ಪಾಕಿಸ್ತಾನದಲ್ಲಿ ಶೇ. 30ರ ಗಡಿದಾಟಿದ ಹಣದುಬ್ಬರ; ಅತಿಹೆಚ್ಚು ಇನ್​ಫ್ಲೇಷನ್ ಇರುವ ದೇಶಗಳ ಟಾಪ್10 ಪಟ್ಟಿ

Pakistan Inflation 2023: ಪಾಕಿಸ್ತಾನದಲ್ಲಿ ಹಣದುಬ್ಬರ ಆಗಸ್ಟ್ 10ರಂದು ಅಂತ್ಯಗೊಂಡ ವಾರದಲ್ಲಿ ಶೇ. 30.82ಕ್ಕೆ ಏರಿದೆ. ಗೋದಿಹಿಟ್ಟು, ಬಾಸ್ಮತಿ ಅಕ್ಕಿ ಇತ್ಯಾದಿ ಅಗತ್ಯವಸ್ತುಗಳ ಬೆಲೆ ಏರಿದ್ದರಿಂದ ಹಣದುಬ್ಬರವೂ ಏರಿದೆ. 2022ರಲ್ಲಿ ಇದೇ ಅವಧಿಯಲ್ಲಿ ಇದ್ದ ಬೆಲೆಗೆ ತುಲನೆ ಮಾಡಿ ಹಣದುಬ್ಬರ ಅಳೆಯಲಾಗಿದೆ.

ಪಾಕಿಸ್ತಾನದಲ್ಲಿ ಶೇ. 30ರ ಗಡಿದಾಟಿದ ಹಣದುಬ್ಬರ; ಅತಿಹೆಚ್ಚು ಇನ್​ಫ್ಲೇಷನ್ ಇರುವ ದೇಶಗಳ ಟಾಪ್10 ಪಟ್ಟಿ
ಪಾಕಿಸ್ತಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2023 | 11:41 AM

ಇಸ್ಲಾಮಾಬಾದ್, ಆಗಸ್ಟ್ 13: ಪಾಕಿಸ್ತಾನದ ಹಣದುಬ್ಬರ (Inflation) ಮತ್ತೆ ಏರಿಕೆಯಾಗಿದೆ. ಆಗಸ್ಟ್ 10ರಂದು ಕೊನೆಗೊಂಡ ವಾರದಲ್ಲಿ ಅದರ ಹಣದುಬ್ಬರ ದರ ಶೇ. 30ರ ಗಡಿ ದಾಟಿ ಹೋಗಿದೆ. ಅಲ್ಲೀಗ ಹಣದುಬ್ಬರ ಶೇ. 30.82ರಷ್ಟಿದೆ. ಹಲವು ಅಗತ್ಯವಸ್ತುಗಳ ಬೆಲೆ ಏರಿದ್ದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಮೇ ತಿಂಗಳಲ್ಲಿ ಅಲ್ಲಿನ ಇನ್​ಫ್ಲೇಷನ್ ದರ ಶೇ. 38ಕ್ಕಿಂತ ಮೇಲೇರಿತ್ತು. ಅದು ಪಾಕಿಸ್ತಾನದಲ್ಲಿ ದಾಖಲಾದ ಗರಿಷ್ಠ ಬೆಲೆ ಏರಿಕೆ ಪ್ರಮಾಣ.

ಪಾಕಿಸ್ತಾನದ ಅಂಕಿಅಂಶಗಳ ಸಂಸ್ಥೆ (PBS) ಆಗಸ್ಟ್ 12ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಹಣದುಬ್ಬರ ಸೂಚಕವೆನಿಸಿದ ಸೆನ್ಸಿಟಿವ್ ಪ್ರೈಸ್ ಇಂಡೆಕ್ಸ್ ವಿವರ ಬಹಿರಂಗಪಡಿಸಿದೆ. ಈ ಎಸ್​ಪಿಐ ಗುಂಪಿನಲ್ಲಿರುವ ಆಯ್ದ 51 ಅಗತ್ಯ ವಸ್ತುಗಳ ಪೈಕಿ 29 ವಸ್ತುಗಳ ಬೆಲೆ ಏರಿದೆ. ಐದು ಸರಕುಗಳ ಬೆಲೆ ಕಡಿಮೆಯಾಗಿದೆರುವುದು ತಿಳಿದುಬಂದಿದೆ. ಕಳೆದ ವರ್ಷದ ಇದೇ ವಾರಕ್ಕೆ ಹೋಲಿಸಿ ಬೆಲೆ ಹೆಚ್ಚಳವನ್ನು ಹೋಲಿಸಲಾಗಿದೆ.

ಗೋದಿಹಿಟ್ಟು, ಸಿಗರೇಟು, ಬಾಸ್ಮತಿ ಅಕ್ಕಿ, ಮೆಣಸಿನಕಾಯಿಪುಡಿ, ಸಕ್ಕರೆ, ಕೋಳಿ, ಆಲೂಗಡ್ಡೆ, ಟೊಮೆಟೋ ಮೊದಲಾದ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಾಗಿದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?

ವಿಶ್ವದಲ್ಲಿ ಅತಿಹೆಚ್ಚು ಹಣದುಬ್ಬರ ಇರುವ ದೇಶಗಳು

ವೆನಿಜುವೆಲಾ: ಶೇ. 1198

ಸೂಡಾನ್: ಶೇ. 340

ಲೆಬನಾನ್: ಶೇ. 201

ಸಿರಿಯಾ: ಶೇ. 139

ಸುರಿನಾಮ್: ಶೇ. 63.3

ಜಿಂಬಾಬ್ವೆ: ಶೇ. 60.7

ಅರ್ಜೆಂಟೀನಾ: ಶೇ. 51.2

ಟರ್ಕಿ: ಶೇ. 36.1

ಇರಾನ್: ಶೇ. 35.2

ಇಥಿಯೋಪಿಯಾ: ಶೇ. 33

ಭಾರತದಲ್ಲಿ ಹಣದುಬ್ಬರ ಸದ್ಯ ಶೇ. 4.7ರಷ್ಟಿದೆ. ಇಲ್ಲಿಯೂ ಸಾಕಷ್ಟು ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವ ಪರಿಣಾಮ ಹಣದುಬ್ಬರ ಶೇ. 5ರ ಗಡಿದಾಟಿ ಹೋಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್