಇಂದಿನ ಆರಂಭದ ವಹಿವಾಟಿನಲ್ಲಿ (ಸೆಪ್ಟೆಂಬರ್ 3, 2021) ಮತ್ತೆ ಹೊಸ ದಾಖಲೆಯನ್ನು ಬರೆಯಿತು. 58,115.69 ಪಾಯಿಂಟ್ಸ್ ತಲುಪುವುದರ ಮೂಲಕ 58 ಸಾವಿರ ಪಾಯಿಂಟ್ಸ್ ದಾಟಿ, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು. ಆದರೆ ಈ ವರದಿಯಾಗುವ ಹೊತ್ತಿಗೆ 16.72 ಪಾಯಿಂಟ್ಸ್ ಕುಸಿದು, 57,835.82 ಪಾಯಿಂಟ್ಸ್​ನಲ್ಲಿ ವಹಿವಾಟು ಆಗುತ್ತಿತ್ತು. ಇನ್ನು ನಿಫ್ಟಿ ವಿಚಾರಕ್ಕೆ ಬಂದರೆ, ಹಿಂದಿನ ದಿನಾಂತ್ಯಕ್ಕೆ 17,234.15 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿತ್ತು. ಇಂದಿನ ವಹಿವಾಟನ್ನು 17,262.45 ಪಾಯಿಂಟ್ಸ್​ನೊಂದಿಗೆ ಶುರು ಮಾಡಿ, ಗರಿಷ್ಠ ಮಟ್ಟವಾದ 17,311.95 ಪಾಯಿಂಟ್ಸ್ ಮುಟ್ಟಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ 14.85 ಪಾಯಿಂಟ್ಸ್ ಮೇಲೇರಿ 17,249 ಪಾಯಿಂಟ್ಸ್​ನಲ್ಲಿ ಇತ್ತು.

ಅಂದಹಾಗೆ ಒಟ್ಟಾರೆ ಟಾಟಾ ಸಮೂಹ ಕಂಪೆನಿಗಳ ಮಾರುಕಟ್ಟೆ ಮೌಲ್ಯ 22 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಸಮೂಹದ ಹಲವು ಕಂಪೆನಿಗಳು 2021ನೇ ಇಸವಿಯಲ್ಲಿ ಅಮೋಃಘವಾದ ಗಳಿಕೆ ಕಂಡಿವೆ. ಸೆಪ್ಟೆಂಬರ್ 2, 2021ಕ್ಕೆ ಅನ್ವಯಿಸುವಂತೆ ಟಾಟಾ ಟೆಲಿಸರ್ವೀಸ್ (ಮಹಾರಾಷ್ಟ್ರ) ಶೇ 364ರಷ್ಟು ಏರಿಕೆ ಆಗಿದೆ. ಇನ್ನು ಕನಿಷ್ಠ ಏಳು ಷೇರುಗಳು ಟಾಟಾ ಟೆಲಿಸರ್ವೀಸ್ (ಮಹಾರಾಷ್ಟ್ರ) (ಶೇ 364 ಏರಿಕೆ), ನೆಲ್ಕೋ (ಶೇ 188 ಏರಿಕೆ), ಟಾಟಾ ಎಲಾಕ್ಸಿ (ಶೇ 169), ಟಾಟಾ ಸ್ಟೀಲ್ ಬಿಎಸ್​ಎಲ್ (ಶೇ 134), ಟಾಟಾ ಸ್ಟೀಲ್ (ಶೇ 121), ಆಟೋಮೊಟಿವ್ ಸ್ಟ್ಯಾಂಪಿಂಗ್ಸ್ ಅಂಡ್ ಅಸೆಂಬ್ಲೀಸ್ (ಶೇ 110ರಷ್ಟು ಏರಿಕೆ) ಮತ್ತು ಟಾಟಾ ಕಾಫೀ (ಶೇ 100ರಷ್ಟು ಹೆಚ್ಚಳ)- ಈ ವರ್ಷದಲ್ಲಿ ಶೇ 100ಕ್ಕೂ ಹೆಚ್ಚು ಏರಿಕೆ ಕಂಡಿವೆ. ಈ ವರ್ಷ ಸೆನ್ಸೆಕ್ಸ್ ಸೂಚ್ಯಂಕವು ಶೇ 21ರಷ್ಟು ಏರಿಕೆ ಕಂಡಿದೆ.

ಬೆಳಗಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಐಷರ್ ಮೋಟಾರ್ಸ್ ಶೇ 3.09 ಒಎನ್​ಜಿಸಿ ಶೇ 2.36 ಹೀರೋ ಮೋಟೋಕಾರ್ಪ್ ಶೇ 2.03 ಕೋಲ್ ಇಂಡಿಯಾ ಶೇ 1.91 ಐಒಸಿ ಶೇ 1.82

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಎಚ್​ಡಿಎಫ್​ಸಿ ಲೈಫ್​ ಶೇ -3.06 ಹಿಂಡಾಲ್ಕೋ ಶೇ -1.29 ಎಚ್​ಯುಎಲ್​ ಶೇ -1.12 ಶ್ರೀ ಸಿಮೆಂಟ್ಸ್ ಶೇ -1.01 ಆಕ್ಸಿಸ್ ಬ್ಯಾಂಕ್ ಶೇ -0.83

ಇದನ್ನೂ ಓದಿ: Stock Market New Margin Rules: ಷೇರು ಮಾರುಕಟ್ಟೆಯಲ್ಲಿ ಸೆ. 1ರಿಂದ ಹೊಸ ಮಾರ್ಜಿನ್ ನಿಯಮ; ಟ್ರೇಡರ್ಸ್​ಗಳ ಆಕ್ರೋಶ

(Opening Bell Sensex Crossed 58000 Points And Tata Group Companies Rs 22 Lakh Crore)

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು