ನವದೆಹಲಿ, ಆಗಸ್ಟ್ 28: ಪಾಸ್ಪೋರ್ಟ್ ಸೇವಾ ಕೇಂದ್ರದ ಜಾಲತಾಣ ನಾಲ್ಕು ದಿನ ಬಂದ್ ಆಗಿರಲಿದೆ. ನಾಳೆ ಗುರುವಾರ ಸಂಜೆ 8ರಿಂದ (ಆಗಸ್ಟ್ 29) ಈ ಪೋರ್ಟಲ್ನ ಟೆಕ್ನಿಕಲ್ ಮೈಂಟೆನೆನ್ಸ್ ಕಾರ್ಯ ನಡೆಯುತ್ತಿರುವುದರಿಂದ ಅದು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ಸೆಪ್ಟಂಬರ್ 2ರ ಬೆಳಗ್ಗೆ 6ಗಂಟೆಯವರೆಗೂ ಈ ಪೋರ್ಟಲ್ನಲ್ಲಿ ಯಾವ ಸರ್ವಿಸ್ ಇರುವುದಿಲ್ಲ. ಸದ್ಯ ಆಗಸ್ಟ್ 30ರಂದು ನೀಡಲಾಗಿರುವ ಎಲ್ಲಾ ಅಪಾಯಿಂಟ್ಮೆಂಟ್ಗಳನ್ನು ರದ್ದು ಮಾಡಲಾಗಿದೆ. ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಮುಂದಿನ ದಾರಿಗಳ ಬಗ್ಗೆ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್ಪೋರ್ಟ್ ಇಲಾಖೆ ಹೇಳಿದೆ.
ಪಾಸ್ಪೋರ್ಟ್ ಸೇವಾ ಪೋರ್ಟಲ್ ಮಾತ್ರವಲ್ಲ, ವಿವಿಧೆಡೆ ಇರುವ ಪಾಸ್ಪೋರ್ಟ್ ಸೇವಾ ಕೇಂದ್ರಗಳೂ ಆಗಸ್ಟ್ 30ರಂದು ಬಂದ್ ಆಗಿರುತ್ತವೆ. ಹೀಗಾಗಿ, ಶುಕ್ರವಾರಕ್ಕೆ ಅಪಾಯಿಂಟ್ಮೆಂಟ್ ಪಡೆದಿರುವ ಅರ್ಜಿದಾರರಿಗೆ ಬೇರೆ ದಿನ ಅಪಾಯಿಂಟ್ಮೆಂಟ್ ಕೊಡಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಪಾಸ್ಪೋರ್ಟ್ ಸೇವಾ ವಿಭಾಗ ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!
‘2024ರ ಆಗಸ್ಟ್ 29, ಗುರುವಾರ ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2 ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಟೆಕ್ನಿಕಲ್ ಮೈಂಟೆನೆನ್ಸ್ನಿಂದಾಗಿ ಪಾಸ್ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುತ್ತದೆ. ಈ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ. ಆಗಸ್ಟ್ 30ಕ್ಕೆ ಬುಕ್ ಆಗಿರುವ ಅಪಾಯಿಂಟ್ಗಳನ್ನು ಬೇರೆ ದಿನಕ್ಕೆ ನಿಗದಿ ಮಾಡಿ, ಅರ್ಜಿದಾರರಿಗೆ ಅದರ ಮಾಹಿತಿ ಅಪ್ಡೇಟ್ ಮಾಡಲಾಗುತ್ತದೆ,’ ಎಂದು ಅಡ್ವೈಸರಿ ಬಿಡುಗಡೆ ಮಾಡಲಾಗಿದೆ.
Advisory – Passport Seva portal will be unavailable from 2000 hrs (29.8.2024) till 0600 hrs (2.9.2024) due to technical maintenance. @SecretaryCPVOIA @MEAIndia @CPVIndia pic.twitter.com/PzZnBMvGcP
— PassportSeva Support (@passportsevamea) August 25, 2024
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ