AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳ ಸ್ಥಾಪನೆಗೆ ಸಂಪುಟ ಅನುಮೋದನೆ

12 new industrial hubs to be developed in India: ಹತ್ತು ರಾಜ್ಯಗಳಲ್ಲಿ 12 ಹೊಸ ಇಂಡಸ್ಟ್ರಿಯಲ್ ಸಿಟಿಗಳನ್ನು ನಿರ್ಮಿಸುವ ಪ್ರಸ್ತಾವಿತ ಯೋಜನೆಗಳಿಗೆ ಕೇಂದ್ರ ಸಂಪುಟ ಆ. 28ರಂದು ಸಮ್ಮತಿ ನೀಡಿದೆ. ಆಂಧ್ರ, ತೆಲಂಗಾಣ, ಕೇರಳ, ಪಂಜಾಬ್, ಮಹಾರಾಷ್ಟ್ರ, ಉತ್ತಪ್ರದೇಶ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಈ ಸ್ಮಾರ್ಟ್ ಕೈಗಾರಿಕಾ ನಗರಗಳ ನಿರ್ಮಾಣವಾಗಲಿದೆ. ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವನ್ನು ಬಲಪಡಿಸಲು ಈ ಸಿಟಿಗಳ ನಿರ್ಮಾಣ ಬಹಳ ಮುಖ್ಯ ಪಾತ್ರ ವಹಿಸಲಿದೆ.

ಹತ್ತು ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳ ಸ್ಥಾಪನೆಗೆ ಸಂಪುಟ ಅನುಮೋದನೆ
ಮ್ಯಾನುಫ್ಯಾಕ್ಚರಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2024 | 5:24 PM

Share

ನವದೆಹಲಿ, ಆಗಸ್ಟ್ 28: ದೇಶಾದ್ಯಂತ ಹೆಚ್ಚೆಚ್ಚು ಕಡೆ ಉದ್ಯಮ ವಲಯ ವ್ಯಾಪಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರದ ಪ್ರಯತ್ನಗಳು ಮುಂದುವರಿದಿವೆ. ಈ ನಿಟ್ಟಿನಲ್ಲಿ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸುವ ಯೋಜನೆಗೆ ಕೇಂದ್ರ ಸಂಪುಟ ಇಂದು (ಬುಧವಾರ) ಅನುಮೋದನೆ ನೀಡಿದೆ. ಈ ಯೋಜನೆಯಲ್ಲಿ ಒಟ್ಟು 28,602 ಕೋಟಿ ರೂ ಹೂಡಿಕೆ ಆಗುವ ನಿರೀಕ್ಷೆ ಇದೆ.

ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಡಾ. ಎ ವೈಷ್ಣವ್ ಈ ವಿಚಾರ ತಿಳಿಸಿದರು. 28,602 ಕೋಟಿ ರೂ ಅಂದಾಜು ವೆಚ್ಚದಲ್ಲಿ ನ್ಯಾಷನಲ್ ಇಂಡಸ್ಟ್ರಿಯಲ್ ಕಾರಿಡಾರ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿ 12 ಹೊಸ ಯೋಜನಾ ಪ್ರಸ್ತಾವಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಆರು ಪ್ರಮುಖ ಕೈಗಾರಿಕಾ ಕಾರಿಡಾರ್​ಗಳಲ್ಲಿ ಈ ಹೊಸ ಇಂಡಸ್ಟ್ರಿಯಲ್ ಸಿಟಿಗಳನ್ನು ನಿರ್ಮಿಸುವ ಪ್ಲಾನ್ ಮಾಡಲಾಗಿದೆ. ಈ 12 ಕೈಗಾರಿಕಾ ನಗರಗಳು ಜಾಗತಿಕ ಗುಣಮಟ್ಟ ಮಾನದಂಡಗಳೊಂದಿಗೆ ಗ್ರೀನ್​ಫೀಲ್ಡ್ ಸ್ಮಾರ್ಟ್​ಸಿಟಿಗಳಾಗಿ ಅಭಿವೃದ್ಧಿಯಾಗಲಿವೆ. ಭಾರತದ ಉತ್ಪಾದನಾ ಶಕ್ತಿ ಇದರಿಂದ ಹೆಚ್ಚಾಗಲಿದೆ. ತತ್​ಪರಿಣಾಮವಾಗಿ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದೆ.

ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!

ಸ್ಥಾಪನೆಯಾಗಲಿರುವ ಹೊಸ ಇಂಡಸ್ಟ್ರಿಯನ್ ಸಿಟಿಗಳು

  1. ಖುರ್ಪಿಯಾ: ಉತ್ತರಾಖಂಡ್ ರಾಜ್ಯ
  2. ರಾಜಪುರ-ಪಾಟಿಯಾಲ: ಪಂಜಾಬ್ ರಾಜ್ಯ
  3. ದಿಘಿ: ಮಹಾರಾಷ್ಟ್ರ ರಾಜ್ಯ
  4. ಪಾಲಕ್ಕಾಡ್: ಕೇರಳ ರಾಜ್ಯ
  5. ಆಗ್ರಾ: ಉತ್ತರಪ್ರದೇಶ ರಾಜ್ಯ
  6. ಪ್ರಯಾರಾಜ್: ಉತ್ತರಪ್ರದೇಶ ರಾಜ್ಯ
  7. ಗಯಾ: ಬಿಹಾರ ರಾಜ್ಯ
  8. ಜಹೀರಾಬಾದ್: ತೆಲಂಗಾಣ ರಾಜ್ಯ
  9. ಓರ್ವಕಲ್: ಆಂಧ್ರಪ್ರದೇಶ ರಾಜ್ಯ
  10. ಕೊಪ್ಪಾರ್ತಿ: ಆಂಧ್ರಪ್ರದೇಶ ರಾಜ್ಯ
  11. ಜೋಧಪುರ್-ಪಾಲಿ: ರಾಜಸ್ಥಾನ ರಾಜ್ಯ

ಮೇಲಿನ ಪಟ್ಟಿಯಲ್ಲಿ 11 ಕೈಗಾರಿಕಾ ನಗರಗಳಿವೆ. 12ನೇ ನಗರದ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಆ ರಾಜ್ಯದ ಯೋಜನೆಯನ್ನು ಪ್ರಕಟಿಸಿಲ್ಲದಿರುವುದು ತಿಳಿದುಬಂದಿದೆ. ವರದಿ ಪ್ರಕಾರ ಜಮ್ಮು ಕಾಶ್ಮೀರ ಅಥವಾ ಹರ್ಯಾಣ ರಾಜ್ಯದಲ್ಲಿ ಮತ್ತೊಂದು ಇಂಡಸ್ಟ್ರಿಯಲ್ ಸಿಟಿ ನಿರ್ಮಾಣವಾಗಬಹುದು.

ಇದನ್ನೂ ಓದಿ: ಹಣವನ್ನು ಹೀಗೆ ಖರ್ಚು ಮಾಡುತ್ತಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನಿಮ್ಮನ್ನು​ ಹಿಂಬಾಲಿಸುತ್ತದೆ! ಏನದರ ಲೆಕ್ಕಾಚಾರ?

ಈ 12 ಸ್ಮಾರ್ಟ್ ಇಂಡ್ಟ್ರಿಯಲ್ ಸಿಟಿಗಳಲ್ಲಿ ಸ್ಥಾಪನೆಯಾಗುವ ಉದ್ದಿಮೆಗಳಿಂದ 10 ಲಕ್ಷ ನೇರ ಉದ್ಯೋಗ ಮತ್ತು 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ವಲಯದ ಬಹಳಷ್ಟು ಕಂಪನಿಗಳು ಭಾರತದತ್ತ ಆಗಮಿಸುತ್ತಿವೆ. ಇವುಗಳಿಗೆ ಸೂಕ್ತವಾದ ಮೂಲಸೌಕರ್ಯ ಮತ್ತು ಸ್ಥಳಾವಕಾಶ ನಿರ್ಮಿಸುವ ಗುರುತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ನಿರ್ಮಾಣ ಪ್ರಮುಖ ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ