ನವದೆಹಲಿ, ಫೆಬ್ರುವರಿ 5: ಆಧಾರ್ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ಗಳ (Aadhaar and PAN link) ಸಂಖ್ಯೆ ದೇಶದಲ್ಲಿ ಬರೋಬ್ಬರಿ 11.48 ಕೋಟಿ ಎಂಬ ಮಾಹಿತಿ ಹೊರಬಂದಿದೆ. ಲೋಕಸಭೆ ಕಲಾಪದ ವೇಳೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Pankaj Chaudhary) ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಿರಿಯ ನಾಗರಿಕರು ಹಾಗೂ ಕೆಲ ವರ್ಗಗಳಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ. ಅದನ್ನು ಹೊರತಪಡಿಸಿಯೂ 11 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ಗಳು ಆಧಾರ್ಗೆ ಲಿಂಕ್ ಆಗಿಲ್ಲ ಎನ್ನಲಾಗಿದೆ.
ಇದೇ ವೇಳೆ, ಪ್ಯಾನ್ ಮತ್ತು ಆಧಾರ್ ಅನ್ನು ಜೋಡಿಸಲು ವಿಳಂಬ ಮಾಡಿದ್ದಕ್ಕೆ ಸರ್ಕಾರ ಸಂಗ್ರಹಿಸಿರುವ ದಂಡದ ಮೊತ್ತ 600 ಕೋಟಿ ರೂ ಎಂದು ಸಚಿವರು ಹೇಳಿದ್ದಾರೆ. ಯಾವುದೇ ದಂಡ ಇಲ್ಲದೇ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಅಂತಿಮ ಗಡುವಾಗಿ ಸರ್ಕಾರ 2023ರ ಜೂನ್ 30 ಅನ್ನು ನಿಗದಿ ಮಾಡಿತ್ತು. ಅದಾದ ಬಳಿಕ ಲಿಂಕ್ ಮಾಡಲು ಅವಕಾಶ ಇದೆಯಾದರೂ 1,000 ರೂ ದಂಡ ಪಾವತಿಸಿ, ಬಳಿಕ ಲಿಂಕ್ ಮಾಡಬೇಕು. ಈ ರೀತಿ ಸರ್ಕಾರ 600 ಕೋಟಿ ರೂ ದಂಡದ ಹಣ ಪಡೆದಿದೆ.
ಇದನ್ನೂ ಓದಿ: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ
‘2023ರ ಜುಲೈ 1ರಿಂದ 2024ರ ಜನವರಿ 31ರವರೆಗೆ ಅಧಾರ್ಗೆ ಪ್ಯಾನ್ ಲಿಂಕ್ ಮಾಡಲು ಜನರಿಂದ ಸಂಗ್ರಹಿಸಲಾದ ದಂಡದ ಹಣ 601.97 ಕೋಟಿ ರೂ’ ಎಂದು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಸಚಿವ ಪಂಕಜ್ ಚೌಧರಿ ಉತ್ತರಿಸಿದ್ದಾರೆ.
ಆಧಾರ್ ಜೊತೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ಗಳು ಇನಾಪರೇಟಿವ್ ಆಗುತ್ತವೆ. ಅಂದರೆ ಅವುಗಳು ನಿಷ್ಕ್ರಿಯಗೊಂಡಂತೆ. ಆಧಾರ್ಗೆ ಲಿಂಕ್ ಮಾಡಿ ಮತ್ತೆ ಸಕ್ರಿಯಗೊಳಿಸುವವರೆಗೂ ಈ ಪ್ಯಾನ್ ನಿರುಪಯುಕ್ತವಾಗಿರುತ್ತವೆ.
ಈ ನಿಷ್ಕ್ರಿಯ ಪ್ಯಾನ್ ಹೊಂದಿರುವವರಿಗೆ ಆದಾಯ ತೆರಿಗೆಯ ಯಾವ ರೀಫಂಡ್ಗಳೂ ಸಿಗುವುದಿಲ್ಲ.
ಇವರಿಗೆ ಟಿಡಿಎಸ್ ಮತ್ತು ಟಿಸಿಎಸ್ ತೆರಿಗೆಗಳು ಹೆಚ್ಚಿನ ದರದಲ್ಲಿ ಕಡಿತಗೊಳ್ಳುತ್ತವೆ.
ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ಗೆ ಹೋದರೆ ಅಲ್ಲಿ ಆಧಾರ್ ಲಿಂಕ್ ಮಾಡುವ ಆಯ್ಕೆ ಕಾಣಬಹುದು. ಈ ಪೋರ್ಟಲ್ ಲಿಂಕ್ ಇಲ್ಲಿದೆ: www.incometax.gov.in
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ