Closing Bell: ದಾಖಲೆಯ ಮಟ್ಟದಲ್ಲಿ ದಿನಾಂತ್ಯ ಕಂಡ ಸೆನ್ಸೆಕ್ಸ್, ನಿಫ್ಟಿ; ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಗೇಯ್ನರ್

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ದಾಖಲೆ ಮಟ್ಟದಲ್ಲಿ ದಿನಾಂತ್ಯವನ್ನು ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಉತ್ತಮ ಗಳಿಕೆ ಕಂಡಿದೆ.

Closing Bell: ದಾಖಲೆಯ ಮಟ್ಟದಲ್ಲಿ ದಿನಾಂತ್ಯ ಕಂಡ ಸೆನ್ಸೆಕ್ಸ್, ನಿಫ್ಟಿ; ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಗೇಯ್ನರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 03, 2021 | 6:07 PM

ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಏರಿಕೆ ಮಧ್ಯೆಯೇ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ (ಸೆಪ್ಟೆಂಬರ್ 3. 2021) ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 58,000ಕ್ಕಿಂತ ಹೆಚ್ಚು ಪಾಯಿಂಟ್ಸ್​ನೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದರೆ, ನಿಫ್ಟಿ 17,300ಕ್ಕಿಂತ ಹೆಚ್ಚು ಪಾಯಿಂಟ್ಸ್​ನೊಂದಿಗೆ ವಹಿವಾಟು ಕೊನೆಗೊಳಿಸಿತು. ಇಂದಿನ ವಹಿವಾಟು ಏರಿಕೆ- ಇಳಿಕೆಯಿಂದ ಕೂಡಿತ್ತು. 57,764.07 ಪಾಯಿಂಟ್ಸ್ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿದ ನಂತರ, 30-ಷೇರುಗಳ ಗುಚ್ಛವಾದ ಬಿಎಸ್ಇ ಸೂಚ್ಯಂಕವು 277.41 ಪಾಯಿಂಟ್ಸ್ ಅಥವಾ ಶೇ 0.48ರಷ್ಟು ಏರಿಕೆಯೊಂದಿಗೆ 58,129.95 ಪಾಯಿಂಟ್ಸ್​ನೊಂದಿಗೆ ಕೊನೆಗೊಂಡಿತು. ಇನ್ನು ಎನ್ಎಸ್ಇ ನಿಫ್ಟಿ 89.45 ಪಾಯಿಂಟ್ಸ್​ ಅಥವಾ ಶೇ 0.52ರಷ್ಟು ಏರಿಕೆ ಕಂಡು, 17,323.60 ಪಾಯಿಂಟ್ಸ್​ನಲ್ಲಿ ವ್ಯವಹಾರ ಕೊನೆಗೊಳಿಸಿತು.

ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 4ಕ್ಕಿಂತ ಹೆಚ್ಚು ಮೇಲೇರಿ ದಿನಾಂತ್ಯ ಕಂಡಿತು. ಆ ಮೂಲಕ ಸೆನ್ಸೆಕ್ಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿತ್ತು. ಆ ನಂತರ ಟೈಟನ್, ಟಾಟಾ ಸ್ಟೀಲ್, ಬಜಾಜ್ ಆಟೋ, ಮಾರುತಿ ಸುಜುಕಿ ಮತ್ತು ಡಾ. ರೆಡ್ಡೀಸ್ ಇದ್ದವು. ಅದೇ ರೀತಿ ಇಳಿಕೆ ಕಂಡಂಥ ಷೇರುಗಳಲ್ಲಿ ಎಚ್‌ಯುಎಲ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಹಾಗೂ ಎಚ್​ಡಿಎಫ್​ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಇದ್ದವು.

“ಕಳೆದ ಒಂದು ತಿಂಗಳಲ್ಲಿ ಲಾರ್ಜ್​ ಕ್ಯಾಪ್‌ಗಳು ಏರಿಕೆಯಲ್ಲಿ ಪಾಲ್ಗೊಳ್ಳುತ್ತಿವೆ. ಇದು ಬೆಂಚ್‌ಮಾರ್ಕ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಈ ಶೈಲಿಯು ತಿರುಗುವಿಕೆ ಕೀಲಿಯನ್ನು ಹಿಡಿದಿಟ್ಟುಕೊಂಡು, ಮುಂದಕ್ಕೆ ಚಲಿಸುತ್ತದೆ ಎಂದು ನಾವು ನಂಬುತ್ತೇವೆ. ನಾವು ಮಾರುಕಟ್ಟೆಯ ಅತ್ಯಂತ ಆಸಕ್ತಿದಾಯಕ ಹಂತದಲ್ಲಿದ್ದೇವೆ. ಬೆಂಚ್‌ಮಾರ್ಕ್ ಸೂಚ್ಯಂಕಗಳು ಸಾರ್ವಕಾಲಿಕ ಉನ್ನತ ಮಟ್ಟವನ್ನು ಮುಟ್ಟುತ್ತಿವೆ. ಇದರಲ್ಲಿ ಮಾರುಕಟ್ಟೆ ಪೊಸಿಷನಿಂಗ್ ನಿಧಾನವಾಗಿ ಉತ್ತಮ ಗುಣಮಟ್ಟದ ಲಾರ್ಜ್ ಕ್ಯಾಪ್ ಹೆಸರುಗಳ ಕಡೆಗೆ ಬದಲಾಗಿದೆ,” ಎಂದು ಆಕ್ಸಿಸ್ ಸೆಕ್ಯೂರಿಟೀಸ್ ಕ್ವಾಂಟಿಟೇಟಿವ್ ಈಕ್ವಿಟಿ ರೀಸರ್ಚ್ ಮುಖ್ಯಸ್ಥ ನೀರಜ್ ಚದಾವರ್ ಹೇಳಿದ್ದಾರೆ.

“ಕಳೆದ ಒಂದು ತಿಂಗಳಲ್ಲಿ ಮಾರುಕಟ್ಟೆಯ ವಿಸ್ತಾರವು ಕಡಿಮೆಯಾಗಿದೆ ಮತ್ತು ಉತ್ತಮ ಗುಣಮಟ್ಟದ ಲಾರ್ಜ್ ಕ್ಯಾಪ್ ಸ್ಟಾಕ್‌ಗಳು ವಿಶಾಲ ಮಾರುಕಟ್ಟೆಯನ್ನು ಮೀರಿಸಿದೆ. ಗುಣಮಟ್ಟದ ಥೀಮ್ ಸ್ಪಷ್ಟವಾಗಿ ಗಮನವನ್ನು ಕೇಂದ್ರೀಕರಿಸಿದೆ. ಏಕೆಂದರೆ ಕಳೆದ ತಿಂಗಳಲ್ಲಿ ನಾವು ಇದನ್ನು ಹೈಲೈಟ್ ಮಾಡಿದ್ದೇವೆ. ಅಲ್ಲಿ ಮಾರುಕಟ್ಟೆಯ ಗಮನವು ನಿಧಾನವಾಗಿ ಆದಾಯದ ಸ್ಥಿರತೆಯತ್ತ ಬದಲಾಗುತ್ತಿದೆ. ವಿಶಾಲ ಮಾರುಕಟ್ಟೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಏಕೆಂದರೆ ವಿಶಾಲ ಆಧಾರಿತ ಗಳಿಕೆಯ ಮೇಲಿನ ವಿಸಿಬಲಿಟಿ ಇನ್ನೂ ಹೆಚ್ಚಾಗಿದೆ. ಗುಣಮಟ್ಟವು ಈಗಿನ್ನೂ ಆರಂಭಿಕ ಹಂತದ ವಿಷಯವಾಗಿದ್ದು, ಅದು ಈಗ ಎಫ್‌ಎಂಸಿಜಿ ಸೂಚ್ಯಂಕದ ಕಾರ್ಯಕ್ಷಮತೆಯಲ್ಲಿ ಗೋಚರಿಸುತ್ತದೆ. ಹಂಚಿಕೆಗಳು ಈಗ ಗುಣಮಟ್ಟದ ಸ್ಟಾಕ್‌ಗಳತ್ತ ಹೆಚ್ಚು ಬದಲಾಗುತ್ತಿವೆ. ಅಲ್ಲಿ ಗಳಿಕೆಯ ವಿಸಿಬಲಿಟಿ ಮತ್ತು ಬ್ಯಾಲೆನ್ಸ್ ಶೀಟ್ ಬಲವು ತುಂಬಾ ಹೆಚ್ಚಾಗಿದೆ,” ಎಂದು ಚದಾವರ್ ಹೇಳಿದ್ದಾರೆ.

ಎನ್ಎಸ್ಇಯಲ್ಲಿ ವಲಯ ಸೂಚ್ಯಂಕಗಳು ಮಿಶ್ರವಾಗಿ ಮುಕ್ತಾಯ​ ಆಗಿವೆ. ನಿಫ್ಟಿ ಮೀಡಿಯಾ ಸುಮಾರು ಶೇ 1.5ನಷ್ಟು ಏರಿಕೆ ಕಂಡಿತು. ನಂತರ ನಿಫ್ಟಿ ಲೋಹ, ರಿಯಾಲ್ಟಿ, ಆಟೋ ಮತ್ತು ಪಿಎಸ್​ಯು ಬ್ಯಾಂಕ್ ಗಳಿಕೆ ಕಂಡವು. ಮತ್ತೊಂದೆಡೆ ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್, ಹಣಕಾಸು ಸೇವೆಗಳು ಹಾಗೂ ಎಫ್ಎಂಸಿಜಿ ಇಳಿಕೆಯಲ್ಲಿ ಕೊನೆಗೊಂಡಿವೆ.

ಇದನ್ನೂ ಓದಿ: Stock Market New Margin Rules: ಷೇರು ಮಾರುಕಟ್ಟೆಯಲ್ಲಿ ಸೆ. 1ರಿಂದ ಹೊಸ ಮಾರ್ಜಿನ್ ನಿಯಮ; ಟ್ರೇಡರ್ಸ್​ಗಳ ಆಕ್ರೋಶ

(Closing Bell Indian Stock Market Index Sensex And Nifty Ends With Record High On September 3rd 2021)

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ