ಸ್ವಿಗ್ಗಿ ಶುರುವಾದ ಮೊದಲ ದಿನ ಗಳಿಸಿದ್ದು ಸೊನ್ನೆ; ಐಪಿಒಗೆ ಮುನ್ನ ಕೆಲ ರಹಸ್ಯ ಬಿಚ್ಚಿಟ್ಟ ಸಿಇಒ ಶ್ರೀಹರ್ಷ

Swiggy news updates: 2014ರ ಆಗಸ್ಟ್ 6ರಂದು ಆರಂಭವಾದ ಸ್ವಿಗ್ಗಿಯಲ್ಲಿ ಮೊದಲ ದಿನ ಒಂದೂ ಫೂಡ್ ಆರ್ಡರ್ ಸಿಗಲಿಲ್ಲ. ಮೊದಲ ಆರ್ಡರ್​ಗೆ ಮಾರನೆ ದಿನದವರೆಗೂ ಕಾಯಬೇಕಾಯಿತು ಎನ್ನುತ್ತಾರೆ ಸ್ವಿಗ್ಗಿ ಸಿಇಒ ಶ್ರೀಹರ್ಷ. ಇವತ್ತು ಸ್ವಿಗ್ಗಿ ಎಂಟು ಕೋಟಿಗೂ ಹೆಚ್ಚು ಗ್ರಾಹಕರು ಮತ್ತು ಮೂರು ಲಕ್ಷ ರೆಸ್ಟೋರೆಂಟ್ ಪಾರ್ಟ್ನರ್ಸ್ ಬಳಗ ಹೊಂದಿದೆ. ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಕಂಪನಿಯಾದ ಸ್ವಿಗ್ಗಿ ಇದೀಗ 1.25 ಬಿಲಿಯನ್ ಡಾಲರ್ ಮೊತ್ತದ ಐಪಿಒಗೆ ಸಿದ್ಧವಾಗಿದೆ.

ಸ್ವಿಗ್ಗಿ ಶುರುವಾದ ಮೊದಲ ದಿನ ಗಳಿಸಿದ್ದು ಸೊನ್ನೆ; ಐಪಿಒಗೆ ಮುನ್ನ ಕೆಲ ರಹಸ್ಯ ಬಿಚ್ಚಿಟ್ಟ ಸಿಇಒ ಶ್ರೀಹರ್ಷ
ಸ್ವಿಗ್ಗಿ
Follow us
|

Updated on: Aug 28, 2024 | 4:02 PM

ಬೆಂಗಳೂರು, ಆಗಸ್ಟ್ 28: ಹತ್ತು ವರ್ಷದ ಹಿಂದೆ ಆರಂಭವಾದ ಆನ್​ಲೈನ್ ಫೂಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಇವತ್ತು ಮೂರು ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್​ಗಳ ಬಳಗ ಹೊಂದಿದ್ದು, ಕೋಟ್ಯಂತರ ಗ್ರಾಹಕರಿಗೆ ಸರ್ವಿಸ್ ನೀಡುವ ಮಟ್ಟಿಗೆ ಬೆಳೆದಿದೆ. ಇದೀಗ 1.25 ಬಿಲಿಯನ್ ಡಾಲರ್ (10,500 ಕೋಟಿ ರೂ) ಮೌಲ್ಯದ ಐಪಿಒಗೆ ಮುಂದಾಗಿದೆ. ಬೆಂಗಳೂರು ಮೂಲದ ಸ್ವಿಗ್ಗಿ ಬೆಳವಣಿಗೆ ಹಾದಿ ಸುಗಮವಾಗಂತೂ ಆರಂಭವಾಗಲಿಲ್ಲ. ಈ ಬಗ್ಗೆ ಸ್ವಿಗ್ಗ ಸಿಇಒ ಹಾಗೂ ಸಹ-ಸಂಸ್ಥಾಪಕ ಶ್ರೀಹರ್ಷ ಮಜೇಟಿ ಕುತೂಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. 2014ರ ಆಗಸ್ಟ್ 6ರಂದು ಸ್ವಿಗ್ಗಿ ಶುರುವಾದ ಮೊದಲ ದಿನ ಒಂದೂ ಆರ್ಡರ್ ಬರಲಿಲ್ಲವಂತೆ.

ಆ ದಿನ ಶೂನ್ಯ ಆರ್ಡರ್ ಬಂದಿದ್ದು. ನಮಗೆ ಮೊದಲ ಫೂಡ್ ಆರ್ಡರ್ ಸಿಗಲು ಒಂದು ದಿನ ಕಾಯಬೇಕಾಯಿತು. ಆಗಸ್ಟ್ 7ರಂದು ಮೊದಲ ಆರ್ಡರ್ ಸಿಕ್ಕಿತು. ಅಲ್ಲಿಂದ ಸ್ವಿಗ್ಗಿ ಪ್ರಯಾಣ ಆರಂಭವಾಯಿತು ಎಂದು ಶ್ರೀಹರ್ಷ ಮಜೇಟಿ ಹೇಳುತ್ತಾರೆ.

ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!

‘ನಮ್ಮ ಆರಂಭಿಕ ರೆಸ್ಟೋರೆಂಟ್ ಪಾರ್ಟರ್​ಗಳಲ್ಲಿ ಟ್ರಫಲ್ಸ್ ಒಂದು. ಆ ದಿನ ಸ್ವಿಗ್ಗಿ ಮೂಲಕ ಟ್ರಫಲ್ಸ್ ಎರಡು ಆರ್ಡರ್ ಪಡೆದಿತ್ತು. ಇದೀಗ ಟ್ರಫಲ್ಸ್ ಒಂದು ದಿನದಲ್ಲಿ ಸ್ವಿಗ್ಗಿ ಮೂಲಕ 7,261 ಆರ್ಡರ್ಸ್ ಪಡೆಯುವ ಮಟ್ಟಕ್ಕೆ ಪರಿಸ್ಥಿತಿ ಬೆಳೆದಿದೆ. ಇದು ನಮ್ಮ ಪ್ರಯಾಣ ಹೇಗಿದೆ ಎಂಬುದನ್ನು ತೋರಿಸುತ್ತದೆ. ಇವತ್ತು ಮೂರು ಲಕ್ಷ ರೆಸ್ಟೋರೆಂಟ್​ಗಳು ನಮ್ಮ ಪಾರ್ಟ್ನರ್ಸ್ ಆಗಿವೆ’ ಎಂದು ಸ್ವಿಗ್ಗಿ ಸಿಇಒ ತಿಳಿಸುತ್ತಾರೆ.

ಸ್ವಿಗ್ಗಿ ಐಪಿಒ

ಸ್ವಿಗ್ಗಿಯ ಪ್ರಮುಖ ಪ್ರತಿಸ್ಪರ್ಧಿಯಾದ ಜೊಮಾಟೊ ಇತ್ತೀಚೆಗೆ ಷೇರು ಮಾರುಕಟ್ಟೆಗೆ ಪ್ರವೇಶ ನೀಡಿ ಮಿಂಚಿನ ಓಟ ನಡೆಸುತ್ತಿದೆ. ಅದರ ಮಾರುಕಟ್ಟೆ ಸಂಪತ್ತು 25 ಬಿಲಿಯನ್ ಡಾಲರ್​ಗೂ ಹೆಚ್ಚಿದೆ. ಷೇರುಬೆಲೆ ಸಖತ್ ಏರಿದೆ. ಇದೇ ಹಿನ್ನೆಲೆಯಲ್ಲಿ ಸ್ವಿಗ್ಗಿಯೂ ಪ್ರಾಥಮಿಕ ಮಾರುಕಟ್ಟೆಯಲ್ಲಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. 1.25 ಬಿಲಿಯನ್ ಡಾಲರ್ ಮೊತ್ತದ ಐಪಿಒ ಬಿಡುಗಡೆ ಮಾಡಲಿದೆ.

ಸ್ವಿಗ್ಗಿ ಐಪಿಒ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಏಪ್ರಿಲ್ ತಿಂಗಳಲ್ಲಿ ಸೆಬಿ ಬಳಿ ಇದಕ್ಕೆ ಅರ್ಜಿ ಸಲ್ಲಿಸಿದೆ. ಸೆಪ್ಟಂಬರ್ ತಿಂಗಳಲ್ಲಿ ಐಪಿಒ ದಿನಾಂಕ ನಿರ್ಧಾರ ಆಗಬಹುದು.

ಇದನ್ನೂ ಓದಿ: ಜನ್ ಧನ್ ಯೋಜನೆಗೆ 10 ವರ್ಷ; ಎಕ್ಸ್​ನಲ್ಲಿ ಪ್ರಧಾನಿ ಶ್ಲಾಘನೆ; ಪಿಎಂಜೆಡಿವೈ ಸಾಧನೆ, ಪ್ರಯೋಜನಗಳೇನು?

ಅಮಿತಾಭ್ ಬಚ್ಚನ್ ಹೂಡಿಕೆ

ಸ್ವಿಗ್ಗಿ ಸಂಸ್ಥೆಯ ಷೇರುಗಳನ್ನು ಖರೀದಿಸಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್ ಕಂಪನಿಯ ರಾಮ್​ದೇವ್ ಅಗರ್ವಾಲ್ ಅವರು ಇತ್ತೀಚೆಗೆ ಸ್ವಿಗ್ಗಿಯ ಷೇರುಗಳನ್ನು ಖರೀದಿಸಿದ್ದಾರೆ. ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್ ಅವರೂ ಸಣ್ಣ ಪ್ರಮಾಣದಲ್ಲಿ ಸ್ವಿಗ್ಗಿಯ ಷೇರುಗಳನ್ನು ಪಡೆದಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ