Gold Loan: ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್ಗಳು, ಎನ್ಬಿಎಫ್ಸಿಗಳಿವು
ಚಿನ್ನದ ಮೇಲಿನ ಸಾಲಕ್ಕೆ ಕಡಿಮೆ ಬಡ್ಡಿ ದರ ವಿಧಿಸುವ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಯಾವುದೇ ಆರ್ಥಿಕ ತುರ್ತು ಪರಿಸ್ಥಿತಿ ಇದ್ದರೂ ಚಿನ್ನವನ್ನು ಅಡಮಾನ ಮಾಡುವ ಮೂಲಕ ಸಾಲ ಪಡೆದು, ಬಿಕ್ಕಟ್ಟಿನ ಸ್ಥಿತಿಯಿಂದ ಹೊರಬರಬಹುದು. ಎಲ್ಲೆಲ್ಲಿ ಚಿನ್ನದ ಮೇಲೆ ಸಾಲ ದೊರೆಯುತ್ತದೋ ಅಲ್ಲಿ ಬಟ್ಟಿ ದರ, ಪ್ರೊಸೆಸಿಂಗ್ ಶುಲ್ಕ, ಮರುಪಾವತಿ ನಿಯಮಾವಳಿ ಇತ್ಯಾದಿಗಳು ಹೇಗಿದೆ ಎಂಬುದನ್ನು ಮೌಲ್ಯಮಾಪನ ಮಾಡಿದ ಮೇಲೆ ಎಲ್ಲಿ ಸಾಲ ಪಡೆಯಬೇಕು ಎಂಬುದನ್ನು ತೀರ್ಮಾನ ಮಾಡಬಹುದು. ಕೊವಿಡ್- 19 ಹಿನ್ನೆಲೆಯಲ್ಲಿ ಅಲ್ಪಾವಧಿಯಲ್ಲಿ ತುರ್ತು ಹಣಕಾಸಿನ ಅಗತ್ಯ ಹೆಚ್ಚಾಗಿದೆ. ಅಂದಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿಯಂತೆ, 2021ರ ಮಾರ್ಚ್ ವೇಳೆಗೆ ಚಿನ್ನದ ಮೇಲಿನ ಸಾಲದ ಪ್ರಮಾಣವು ಶೇ 82ರಷ್ಟು ಹೆಚ್ಚಳವಾಗಿ, 60,464 ಕೋಟಿ ರೂಪಾಯಿಯನ್ನು ಮುಟ್ಟಿತ್ತು. 2020ರ ಮಾರ್ಚ್ ವೇಳೆಗೆ ಈ ಬಗೆಯ ಸಾಲದ ಮೊತ್ತವು 33,303 ಕೋಟಿ ರೂಪಾಯಿ ಇತ್ತು. ಚಿನ್ನದ ಮೇಲಿನ ಸಾಲವು ಸುರಕ್ಷಿತ ಸಾಲ ಮತ್ತು ಅದರ ಬಡ್ಡಿದರಗಳು ವೈಯಕ್ತಿಕ ಸಾಲದ (ಪರ್ಸನಲ್ ಲೋನ್) ಬಡ್ಡಿದರಗಳಿಗಿಂತ ಕಡಿಮೆ ಇರುವುದರಿಂದ ಗೋಲ್ಡ್ ಲೋನ್ಗೆ ಆದ್ಯತೆ ಹೆಚ್ಚು. ಕೊರೊನಾ ಹಿನ್ನೆಲೆಯಲ್ಲಿ ಆರ್‌ಬಿಐ 2020ರ ಆಗಸ್ಟ್‌ನಲ್ಲಿ ಸೂಚಿಸಿದಂತೆ ಬ್ಯಾಂಕ್ಗಳು ಚಿನ್ನಕ್ಕೆ ನೀಡುವ ಮೌಲ್ಯ (ಎಲ್‌ಟಿವಿ) ಶೇ 90ರಷ್ಟು ಏರಿಸಿತು.
ಇಎಂಐನೊಂದಿಗೆ ಚಿನ್ನದ ಸಾಲ ಇಎಂಐ ಆಯ್ಕೆಯೊಂದಿಗಿನ ಚಿನ್ನದ ಸಾಲವು ಅತ್ಯಂತ ಸಾಮಾನ್ಯ ಎಂಬಂತಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಚಿನ್ನವನ್ನು ಅಡಮಾನ ಮಾಡಲು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಕಂಪೆನಿಯ ಶಾಖೆಗೆ ಭೇಟಿ ನೀಡಬಹುದು. ನಿಯಮಾವಳಿಗಳ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪೂರ್ವನಿರ್ಧಾರಿತ ಮರುಪಾವತಿ ಅವಧಿಗೆ ನಿಯಮಿತ ಇಎಂಐ ಆಯ್ಕೆಯೊಂದಿಗೆ ಮೊತ್ತವನ್ನು ಕ್ರೆಡಿಟ್ (ಜಮೆ) ಮಾಡುತ್ತವೆ.
ಬಡ್ಡಿ ದರಗಳು ಬ್ಯಾಂಕ್ಗಳಲ್ಲಿ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ರೂ. 5 ಲಕ್ಷ ಚಿನ್ನದ ಸಾಲದ ಮೇಲೆ, ಕಡಿಮೆ ಬಡ್ಡಿ ದರ ಶೇ 7ಕ್ಕೆ ನೀಡುತ್ತದೆ. ಇದು ಮೂರು ವರ್ಷಗಳ ಮರುಪಾವತಿ ಅವಧಿಯನ್ನು ಹೊಂದಿದೆ. ಕೆನರಾ ಬ್ಯಾಂಕ್ ಎರಡನೇ ಅಗ್ಗದ ಬಡ್ಡಿದರವನ್ನು ನೀಡುತ್ತಿದೆ. ಅಲ್ಲಿ ಚಿನ್ನದ ಸಾಲಗಳು ವಾರ್ಷಿಕ ಬಡ್ಡಿ ದರ ಶೇ 7.35ರಲ್ಲಿ ಸಿಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಪ್ರಸ್ತುತ ಶೇ 7.50ರ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರೂ. 5 ಲಕ್ಷದವರೆಗಿನ ಸಾಲಗಳಿಗೆ ಶೇ 8.20ರ ದರದಲ್ಲಿ 3 ವರ್ಷಗಳ ಅವಧಿಯೊಂದಿಗೆ ನೀಡುತ್ತಿದೆ.
ಬ್ಯಾಂಕ್ ಬಡ್ಡಿ ದರಗಳು (ವಾರ್ಷಿಕ) – ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: ಶೇ 7 – ಕೆನರಾ ಬ್ಯಾಂಕ್: ಶೇ 7.35 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 7.50 – ಇಂಡಿಯನ್ ಬ್ಯಾಂಕ್: ಶೇ 7.50 – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.20
ಎನ್ಬಿಎಫ್ಸಿಗಳು ವರ್ಷಕ್ಕೆ ಶೇ 9.24ರಿಂದ ಶೇ 12ರ ನಡುವೆ ಬಡ್ಡಿದರಗಳನ್ನು ವಿಧಿಸುತ್ತವೆ. ಎನ್ಬಿಎಫ್ಸಿಗಳಲ್ಲಿ IIFL ಫೈನಾನ್ಸ್ ಅಗ್ಗದ ಬಡ್ಡಿ ದರವಾದ ಶೇ 9.48ಕ್ಕೆ ನೀಡುತ್ತದೆ. ಮತ್ತೊಂದೆಡೆ, ಮಣಪ್ಪುರಂ ಫೈನಾನ್ಸ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರ ಶೇ 12 ಇದೆ.
ಇದನ್ನೂ ಓದಿ: Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ
(Cheaper Gold Loan Rate Of Interest In India Major Banks And NBFC )